Navaratri Colour Trend | ನವರಾತ್ರಿಯ 4ನೇ ದಿನವನ್ನು ರಂಗಾಗಿಸುವ ಹಳದಿ ಬಣ್ಣ - Vistara News

ದಸರಾ ಸಂಭ್ರಮ

Navaratri Colour Trend | ನವರಾತ್ರಿಯ 4ನೇ ದಿನವನ್ನು ರಂಗಾಗಿಸುವ ಹಳದಿ ಬಣ್ಣ

ನವರಾತ್ರಿಯ 4ನೇ ದಿನ ಹಳದಿ ಬಣ್ಣದ್ದೇ (Navaratri Colour Trend) ಕಾರುಬಾರು. ಈ ವರ್ಣದ ಟ್ರೆಂಡಿವೇರ್‌ನಲ್ಲಿ ಮಾನಿನಿಯರು ಹೇಗೆಲ್ಲಾ ಅಲಂಕರಿಸಿಕೊಳ್ಳಬಹುದು ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Navaratri Colour Trend
ನುಸ್ರತ್‌ ಬರೋಚಾ, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ ೪ನೇ ದಿನ ಹಳದಿ ವರ್ಣಕ್ಕೆ (Navaratri Colour Trend) ಪ್ರಾಧಾನ್ಯತೆ. ಈ ವರ್ಣವನ್ನು ಟ್ರೆಂಡಿಯಾಗಿಸಿ ಧರಿಸಬಹುದು. ಜತೆಗೆ ಧರಿಸಿದಾಗ ಫ್ಯಾಷೆನೆಬಲ್‌ ಆಗಿಯೂ ಕಾಣಿಸಬಹುದು. ಈ ಕುರಿತಂತೆ ಇಲ್ಲಿದೆ ವಿವರ.

ಹಳದಿ ಬಣ್ಣದ ಜಾದೂ
ಹಳದಿ ಬಣ್ಣದ ಜಾದೂ, ಎಂದರೆ ಈ ವರ್ಣವು ಎಂತಹವರನ್ನೂ ಎದ್ದು ಕಾಣುವಂತೆ ಮಾಡುತ್ತದೆ. ಡಿಸೈನರ್‌ವೇರ್‌ಗಳು ಹೈಲೈಟಾಗುತ್ತವೆ. ನವರಾತ್ರಿಯ ೪ನೇ ದಿನದ ಈ ವರ್ಣದಲ್ಲಿ ನಾನಾ ಬಗೆಯ ಡಿಸೈನರ್‌ವೇರ್‌ಗಳನ್ನು ಧರಿಸಬಹುದು.

ಹಳದಿ ಸೀರೆಯಲ್ಲಿ ಹೈಲೈಟ್‌ ಆಗಿ
ಹಳದಿ ವರ್ಣವನ್ನು ಸನ್‌ ಕಲರ್‌ ಎಂದು ಕೂಡ ಹೇಳಲಾಗುತ್ತದೆ. ನೋಡಲು ಸ್ಕಿನ್‌ಟೋನ್‌ಗಿಂತ ಹಳದಿ ಡಿಸೈನರ್‌ವೇರ್‌ಗಳು ಎದ್ದು ಕಾಣುವುದರಿಂದ ಆದಷ್ಟೂ ನಿಮಗೆ ಹೊಂದುವಂತಹ ಉಡುಪುಗಳನ್ನು ಚೂಸ್‌ ಮಾಡುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ಸ್‌ ರಾಶಿ. ಅವರ ಪ್ರಕಾರ, ಹಳದಿ ವರ್ಣದಲ್ಲೂ ತಿಳಿ, ಡಾರ್ಕ್, ಮಾನೋಕ್ರೋಮ್‌ ಪ್ರಿಂಟ್ಸ್‌, ಡಿಜಿಟಲ್‌ ಶೇಡ್ಸ್‌ ಹೀಗೆ ಊಹೆಗೂ ಮೀರಿದ ವರ್ಣಗಳು ಫ್ಯಾಷನ್‌ಲೋಕದಲ್ಲಿವೆ.

