-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ ೪ನೇ ದಿನ ಹಳದಿ ವರ್ಣಕ್ಕೆ (Navaratri Colour Trend) ಪ್ರಾಧಾನ್ಯತೆ. ಈ ವರ್ಣವನ್ನು ಟ್ರೆಂಡಿಯಾಗಿಸಿ ಧರಿಸಬಹುದು. ಜತೆಗೆ ಧರಿಸಿದಾಗ ಫ್ಯಾಷೆನೆಬಲ್ ಆಗಿಯೂ ಕಾಣಿಸಬಹುದು. ಈ ಕುರಿತಂತೆ ಇಲ್ಲಿದೆ ವಿವರ.
ಹಳದಿ ಬಣ್ಣದ ಜಾದೂ
ಹಳದಿ ಬಣ್ಣದ ಜಾದೂ, ಎಂದರೆ ಈ ವರ್ಣವು ಎಂತಹವರನ್ನೂ ಎದ್ದು ಕಾಣುವಂತೆ ಮಾಡುತ್ತದೆ. ಡಿಸೈನರ್‌ವೇರ್‌ಗಳು ಹೈಲೈಟಾಗುತ್ತವೆ. ನವರಾತ್ರಿಯ ೪ನೇ ದಿನದ ಈ ವರ್ಣದಲ್ಲಿ ನಾನಾ ಬಗೆಯ ಡಿಸೈನರ್‌ವೇರ್‌ಗಳನ್ನು ಧರಿಸಬಹುದು.
ಹಳದಿ ಸೀರೆಯಲ್ಲಿ ಹೈಲೈಟ್ ಆಗಿ
ಹಳದಿ ವರ್ಣವನ್ನು ಸನ್ ಕಲರ್ ಎಂದು ಕೂಡ ಹೇಳಲಾಗುತ್ತದೆ. ನೋಡಲು ಸ್ಕಿನ್‌ಟೋನ್‌ಗಿಂತ ಹಳದಿ ಡಿಸೈನರ್‌ವೇರ್‌ಗಳು ಎದ್ದು ಕಾಣುವುದರಿಂದ ಆದಷ್ಟೂ ನಿಮಗೆ ಹೊಂದುವಂತಹ ಉಡುಪುಗಳನ್ನು ಚೂಸ್ ಮಾಡುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ಸ್ ರಾಶಿ. ಅವರ ಪ್ರಕಾರ, ಹಳದಿ ವರ್ಣದಲ್ಲೂ ತಿಳಿ, ಡಾರ್ಕ್, ಮಾನೋಕ್ರೋಮ್ ಪ್ರಿಂಟ್ಸ್, ಡಿಜಿಟಲ್ ಶೇಡ್ಸ್ ಹೀಗೆ ಊಹೆಗೂ ಮೀರಿದ ವರ್ಣಗಳು ಫ್ಯಾಷನ್‌ಲೋಕದಲ್ಲಿವೆ.
ಹಳದಿ ಸೀರೆಗಳಲ್ಲಿ ಇದೀಗ ಗ್ರಾಫಿಕ್ ಹಾಗೂ ಅನಿಮಲ್ ಪ್ರಿಂಟ್‌ನವು ಹೆಚ್ಚು ಟ್ರೆಂಡಿಯಾಗಿವೆ. ಬಾಲಿವುಡ್ ಸೆಲೆಬ್ರಿಟಿಗಳ ಪ್ರಯೋಗಾತ್ಮಕ ಲಿಸ್ಟ್‌ನಲ್ಲಿರುವ ಸಿಲ್ಕ್ ಹಳದಿ ಸೀರೆಗಳು ಇದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದು ಉಟ್ಟರೆ ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಮಾಡೆಲ್ ಗಾಯತ್ರಿ.
