ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ 5 ನೇ ದಿನದ ಹಳದಿ ವರ್ಣದ (Navaratri Yellow Colour Fashion Tips) ಎಥ್ನಿಕ್ವೇರ್ಗಳು ಧರಿಸುವವರ ಸಂತೋಷವನ್ನು ಹೆಚ್ಚಿಸುತ್ತವಂತೆ. ಖುಷಿ ಮಾತ್ರವಲ್ಲ, ಸ್ಕಂದಾ ಮಾತೆಯ ಬಣ್ಣವಾಗಿರುವ ಈ ಶೇಡ್ ಜೀವನದಲ್ಲಿ ಆಶಾಭಾವನೆ ಮೂಡಿಸುವ ಕಲರ್ ಎನ್ನಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಹಳದಿ ಬಣ್ಣದಲ್ಲಿ ನಾನಾ ಶೇಡ್ಗಳ ಡಿಸೈನರ್ವೇರ್ ಹಾಗೂ ಸೀರೆಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ. ಇನ್ನು, ತಮ್ಮ ಬಳಿಯಿರುವ ಹಳದಿ ವರ್ಣದ ಸೀರೆ ಅಥವಾ ಔಟ್ಫಿಟ್ಗಳನ್ನು ಧರಿಸಲು ಇಚ್ಛಿಸುವವರು ಒಂದಿಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಈ ವರ್ಣ ಎಲ್ಲರಿಗೂ ಹೊಂದುವುದು ಹಾಗೂ ಆಕರ್ಷಕವಾಗಿ ಕಾಣಿಸುವುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಟ್ರೆಂಡ್ನಲ್ಲಿರುವ ಹಳದಿಯ ನಾನಾ ಶೇಡ್ಗಳು
ಸನ್ ಕಲರ್, ತಿಳಿ ಹಳದಿ, ಗಾಢ ಹಳದಿ, ಲೆಮೆನ್ ಯೆಲ್ಲೋ ಹೀಗೆ ದೇಸಿ ವರ್ಣಗಳ ಜೊತೆಗೆ ಇದೀಗ ಇಂಗ್ಲೀಷ್ ಕಲರ್ಗಳು ಸೇರಿಕೊಂಡಿವೆ. ಅಷ್ಟೇಕೆ! ಇವು ಭಾರತೀಯ ಉಡುಪಿಗೂ ನುಸುಳಿವೆ. ಹಾಗಾಗಿ ಇವು ನೋಡಲು ಹೊಸ ಶೇಡ್ ಎಂದೆನಿಸುತ್ತವೆ. ಕೆಲವೊಮ್ಮೆ ಇದು ಹಳದಿ ವರ್ಣವೇ ಎಂದು ಅನಿಸುವುದು ಉಂಟು. ಈ ನಾನಾ ಹಳದಿ ಶೇಡ್ಗಳಲ್ಲಿ ಇದೀಗ ಜೆನ್ ಜಿ ಹುಡುಗಿಯರಿಗೆಂದೇ ನಾನಾ ಬಗೆಯ ಪ್ರಯೋಗಾತ್ಮಕ ಸೆಮಿ ಎಥ್ನಿಕ್ ಡಿಸೈನರ್ವೇರ್ಗಳು ಬಂದಿವೆ. ಉದಾಹರಣೆಗೆ., ಜಂಪ್ ಸೂಟ್ನಂತೆ ಕಾಣುವ ಡಿಸೈನ್ನ ಹಳದಿಯ ಮಾನೋಕ್ರೋಮ್ ಕೋ ಆರ್ಡ್ ಸೆಟ್, ಕ್ರಾಪ್ ಟಾಪ್ನಂತೆ ಕಾಣುವ ಲೆಹೆಂಗಾ ಸೆಟ್ ಹಾಗೂ ಸ್ಕರ್ಟ್ ಸೆಟ್ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಹಳದಿ ಸೀರೆಯಲ್ಲಿ ಹೇಗಿರಬೇಕು ?
