-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ವೀನ್ ಲುಕ್‌ಗೆ (New fashion Trend) ಸಾಥ್ ನೀಡುವ ಪರ್ಲ್ ಹೆಡ್‌ಬ್ಯಾಂಡ್‌ಗಳು ಇದೀಗ ಆಕ್ಸೆಸರೀಸ್ ಲೋಕಕ್ಕೆ ಎಂಟ್ರಿ ನೀಡಿವೆ. ಧರಿಸಿದಾಗ ನೋಡಲು ರಾಣಿ-ಮಹಾರಾಣಿಯಂತೆ ಬಿಂಬಿಸುವ ನಾನಾ ವಿನ್ಯಾಸದ ಮುತ್ತಿನ ಹೆಡ್‌ಬ್ಯಾಂಡ್‌ಗಳು ಇಂದು ಆಕ್ಸೆಸರೀಸ್ ಲೋಕಕ್ಕೆ ಲಗ್ಗೆ ಇಟ್ಟಿದ್ದು, ಒಂದಕ್ಕಿಂತ ಒಂದು ಡಿಸೈನ್‌ನವು ಆಕರ್ಷಕವಾದ ವಿನ್ಯಾಸದಲ್ಲಿ ಆಗಮಿಸಿವೆ. ಈ ಹಿಂದೆ ಚಿಣ್ಣರು ಬಳಸುತ್ತಿದ್ದ, ಈ ಶೈಲಿಯ ಹೆಡ್‌ಬ್ಯಾಂಡ್‌ಗಳು ಇದೀಗ ಹೊಸ ರೂಪ ಪಡೆದು ಮಾನಿನಿಯರ ಹೇರ್‌ಸ್ಟೈಲ್‌ಗೆ ಸಾಥ್ ನೀಡುತ್ತಿವೆ. ಅದರಲ್ಲೂ ಪಾರ್ಟಿವೇರ್ ಜೊತೆಗೆ, ವೀಕೆಂಡ್ ಔಟ್‌ಫಿಟ್‌ಗಳೊಂದಿಗೆ ಹಾಗೂ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ ಜಯಾ ಶರ್ಮಾ. ಅವರ ಪ್ರಕಾರ, ಪರ್ಲ್ ಹೆಡ್‌ಬ್ಯಾಂಡ್‌ಗಳು ಡೀಸೆಂಟ್ ಲುಕ್ ನೀಡುವುದರೊಂದಿಗೆ ಹೇರ್‌ಸ್ಟೈಲನ್ನು ಅತ್ಯಾಕರ್ಷಕವಾಗಿಸುತ್ತವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಪರ್ಲ್ ಹೆಡ್‌ಬ್ಯಾಂಡ್ಸ್
ಮಿನಿ ಪರ್ಲ್ ಹೆಡ್‌ಬ್ಯಾಂಡ್, ಕ್ರಿಸ್ಟಲ್-ಪರ್ಲ್ ಹೆಡ್‌ಬ್ಯಾಂಡ್, ಮಲ್ಟಿಲೈನ್ ಪರ್ಲ್ ಹೆಡ್‌ಬ್ಯಾಂಡ್, ಸಿಂಗಲ್ ಲೈನ್ ಬೀಡ್ಸ್ ಸ್ಟೈಲ್ ಹೆಡ್‌ಬ್ಯಾಂಡ್, ಬಿಗ್ ಪರ್ಲ್ ಹೆಡ್‌ಬ್ಯಾಂಡ್, ಟೈನಿ ಪರ್ಲ್ ಹೆಡ್‌ಬ್ಯಾಂಡ್ ಸೇರಿದಂತೆ ಬೀಡ್ಸ್ ಮಿಕ್ಸ್ ಇರುವಂತವು ಈ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿವೆ. ಶ್ವೇತ ವರ್ಣದವು, ಹಾಫ್ ವೈಟ್, ಕ್ರೀಮಿಶ್ ಶೇಡ್‌ನ ಪರ್ಲ್ ಹೆಡ್‌ಬ್ಯಾಂಡ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅಂದಹಾಗೆ, ಇವೆಲ್ಲಾ ರಿಯಲ್ ಮುತ್ತಿನ ಹೆಡ್‌ಬ್ಯಾಂಡ್‌ಗಳಲ್ಲ, ಹೌದು. ಮುತ್ತಿನಂತೆ ಕಾಣುವ ಕೃತಕ ಮಣಿಯಂತಹ ಬೀಡ್ಸ್‌ಗಳ ಹೆಡ್‌ಬ್ಯಾಂಡ್‌ಗಳಿವು. ಹಾಗಾಗಿ ಇವುಗಳ ಬೆಲೆಯೂ ಕಡಿಮೆ. ಸುಮಾರು 50 ರೂ. ಗಳಿಂದ ಆರಂಭಗೊಂಡು 300 ರೂ.ಗಳವರೆಗೂ ಇದೆ. ಆಯಾ ಡಿಸೈನ್ ಹಾಗೂ ಪರ್ಲ್ ಸೈಝಿಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು. ಎಲ್ಲಾ ಫ್ಯಾನ್ಸಿ ಶಾಪ್‌ಗಳಲ್ಲೂ ಇವು ದೊರೆಯುತ್ತಿವೆ. ಅಷ್ಟೇಕೆ! ಸ್ಟ್ರೀಟ್ ಶಾಪಿಂಗ್ ಮಾಡುವವರಾದಲ್ಲಿ, ಬೀದಿ ಬದಿಯ ಶಾಪ್‌ಗಳಲ್ಲೂ ಇವು ದೊರೆಯುತ್ತವೆ. ಬೆಲೆ ಕಡಿಮೆ ಎನ್ನುತ್ತಾರೆ.
ಪರ್ಲ್ ಹೆಡ್‌ಬ್ಯಾಂಡ್ ಪ್ರಿಯರ ಗಮನಕ್ಕೆ
ಇನ್ನು, ಮಕ್ಕಳಾದಲ್ಲಿ ಯಾವುದೇ ಉಡುಪಿಗಾದರೂ ಈ ಪರ್ಲ್ ಡಿಸೈನ್‌ನ ಹೆಡ್‌ಬ್ಯಾಂಡ್ ಧರಿಸಬಹುದು. ಆದರೆ, ದೊಡ್ಡವರ ವಿಷಯದಲ್ಲಿ ಹಾಗೆ ಆಗುವುದಿಲ್ಲ. ಹಾಗಾಗಿ, ಧರಿಸುವ ಉಡುಪು ಹಾಗೂ ಹೇರ್‌ಸ್ಟೈಲ್‌ಗೆ ಅನುಗುಣವಾಗಿ ಧರಿಸಬೇಕಾಗುತ್ತದೆ. ಉದಾಹರಣೆಗೆ., ಫ್ರೀ ಹೇರ್‌ಸ್ಟೈಲ್ ಮಾಡಿದಾಗ ಧರಿಸಬಹುದು. ಚೆನ್ನಾಗಿ ಹೊಂದುತ್ತದೆ.
- ಸೀರೆಗೆ ಇವನ್ನು ಧರಿಸುವುದು ನಾಟ್ ಓಕೆ.
- ಪಾರ್ಟಿವೇರ್ ಗೌನ್ಗಳಿಗೆ ಧರಿಸಬಹುದು.
- ಇತರೇ ಪರ್ಲ್ ಆಕ್ಸೆಸರೀಸ್ಗೂ ಮ್ಯಾಚ್ ಮಾಡಬಹುದು.
- ಎಥ್ನಿಕ್ ಉಡುಪಿಗೆ ಹೊಂದುವುದಿಲ್ಲ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Torn Jeans Styling Tips: ಟೊರ್ನ್ ಜೀನ್ಸ್ ಪ್ಯಾಂಟ್ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು