Site icon Vistara News

Oscars 2024: ಆಸ್ಕರ್‌ ರೆಡ್‌ ಕಾರ್ಪೆಟ್ ಫ್ಯಾಷನ್‌ನಲ್ಲಿ ವೈವಿಧ್ಯಮಯ ಗೌನ್‌ಗಳದ್ದೇ ಹವಾ!

Oscars 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಾಸ್‌ ಏಂಜಲೀಸ್‌ನ ಹಾಲಿವುಡ್‌ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 96ನೇ ಆಸ್ಕರ್‌ ಅಕಾಡೆಮಿ ಅವಾರ್ಡ್ (Oscars 2024) ಸಮಾರಂಭದ ರೆಡ್‌ಕಾರ್ಪೆಟ್‌ನಲ್ಲಿ, ಇಂಟರ್‌ನ್ಯಾಷನಲ್‌ ಸ್ಟಾರ್‌ಗಳ ಕಲರ್‌ಫುಲ್‌ ಫ್ಯಾಷನದ್ದೇ ಹವಾ! ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾರೆಯರ ಫ್ಯಾಷನ್‌ ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು. ಬಹುತೇಕ ನಟಿಯರು ಗೌನ್‌ಗಳಲ್ಲಿ ರಾರಾಜಿಸಿದರೇ, ನಟರು ಹಾಗೂ ನಿರ್ದೇಶಕರು ಸೂಟ್‌ನಲ್ಲಿ ಕಾಣಿಸಿಕೊಂಡರು. ಹಾಗೆಂದು ಎಲ್ಲರ ಡ್ರೆಸ್‌ಕೋಡ್‌ ಒಂದೇ ಬಗೆಯದ್ದಾಗಿರಲಿಲ್ಲ. ಕಂಪ್ಲೀಟ್‌ ಭಿನ್ನವಾಗಿತ್ತು. ಡಿಸೈನರ್‌ವೇರ್‌ಗಳ ಸಂಗಮವಾಗಿತ್ತು. ಈ ಕುರಿತಂತೆ ಇಲ್ಲಿದೆ ವರದಿ.

ತಾರೆಯರ ಡಿಸೈನರ್‌ವೇರ್‌ಗಳಿಗೆ ಸಾಕ್ಷಿಯಾದ ರೆಡ್‌ ಕಾರ್ಪೆಟ್

ಟ್ರೆಂಡಿ ಸ್ಕರ್ಟ್, ಮ್ಯಾಕ್ಸಿ, ಪೆಪ್ಲಮ್‌ ಸೂಟ್‌, ಪ್ಯಾಂಟ್‌ ಸೂಟ್‌, ಟುಕ್ಸಾಡೊ ಸೂಟ್‌, ಗಿಂಗ್ನಂ ಸೂಟ್‌ ಹೀಗೆ ಡಿಸೈನರ್‌ವೇರ್‌ಗಳನ್ನು ಧರಿಸಿದ ನಟ-ನಟಿಯರು, ನಿರ್ದೇಶಕರು, ತಂತ್ರಜ್ಞರು ರೆಡ್‌ ಕಾರ್ಪೆಟ್ ಮೇಲೆ ಪೋಸ್‌ ನೀಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಹಾಲಿವುಡ್‌ ನಟರ ಸೂಟ್‌

ಡ್ವಯ್ನೆ ಜಾನ್ಸನ್‌ ಬೂದು ಬಣ್ಣದ ಸ್ಯಾಟೀನ್‌ ಸೂಟ್‌ನಲ್ಲಿ, ಮಾರ್ಟಿನ್‌ ಬೋ ಸೂಟ್‌ನಲ್ಲಿ, ಬ್ರಾಡ್ಲಿ ಕೂಪರ್‌ ಬ್ಲೇಝರ್‌ ಸೂಟ್‌ನಲ್ಲಿ ಕಾಣಿಸಿಕೊಂಡರು. ಹೀಗೆ ನಟ-ನಿರ್ದೇಶಕರೆಲ್ಲರೂ ಪರ್ಫೆಕ್ಟ್ ಸೂಟ್‌ ಫ್ಯಾಷನ್‌ ಫಾಲೋ ಮಾಡಿದ್ದರು.

