-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲ್ಯಾಕ್ ಡೆನಿಮ್ ಕೋ ಆರ್ಡ್ ಸೆಟ್‌ಗಳು ಇದೀಗ ಜಿಪ್ಪರ್ ಸ್ಟೈಲ್‌ನಲ್ಲಿ ಡಿಫರೆಂಟ್ ಕ್ರಾಪ್ ಟಾಪ್ (New Fashion) ಡಿಸೈನ್‌ಗಳಲ್ಲಿ ಟ್ರೆಂಡಿಯಾಗಿವೆ. ಹೌದು, ಇದೀಗ ಬ್ಲ್ಯೂ ಡೆನಿಮ್ ಔಟ್‌ಫಿಟ್‌ಗಳ ಜಾಗವನ್ನು ಬ್ಲ್ಯಾಕ್ ಡೆನಿಮ್ ಕೋ ಆರ್ಡ್ ಸೆಟ್‌ಗಳು ಆಕ್ರಮಿಸಿಕೊಳ್ಳತೊಡಗಿದ್ದು, ಅದರಲ್ಲೂ ಹಾಲ್ಟರ್ ನೆಕ್ ಕ್ರಾಪ್ ಟಾಪ್, ಟ್ಯಾಂಕ್ ಟಾಪ್, ಟ್ಯೂಬ್ ಟಾಪ್‌ನಂತಹ ಕೋ ಆರ್ಡ್ ಪ್ಯಾಂಟ್ ಸೆಟ್‌ಗಳು ಪ್ರಚಲಿತದಲ್ಲಿವೆ.
ಚಿತ್ರ-ವಿಚಿತ್ರ ಬ್ಲ್ಯಾಕ್ ಕೋ ಆರ್ಡ್ ಸೆಟ್
“ಡೆನಿಮ್‌ನಲ್ಲಿ ಇದೀಗ ಕೇವಲ ಪ್ಯಾಂಟ್, ಟಾಪ್ ಅಥವಾ ಜಾಕೆಟ್‌ಗಳು ಮಾತ್ರ ಚಾಲ್ತಿಯಲ್ಲಿಲ್ಲ. ಈ ಸೀಸನ್‌ಗೆ ಹೊಂದುವಂತಹ ವೆರೈಟಿ ಕೋ ಆರ್ಡ್ ಸೆಟ್‌ಗಳು ಕಾಲಿಟ್ಟಿದ್ದು, ಅವುಗಳಲ್ಲೂ ಡಿಫರೆಂಟ್ ವಿನ್ಯಾಸದವು ಹಾಗೂ ಚಿತ್ರ-ವಿಚಿತ್ರ ಡಿಸೈನ್‌ನವು ಬಂದಿವೆ. ಜೆನ್ ಜಿ ಹುಡುಗಿಯರಿಗೆ ಇಷ್ಟವಾಗುವಂತಹ ರಾಕಿಂಗ್ ಜಿಪ್ಪರ್ ಸ್ಟೈಲ್‌ನವು ಫ್ಯಾಷನ್‌ನಲ್ಲಿ ಲಗ್ಗೆ ಇಟ್ಟಿವೆ. ಅಷ್ಟೇಕೆ? ಇವುಗಳಲ್ಲಿ ಇದೀಗ ಕೋ ಆರ್ಡ್ ಸೆಟ್‌ಗಳು ಬ್ಲ್ಯಾಕ್ ಶೇಡ್‌ನಲ್ಲಿ ಬರುತ್ತಿರುವುದು ಡೆನಿಮ್ ಪ್ರೇಮಿಗಳಿಗೆ ಡಿಫರೆಂಟ್ ಇಮೇಜ್ ನೀಡುತ್ತಿವೆ. ಇದೇ ಕಾರಣದಿಂದಾಗಿ ಹೊಸ ಲುಕ್ ಬಯಸುವ ರಾಕಿಂಗ್ ಹುಡುಗಿಯರು ಇವುಗಳನ್ನು ಆಯ್ಕೆ ಮಾಡತೊಡಗಿದ್ದಾರೆ.