ಹಳದಿ ಸೀರೆಗಳಲ್ಲಿ ಇದೀಗ ಗ್ರಾಫಿಕ್‌ ಹಾಗೂ ಅನಿಮಲ್‌ ಪ್ರಿಂಟ್‌ನವು ಹೆಚ್ಚು ಟ್ರೆಂಡಿಯಾಗಿವೆ. ಬಾಲಿವುಡ್‌ ಸೆಲೆಬ್ರಿಟಿಗಳ ಪ್ರಯೋಗಾತ್ಮಕ ಲಿಸ್ಟ್‌ನಲ್ಲಿರುವ ಸಿಲ್ಕ್‌ ಹಳದಿ ಸೀರೆಗಳು ಇದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದು ಉಟ್ಟರೆ ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಮಾಡೆಲ್‌ ಗಾಯತ್ರಿ.

ಇದನ್ನೂ ಓದಿ | Celebriety Fashion Corner | ಮಲ್ಟಿ ಟಾಸ್ಕಿಂಗ್‌ ಜ್ಯೋತ್ಸ್ನಾ ವೆಂಕಟೇಶ್‌ರ ಫ್ಯಾಷನ್‌-ಫಿಟ್ನೆಸ್‌ ಪ್ರೇಮ

Navaratri Colour Trend
ಊರ್ವಶಿ ರೌಟಾಲಾ, ನಟಿ

ಹಳದಿ ಡಿಸೈನರ್‌ವೇರ್‌ಗಳು
ಹಳದಿಯ ಡಿಸೈನರ್‌ ಚಿಕನ್‌ಕಾರಿ ಸೂಟ್‌, ಕುರ್ತಾ, ಕಮೀಝ್‌ಗಳನ್ನು ವೃತ್ತಿಪರರರು ಸೆಲೆಕ್ಟ್‌ ಮಾಡಿ ಧರಿಸಬಹುದು. ಗ್ರ್ಯಾಂಡ್‌ ಲುಕ್‌ ಬೇಕಿದ್ದಲ್ಲಿ ಹಳದಿಯ ಒಂದೇ ವರ್ಣದ ಲೆಹೆಂಗಾವನ್ನು ದುಪಟ್ಟಾದೊಂದಿಗೆ ಧರಿಸಬಹುದು. ಇನ್ನು ನವರಾತ್ರಿಯ ಆಚರಣೆಯಲ್ಲಿ ಹಳದಿ ವರ್ಣದ ಉಡುಪುಗಳು ಹೈಲೈಟಾಗಬೇಕೆಂದಲ್ಲಿ ಆದಷ್ಟೂ ಕಾಂಟ್ರಾಸ್ಟ್‌ ವರ್ಣದ ಆಕ್ಸೆಸರೀಸ್‌ ಧರಿಸುವುದು ಬೇಡ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.

ಮಿಕ್ಸ್‌ ಅಂಡ್‌ ಮ್ಯಾಚ್‌ ಬೇಡ
ನವರಾತ್ರಿಯ ಕಲರ್‌ ಟ್ರೆಂಡ್‌ಗೆ ಧರಿಸುವುದಾದಲ್ಲಿ ಹಳದಿ ಜತೆಗೆ ಯಾವುದೇ ಮಿಕ್ಸ್‌ ಮ್ಯಾಚ್‌ ಬ್ಲೌಸ್‌ ಬೇಡ. ಇದು ಹಳದಿ ಲುಕ್‌ ನೀಡದು ಎನ್ನುವ ಸ್ಟೈಲಿಸ್ಟ್‌ ಪ್ರಕಾರ, ಹಳದಿ ಬಣ್ಣವೊಂದರಲ್ಲೆ ಸುಮಾರು 10 ಕ್ಕೂ ಹೆಚ್ಚು ಫ್ಯಾಷನ್‌ ಶೇಡ್‌ಗಳಿವೆ. ಗಾಢ ಹಳದಿ ಹಾಗೂ ಗೋಲ್ಡನ್‌ ಶೇಡ್‌ ಇರುವಂತಹ ಕುರ್ತಾಗಳು ಈ ನವರಾತ್ರಿಗೆ ಹೊಂದುತ್ತವೆ.

