ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಿಂದೆಲ್ಲಾ ಅಪರೂಪವಾಗಿದ್ದ ನೇಲ್ ಎಕ್ಸ್‌ಟೆನ್ಷನ್ ಬ್ಯೂಟಿ (Nail Extension Beauty Trend) ಕಾನ್ಸೆಪ್ಟ್ ಇದೀಗ ಟ್ರೆಂಡಿಯಾಗಿದೆ. ಕೇವಲ ಎಂಟರ್ಟೈನ್ಮೆಂಟ್ ಹಾಗೂ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ಬ್ಯೂಟಿ ಕಾನ್ಸೆಪ್ಟ್, ಇತ್ತೀಚಿನ ದಿನಗಳಲ್ಲಿ, ಕಾಲೇಜು ಹುಡುಗಿಯರಿಂದಿಡಿದು, ಎಲ್ಲಾ ವಯಸ್ಸಿನ ಮಹಿಳೆಯರನ್ನು ಆಕರ್ಷಿಸತೊಡಗಿದೆ. ಕೈಗಳಿಗೆ ಜೊತೆಯಾಗಿದೆ. ಸೌಂದರ್ಯ ಹೆಚ್ಚಿಸಿದೆ. ಅದರಲ್ಲೂ, ಫೋಟೋಶೂಟ್‌ಗಳಲ್ಲಿ ಅತ್ಯಾಕರ್ಷಕವಾಗಿ ತಮ್ಮ ಕೈಗಳನ್ನು ಬಿಂಬಿಸಲು, ಇಂದು ಮದುವೆಯಾಗುವ ಹೆಣ್ಣು ಮಕ್ಕಳು, ಅತಿ ಹೆಚ್ಚಾಗಿ ನೇಲ್ ಎಕ್ಸ್‌ಟೆನ್ಷನ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ನೇಲ್ ಡಿಸೈನರ್ಸ್.
ಟ್ರೆಂಡ್‌ನಲ್ಲಿರುವ ವೆರೈಟಿ ನೇಲ್ ಎಕ್ಸ್‌ಟೆನ್ಷನ್ಸ್
ಅಕ್ರಾಲಿಕ್ ನೇಲ್ಸ್, ಜೆಲ್ ನೇಲ್ಸ್, ಡಿಪ್ ಪೌಡರ್ ನೇಲ್ಸ್ ಹಾಗೂ ನೇಲ್ ವ್ರಾಪ್ ಇದೀಗ ಅತಿ ಹೆಚ್ಚು ಟ್ರೆಂಡ್‌ನಲ್ಲಿರುವ ನೇಲ್ ಎಕ್ಸ್‌ಟೆನ್ಷನ್ಸ್ ಕೃತಕ ಉಗುರುಗಳು. ಅಂದಹಾಗೆ, ಇವು ಟ್ರೆಂಡಿಯಾಗಲು ಪ್ರಮುಖ ಕಾರಣ, ಕಡಿಮೆ ಬೆಲೆಯಲ್ಲಿ ದೊರಕುತ್ತಿರುವುದು. ಕೇವಲ 500ರೂ.ಗಳಿಂದ ಆರಂಭವಾಗುವ ನೇಲ್ ಎಕ್ಸ್‌ಟೆನ್ಷನ್ಸ್ ಮಾಡುವ ಉಗುರುಗಳು ಇದೀಗ ಫ್ಯಾನ್ಸಿ ಶಾಪ್‌ಗಳಲ್ಲಿ, ಬ್ಯೂಟಿ ಪಾಲರ್ಗಳಲ್ಲೂ ದೊರಕುತ್ತವೆ. ಕೊಂಡಲ್ಲಿ, ಬ್ಯೂಟಿ ಎಕ್ಸ್‌ಪರ್ಟ್ಸ್ ಬಳಿ ಅಂಟಿಸಿಕೊಳ್ಳಬಹುದು ಎನ್ನುತ್ತಾರೆ ನೇಲ್ ಡಿಸೈನರ್. ಅವುಗಳ ಫಿನಿಶಿಂಗ್ ಚೆನ್ನಾಗಿ ಬೇಕು ಎನ್ನುವವರು ನೇಲ್ ಡಿಸೈನರ್ಗಳ ಬಳಿ ತೆರಳಿ ಸಾವಧಾನದಿಂದ ಹಾಕಿಸಿಕೊಳ್ಳುತ್ತಾರೆ ಎನ್ನುತ್ತಾರೆ ಅವರು.
