-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೋಟ್ ರಹಿತ ಪ್ಯಾಂಟ್ ಸೂಟ್ಸ್ (New Trend) ಇದೀಗ ಟ್ರೆಂಡಿಯಾಗಿದೆ. ಹೌದು, ಇತ್ತೀಚೆಗೆ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್ ಮಾಡೆಲ್‌ಗಳು ಈ ಶೈಲಿಯ ಪ್ಯಾಂಟ್‌ಸೂಟ್‌ನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ನಟಿ ಶ್ವೇತಾ ತಿವಾರಿ ಧರಿಸಿದ್ದ ನ್ಯೂಡ್ ಕೋಟ್‌ಲೆಸ್ ಪ್ಯಾಂಟ್ ಸೂಟ್ ಫ್ಯಾಷನ್ ಪ್ರಿಯರನ್ನು ಸೆಳೆದಿದ್ದು, ಸದ್ಯ ಬಾಲಿವುಡ್ ಫ್ಯಾಷನ್ ಲೋಕದಲ್ಲಿ ಟ್ರೆಂಡಿಯಾಗಿವೆ.
ಬದಲಾದ ಸೂಟ್ ಕಾನ್ಸೆಪ್ಟ್
“ಸೂಟ್ ಅಂದರೇ, ಕೋಟ್ ಎನ್ನುವ ಕಾಲವೊಂದಿತ್ತು. ಆದರೆ, ಈ ವೇಸ್ಟ್‌ಕೋಟ್ ಇದೀಗ ಕಂಪ್ಲೀಟ್ ಬದಲಾಗಿದೆ. ಹೌದು, ಇದಕ್ಕೆ ತಕ್ಕಂತೆ, ಸೆಲೆಬ್ರೆಟಿಗಳು ಕೂಡ ಗ್ಲಾಮರಸ್ ಲುಕ್ ನೀಡುವಂತಹ ಕ್ರಾಪ್ ವೇಸ್ಟ್‌ಕೋಟ್ ಜೊತೆಗೆ ಪ್ಯಾಂಟ್‌ಸೂಟನ್ನು ಕೋಟ್ ರಹಿತ ಧರಿಸಲಾರಂಭಿಸಿದ್ದಾರೆ. ಆದರೆ, ಇವು ನೋಡಲು ವಿಭಿನ್ನವಾಗಿ ಕಾಣಿಸುತ್ತವೆ. ಸ್ಲಿವ್‌ಲೆಸ್ ವೇಸ್ಟ್‌ಕೋಟ್‌ಗಳು ಈ ಪ್ಯಾಂಟ್ ಸೂಟ್‌ಗೆ ಸಾಥ್ ನೀಡಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಕ್ಲೆಮೆಂಟೊ. ಅವರ ಪ್ರಕಾರ, ಇಂತಹ ವೇಸ್ಟ್‌ಕೋಟ್‌ಗಳು ಕೇವಲ ಹೆಣ್ಣುಮಕ್ಕಳ ಫ್ಯಾಷನ್‌ನಲ್ಲಿ ಮಾತ್ರ ಕಂಡು ಬರಲು ಸಾಧ್ಯ. ಇನ್ನೂ ಪುರುಷರ ಪ್ಯಾಂಟ್ ಸೂಟ್‌ನಲ್ಲಿ ಇವು ಎಂಟ್ರಿ ನೀಡಿಲ್ಲ. ನೀಡಿದ್ದರೂ ಅದು ಇನ್ನೂ ನಮ್ಮ ರಾಷ್ಟ್ರಕ್ಕೆ ಕಾಲಿಟ್ಟಿಲ್ಲ ಎನ್ನುತ್ತಾರೆ.
ಏನಿದು ಕೋಟ್ ಇಲ್ಲದ ಪ್ಯಾಂಟ್ ಸೂಟ್?
ಸ್ಲಿವ್‌ಲೆಸ್ ಕ್ರಾಪ್ ಶೈಲಿಯ ವೇಸ್ಟ್ ಕೋಟ್ ಜೊತೆಗಿನ ಪ್ಯಾಂಟ್ ಸೂಟ್ ಎನ್ನಬಹುದು. ಫುಲ್ ಸೆಟ್‌ನೊಳಗೆ ಬರುವಂತಹ ಉಡುಗೆಯೇ ಇದರ ಹೈಲೈಟ್! ಸಿಂಪಲ್ ಆಗಿ ಹೇಳಬೇಕೆಂದರೇ, ಇದರಲ್ಲಿ ಧರಿಸುವ ಕೋಟ್ ಮೈನಸ್ ಆಗಿ ಕೇವಲ ವೇಸ್ಟ್‌ಕೋಟ್ ಟಾಪ್‌ನ ಪಾತ್ರವಹಿಸುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಇದನ್ನೂ ಓದಿ: Fashion Show News: ಸಿಇಎಸ್ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳ ರ‍್ಯಾಂಪ್ ಶೋ
ಪ್ಯಾಂಟ್ ಸೂಟ್‌ಗೂ ಗ್ಲಾಮರ್ ಟಚ್
ಸೂಟ್‌ನಲ್ಲಿ ಗ್ಲಾಮರ್ ಟಚ್ ನೀಡಲು ಫ್ಯಾಷನ್ ಡಿಸೈನರ್ ಗಳು ಏನೆಲ್ಲಾ ಸರ್ಕಸ್ ನಡೆಸುತ್ತಾರೆಂದರೇ, ಇದೀಗ ಇವನ್ನು ಕೋಟ್ ಇಲ್ಲದೇ ಡಿಸೈನ್ ಮಾಡಿ ಚಾಲ್ತಿಗೆ ತಂದಿದ್ದಾರೆ. ಅಚ್ಚರಿ ಎಂದರೇ ಇವು ಇದೀಗ ಪ್ಯಾಂಟ್‌ಸೂಟ್ ಪ್ರಿಯ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಸೆಳೆಯತೊಡಗಿವೆ. ಈ ವರ್ಗದ ಯುವತಿಯರ ಫಾರ್ಮಲ್ ಔಟ್‌ಫಿಟ್ ಕೆಟಗರಿಗೆ ಸೇರಿವೆ ಎನ್ನುತ್ತಾರೆ ಪ್ಯಾಂಟ್ ಸೂಟ್ ಸ್ಪೆಷಲಿಸ್ಟ್ ರಿಯಾ.
- ನ್ಯೂಡ್, ನ್ಯೂಟ್ರಲ್ ಶೇಡ್ನವು ಟ್ರೆಂಡಿಯಾಗಿವೆ.
- ಸಿಂಪಲ್ ಲುಕ್ಗೆ ಮಾತ್ರ ಇವು ಆಕರ್ಷಕವಾಗಿ ಕಾಣಿಸುತ್ತವೆ.
- ಕಾರ್ಪೋರೇಟ್ ಮಹಿಳೆಯರ ಫ್ಯಾಷನ್‌ನಲ್ಲಿ ಸ್ಥಾನ ಪಡೆದಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)