Navaratri Colour Trend
ನಟಿ ಸೋಹಾ ಅಲಿಖಾನ್‌ ಮಗಳೊಂದಿಗೆ

ಹಳದಿ ವರ್ಣದ ಡಿಸೈನರ್‌ವೇರ್‌ ಧರಿಸುವ ಮುನ್ನ

  • ಹಳದಿಯಲ್ಲಿ ತಿಳಿ ಬಣ್ಣ ಚೂಸ್‌ ಮಾಡಿದರೇ ಉತ್ತಮ.
  • ಹ್ಯಾಂಡ್‌ವರ್ಕ್ ಇರುವಂತವು ಎಲಿಗೆಂಟ್‌ ಲುಕ್‌ ನೀಡುತ್ತದೆ.
  • ಡ್ರೆಸ್‌ ಅಥವಾ ಸೀರೆಯ ಫ್ಯಾಬ್ರಿಕ್‌ ಗುಣಮಟ್ಟದ್ದಾಗಿರಬೇಕು.
  • ಮಾನೋಕ್ರೋಮ್‌ ವರ್ಣಕ್ಕೆ ಆದ್ಯತೆ ನೀಡಿ.

ಇದನ್ನೂ ಓದಿ | Star Fashion | ದಸರಾ ಸಂಭ್ರಮಕ್ಕೆ ನಟಿ ಶುಭಾ ಪೂಂಜಾ ಎಥ್ನಿಕ್‌ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Mysore Dasara: ಚೆಕ್‌ ಬೌನ್ಸ್‌; ದಸರಾ ಕಲಾವಿದರಿಗೆ ಅವಮಾನ ಎಂದು ಯತ್ನಾಳ್‌ ಕಿಡಿ

Mysore Dasara: ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

VISTARANEWS.COM


on

Basanagouda Patil Yatnal
Koo

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮುಕ್ತಾಯವಾದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಬಹುಮಾನದ ಚೆಕ್‌ ಬೌನ್ಸ್‌ ಆಗಿರುವುದರಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಚೆಕ್‌ ವಾಪಸ್‌ ಬಂದರೂ ಬ್ಯಾಂಕ್‌ ಖಾತೆಯಲ್ಲಿ ಹಣ ಕಡಿತವಾಗಿರುವುದಕ್ಕೆ ಕಲಾವಿದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಕಲಾವಿದರಿಗೆ ಅವಮಾನವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿ ಕಾರಿದ್ದಾರೆ.

ಅ.26 ರಂದು ಮೈಸೂರಿನ ಹವ್ಯಾಸಿ ಛಾಯಾಚಿತ್ರಗಾರ ಎನ್.ಜಿ. ಸುಧೀರ್‌ಗೆ 7 ಸಾವಿರ ರೂ. ಬಹುಮಾನದ ಚೆಕ್ ನೀಡಲಾಗಿತ್ತು‌. ಅ.27 ರಂದು ಸುದೀರ್ ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ ಅ.30ರಂದು ಚೆಕ್ ವಾಪಸ್ ಆಗಿದೆ. ಈ ವೇಳೆ ಅಕೌಂಟ್‌ನಿಂದ 118 ರೂ. ಕಟ್ ಮಾಡಲಾಗಿದೆ.