ಇದನ್ನೂ ಓದಿ | Celebriety Fashion Corner | ಮಲ್ಟಿ ಟಾಸ್ಕಿಂಗ್ ಜ್ಯೋತ್ಸ್ನಾ ವೆಂಕಟೇಶ್‌ರ ಫ್ಯಾಷನ್-ಫಿಟ್ನೆಸ್ ಪ್ರೇಮ
ಹಳದಿ ಡಿಸೈನರ್‌ವೇರ್‌ಗಳು
ಹಳದಿಯ ಡಿಸೈನರ್ ಚಿಕನ್‌ಕಾರಿ ಸೂಟ್, ಕುರ್ತಾ, ಕಮೀಝ್‌ಗಳನ್ನು ವೃತ್ತಿಪರರರು ಸೆಲೆಕ್ಟ್ ಮಾಡಿ ಧರಿಸಬಹುದು. ಗ್ರ್ಯಾಂಡ್ ಲುಕ್ ಬೇಕಿದ್ದಲ್ಲಿ ಹಳದಿಯ ಒಂದೇ ವರ್ಣದ ಲೆಹೆಂಗಾವನ್ನು ದುಪಟ್ಟಾದೊಂದಿಗೆ ಧರಿಸಬಹುದು. ಇನ್ನು ನವರಾತ್ರಿಯ ಆಚರಣೆಯಲ್ಲಿ ಹಳದಿ ವರ್ಣದ ಉಡುಪುಗಳು ಹೈಲೈಟಾಗಬೇಕೆಂದಲ್ಲಿ ಆದಷ್ಟೂ ಕಾಂಟ್ರಾಸ್ಟ್ ವರ್ಣದ ಆಕ್ಸೆಸರೀಸ್ ಧರಿಸುವುದು ಬೇಡ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಮಿಕ್ಸ್ ಅಂಡ್ ಮ್ಯಾಚ್ ಬೇಡ
ನವರಾತ್ರಿಯ ಕಲರ್ ಟ್ರೆಂಡ್‌ಗೆ ಧರಿಸುವುದಾದಲ್ಲಿ ಹಳದಿ ಜತೆಗೆ ಯಾವುದೇ ಮಿಕ್ಸ್ ಮ್ಯಾಚ್ ಬ್ಲೌಸ್ ಬೇಡ. ಇದು ಹಳದಿ ಲುಕ್ ನೀಡದು ಎನ್ನುವ ಸ್ಟೈಲಿಸ್ಟ್ ಪ್ರಕಾರ, ಹಳದಿ ಬಣ್ಣವೊಂದರಲ್ಲೆ ಸುಮಾರು 10 ಕ್ಕೂ ಹೆಚ್ಚು ಫ್ಯಾಷನ್ ಶೇಡ್‌ಗಳಿವೆ. ಗಾಢ ಹಳದಿ ಹಾಗೂ ಗೋಲ್ಡನ್ ಶೇಡ್ ಇರುವಂತಹ ಕುರ್ತಾಗಳು ಈ ನವರಾತ್ರಿಗೆ ಹೊಂದುತ್ತವೆ.
ಹಳದಿ ವರ್ಣದ ಡಿಸೈನರ್‌ವೇರ್ ಧರಿಸುವ ಮುನ್ನ
- ಹಳದಿಯಲ್ಲಿ ತಿಳಿ ಬಣ್ಣ ಚೂಸ್ ಮಾಡಿದರೇ ಉತ್ತಮ.
- ಹ್ಯಾಂಡ್ವರ್ಕ್ ಇರುವಂತವು ಎಲಿಗೆಂಟ್ ಲುಕ್ ನೀಡುತ್ತದೆ.
- ಡ್ರೆಸ್ ಅಥವಾ ಸೀರೆಯ ಫ್ಯಾಬ್ರಿಕ್ ಗುಣಮಟ್ಟದ್ದಾಗಿರಬೇಕು.
- ಮಾನೋಕ್ರೋಮ್ ವರ್ಣಕ್ಕೆ ಆದ್ಯತೆ ನೀಡಿ.
ಇದನ್ನೂ ಓದಿ | Star Fashion | ದಸರಾ ಸಂಭ್ರಮಕ್ಕೆ ನಟಿ ಶುಭಾ ಪೂಂಜಾ ಎಥ್ನಿಕ್ ಫ್ಯಾಷನ್