-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿವೇದಿತಾ ಗೌಡ (Niveditha Gowda) ಗೋಲ್ಡನ್ ಲುಕ್ ಇದೀಗ ಟ್ರೆಂಡಿಯಾಗಿದೆ. ಅಂದಹಾಗೆ, ಸದಾ ಒಂದಲ್ಲ ಒಂದು ರೀಲ್ಸ್‌ನಲ್ಲಿ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುವ ನಿವೇದಿತಾ ಗೌಡ ಯಾರಿಗೆ ಗೊತ್ತಿಲ್ಲ! ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್, ಬಿಗ್‌ಬಾಸ್ ಕಂಟೆಸ್ಟಂಟ್ ಹಾಗೂ ನಟಿ ಎಂದೆಲ್ಲಾ ಟ್ಯಾಗ್‌ಲೈನ್ ಹೊಂದಿರುವ ನಿವಿ ಅಲಿಯಾಸ್ ನಿವೇದಿತಾ ಗೌಡ (Niveditha Gowda) ಬೋಲ್ಡ್ ಮತ್ತು ಬ್ಯೂಟಿಫುಲ್ ಲೇಡಿ. ರ‍್ಯಾಪರ್ ಚಂದನ್ ಶೆಟ್ಟಿ ಮದುವೆಯಾದ ಮೇಲೂ ತಮ್ಮದೇ ಆದ ಛಾಪನ್ನು ಉಳಿಸಿಕೊಂಡಿರುವ ಇವರು ಆನ್‌ಸ್ಕ್ರಿನ್‌ಗಿಂತಲೂ ಸೋಷಿಯಲ್ ಮೀಡಿಯಾ ಮೂಲಕವೇ ಹೆಸರು ಮಾಡಿದವರು. ತಾವು ಅಪ್‌ಲೋಡ್ ಮಾಡುವ ಯಾವುದೇ ಫೋಟೋ ಆಗಲಿ ರೀಲ್ಸ್ ಆಗಲಿ ತಲೆಕೆಡಿಸಿಕೊಳ್ಳದವರು. ಇದೀಗ ತಾವು ಉಟ್ಟಿರುವ ಗೋಲ್ಡನ್ ವರ್ಣದ ಎಥ್ನಿಕ್ ಲುಕ್‌ನ ಸೀರೆಯ ಮೂಲಕ ಸೆಳೆದಿದ್ದಾರೆ. ಈಗಾಗಲೇ ಟ್ರೆಂಡ್‌ನಲ್ಲಿರುವ ಗೋಲ್ಡನ್ ಲುಕನ್ನು ಮತ್ತೊಮ್ಮೆ ಬಿಂಬಿಸಿದ್ದಾರೆ.
ಬಾಲಿವುಡ್‌ಗರ ಫೇವರೇಟ್ ಲುಕ್
“ಈ ಸೀಸನ್‌ನಲ್ಲಿ ಅದರಲ್ಲೂ ಫೆಸ್ಟೀವ್ ಹಾಗೂ ವೆಡ್ಡಿಂಗ್ ಸೀಸನ್‌ಗಳಲ್ಲಿ ಗೋಲ್ಡನ್ ಲುಕ್ ಟ್ರೆಂಡಿಯಾಗಿರುತ್ತದೆ. ಕಂಪ್ಲೀಟ್ ಬಂಗಾರದ ಲುಕ್ ನೀಡುವ ಈ ಔಟ್‌ಲುಕ್ ಸೆಲೆಬ್ರೆಟಿ ಲುಕ್ ನೀಡುತ್ತದೆ. ಬಾಲಿವುಡ್‌ನಲ್ಲಿ ಈ ಲುಕ್‌ಗೆ ಹೆಚ್ಚು ಆದ್ಯತೆ. ಅದರಲ್ಲೂ ವೆಡ್ಡಿಂಗ್‌ಗಳಲ್ಲಿ ಈ ಲುಕ್ ಇಲ್ಲದೇ ಸಮಾರಂಭಗಳೇ ನಡೆಯುವುದಿಲ್ಲ! ಆ ಮಟ್ಟಿಗೆ ಈ ಲುಕ್ ಟ್ರೆಂಡ್‌ನಲ್ಲಿದೆ. ಇನ್ನು ಸೆಲೆಬ್ರೆಟಿಗಳಿಂದಿಡಿದು ಸಾಮಾನ್ಯ ಯುವತಿಯರು ಕೂಡ ತಂತಮ್ಮ ಮದುವೆಗಳಲ್ಲಿ ಇದೇ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಈ ಲುಕ್ ಸದ್ಯ ಚಾಲ್ತಿಯಲ್ಲಿದೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಏನಿದು ಗೋಲ್ಡನ್ ಲುಕ್ ?