ಇದನ್ನೂ ಓದಿ | Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಜಿ. ಸುಧೀರ್, ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ನನಗೆ 118 ರೂ. ದಂಡ ಬಿದ್ದಿದೆ. ಇಂತಹ ಬೇಜಾವ್ದಾರಿತನ ಏಕೆ? ತಮ್ಮಂತೆ ಸಾಕಷ್ಟು ಕಲಾವಿದರಿಗೆ ಅನ್ಯಾಯ ಆಗಿದೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

ದಸರಾ ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಕಲಾವಿದರಿಗೆ ನೀಡಿದ್ದ ಬಹುಮಾನದ ಚೆಕ್‌ಗಳು ನಗದಾಗಿ ಪರಿವರ್ತನೆ ಆಗದೆ ವಾಪಸ್‌ ಆಗುತ್ತಿವೆ. ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ. ಉಪಸಮಿತಿಯ ಈ ಹಿಂದಿನ ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ಸಹಿಗಳೇ ಚೆಕ್‌ ಮೇಲೆ ಇದ್ದಿದ್ದರಿಂದ ಚೆಕ್‌ ಬೌನ್ಸ್‌ ಆಗಿವೆ ಎನ್ನಲಾಗಿದೆ. ಚೆಕ್ ವಾಪಸ್‌ ಆಗಿರುವುದು ತಿಳಿದುಬರುತ್ತಿದ್ದಂತೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Politics : ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್.‌ ರಾಜಣ್ಣ

ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್‌ ಆಕ್ರೋಶ

ಕಲಾವಿದರಿಗೆ ನೀಡಿದ್ದ ಚೆಕ್‌ ಬೌನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ದಸರಾ ಹಬ್ಬದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಕಲಾವಿದರಿಗೆ ಮಾಡಿದ ಅವಮಾನ. ಗಾಯದ ಮೇಲೆ ಬರೆ ಇಟ್ಟಂತೆ ಬೌನ್ಸ್ ಆದ ಚೆಕ್ ಬ್ಯಾಂಕ್‌ಗೆ ನೀಡಿದ್ದಕ್ಕೆ ಕಲಾವಿದರಿಗೆ ಬ್ಯಾಂಕ್ ದಂಡ ಹಾಕಿದೆ. ದಸರಾ ಹಾಗೂ ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಉತ್ತರದಾಯಿತ್ವವಿಲ್ಲದೆ, ಬೇಜವಾಬ್ದಾರಿ ವರ್ತನೆಯಿಂದ ಕೆಲಸ ಮಾಡುವವರಿಗೆ ಸರ್ಕಾರ ಶಿಸ್ತು ಕ್ರಮ ಜರುಗಿಸಲಿ. ಉಸ್ತುವಾರಿ ಸಚಿವರ ದುರಾಡಳಿತದಿಂದ ದಸರಾ ಸಂಭ್ರಮದಲ್ಲಿ ವಿದ್ಯುತ್ ಬೇಲಿ ಹಾರಿ ಬಂದು ಭದ್ರತಾ ವೈಫಲ್ಯವೆಸಗಿದ್ದು, ಈಗ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ನೀಡಿ ಸರಣಿ ವೈಫಲ್ಯಗಳು ಆಗಿವೆ ಎಂದು ಅಕ್ರೋಶ ಹೊರಹಾಕಿದ್ದಾರೆ.

Continue Reading

ಕರ್ನಾಟಕ

Mysore Dasara: ಮೈಸೂರು ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳಿವು

Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ

VISTARANEWS.COM


on

Dasara sambhrama
Koo

ಮೈಸೂರು: ಅ.15ರಂದು ಆರಂಭವಾದ ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ, ವಿಜಯದಶಮಿ ದಿನವಾದ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ಕೊನೆಯ ದಿನ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರಗಳ ಮೆರವಣಿಗೆ, ಜಂಬೂ ಸವಾರಿ, ಪಂಜಿನ ಕವಾಯತು ಅದ್ಧೂರಿಯಾಗಿ ನೆರವೇರಿದ್ದು, ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ | Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Continue Reading

ಕರ್ನಾಟಕ

Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Mysore Dasara : ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು.