ತಾರೆಯರ ವೆರೈಟಿ ಗೌನ್‌ಗಳು

ಅಕಾಡೆಮಿ ಆವಾಡ್ರ್ಸ್ ಸಮಾರಂಭದಲ್ಲಿ ಈ ಬಾರಿ ಅತಿ ಹೆಚ್ಚಾಗಿ ಚಿತ್ರ-ವಿಚಿತ್ರ ವೇರಬಲ್‌ ಗೌನ್‌ಗಳ ಹವಾ ಹೆಚ್ಚಾಗಿತ್ತು. ಒಂದಕ್ಕಿಂತ ಒಂದು ವಿಭಿನ್ನ ಡಿಸೈನ್‌ ಹೊಂದಿದ್ದವು. ಎಲ್ಲದಕ್ಕಿಂತ ಹೆಚ್ಚಾಗಿ ಬ್ರೈಟ್‌ ಕಲರ್ಸ್, ಶೇಡ್‌ ಹಾಗೂ ಜೆನ್‌ ಜಿ ಡಿಸೈನ್‌ಗಳಿಗೆ ಹೆಚ್ಚಾಗಿ ಆದ್ಯತೆ ನೀಡಲಾಗಿತ್ತು. ಈ ಬಾರಿ ಯಾರ ಡಿಸೈನ್‌ಗಳು ಕಾಪಿಕ್ಯಾಟ್‌ ಆಗಿರಲಿಲ್ಲ ಹಾಗೂ ಕಾಪಿಯಾಗಿರಲಿಲ್ಲ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಗೌನ್‌ಗಳ ದರ್ಬಾರು

ಹಾಲಿವುಡ್‌ ನಟಿ ಚಾರ್ಲೈಜ್‌ ಥೆರಾನ್‌ ಬೂದು ಬಣ್ಣದ ಸ್ಯಾಟೀನ್‌ ಸ್ಟ್ರಾಪ್‌ ಗೌನ್‌ನಲ್ಲಿ, ಮೈಕೆಲ್‌ ಯೊ ಶಿಮ್ಮರ್‌ರ ಬ್ಲ್ಯಾಕ್‌ ಹಾಗೂ ಬ್ಲ್ಯೂ ಗೌನ್‌ನಲ್ಲಿ, ಎಮ್ಮಾ ಪೆಪ್ಲಮ್‌ ಪಿಸ್ತಾ ಗೌನ್‌ನಲ್ಲಿ, ಬಾರ್ಬಿ ಚಿತ್ರದಲ್ಲಿ ನಟಿಸಿದ ಅಮೆರಿಕಾ ಫೆರಾರಾ ಪಿಂಕ್‌ ಶಿಮ್ಮರ್‌ ಸಿಕ್ವೆನ್ಸ್ ಗೌನ್‌ನಲ್ಲಿ, ಜೆನಿಫರ್‌ರ ಲಾರೆನ್ಸ್ ಪೋಲ್ಕಾ ಡಾಟ್‌ ಗೌನ್‌ನಲ್ಲಿ, ಅನ್ಯಾ ಟಯ್ಲರ್‌ ಜಾಯ್‌ ಸಿಲ್ವರ್‌ ಮೆರ್ಮೈಡ್‌ ಗೌನ್‌ನಲ್ಲಿ, ಗ್ರೇಟಾ ಗೆರ್ವಿಗ್‌ ಗೋಲ್ಡ್‌ ಸ್ಟ್ರಾಪ್‌ ಗೌನ್‌ನಲ್ಲಿ, ಅರಿಯಾನಾ ಗ್ರ್ಯಾಂಡೆ ಪಿಂಕ್‌ ಶೇಡ್‌ನ ಬೋಲ್ಡ್ ಸ್ಟೇಟ್‌ಮೆಂಟ್‌ ಗೌನ್‌ನಲ್ಲಿ, ಲುಪಿಟಾ ಸಿಲ್ವರ್‌ ಫ್ರಿಂಝ್‌ ಶೈನಿಂಗ್‌ ಗೌನ್‌ನಲ್ಲಿ, ಫ್ಲೋರೆನ್ಸ್ ಟು ಪೀಸ್‌ ಗೌನ್‌ ಸೆಟ್‌ನಲ್ಲಿ, ವೆನೆಸಾ ಹಡ್ಜೆನ್ಸ್ ಪ್ರೆಗ್ನೆನ್ಸಿ ಲುಕ್‌ನ ಬ್ಲಾಕ್‌ ಗೌನ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು.
ಒಟ್ನಲ್ಲಿ, ಈ ಬಾರಿಯ ಅಕಾಡೆಮಿ ಅವಾರ್ಡ್ಸ್‌ನಲ್ಲಿ ತಾರೆಯರು ಹೆಚ್ಚಾಗಿ ವೆರೈಟಿ ಕಾಣಿಸಿಕೊಂಡರು. ಮುಂಬರುವ ಸೀಸನ್‌ನಲ್ಲಿ ಈ ಎಲ್ಲಾ ಗೌನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಟ್ರೆಂಡಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎಂದು ವಿಮರ್ಶಿಸುತ್ತಾರೆ ಫ್ಯಾಷನ್‌ ವಿಮರ್ಶಕರಾದ ರಿಚಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Stars Womens day celebration in saree: ಸೀರೆಯಲ್ಲಿ ತಾರೆಯರ ಮಹಿಳಾ ದಿನಾಚಾರಣೆ ಸಂಭ್ರಮ

Exit mobile version