ನ್ಯಾಚುರಲ್ ಉಗುರಿನ ಮೇಲೆ ಎಕ್ಸ್‌ಟೆನ್ಷನ್
ನಿಮ್ಮ ಉಗುರು ಹೆಚ್ಚು ಬೆಳೆಯುತ್ತಿಲ್ಲವೇ ನೋಡಲು ಆಕರ್ಷಕವಾಗಿಲ್ಲವೇ! ಆಗಾಗ್ಗೆ ತುಂಡಾಗುತ್ತಿದೆಯೇ! ಇದಕ್ಕೆ ಯೋಚಿಸುವುದು ಬೇಡ! ಆರ್ಟಿಫಿಶಿಯಲ್ ವಿಧಾನದಿಂದ ನೇಲ್ ಎಕ್ಸ್‌ಟೆನ್ಷನ್ಸ್ ಮಾಡುವುದರಿಂದ ಸುಂದರವಾಗಿಸಬಹುದು. ಮೊದಲೇ ಡಿಸೈನ್ ಮಾಡಿದ ಕೃತಕ ಉಗುರುಗಳನ್ನು ನಾನಾ ಪ್ರಕಾರಗಳಿಂದ ನೈಜ ಉಗುರುಗಳ ಮೇಲೆ ಅಂಟಿಸುವುದೇ ನೇಲ್ ಎಕ್ಸ್‌ಟೆನ್ಷನ್ ಎಂದು ಸಿಂಪಲ್ಲಾಗಿ ವಿವರಿಸುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ರೀಟಾ. ಅವರ ಪ್ರಕಾರ, ಮೊದಲೆಲ್ಲಾ ಈ ವಿಧಾನ, ಕೇವಲ ಶ್ರೀಮಂತರಿಗೆ ಹಾಗೂ ಸೆಲೆಬ್ರೆಟಿಗಳಿಗೆ ಮಾತ್ರ ಎಂಬಂತಿತ್ತು. ಇದೀಗ ನಾಯಿಕೊಡೆಗಳಂತೆ ನೇಲ್ ಬಾರ್‌ಗಳು ಬ್ಯೂಟಿ ಪಾರ್ಲರ್‌ಗಳಲ್ಲೂ ಇವು ಲಭ್ಯವಿರುವುದರಿಂದ ಇದರ ಬೆಲೆ ಕಡಿಮೆಯಾಗಿದೆ. ಪರಿಣಾಮ, ಟ್ರೆಂಡಿಯಾಗಿದೆ.
ಪರ್ಮನೆಂಟ್ ಅಲ್ಲ! ನೆನಪಿರಲಿ
ಇದು ಪರ್ಮನೆಂಟ್ ಅಲ್ಲ ಎಂಬುದು ನೆನಪಿರಲಿ. ಉಗುರು ಬೆಳೆದಂತೆ ಅಂಟಿಸಿದ ಚಿತ್ತಾರವಿರುವ ಉಗುರು ಕೂಡ ಬಾಗುತ್ತದೆ. ಹೆಚ್ಚೆಂದರೇ ಏನೂ ಕೆಲಸ ಮಾಡದಿದ್ದಲ್ಲಿ ಒಂದೆರೆಡು ವಾರ ಉಳಿಯಬಹುದು ಎನ್ನುತ್ತಾರೆ ನೇಲ್ ಡಿಸೈನರ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Eye Makeup Care: ಐ ಶ್ಯಾಡೋ ಹಚ್ಚುವ ಮುನ್ನ 5 ಸಂಗತಿ ತಿಳಿದಿರಲಿ