VISTARANEWS.COM


on

Torch Light Parade 2023
Koo

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇಡೀ ದಸರಾದ ಆಕರ್ಷಣೆಯಲ್ಲಿ ಜಂಬೂ ಸವಾರಿ (Jumboo Savari) ನಂತರ ಪ್ರಮುಖವಾಗಿ ಎದ್ದು ಕಾಣುವ ಪಂಜಿನ ಕವಾಯತಿಗೆ (Torch Light Parade 2023) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thaawar Chand Gehlot) ಚಾಲನೆ ನೀಡಿದರು. ಪೊಲೀಸ್‌ ಪಡೆಯಿಂದ ಗೌರವ ವಂದನೆ ಸ್ವೀಕರಿಸುವ ಮೂಲಕ ಅವರು ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಮೊದಲು ರಾಷ್ಟ್ರಗೀತೆಯನ್ನು (National Anthem) ನುಡಿಸುವ ಮೂಲಕ ಕವಾಯತು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಬಳಿ ಬಂದ ಕಿಂಗ್‌ ಪವರ್‌ ಅಶ್ವರೂಢ ಖಡ್ಗಧಾರಿ ಪ್ರಧಾನ ದಳಪತಿ ಕವಾಯತು ವರದಿಯನ್ನು ಅತಿಥಿಗಳಿಗೆ ಸಮರ್ಪಿಸಿದರು. ತರುವಾಯ ನಿಶ್ಚಳ ದಳಗಳ ಪರಿವೀಕ್ಷಣೆಗಾಗಿ ರಾಜ್ಯಪಾಲರನ್ನು ಆಹ್ವಾನಿಸಿದರು.

ಆಹ್ವಾನವನ್ನು ಒಪ್ಪಿ ಅಲಂಕೃತ ತೆರೆದ ವಾಹನವನ್ನು ಹತ್ತಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿವಿಧ ಸೇವಾದಳಗಳ ನಿಶ್ಚಳದಳಗಳ ಪರಿವೀಕ್ಷಣೆಯನ್ನು ನಡೆಸಿದರು. ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಿ. ಅವರು ರಾಜ್ಯಪಾಲರಿಗೆ ವ್ಯಕ್ತಿಪರಿವೀಕ್ಷಕರಾಗಿದ್ದರು.

ಇದಾದ ಬಳಿಕ 21 ಕುಶಾಲತೋಪುಗಳನ್ನು ಮೂರು ಹಂತಗಳಲ್ಲಿ ಸಿಡಿಸಲಾಯಿತು. ನಿಶ್ಚಳದ ದಳ ಅಶ್ವಪಡೆಗಳ ಒಂದೊಂದಾಗಿ ಮೂರು ಕುದುರೆಗಳು ಒಂದು ಸುತ್ತು ಸುತ್ತಿ ಬಂದ ಬಳಿಕ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮತ್ತೊಮ್ಮೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.

18 ತುಕಡಿಗಳಿಂದ ಪ್ರದರ್ಶನ

ಒಟ್ಟು 18 ತುಕಡಿಗಳು ಪ್ರದರ್ಶನ ತೋರಿದವು. ಈ ತುಕಡಿಗಳು ಹಲವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೂಲಕ ಕೆಲವು ದಿನಗಳಿಂದ ತಾಲೀಮು ನಡೆಸಿವೆ. ಲಯಬದ್ಧ ಸಂಗೀತಕ್ಕೆ ಶಿಸ್ತುಬದ್ಧ ಹೆಜ್ಜೆಯನ್ನು ಹಾಕುತ್ತಾ ಸಾಗುತ್ತಿರುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ ಇತ್ತು. ಎದೆ ಸೆಟೆದು ಕೈಬೀಸಿ ಕಾಲನ್ನು ಜೋರಾಗಿ ನೆಲಕ್ಕೆ ಗುದ್ದಿ ಧೂಳೆಬ್ಬಿಸುತ್ತಾ ಆರಕ್ಷಕ ದಳದವರು ವೀರ ನಡಿಗೆ ಸಾಗುತ್ತಿದ್ದರೆ ಸೇರಿದ್ದ ಜನಸ್ತೋಮ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಚಿವರಾದ ವೆಂಕಟೇಶ್‌, ಶಿವರಾಜ್‌ ತಂಗಡಗಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಣ್ತುಂಬಿದ ಲೈಟಿಂಗ್‌

