ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀಲಿ ಬಣ್ಣದ ಎಥ್ನಿಕ್ ಲುಕ್ ಸೀರೆ ಹಾಗೂ ಇತರೇ ಡಿಸೈನರ್‌ವೇರ್‌ಗಳಿಂದಲೂ (Navaratri Blue Colour Fashion Tips) ಪಡೆಯಬಹುದು. ಅದು ಅವರವರ ಆಯ್ಕೆಗೆ ಬಿಟ್ಟದ್ದು, ನೀಲಿ ಬಣ್ಣದಲ್ಲೂ ನಾನಾ ಶೇಡ್‌ಗಳು ಲಭ್ಯ. ತಂತಮ್ಮ ಸ್ಕಿನ್ ಟೋನ್ ಹಾಗೂ ಪರ್ಸನಾಲಿಟಿಗೆ ಮ್ಯಾಚ್ ಆಗುವಂತಹ ಶೇಡ್ ಹಾಗೂ ವಿನ್ಯಾಸದವನ್ನು ಆಯ್ಕೆ ಮಾಡಿಕೊಂಡಲ್ಲಿ ಅತ್ಯಾಕರ್ಷಕವಾಗಿ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ನವರಾತ್ರಿಯ 4 ದಿನದ ನೀಲಿ ವರ್ಣದ ಎಥ್ನಿಕ್‌ವೇರ್‌ಗಳು ಹಾಗೂ ಸೀರೆ ಮಾನಿನಿಯರನ್ನು ಸೌಂದರ್ಯ ಎದ್ದು ಕಾಣುವಂತೆ ಮಾಡುತ್ತದಂತೆ. ಇನ್ನು ಇದರೊಂದಿಗೆ ಜ್ಯುವೆಲರಿ, ಮೇಕಪ್ ಹಾಗೂ ಹೇರ್‌ಸ್ಟೈಲ್ ಹೊಂದಿಕೊಂಡಲ್ಲಿ ಸೆಲೆಬ್ರೆಟಿ ಲುಕ್ ಪಡೆಯಬಹುದು ಎನ್ನುತ್ತಾರೆ.
ನೀಲಿ ಶೇಡ್ ಆಯ್ಕೆ ಹೇಗೆ ?
ಗಾಢ ನೀಲಿ, ತಿಳಿ ನೀಲಿ, ಆಕಾಶ ನೀಲಿ, ಶೈನಿ ನೀಲಿ, ಬ್ಲೀಚ್ ಬ್ಲ್ಯೂ, ರಾಯಲ್ ಬ್ಲ್ಯೂ ಹೀಗೆ ಊಹೆಗೂ ಮೀರಿದ ನೀಲಿ ವರ್ಣಗಳು ನವರಾತ್ರಿಯ ಕಲರ್ ಟ್ರೆಂಡ್‌ನಲ್ಲಿವೆ. ಇನ್ನು ಕೊಂಚ ಬೆಳ್ಳಗಿರುವವರಿಗೆ ಯಾವುದೇ ಬಗೆಯ ನೀಲಿ ವರ್ಣದ ಔಟ್‌ಫಿಟ್ ಓಕೆ. ವೀಟಿಶ್ ಸ್ಕಿನ್ ಟೋನ್‌ನವರಿಗೆ ಆಕಾಶ ನೀಲಿ ಹಾಗೂ ರಾಯಲ್ ಬ್ಲ್ಯೂ ಚೆನ್ನಾಗಿ ಒಪ್ಪುತ್ತದೆ. ಅದೇ ರೀತಿ ಡಸ್ಕಿ ಸ್ಕಿನ್‌ನವರು ಕೊಂಚ ತಿಳಿ ವರ್ಣದವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮನಮೋಹಕವಾಗಿ ಕಾಣುವ ನೀಲಿ ಸೀರೆ
ನಿಮ್ಮ ಬಳಿ ಮೈಸೂರ್ ಸಿಲ್ಕ್ ಸೀರೆ ಇದ್ದಲ್ಲಿ, ಅದನ್ನು ಉಡಿ. ಮಲ್ಲಿಗೆ ಹೂವು ಮುಡಿಯಿರಿ. ಮೇಕಪ್ ತಿಳಿಯಾಗಿರಲಿ. ಹಣೆಗೆ ಅಗಲವಾದ ನೀಲಿ ಬಿಂದಿ ಇಡಿ. ನೋಡಲು ಆಕರ್ಷಕವಾಗಿ ಕಾಣುವಿರಿ. ಇನ್ನು ನೀವು ಶಿಫಾನ್, ಜಾರ್ಜೆಟ್ ಸೀರೆ ಉಡುವುದಾದಲ್ಲಿ ಆದಷ್ಟೂ ಸಿಂಪಲ್ ಹೇರ್‌ಸ್ಟೈಲ್ ಹಾಗೂ ಮ್ಯಾಚಿಂಗ್ ಇಯರಿಂಗ್ಸ್ ಧರಿಸಿ. ಗ್ರ್ಯಾಂಡ್ ರೇಷ್ಮೆ ಸೀರೆಯಾದಲ್ಲಿ ಅದಕ್ಕೆ ತಕ್ಕಂತೆ ಮೇಕಪ್ ಮಾಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್ಪಟ್ರ್ಸ್.
