- ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ ೫ನೇ ದಿನ ಹಸಿರು (Navaratri Colour Trend) ಬಣ್ಣಕ್ಕೆ ಆದ್ಯತೆ. ನವರಾತ್ರಿಯ ಕಲರ್ ಟ್ರೆಂಡ್‌ಗೆ ಹೊಂದುವಂತೆ ಈಗಾಗಲೇ ನಾನಾ ಬಗೆಯ ಡಿಸೈನರ್‌ಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ. ಇನ್ನು ವಾರ್ಡ್ರೋಬ್‌ನಲ್ಲಿರುವ ಸೀರೆ ಹಾಗೂ ಇತರೇ ಎಥ್ನಿಕ್ ಡ್ರೆಸ್‌ಗಳನ್ನು ಧರಿಸಿಯೂ ಹೇಗೆಲ್ಲಾ ಬ್ಯೂಟಿಫುಲ್ ಆಗಿ ಕಾಣಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಹಸಿರು ಸೀರೆ ಪ್ರೇಮ
ಹಸಿರು ಶೇಡ್‌ಗಳಲ್ಲಿ ನಾನಾ ಬಗೆಯ ಡಿಸೈನ್ಸ್‌ನವು ಲಭ್ಯ. ರೇಷ್ಮೆ ಸೀರೆಯಿಂದಿಡಿದು ಸಾಮಾನ್ಯ ಸೀರೆಗಳಲ್ಲೂ ಹಸಿರು ವರ್ಣದ ಸೀರೆ ಧರಿಸಿದಾಗ ಆಕರ್ಷಕವಾಗಿ ಕಾಣುತ್ತದೆ. ಉಟ್ಟರೇ ಹಾಗೆಯೇ ಫ್ಲೋ ಆಗುವಂತಹ ಜಾರ್ಜೆಟ್ ಸೀರೆಯಿಂದಿಡಿದು ಸಾಫ್ಟ್ ಸಿಲ್ಕ್‌ನ ಹಸಿರು ಸೀರೆಗಳು ಸಾಕಷ್ಟು ಟ್ರೆಂಡಿಯಾಗಿವೆ.
ಹಳೆ ಹಸಿರು ಸೀರೆಗೆ ಡಿಫರೆಂಟ್ ಲುಕ್ ನೀಡಿ
ಬಹುತೇಕ ಎಲ್ಲರ ಬಳಿಯಲ್ಲೂ ಒಂದಾದರೂ ಸರಿಯೇ, ಹಸಿರು ಸೀರೆ ಇದ್ದೇ ಇರುತ್ತದೆ. ಅದರಲ್ಲೂ ಹಸಿರು ರೇಷ್ಮೆ ಸೀರೆಗಳಿಗೆ ವಾರ್ಡ್ರೋಬ್‌ನಲ್ಲಿ ಸ್ಥಾನ ಇದ್ದೇ ಇರುತ್ತದೆ. ಈ ಸೀರೆಗೂ ಹೊಸ ಲುಕ್ ನೀಡಿ ಧರಿಸಬಹುದು. ರೇಷ್ಮೆ ಸೀರೆಗೆ ಕ್ರಾಪ್ ಟಾಪ್ ಅಥವಾ ಡಿಫರೆಂಟ್ ಡ್ರೇಪಿಂಗ್ ಮಾಡಿದಾಗ ನೋಡಲು ಹೊಸದರಂತೆ ಕಾಣುತ್ತದೆ.
ಹಸಿರು ಡ್ರೆಸ್‌ಗಳಾದಲ್ಲಿ ಜ್ಯುವೆಲರಿಗಳನ್ನು ಮ್ಯಾಚ್ ಮಾಡಿ
ಹಸಿರು ಡ್ರೆಸ್‌ಗಳಾದಲ್ಲಿ ಆದಷ್ಟೂ ಆಕ್ಸೆಸರೀಸ್‌ಗಳನ್ನು ಮ್ಯಾಚ್ ಮಾಡಿ. ಗ್ರೀನ್ ಹಾಗೂ ಮರೂನ್ ಕ್ರಿಸ್ಟಲ್ ಇರುವಂತವು ಹಾಗೂ ಥ್ರೆಡ್ ಜುವೆಲರಿಗಳು ಇವಕ್ಕೆ ಮ್ಯಾಚ್ ಆಗುತ್ತವೆ.
ಹಸಿರು ಲೆಹೆಂಗಾ-ಗಾಗ್ರ
ಹಸಿರು ವರ್ಣದ ಲೆಹೆಂಗಾ ಹಾಗೂ ಗಾಗ್ರಗಳು ಬಹುತೇಕ ಮಿರರ್ ವರ್ಕ್ ಇಲ್ಲವೇ ಮೆಷಿನ್ ವರ್ಕ್ ಒಳಗೊಂಡಿರುತ್ತವೆ. ಹ್ಯಾಂಡ್‌ವರ್ಕ್ನವನ್ನು ಕೂಡ ಧರಿಸಬಹುದು. ಇವು ನೋಡಲು ತೀರಾ ಗ್ರ್ಯಾಂಡ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಮೇಕಪ್ ಹೀಗಿರಲಿ
ಹಸಿರು ವರ್ಣದ ಡಿಸೈನರ್‌ವೇರ್‌ಗಳು ಆದಷ್ಟೂ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುತ್ತವೆ. ಹಾಗಾಗಿ ಮೇಕಪ್ ಕೂಡ ಟ್ರೆಡಿಷನಲ್ ಆಗಿರಬೇಕು. ಬೇಕಿದ್ದಲ್ಲಿ ಗ್ರೀನ್ ಐ ಲೈನರ್ ಬಳಸಬಹುದು. ಲಿಪ್‌ಸ್ಟಿಕ್ ತಿಳಿಯಾಗಿರಲಿ. ಕಣ್ಣಿಗೆ ಕಾಜಲ್ ಬಳಸಿ. ಐ ಮೇಕಪ್‌ಗೆ ಪ್ರಾಮುಖ್ಯತೆ ನೀಡಿ.
ಹಸಿರು ಶೇಡ್ ಧರಿಸುವವರಿಗೆ ಒಂದಿಷ್ಟು ಸಲಹೆಗಳು
- ಆಕ್ಸೆಸರೀಸ್ ಮ್ಯಾಚ್ ಮಾಡಿ. ನೋಡಲು ಸಖತ್ ಆಗಿ ಕಾಣುವುದು.
- ಹೇರ್ಸ್ಟೈಲ್ ಕೂಡ ಟ್ರೆಡಿಷನಲ್ ಆಗಿರಲಿ.
- ಇಂಡೋ-ವೆಸ್ಟರ್ನ್ ಸ್ಟೈಲ್ ಆಗಿದ್ದಲ್ಲಿ ಆದಷ್ಟೂ ಲುಕ್ ಸಿಂಪಲ್ಲಾಗಿರಲಿ.
- ಸ್ಯಾಂಡಲ್ಗಳನ್ನು ಕಾಂಟ್ರಸ್ಟ್ ಮಾಡಿ ಧರಿಸುವುದು ಬೇಡ.
ಇದನ್ನೂ ಓದಿ | Navaratri Fashion | ನವರಾತ್ರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ದುರ್ಗಾ ದೇವಿ ವಿನ್ಯಾಸ