ಧ್ವನಿ ಬೆಳಕಿನ ಸಂಭ್ರಮ ಇದೇ ವೇಳೆ ಅನಾವರಣಗೊಳಿಸಲಾಯಿತು. ಧ್ವನಿ ಮೊದಲೋ ಬೆಳಕೋ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ ಡಿಎನ್‌ಎ ಸಹಯೋಗದಲ್ಲಿ ಧ್ವನಿ – ಬೆಳಕಿನ ಪ್ರದರ್ಶನವು ನೋಡುಗರನ್ನು ರೋಮಾಂಚನಗೊಳಿಸಿತು.

ಮನ ಮುಟ್ಟಿದ ನೃತ್ಯ ರೂಪಕ

ಡಿಎನ್‌ಎ ಸಮೂಹದ ಮೂಲಕ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಭಜರಂಗಿ ಮೋಹನ್‌ ಅವರು ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಈ ವೇಳೆ ಐಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಲಾಯಿತು. ಜತೆಗೆ ಶಂಕರ್‌ ನಾಗ್‌ ಅಭಿನಯದ ಗೀತಾ ಸಿನಿಮಾದ “ಸಂತೋಷಕ್ಕೆ ಹಾಡು ಸಂತೋಷಕ್ಕೆ”, ರವಿಚಂದ್ರನ್‌ ಅಭಿನಯದ ಮಲ್ಲ ಸಿನಿಮಾದ “ಕರುನಾಡೇ ಕೈ ಚಾಚಿದೆ ನೋಡೇ..” ಹಾಡುಗಳಿಗೆ ಹೆಜ್ಜೆ ಹಾಕಲಾಯಿತು. ಬಳಿಕ ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾದ “ಪೈಲ್ವಾನ್‌” ಹಾಡಿನಗೆ ಮಲ್ಲಕಂಭ ಸಾಹಸ ಪ್ರದರ್ಶನವನ್ನು ಮಾಡುವ ಮೂಲಕ ಡ್ಯಾನ್ಸ್‌ ಮಾಡಲಾಯಿತು. ಇದಲ್ಲದೆ, ಶಿವರಾಜ್‌ಕುಮಾರ್‌ ಅಭಿನಯದ ಶ್ರೀ ಆಂಜನೇಯಂ, ಪ್ರಸನ್ನಾಂಜನೇಯಂ ಹಾಗೂ ಪುನೀತ್‌ ರಾಜಕುಮಾರ್‌ ಅಭಿನಯದ ಯುವರತ್ನ ಸಿನಿಮಾದ “ಡಾನ್ಸ್‌ ವಿಥ್‌ ಅಪ್ಪು” ಹಾಡಿಗೂ ಹೆಜ್ಜೆ ಹಾಕಲಾಯಿತು. ಕೊನೆಯಲ್ಲಿ ಡಾ. ರಾಜಕುಮಾರ್‌ ಅಭಿನಯದ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡು ನೋಡುಗರ ಮನ ಗೆಲ್ಲುವಲ್ಲಿ ಯಶ ಕಂಡಿತು.

ಗಮನ ಸೆಳೆದ ಸಾಹಸ ಪ್ರದರ್ಶನ

ಕೊನೆಯಲ್ಲಿ ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು. ಒಂದೊಂದು ರೀತಿಯ ವಿಶಿಷ್ಟ ಸಾಹಸ ಪ್ರದರ್ಶನಗಳಿಗೂ ಜೋರಾದ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು.

ನೂರಾರು ಜನ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು. ಇದೇ ವೇಳೆ ವೆಲ್‌ ಕಮ್‌ ಟು ಮೈಸೂರು ದಸರಾ, ಫೇರ್‌ ವೆಲ್‌ ಟು ದಸರಾ, ಸಿ ಯು ದಸರಾ ಇನ್ 2024 ಎಂಬಿತ್ಯಾದಿ ಸಂದೇಶಗಳು ಕಂಡು ಬಂದವು.

