ಶೀಲಾ ಸಿ. ಶೆಟ್ಟಿ. ಬೆಂಗಳೂರು
ವಾರದ ಆರಂಭದಲ್ಲೇ ಶುರುವಾಯ್ತು ಹೊಸ ವರ್ಷದ ಪಾರ್ಟಿವೇರ್ಸ್ ಶಾಪಿಂಗ್ (New Year Shopping)! ಹೌದು, ವೀಕೆಂಡ್‌ಗೆ ಜನರು ಕಾಯದೇ ಈ ಕ್ರಿಸ್ಮಸ್‌ನ ಮುಂದುವರಿದ ಇಯರ್ ಎಂಡ್ ರಜೆಯಲ್ಲೆ ವೀಕ್ ಡೇಸ್‌ನಲ್ಲೆ ನ್ಯೂ ಇಯರ್‌ಗೆ ಶಾಪಿಂಗ್ ಆರಂಭಿಸಿದ್ದಾರೆ. ವಾರದ ಕೊನೆಯಲ್ಲಿ ಹೆಚ್ಚು ಜನಸಂದಣಿ ಇರುವ ಕಾರಣ ಒಂದಾದರೆ, ಆಫರ್ಸ್ ಹಾಗೂ ಡಿಸ್ಕೌಟ್ಸ್ ಸುರಿಮಳೆ ಈ ವಾರಕ್ಕೆ ಕೊನೆಯಾಗಲಿದೆ ಎಂಬುದು ಮತ್ತೊಂದು ಕಾರಣ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪಟ್ರ್ಸ್.
ನ್ಯೂ ಇಯರ್ ಆಫರ್ಸ್
ಡಿಸೆಂಬರ್ ಆರಂಭದಲ್ಲೇ ಆರಂಭಗೊಂಡ ಇಯರ್ ಎಂಡ್ ಸೇಲ್‌ಗೂ ನ್ಯೂ ಇಯರ್ ಎಂಡ್ ಸೇಲ್‌ಗೂ ಸಂಬಂಧವಿದೆ. ಅದೇನು ಅಂತಿರಾ! ಈ ವರ್ಷದ ಪಾರ್ಟಿವೇರ್ ಹಾಗೂ ವಿಂಟರ್ ಪಾರ್ಟಿ ಡಿಸೈನರ್‌ವೇರ್ಸ್ ಸೇಲ್ ನ್ಯೂ ಇಯರ್ ಶಾಪಿಂಗ್ ಕೆಟಗರಿಗೆ ಬರುತ್ತವೆ. ಕ್ರಿಸ್ಮಸ್ ಮುಗಿದರೂ ಈ ಸೀಸನ್ ಮುಗಿದಿರುವುದಿಲ್ಲ! ಅಲ್ಲದೇ, ಒಂದರ ಹಿಂದೆ ಒಂದೊಂದರಂತೆ ಪಾರ್ಟಿ ಸೀಸನ್‌ಗಳು ಆಗಮಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಮಾಲ್‌ಗಳಲ್ಲಿ ಕ್ರಿಸ್ಮಸ್ ಮುಗಿದಾಕ್ಷಣಾ ನ್ಯೂ ಪಾರ್ಟಿವೇರ್‌ಗಳು ಕಾಲಿಡುತ್ತವೆ. ಡಿಸ್‌ಪ್ಲೇ ಮಾಡಲಾಗುತ್ತದೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪಟ್ರ್ಸ್ ರಜತ್ ವರ್ಮಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಕಣ್ಣು ಕೊರೈಸುವ ನ್ಯೂ ಇಯರ್ ಪಾರ್ಟಿ ವೇರ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ದೊರಕುತ್ತವೆ. ಅದರಲ್ಲೂ ಶಿಮ್ಮರ್ ಪಾರ್ಟಿವೇರ್ಸ್‌ಗೆ ಹೆಚ್ಚು ಆದ್ಯತೆ ದೊರೆಯುತ್ತಿದೆ ಎನ್ನುತ್ತಾರೆ.
ಕಿಡ್ಸ್ – ಲೇಡಿಸ್ – ಜೆಂಟ್ಸ್ ಪಾರ್ಟಿವೇರ್ಸ್‌ಗೆ ಬೇಡಿಕೆ
ಹಿಂದಿನಂತೆ ಎಲ್ಲರೂ ಹೊಸ ವರ್ಷದ ಪಾರ್ಟಿಗಾಗಲಿ ಹಳತನ್ನು ಧರಿಸಲು ಇಷ್ಟಪಡುವುದಿಲ್ಲ. ಈ ಸೀಸನ್‌ನಲ್ಲಿ ಆದಷ್ಟೂ ನೋಡಲು ಆಕರ್ಷಕವಾಗಿ ಅದರಲ್ಲೂ ಲೈವ್ಲಿ ಆಗಿ ಕಾಣಿಸುವ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡುತ್ತಾರೆ. ಕೆಲವರು ಇಡೀ ಫ್ಯಾಮಿಲಿಯ ಔಟ್‌ಫಿಟ್‌ಗಳು ಒಂದೇ ಥೀಮ್‌ಗೆ ಹೊಂದುವಂತೆ ಖರೀದಿಸುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಮಾಲ್‌ಗಳ ಶಾಪಿಂಗ್ ಸೆಂಟರ್‌ಗಳು ಮಾತ್ರವಲ್ಲ, ಆನ್‌ಲೈನ್ ಬೋಟಿಕ್‌ಗಳು ಈ ಸೌಲಭ್ಯವನ್ನು ಕಲ್ಪಿಸುತ್ತಿವೆ. ಇನ್ನು ಯುವಕ-ಯುವತಿಯರಂತೂ ಡೇಟಿಂಗ್ ಜೊತೆಜೊತೆಗೆ ಶಾಪಿಂಗ್ ಕೂಡ ಮಾಡುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹೊಸ ವರ್ಷದ ಶಾಪಿಂಗ್ ಐಡಿಯಾ
- ವೀಕೆಂಡ್‌ಗೆ ಮುಂದೂಡಬೇಡಿ. ಜನಸಂದಣಿ ಹೆಚ್ಚಾಗುತ್ತದೆ.
- ಆಫರ್ಗಳಿಗೆ ಮನಸೋತು ದುಂದು ವೆಚ್ಚ ಮಾಡಬೇಡಿ.
- ನ್ಯೂ ಇಯರ್ ಪಾರ್ಟಿವೇರ್ಸ್ ಇತರೆ ಸಮಯಕ್ಕೆ ಹೊಂದುವುದಿಲ್ಲ.
- ಆನ್ಲೈನ್ನಲ್ಲಿ ಆಫರ್ಸ್ ನೋಡಿ ಆಯ್ಕೆ ಮಾಡಿಕೊಳ್ಳಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Christmas Kids Fashion: ಈ ಬಾರಿಯ ಕ್ರಿಸ್ಮಸ್ ವೇಳೆ ಮಕ್ಕಳ ಡ್ರೆಸ್ ಟ್ರೆಂಡ್ ಹೀಗಿದೆ!