ಟ್ರೆಂಡಿಯಾಗಿರುವ ಬ್ಲ್ಯಾಕ್ ಡೆನಿಮ್ ಕೋ ಆರ್ಡ್ ಸೆಟ್ ಡಿಸೈನ್ಸ್
ಬ್ಲ್ಯಾಕ್ ಡೆನಿಮ್ ಫ್ಯಾಬ್ರಿಕ್‌ನ ಕೋ ಆರ್ಡ್ ಸೆಟ್‌ಗಳು ಸಾಮಾನ್ಯ ಡಿಸೈನ್‌ನಲ್ಲಿ ಅಲ್ಲ, ಕಂಪ್ಲೀಟ್ ವಿಭಿನ್ನ ವಿನ್ಯಾಸದಲ್ಲಿ ದೊರೆಯುತ್ತಿವೆ. ಉದಾಹರಣೆಗೆ, ಜಿಪ್ಪರ್ ಲೈನ್ ಇರುವಂತಹ ಕೋ ಆರ್ಡ್ ಸೆಟ್‌ಗಳು, ಜಿಪ್ಪರ್ ಲೈನ್ ಇರುವಂತಹ ನೆಕ್‌ಲೈನ್ ಇರುವಂತಹ ಹಾಲ್ಟರ್‌ನೆಕ್‌ನಂತವು, ಗೋಥಿಕ್ ಸ್ಟೈಲ್‌ನವು, ಟ್ಯೂಬ್ ವಿನ್ಯಾಸದಂತೆ ಕಾಣುವ ಜಿಪ್ಪರ್ ಟಾಪ್‌ಗಳನ್ನು ಹೊಂದಿರುವಂತವು, ಟ್ಯಾಂಕ್ ಟಾಪ್‌ನಂತೆ ಕಂಡರೂ ಅದರ ಮೇಲೊಂದು ಲೇಯರ್ ಲುಕ್‌ನಂತೆ ಕಾಣುವಂತಹ ಡಿಸೈನ್ ಇರುವಂತವು ಪ್ಯಾಂಟ್‌ಗೆ ಹೊಂದಿಕೊಂಡಂತಹ ಕೋ ಆರ್ಡ್ ಫ್ಯಾಷನ್‌ನಲ್ಲಿ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಬ್ಲ್ಯಾಕ್ ಡೆನಿಮ್ ಜಿಪ್ಪರ್ ಕೋ ಆರ್ಡ್ ಸೆಟ್ ಸ್ಟೈಲಿಂಗ್ ಹೀಗೆ
- ಇದು ಅಲ್ಟ್ರಾ ಮಾಡರ್ನ್ ಹುಡುಗಿಯರಿಗೆ ಪರ್ಫೆಕ್ಟ್ ಔಟ್ಫಿಟ್.
- ಹೆಚ್ಚು ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ!
- ಹೈ ಪೋನಿಟೈಲ್ ಅಥವಾ ಫ್ರೀ ಹೇರ್ಸ್ಟೈಲ್ ಈ ಔಟ್ಫಿಟ್ಗೆ ಸಖತ್ ಮ್ಯಾಚ್ ಆಗುತ್ತದೆ.
- ಕತ್ತಿಗೆ ಸಿಂಪಲ್ ನೆಕ್ಚೈನ್ ಧರಿಸಿದರೇ ಸಾಕು.
- ಮೇಕಪ್ ಸಿಂಪಲ್ ಆಗಿರುವುದು ಅಗತ್ಯ.
- ಫಿಟ್ಟಿಂಗ್ ಇರುವಂತವು ಆಕರ್ಷಕವಾಗಿ ಕಾಣಿಸುತ್ತವೆ.
- ಫ್ಯಾಬ್ರಿಕ್ ಲೈಟ್ವೈಟ್ ಇರುವಂತವನ್ನು ಖರೀದಿಸಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Star Saree Fashion: ರೇಷ್ಮೆ ಸೀರೆಯಲ್ಲಿ ನಟಿ ಕೀರ್ತಿ ಸುರೇಶ್‌ರಂತೆ ಗ್ಲಾಮರಸ್ ಆಗಿ ಕಾಣಿಸಬೇಕೆ? 5 ಟಿಪ್ಸ್ ಫಾಲೋ ಮಾಡಿ!