ಇದನ್ನೂ ಓದಿ: Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ

ಜೋಶ್‌ ಹೆಚ್ಚಿಸಿದ ಪೊಲೀಸ್‌ ಬ್ಯಾಂಡ್‌

ಈ ಮಧ್ಯೆ ಪೊಲೀಸ್‌ ಬ್ಯಾಂಡ್‌ನವರು ಪೊಲೀಸ್‌ ಹಾಗೂ ಸೈನಿಕ ಗೀತೆಗಳನ್ನು ಪ್ರಸ್ತುತಿಪಡಿಸಿದರು. “ಸಾರೇ ಜಹಾಸೇ ಅಚ್ಚಾ” ಸೇರಿದಂತೆ ಇನ್ನೂ ಹಲವು ಗೀತೆಯನ್ನು ಪೊಲೀಸ್‌ ಬ್ಯಾಂಡ್‌ನವರು ನುಡಿಸಿ ಗಮನ ಸೆಳೆದರು. ಸೇರಿದ್ದವರಿಗೆಲ್ಲರಿಗೂ ಒಮ್ಮೆ ದೇಶಭಕ್ತಿ ಗೀತೆಯ ಬೀಟ್‌ಗಳು ಜೋಶ್‌ ಅನ್ನು ಹೆಚ್ಚಿಸುತ್ತಿದ್ದವು.

Continue Reading

ಕರ್ನಾಟಕ

Anekal Dasara : ಆನೇಕಲ್‌ನಲ್ಲಿ ಜಂಬೂ ಸವಾರಿಗೆ ಮೆರುಗು ನೀಡಿದ ಕೇರಳದ ಸಾಧು ಆನೆ

Anekal Dasara : ಬೆಂಗಳೂರು ಹೊರವಲಯದ ಆನೇಕಲ್ ಹಾಗೂ ಬನ್ನೇರುಘಟ್ಟದಲ್ಲಿ ವಿಜೃಂಭಣೆಯಿಂದ ಜಂಬೂ ಸವಾರಿ ಜರುಗಿತು. ಮಿನಿ ಮೈಸೂರು ಖ್ಯಾತಿಯ ಆನೇಕಲ್‌ನಲ್ಲಿ ಚೌಡೇಶ್ವರಿ ಜಂಬೂಸವಾರಿಗೆ ಕೇರಳದ ಸಾಧು ಆನೆ ಮೆರಗು ನೀಡಿತು.

VISTARANEWS.COM


on

By

Anekal Dasara 2023
Koo

ಆನೇಕಲ್‌: ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲೇ ಆನೇಕಲ್‌ನಲ್ಲೂ (Anekal Dasara) ವಿಜಯದಶಮಿ ದಸರಾ ಉತ್ಸವ ಮತ್ತು ಜಂಬೂ ಸವಾರಿ (Jambu savari) ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಕೇರಳ ಮೂಲದ ಸಾಧು ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಜಂಬೂಸವಾರಿ ಮೂಲಕ ಆನೇಕಲ್ ದಸರಾ ಉತ್ಸವಕ್ಕೆ ಮೆರಗು ನೀಡಿತು. ರಾಜಗಾಂಭೀರ್ಯದಲ್ಲಿ ಗಜರಾಜ ಹೆಜ್ಜೆ ಹಾಕಿದ್ದು ಭಕ್ತ ಸಾಗರ ಅದ್ಧೂರಿ ದಸರಾ ಜಂಬು ಸವಾರಿಯನ್ನು ಕಂಡು ಪುನೀತರಾಗಿದ್ದಾರೆ.

Anekal And bannerughatta  Dasara 2023

ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲೂ ನಾಡಹಬ್ಬ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಸಾಧು ಆನೆ ಸವಾರಿ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು.

Anekal And bannerughatta  Dasara 2023

ದಿವ್ಯ ಜ್ಞಾನನಂದ ಸ್ವಾಮಿ ಹಾಗೂ ಶಾಸಕ ಬಿ.ಶಿವಣ್ಣ ಸೇರಿದಂತೆ ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಆನೇಕಲ್ ‌ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿತು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಸಾಧು ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡರು.

