ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀತಾ ಅಂಬಾನಿಯವರ ಜ್ಯುವೆಲ್ ಪ್ರೇಮ (Neetha Ambani Jewel Love) ಅದ್ಭುತ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು. ಹೌದು. ಅಂಬಾನಿ ಫ್ಯಾಮಿಲಿಯ ಆಧಾರಸ್ತಂಭದಂತಿರುವ ನೀತಾ ಅವರು ಸಾಮಾನ್ಯ ಜ್ಯುವೆಲರಿಗಳನ್ನು ಧರಿಸುವುದೇ ಇಲ್ಲ! ಇತರರ ಡಿಸೈನ್ ನೋಡಿ ಅದನ್ನು ಡಿಸೈನ್ ಮಾಡಿಸುವುದು ಇಲ್ಲ! ಬದಲಿಗೆ ತಮ್ಮದೇ ಆದ ವಿನ್ಯಾಸಕ್ಕೆ ಜ್ಯುವೆಲರಿ ಡಿಸೈನರ್‌ಗಳಿಂದ ರೂಪ ಕೊಡಿಸಿ, ಧರಿಸುತ್ತಾರೆ. ಅವರ ಒಂದೊಂದು ಜ್ಯುವೆಲರಿಗಳು ಭಿನ್ನ-ವಿಭಿನ್ನ ಹಾಗೂ ಅಪರೂಪದ ಡಿಸೈನ್‌ಗಳನ್ನು ಹೊಂದಿವೆ. ಅಲ್ಲದೇ, ದುಬಾರಿ ಬೆಲೆಯ ಕಲೆಕ್ಷನ್ಸ್ ಅವರ ಬಳಿಯಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ವಜ್ರದ ಆಭರಣ ಪ್ರಿಯೆ
ಅಂದಹಾಗೆ, ನೀತಾ ಅಂಬಾನಿಯವರು ದಿನನಿತ್ಯದ ಜೀವನದಲ್ಲೂ ವಜ್ರದ ಅಭರಣಗಳನ್ನು ಧರಿಸುತ್ತಾರೆನ್ನಲಾಗಿದೆ. ವಜ್ರದ ಸ್ಟಡ್ಸ್, ಸಿಂಪಲ್ ನೆಕ್‌ಪೀಸ್ ಹಾಗೂ ಬ್ರೇಸ್‌ಲೇಟ್ ಇಲ್ಲವೇ, ಕಡವನ್ನು ಅವರು ಧರಿಸಿರುತ್ತಾರೆ. ಇನ್ನು ಪಾರ್ಟಿ ಹಾಗೂ ಕಾರ್ಯಕ್ರಮಗಳಿಗೆ ಅವರು ಧರಿಸುವ ಆಭರಣಗಳು ಕಂಪ್ಲೀಟ್ ವಿಭಿನ್ನ. ಇಂಟರ್‌ನ್ಯಾಷನಲ್ ಬ್ರಾಂಡ್‌ನ ಫ್ಯಾಷನ್ ವಜ್ರಾಭರಣಗಳು ಅವರ ಬಳಿಯಿವೆ ಎನ್ನಲಾಗುತ್ತದೆ. ಅಲ್ಲದೇ, ವಜ್ರದ ನೆಕ್ಲೇಸ್‌ಗಳು ಅವರ ಫೇವರೇಟ್ ಲಿಸ್ಟ್ ನಲ್ಲಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು. ಒಂದಲ, ಎರಡಲ್ಲ, ಸಾಕಷ್ಟು ಡೈಮಂಡ್ ಜ್ಯುವೆಲರಿಗಳು ನೀತಾ ಅವರ ಜ್ಯುವೆಲ್ ಕಲೆಕ್ಷನ್‌ನಲ್ಲಿವೆ. ಆಗಾಗ್ಗೆ ಉಡುಪಿಗೆ ಮ್ಯಾಚ್ ಆಗುವಂತೆ ಧರಿಸುತ್ತಿರುತ್ತಾರೆ ಎನ್ನುತ್ತವೆ ಮೂಲಗಳು.
