-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿತ್ತಳೆ ವರ್ಣ ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ನೂರು ಜನರ ಮಧ್ಯೆಯೂ ಎದ್ದು ಕಾಣುವಂತಹ ವರ್ಣವಿದು. ಹಾಗಾಗಿಯೇ ಫ್ಯಾಷನಿಸ್ಟಾಗಳು ಈ ಬಣ್ಣವನ್ನು ಬೋಲ್ಡ್ ಕಲರ್‌ಲಿಸ್ಟ್‌ಗೆ ಸೇರಿಸಿದ್ದಾರೆ. ಅಲ್ಲದೇ, ಕಿತ್ತಳೆ ವರ್ಣವನ್ನು ಹ್ಯಾಪಿ ಕಲರ್ (Navaratri Colour Trend ) ಎಂದು ಕರೆಯಲಾಗುತ್ತದೆ. ಕಿತ್ತಳೆ ಶೇಡ್‌ನ ಡಿಸೈನರ್‌ವೇರ್ ಧರಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಅತ್ಯಾಕರ್ಷಕವಾಗಿ ಕಾಣುವುದರ ಬಗ್ಗೆ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ಡಿಸೈನರ್ಸ್.
ಕಿತ್ತಳೆಯ ನಾನಾ ಶೇಡ್‌ಗಳು
ಅಂದ ಹಾಗೆ, ಕಿತ್ತಳೆಯಲ್ಲೂ ನಾನಾ ಶೇಡ್‌ಗಳು ಸೇರಿವೆ. ಕಿತ್ತಳೆ ವರ್ಣದಲ್ಲಿ ಕೇಸರಿ, ತಿಳಿ ಕೇಸರಿ, ಮಾರ್ಸೆಲ್ಲಾ, ಬ್ರಿಕ್ ಆರೆಂಜ್ ಹೀಗೆ ಸಾಕಷ್ಟು ವರ್ಣಗಳು ಕಂಬೈನ್ ಆಗಿವೆ. ಈ ವರ್ಣ ಭಾರತೀಯರಿಗೆ ಅತಿ ಹೆಚ್ಚು ಹೊಂದುತ್ತದೆ ಎಂದು ಸಾಕಷ್ಟು ಬ್ಯೂಟಿ ಸಮೀಕ್ಷೆಗಳು ಸಾಬೀತು ಪಡಿಸಿವೆ ಕೂಡ. ಇದಕ್ಕೆ ಪೂರಕ ಎಂಬಂತೆ, ಹಿಂದೂ ಧರ್ಮದ ಪ್ರತೀಕ ಎಂಬಂತೆ ಸನ್ಯಾಸಿಗಳು, ಗುರೂಜೀಗಳು, ಬಹುತೇಕ ಹಿಂದುತ್ವ ಪ್ರತಿಪಾದಿಸುವವರು ಈ ವರ್ಣದ ಉಡುಪುಗಳನ್ನೇ ಧರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಕಿತ್ತಳೆ ವರ್ಣದ ಸೀರೆ
ನವರಾತ್ರಿಗೆ ಕಿತ್ತಳೆ ವರ್ಣದ ಸೀರೆಯನ್ನು ಧರಿಸಿದಾಗ ಆದಷ್ಟೂ ಕಾಂಟ್ರಸ್ಟ್ ಬ್ಲೌಸ್‌ಗಳನ್ನು ಆವಾಯ್ಡ್ ಮಾಡಿ. ಎಲ್ಲದಕ್ಕಿಂತ ಹೆಚ್ಚಾಗಿ ಈ ವರ್ಣಕ್ಕೆ ಹೆಚ್ಚು ಆಕ್ಸೆಸರೀಸ್‌ನ ಅಗತ್ಯವಿಲ್ಲ. ಯಾಕೆಂದರೆ, ಸೀರೆಯೇ ಎದ್ದು ಕಾಣುವುದರಿಂದ ಸಿಂಪಲ್ ಆಕ್ಸೆಸರೀಸ್‌ಗಳನ್ನು ಧರಿಸಿದರಾಯಿತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಈಗಾಗಲೇ ನಿಮ್ಮ ಬಳಿ ರೇಷ್ಮೆಯ ಆರೆಂಜ್ ಸೀರೆಗಳು ಇದ್ದಲ್ಲಿ ಅವನ್ನು ಡಿಫರೆಂಟ್ ಡ್ರೆಪಿಂಗ್ ಮಾಡಿ, ಧರಿಸಿ. ಆಗ ವಿಭಿನ್ನ ಲುಕ್ ನಿಮ್ಮದಾಗುವುದು. ಇವಕ್ಕೆ ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ.
ಕಿತ್ತಳೆವರ್ಣದ ಡಿಸೈನರ್‌ವೇರ್
ಇಂದು ಕಿತ್ತಳೆ ವರ್ಣದ ಮ್ಯಾಕ್ಸಿ, ಗೌನ್ ಹಾಗೂ ಲೆಹೆಂಗಾಗಳು ಗ್ರ್ಯಾಂಡ್ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. ಅದರಲ್ಲೂ ಫ್ರಾಕ್ ಶೈಲಿಯವು ಸೆಮಿ ಎಥ್ನಿಕ್‌ನಲ್ಲಿ ಬಂದಿವೆ. ಇವುಗಳನ್ನು ಧರಿಸಿದಾಗ ಇಂಡೋ-ವೆಸ್ಟರ್ನ್ ಲುಕ್ ನೀಡುತ್ತವೆ.
ಹೇರ್‌ಸ್ಟೈಲ್‌ಗೆ ಹೂವಿನ ಅಲಂಕಾರ
ಕಿತ್ತಳೆ ವರ್ಣದ ಡಿಸೈನರ್‌ವೇರ್ ಹಾಗೂ ಸೀರೆ ಧರಿಸಿದಾಗ ಕೂದಲಿಗೆ ಕನಕಾಂಬರ ಹೂವಿನ ದಂಡೆಯನ್ನು ಮುಡಿದರೆ ಚೆನ್ನಾಗಿ ಕಾಣುತ್ತದೆ. ಇನ್ನು ಗೋಲ್ಡನ್ ಆರ್ಟಿಫಿಶಿಯಲ್ ದಂಡೆಗಳನ್ನು ಹಾಕಿಕೊಳ್ಳಬಹುದು. ಇದು ಗ್ರ್ಯಾಂಡ್ ಲುಕ್ ನೀಡುತ್ತದೆ.
ಕಿತ್ತಳೆ ವರ್ಣದ ಉಡುಪು ಅಥವಾ ಸೀರೆ ಪ್ರಿಯರು ಪಾಲಿಸಬೇಕಾದ ಟಿಪ್ಸ್
- ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ.
- ಹೇರ್ಬನ್ ಅಥವಾ ಬ್ರೈಡ್ ಡಿಸೈನ್ ಹಾಕಿಕೊಳ್ಳಿ.
- ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಲುಕ್ ಎರಡೂ ಓಕೆ.
- ಹಣೆಗೆ ಅಗಲವಾದ ಬಂಗಾಲಿ ಬಿಂದಿ ಇಡಿ.
ಇದನ್ನೂ ಓದಿ |Navaratri colour trend | ಹೀಗಿರಲಿ ನವರಾತ್ರಿಯ 6ನೇ ದಿನದ ಬೂದು ಬಣ್ಣದ ಡ್ರೆಸ್‌ಕೋಡ್