ನೀಲಿ ಔಟ್‌ಫಿಟ್‌ಗಳ ಮ್ಯಾಜಿಕ್
ಬಗೆಬಗೆ ಶೇಡ್‌ಗಳ ನೀಲಿ ವರ್ಣದ ಎಥ್ನಿಕ್ ವೇರ್‌ಗಳಲ್ಲಿ ನಿಮಗೆ ಲೆಕ್ಕವಿಲ್ಲದಷ್ಟು ಅಪ್ಷನ್‌ಗಳು ಸಿಗುತ್ತವೆ. ಲೆಹೆಂಗಾದಿಂದಿಡಿದು, ಲಾಂಗ್‌ಸ್ಕರ್ಟ್, ಕುರ್ತಾ, ಅನಾರ್ಕಲಿ, ಚೂಡಿದಾರ್, ಸಲ್ವಾರ್, ಗಾಗ್ರ –ಚೋಲಿ, ಅಂಬ್ರೆಲ್ಲಾ ಫ್ರಾಕ್ ಶೈಲಿಯ ಕಮೀಝ್ ಹೀಗೆ ನವರಾತ್ರಿಯ ಸೀಸನ್‌ನಲ್ಲಿ ಸಾಕಷ್ಟು ಟ್ರೆಡಿಷನಲ್ ಔಟ್‌ಫಿಟ್‌ಗಳು ಟ್ರೆಂಡಿಯಾಗಿವೆ. ಈ ಔಟ್‌ಫಿಟ್‌ಗೆ ಹೊಂದುವಂತಹ ಮೇಕಪ್ ಹಾಗೂ ಹೇರ್‌ಸ್ಟೈಲ್ ಮ್ಯಾಚ್ ಮಾಡಬೇಕು. ಗೋಲ್ಡನ್ ಜ್ಯುವೆಲರಿ ಬದಲು ನೀಲಿ ವರ್ಣದ ಸ್ಟೇಟ್‌ಮೆಂಟ್ ಆಭರಣಗಳನ್ನು ಧರಿಸಬಹುದು.
- ಸೀರೆ ಉಟ್ಟಲ್ಲಿ ಆದಷ್ಟು ಬನ್ ಹೇರ್‌ಸ್ಟೈಲ್ ಇಲ್ಲವೇ ವಿವಿಧ ಬಗೆಯ ಜಡೆ ಹೆಣೆಯಬಹುದು.
- ಔಟ್ಫಿಟ್ಗಳಿಗೆ ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್ ಮಾಡಬಹುದು.
- ಟ್ರೆಡಿಷನಲ್ ಲುಕ್ ನೀಲಿ ವರ್ಣದಲ್ಲಿ ಚೆನ್ನಾಗಿ ಕಾಣುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Navaratri Red Colour Fashion Tips: ನವರಾತ್ರಿ 3ನೇ ದಿನದ ಕೆಂಪು ಬಣ್ಣದಲ್ಲಿ ನಿಮ್ಮದಾಗಲಿ ಆಕರ್ಷಕ ಸ್ಟೈಲಿಂಗ್