ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ರಂಜಾನ್ ವೀಕೆಂಡ್ ಫೆಸ್ಟೀವ್ ಸೀಸನ್ ಶಾಪಿಂಗ್ (Ramzan Shopping) ಮೇನಿಯಾ ವ್ಯಾಪಿಸಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಸ್ಟ್ರೀಟ್ ಶಾಪ್‌ಗಳಲ್ಲಿ, ಕಮರ್ಷಿಯಲ್ ಶಾಪ್‌ಗಳಲ್ಲಿ, ವೈವಿಧ್ಯಮಯ ಲೇಡಿಸ್-ಮೆನ್ಸ್-ಕಿಡ್ಸ್ ಫ್ಯಾಷನ್‌ವೇರ್ಸ್, ಬಗೆಬಗೆಯ ಆಕ್ಸೆಸರೀಸ್, ವೆರೈಟಿ ಗೃಹಾಲಂಕಾರ ಸಾಮಗ್ರಿಗಳು ಲಗ್ಗೆ ಇಟ್ಟಿವೆ.
ಫೆಸ್ಟೀವ್ ಶಾಪಿಂಗ್
“ಫೆಸ್ಟಿವ್ ಸೀಸನ್‌ನಲ್ಲಿ ಕೇವಲ ಡಿಸೈನರ್‌ವೇರ್‌ಗಳು ಮಾತ್ರವಲ್ಲ, ನಾನಾ ಬಗೆಯ ಆಕ್ಸೆಸರೀಸ್‌ಗಳು ಆನ್‌ಲೈನ್ ಹಾಗೂ ಆಫ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ರಂಜಾನ್ ಹಬ್ಬದ ಸೀಸನ್ನೇ ಹಾಗೆ, ವಯಸ್ಸಿನ ಭೇದ-ಬಾವವಿಲ್ಲದೇ ಎಲ್ಲಾ ವಯಸ್ಸಿನ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆಂದು ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿವೆ. ಲಕ್ಷ ರೂ.ಗಳಿಂದಿಡಿದು ಸಾವಿರ ರೂ. ಗಳಲ್ಲಿ ದೊರೆಯುತ್ತಿವೆ “ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಫರ್ಟ್ ರೆಹಮಾನ್ ಖಾನ್. ಅವರ ಪ್ರಕಾರ, ಈ ಸೀಸನ್‌ನಲ್ಲಿ ಶಾಪಿಂಗ್ ಮಾಡಿದಲ್ಲಿ ಎಕ್ಸ್‌ಕ್ಲೂಸೀವ್ ಡಿಸೈನ್‌ನವನ್ನು ಖರೀದಿಸಬಹುದಂತೆ.
ಗ್ರ್ಯಾಂಡ್ ಎಥ್ನಿಕ್ ಡಿಸೈನರ್‌ವೇರ್ಸ್
ಮಹಿಳೆಯರು ಧರಿಸುವ ಗ್ರ್ಯಾಂಡ್ ಅನಾರ್ಕಲಿ, ಗಾಗ್ರಾ, ಗರಾರ, ಶರಾರ, ಲೆಹೆಂಗಾ, ಸೀರೆ, ಸಲ್ವಾರ್ ಸೂಟ್‌ಗಳು ಡಾರ್ಕ್ ಶೇಡ್‌ನಲ್ಲಿ ಎಲ್ಲೆಡೆ ಎಂಟ್ರಿ ನೀಡಿವೆ. ಎಂಬ್ರಾಯ್ಡರಿ ಹಾಗೂ ಹ್ಯಾಂಡ್ ವರ್ಕ್, ಮೆಷಿನ್ ವರ್ಕ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಮಾರಾಟಗಾರರು.
ಮೆನ್ಸ್ ಡಿಸೈನರ್‌ವೇರ್ಸ್
ಇನ್ನು, ಈ ಫೆಸ್ಟೀವ್ ಸೀಸನ್‌ನಲ್ಲಿ ಹುಡುಗರು ಧರಿಸಬಹುದಾದ ಲಾಂಗ್ ಕುರ್ತಾ ಹಾಗೂ ಪಠಾನ್ ಶೈಲಿಯ ಡಿಸೈನರ್‌ವೇರ್‌ಗಳು ಹೆಚ್ಚು ಡಿಸೈನ್‌ನಲ್ಲಿ ಹಾಗೂ ಲೈಟ್ ಕಲರ್ಸ್‌ನಲ್ಲಿ ಆಗಮಿಸಿವೆ. ಟ್ರೆಡಿಷನಲ್ ಡಿಸೈನ್‌ನಲ್ಲಿರುವವು ಹೆಚ್ಚು ಜನರ ಮನ ಗೆದ್ದಿವೆ. ಚಿಕ್ಕ ಗಂಡು ಮಕ್ಕಳಿಗೂ ಮಿನಿ ಲಾಂಗ್ ಕುರ್ತಾ ಹಾಗೂ ಪೈಜಾಮ ಪ್ಯಾಂಟ್‌ಗಳು ಬಂದಿವೆ.
ಮಕ್ಕಳಿಗೆ ಬಂತು ಮಿನುಗುವ ಡಿಸೈನರ್‌ವೇರ್ಸ್
ಇನ್ನು ಚಿಕ್ಕ ಹೆಣ್ಣು ಮಕ್ಕಳಿಗಂತೂ ಮಿರಮಿರ ಮಿನುಗುವ ಜರತಾರಿ ಹಾಗೂ ಬ್ರೋಕೆಡ್‌ನ ಮಿನಿ ಸಲ್ವಾರ್ ಕಮೀಝ್, ಗರಾರ, ಶರಾರ ಹಾಗೂ ಲಾಂಗ್ ಅನಾರ್ಕಲಿ ಸೂಟ್‌ಗಳು ಬಂದಿವೆ. ನೋಡಲು ಆಕರ್ಷಕ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ.
ಜಗಮಗಿಸುವ ಆಕ್ಸೆಸರೀಸ್
ಈ ಫೆಸ್ಟೀವ್ ಸೀಸನ್‌ನಲ್ಲಿ ಜಗಮಗಿಸುವ ಆಕ್ಸೆಸರೀಸ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಂದಿವೆ. ದೊಡ್ಡ ದೊಡ್ಡ ಹ್ಯಾಂಗಿಂಗ್ಸ್, ಕಿವಿಯೊಲೆಗಳು, ಸೈಡ್ ಮಾಂಗ್‌ಟೀಕಾ, ಹಾರಗಳು, ಕ್ರಿಸ್ಟಲ್‌ನ ನೆಕ್ಲೇಸ್‌ಗಳು, ಬಳೆಗಳ ಸೆಟ್, ಫಿಂಗರ್‌ರಿಂಗ್‌ಗಳು ಸೇರಿದಂತೆ ನಾನಾ ಬಗೆಯವು ಬಂದಿವೆ.
- · ಶಾಪಿಂಗ್ ಮಾಡುವಾಗ ಟ್ರೆಂಡಿ ಡಿಸೈನ್ಗೆ ಆದ್ಯತೆ ನೀಡಿ.
- · ಶಾಪಿಂಗ್ ಹೋಗುವಾಗ ಮಕ್ಕಳನ್ನು ಕರೆದೊಯ್ಯಬೇಡಿ.
- · ಸೀಸನ್ಗೆ ತಕ್ಕಂತೆ ಕಂಫರ್ಟಬಲ್ ಡ್ರೆಸ್ ಧರಿಸಿ ಹೊರಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ramadan Fashion: ರಂಜಾನ್ ಫೆಸ್ಟಿವ್ ಸೀಸನ್‌ನಲ್ಲಿ ಬಂತು 3 ವಿನ್ಯಾಸಗಳ ಕಫ್ತಾನ್ಸ್