ಬಹಳಷ್ಟು ಮಂದಿ ಈ ವರ್ಣದ ಸೀರೆ ಧರಿಸುವುದು ಕಡಿಮೆ. ಈ ಕಲರ್ನ ಸೀರೆಗಳಲ್ಲೂ ಫ್ಯಾಷೆನಬಲ್ ಆಗಿ ಕಾಣಿಸಬಹುದು. ಟ್ರೆಡಿಷನಲ್ ಲುಕ್ ಬೇಕಾದದಲ್ಲಿ ರೇಷ್ಮೆ ಸೀರೆ ಆಯ್ಕೆ ಉತ್ತಮ. ಇದಕ್ಕೆ ಕಾಂಟ್ರಾಸ್ಟ್ ಬ್ಲೌಸ್ ಮ್ಯಾಚ್ ಬೇಡ. ಹೆಚ್ಚೆಂದರೇ ಜ್ಯುವೆಲರಿಗಳನ್ನು ಕಾಂಟ್ರಸ್ಟ್ ಮಾಡಬಹುದಷ್ಟೇ! ಇನ್ನು ಇದೀಗ ಬಿಗ್ ಬಾರ್ಡರ್ ಯೆಲ್ಲೋ ಸೀರೆಗಳು ಟ್ರೆಂಡ್ನಲ್ಲಿವೆ. ಅವುಗಳ ಪ್ರಿಂಟ್ಸ್ಗೆ ತಕ್ಕಂತೆ ಮೇಕಪ್, ಹೇರ್ಸ್ಟೈಲ್ಗೆ ಟ್ರೆಡಿಷನಲ್ ಲುಕ್ ನೀಡಬೇಕು.
ಯುವತಿಯರಿಗೆ ಪ್ರಿಯವಾದ ಹಳದಿಯ ಡಿಸೈನರ್ವೇರ್ಗಳು
ಇನ್ನು ಯುವತಿಯರಿಗೆ ಲೆಕ್ಕವಿಲ್ಲದಷ್ಟು ಡಿಸೈನ್ನ ಹಳದಿ ಶೇಡ್ನ ಲೆಹೆಂಗಾ-ಚೋಲಿ, ಗಾಗ್ರ, ಕುರ್ತಾ, ಸಲ್ವಾರ್, ಕಮೀಝ್, ಅನಾರ್ಕಲಿ, ಚೂಡಿದಾರ್ ಸೆಟ್ಗಳು ಬಂದಿದ್ದು, ಅವುಗಳ ಗ್ರ್ಯಾಂಡ್ ಲುಕ್ಗೆ ತಕ್ಕಂತೆ ಸಿಂಗರಿಸಿಕೊಳ್ಳಬಹುದು.
- ಬ್ಯಾಕ್ ಮೆಟಲ್ ಹಾಗೂ ಜಂಕ್ ಆಭರಣಗಳು ಧರಿಸಿದಾಗ ಎದ್ದು ಕಾಣುತ್ತವೆ. ದೇಸಿ ಸ್ಟೈಲ್ನ ನಾನಾ ಬಗೆಯ ಜಡೆ ಹೆಣೆದಲ್ಲಿ ಆಕರ್ಷಕವಾಗಿ ಬಿಂಬಿಸುತ್ತವೆ.
- ಸೀರೆಯಾದಲ್ಲಿ ಆದಷ್ಟೂ ಟ್ರೆಡಿಷನಲ್ ಲುಕ್ ನೀಡಿ.
- ಶಿಫಾನ್, ಜಾರ್ಜೆಟ್ ಸೀರೆಗಳಾದಲ್ಲಿ ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು.
- ಡಿಸೈನರ್ ವೇರ್ಗಳು ಗ್ರ್ಯಾಂಡ್ ಆಗಿರುವುದರಿಂದ ಮೇಕಪ್ ಆದಷ್ಟೂ ಟಿಪಿಕಲ್ ಲುಕ್ ನೀಡಲಿ.
- (ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Navaratri Blue Colour Fashion Tips: ನವರಾತ್ರಿಯ 4 ನೇ ದಿನದ ನೀಲಿ ವರ್ಣದ ಎಥ್ನಿಕ್ವೇರ್ ಸ್ಟೈಲಿಂಗ್ ಹೀಗಿರಲಿ