ಇದನ್ನೂ ಓದಿ: Karnataka Weather : ಮಳೆಯಾಟ ಬಂದ್‌; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot

Anekal And bannerughatta  Dasara 2023

ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತರು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಂಡರು. ಎಂದಿನಂತೆ ತೋಗಟವೀರ ಜನಾಂಗದ ಸದಸ್ಯರು ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ನೆರವೇರಿಸಿದ್ದರು. ತಾಯಿ ಚೌಡೇಶ್ವರಿ ಸರ್ವರಿಗೂ ಒಳಿತು ಮಾಡಲಿ ಎಂದು ಶಾಸಕ ಬಿ ಶಿವಣ್ಣ ಪ್ರಾರ್ಥಿಸಿದರು.

Anekal And bannerughatta  Dasara 2023

ವಿಶ್ವ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಆನೇಕಲ್ ದಸರಾ ನಡೆಯುತ್ತಿದ್ದು, ಮಿನಿ ದಸರಾ ಎಂದೇ ಪ್ರಖ್ಯಾತಿಗಳಿಸುತ್ತಿದೆ. ಕಲಾತಂಡಗಳ ಜತೆಗೆ ಅಂಬಾರಿ ಸಾಗುವ ದೃಶ್ಯ ನೋಡುವುದೇ ಒಂದು ಹಬ್ಬವಾಗಿತ್ತು. ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದ್ದರು.

Anekal And bannerughatta  Dasara 2023

ಚಂಪಕಧಾಮಸ್ವಾಮಿ ಜಂಬೂ ಸವಾರಿ

ಬನ್ನೇರುಘಟ್ಟದಲ್ಲೂ ಶ್ರೀ ಚಂಪಕಧಾಮಸ್ವಾಮಿ ಜಂಬೂ ಸವಾರಿ ನಡೆದಿದೆ. ದೇವರ ಉತ್ಸವ ಮೂರ್ತಿ ಹೊತ್ತಿದ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ಹೊತ್ತ ಗಜರಾಜ ಬನ್ನೇರುಘಟ್ಟದ ರಾಜಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಜಾನಪದ ಕಲಾತಂಡಗಳ ಜತೆ ಹೆಜ್ಜೆ ಹಾಕಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತ ಸಾಗರ ಕಣ್ತುಂಬಿಕೊಂಡರು.

Anekal And bannerughatta  Dasara 2023

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Vijay Namdevrao Wadettiwar
ದೇಶ16 mins ago

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Beer Shortage
ಕರ್ನಾಟಕ31 mins ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Torn Jeans Styling Tips
ಫ್ಯಾಷನ್43 mins ago

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

lok sabha Election 2024 Bus Fare Hike
Lok Sabha Election 202445 mins ago

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

IPL 2024
Latest47 mins ago

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

MI vs SRH
ಕ್ರೀಡೆ1 hour ago

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

Kavitha Gowda chandan expected First Child
ಕಿರುತೆರೆ1 hour ago

Kavitha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿʻಲಕ್ಷ್ಮೀಬಾರಮ್ಮʼ ಧಾರಾವಾಹಿ ಖ್ಯಾತಿಯ ಜೋಡಿ

Met Gala 2024 Alia Bhatt attend
ಬಾಲಿವುಡ್1 hour ago

Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

IPL2024
ಕ್ರೀಡೆ1 hour ago

IPL 2024 : ಮ್ಯಾಕ್ಸಿ ಐಪಿಎಲ್​ನಲ್ಲಿ ಬರೀ ಬೂಸಿ; ಮ್ಯಾಕ್ಸ್​ವೆಲ್​ ಆಟಕ್ಕೆ ಅಭಿಮಾನಿಗಳ ಆಕ್ರೋಶ

Job Alert
ಉದ್ಯೋಗ2 hours ago

Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 7ರೊಳಗೆ ಅಪ್ಲೈ ಮಾಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ7 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