ಮುಡಿಯಿಂದ ಪಾದದವರೆಗೂ ಬಂಗಾರ ವರ್ಣದ ಔಟ್‌ಫಿಟ್, ಲೆಹೆಂಗಾ, ಲಂಗ-ದಾವಣಿ ಅಥವಾ ಸೀರೆಯಲ್ಲಿ ಕಾಣಿಸಿಕೊಳ್ಳುವುದು. ಇದರೊಂದಿಗೆ ಧರಿಸುವ ಜ್ಯುವೆಲರಿ ಕೂಡ ಸಂಪೂರ್ಣ ಬಂಗಾರದ ಶೇಡ್‌ನಲ್ಲಿರುವುದು. ಯಾವುದೇ ಜಂಕ್ ಹಾಗೂ ಫಂಕಿ ಜ್ಯುವೆಲರಿರಹಿತವಾದ ಸ್ಟೈಲಿಂಗ್ ಇದು. ಇನ್ನು ಮೇಕಪ್ ಕೂಡ ಈ ಲುಕ್‌ಗೆ ಸಾಥ್ ನೀಡುತ್ತದೆ. ಹೇರ್‌ಸ್ಟೈಲ್ ಕೂಡ ಈ ಗೋಲ್ಡನ್ ಎಥ್ನಿಕ್ ಲುಕ್‌ಗೆ ಜೊತೆಯಾಗುತ್ತದೆ.
ಆಕರ್ಷಕವಾದ ನಿವೇದಿತಾ ಗೋಲ್ಡನ್ ಲುಕ್
ಇನ್ನು, ನಿವೇದಿತಾ ಧರಿಸಿರುವ ಗೋಲ್ಡನ್ ಲಂಗ-ದಾವಣಿ, ಸೆಲೆಬ್ರೆಟಿ ಡಿಸೈನರ್ ಚಂದನ್ ಗೌಡ ಅವರ ಡಿಸೈನರ್‌ವೇರ್ ಆಗಿದೆ. ಮೇಕಪ್ ಯಶ್‌ಜೈನ್ ಮಾಡಿದ್ದಾರೆ. ಧರಿಸಿರುವ ಫ್ರಿಂಝ್ ಬೀಡ್ಸ್‌ನ ಡಿಸೈನರ್ ಬ್ಲೌಸ್ ಕಂಪ್ಲೀಟ್ ಗೋಲ್ಡನ್ ವರ್ಕ್‌ನದ್ದಾಗಿದ್ದು, ಇದಕ್ಕೆ ಸ್ಮಾಲ್ ಪ್ಲೀಟ್ಸ್ ಇರುವ ಲಂಗ ಹಾಗೂ ಸಾದಾ ಡಿಸೈನರ್ ಚಿಕ್ಕ ಬಾರ್ಡರ್ ಇರುವ ಬಂಗಾರ ವರ್ಣದ ದಾವಣಿ, ನಿವೇದಿತಾ ಅವರನ್ನು ಮನಮೋಹಕವಾಗಿಸಿದೆ. ಇದರೊಂದಿಗೆ ಧರಿಸಿರುವ ಆಂಟಿಕ್ ಕಡ, ಬಿಗ್ ನೆಕ್‌ಪೀಸ್ ಜುಮ್ಕಾ ಇವರನ್ನು ಮತ್ತಷ್ಟು ಸುಂದರವಾಗಿಸಿದೆ. ಹಣೆಗಿಟ್ಟ ಬಿಂದಿ ಸ್ಥಳಿಯ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡಿದೆ.
ಫ್ಯಾಷನ್ ವಿಮರ್ಶಕರ ಮಾತು
ನಿವೇದಿತಾ ಅವರ ಈ ಗೋಲ್ಡನ್ ಲುಕ್, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳನ್ನು ಸೆಳೆದಿದೆ. ಇದರೊಂದಿಗೆ ಟ್ರೆಡಿಷನಲ್‌ವೇರ್ ಲೋಕದಲ್ಲಿ ಟ್ರೆಂಡ್ ಸೆಟ್ ಮಾಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ವಿದ್ಯಾ. ಅವರ ಪ್ರಕಾರ, ಗೋಲ್ಡನ್ ಲುಕ್, ವೆಡ್ಡಿಂಗ್ ಸೀಸನ್‌ಗೆ ಹೇಳಿ ಮಾಡಿಸಿದ ಔಟ್‌ಲುಕ್ ಎನ್ನುತ್ತಾರೆ.
ನಿವೇದಿತಾ ಗೌಡ ಗೋಲ್ಡನ್ ಲುಕ್ ಟ್ರೈ ಮಾಡಿ ನೋಡಿ
- ಕಂಪ್ಲೀಟ್ ಗೋಲ್ಡನ್ ಶೇಡ್ನ ಔಟ್‌ಫಿಟ್ ಚೂಸ್ ಮಾಡಿ.
- ಎಥ್ನಿಕ್ವೇರ್ ಆಯ್ಕೆ ಮಾಡಿ.
- ಜ್ಯುವೆಲರಿ ಕೂಡ ಗೋಲ್ಡನ್ ಶೇಡ್ನದ್ದಾಗಿರಬೇಕು.
- ಮೇಕಪ್ ಹಾಗೂ ಹೇರ್‌ಸ್ಟೈಲ್ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ ಹಸಿರು ಸೀರೆಯ ಸೀಕ್ರೆಟ್ ಇದು!