ನೀತಾ ಅಂಬಾನಿಯವರ ಎಮರಾಲ್ಡ್ ಜ್ಯುವೆಲರಿ
ಇನ್ನು ಅನಂತ್-ರಾಧಿಕಾ ಮರ್ಚೆಂಟ್ ಅವರ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ ಅವರು ಧರಿಸಿದ ಭಾರಿ ಗಾತ್ರದ ಎಮರಾಲ್ಡ್ ಜ್ಯುವೆಲರಿ ನೋಡಿಯೇ ಇರುತ್ತೀರಾ! ಬಿಗ್ ಎಮರಾಲ್ಟ್ ಇರುವಂತಹ ಪೆಂಡೆಂಟ್, ಸ್ಟಡ್ಸ್, ಸಿಲ್ವರ್ ಡೈಮಂಡ್ ಕಾಂಬಿನೇಷನ್‌ನ ಬಿಗ್ ಹ್ಯಾಂಡ್ ಕಫ್ ಎಲ್ಲರನ್ನೂ ಆಕರ್ಷಿಸಿತ್ತು. ಇನ್ನು, ತಮ್ಮ ಮಗಳ ಮದುವೆಯಲ್ಲಿ ಮಾಡಿಸಿದ್ದ ಈ ಜ್ಯುವೆಲರಿಯನ್ನು ಆಗಾಗ್ಗೆ ಧರಿಸುತ್ತಾರೆ. ಈ ಹಿಂದೆ ನಿಶಾ ಅಂಬಾನಿ ಕೂಡ ಇದನ್ನು ಹಲವು ಬಾರಿ ಧರಿಸಿದ್ದರು. ಅಮ್ಮ-ಮಗಳು ಆಗಾಗ್ಗೆ ಜ್ಯುವೆಲರಿಗಳನ್ನು ಅದಲು-ಬದಲು ಮಾಡಿ ಧರಿಸುತ್ತಾರಂತೆ ಹಾಗೆನ್ನುತ್ತವೆ ಮೂಲಗಳು.
ಪರ್ಲ್ ಆಭರಣಗಳ ಸೆಟ್
ಇನ್ನು ಸಾಕಷ್ಟು ಬಾರಿ 5 ಲೇಯರ್‌ನ ಮುತ್ತಿನ ಹಾರ ಧರಿಸುತ್ತಿರುತ್ತಾರೆ. ಇದಕ್ಕೆ ಮ್ಯಾಚ್ ಆಗುವಂತಹ ಪರ್ಲ್ ಹಾಗೂ ಡೈಮಂಡ್ ಕಾಂಬಿನೇಷನ್‌ನ ಜುಮ್ಕಾ ಶೈಲಿಯ ಹ್ಯಾಂಗಿಂಗ್ಸ್ ಕೂಡ ಅವರ ಕಲೆಕ್ಷನ್‌ನಲ್ಲಿದೆ.
- ಡೈಮಂಡ್ ಹಾಗೂ ಎಮರಾಲ್ಡ್ ಕಾಂಬಿನೇಷನ್‌ನ ಸಾಕಷ್ಟು ಜ್ಯುವೆಲರಿಗಳು ನೀತಾ ಅವರ ಬಳಿಯಿವೆಯಂತೆ.
- ಚಿನ್ನಕ್ಕಿಂತ ವಜ್ರಾಭರಣಗಳೆಂದರೇ ನೀತಾ ಅವರಿಗಿಷ್ಟವಂತೆ.
- ತಮ್ಮದೇ ಆದ ಜ್ಯುವೆಲರಿ ಡಿಸೈನ್ಗಳಿಗೆ ಪ್ರಾಮುಖ್ಯತೆ ನೀಡುತ್ತಾರಂತೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)