Site icon Vistara News

Paris Fashion: ಮೈ ನವಿರೇಳಿಸಿತು ವರ್ಷದ ಮೊದಲ ಪ್ಯಾರೀಸ್ ಹಾಟ್ ಕೌಚರ್ ಫ್ಯಾಷನ್ ವೀಕ್

Paris Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೆಚ್ಚು ಅಬ್ಬರವಿಲ್ಲದೇ ನಡೆದ ಈ ವರ್ಷದ ಮೊದಲ ಪ್ಯಾರೀಸ್ ಹಾಟ್ ಕೌಚರ್ ಫ್ಯಾಷನ್ ವೀಕ್‌ನಲ್ಲಿ (Paris Fashion) ಮುಂಬರುವ ಸ್ಪ್ರಿಂಗ್ ಹಾಗೂ ಸಮ್ಮರ್ ವೇರಬಲ್ ಹಾಗೂ ನಾನ್ವೇರಬಲ್ ಕಲೆಕ್ಷನ್‌ಗಳು ಪ್ರದರ್ಶನಗೊಂಡವು. ಜಾಗತೀಕ ಮಟ್ಟದಲ್ಲಿ ನಡೆಯುವ ಈ ಫ್ಯಾಷನ್ ವೀಕ್‌ನಲ್ಲಿ ಸೆಲೆಬ್ರೆಟಿ ಡಿಸೈನರ್ಸ್ ಹಾಗೂ ತಾರೆಯರು ಪಾಲ್ಗೊಂಡು ರ‍್ಯಾಂಪ್ ಶೋ ಕಳೆ ಹೆಚ್ಚಿಸಿದರು.

ರಾಹುಲ್ ಮಿಶ್ರಾ ಡಿಸೈನರ್‌ವೇರ್‌ನಲ್ಲಿ ಅನನ್ಯಾ ಪಾಂಡೇ

ಭಾರತೀಯ ಡಿಸೈನರ್ ರಾಹುಲ್ ಮಿಶ್ರಾ ಅವರ ಡಿಸೈನರ್‌ವೇರ್‌ನಲ್ಲಿ ನಟಿ ಅನನ್ಯಾ ಪಾಂಡೇ ಮೊಟ್ಟ ಮೊದಲ ಬಾರಿಗೆ ಪ್ಯಾರೀಸ್ ಹಾಟ್ ಕೌಚರ್ ವೀಕ್‌ನಲ್ಲಿ ವಿಶೇಷ ದಿರಸಿನಲ್ಲಿ ಕಾಣಿಸಿಕೊಂಡರು. ರಾಹುಲ್ ಮಿಶ್ರಾರವರು ಸೂಪರ್ ಹೀರೋಸ್ ಹೆಸರಿನ ಕಲೆಕ್ಷನ್‌ನಲ್ಲಿ ವಿನಾಶದ ಅಂಚಿನಲ್ಲಿರುವ ನಾನಾ ಕೀಟಗಳ ಕಾನ್ಸೆಪ್ಟ್ ಇರಿಸಿಕೊಂಡು ಫ್ಯಾಷನ್‌ವೇರ್‌ಗಳನ್ನು ಸಿದ್ಧಪಡಿಸಿದ್ದರು. ನೊಣ, ಜೇನ್ನೊಣ, ಸರಿಸೃಪಗಳು, ಹಾರಾಡುವ ನಾನಾ ಕೀಟಗಳ ಚಿತ್ತಾರವಿರುವ ಭಿನ್ನ-ವಿಭಿನ್ನ ಡಿಸೈನ್ ಇರುವಂತಹ ಡಿಸೈನರ್‌ವೇರ್‌ಗಳನ್ನು ವಿನ್ಯಾಸಗೊಳಿಸಿದ್ದರು.

ನಟಿ ಅನನ್ಯಾ ಪಾಂಡೇ ಮೊದಲ ಪ್ಯಾರೀಸ್ ಶೋ

ಡಿಸೈನರ್ ರಾಹುಲ್ ಮಿಶ್ರಾ ವಿನ್ಯಾಸದ ಮಿನಿ ಡ್ರೆಸ್ ಧರಿಸಿದ ನಟಿ ಅನನ್ಯಾ ಪಾಂಡೇ, ಹಾರಾಡುವ ಚಿಟ್ಟೆಗಳನ್ನೊಳಗೊಂಡ ವೃತ್ತಾಕಾರದ ಜಾಲರಿಯನ್ನು ಕೈಗಳಲ್ಲಿಟ್ಟುಕೊಂಡು ಜಾಗೃತಿ ಮೂಡಿಸುವಂತಹ ಫ್ಯಾಷನ್‌ವೇರ್‌ನಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದರು.

ನ್ಯಾಚುರಲ್ ಬಿಳಿ ಗುಲಾಬಿಯ ಡ್ರೆಸ್‌ನಲ್ಲಿ ಜೆನಿಫರ್ ಲೊಫೆಜ್

ಖ್ಯಾತ ಗಾಯಕಿ ಜೆನಿಫರ್ ಲೊಫೆಜ್, ನೈಜ ಬಿಳಿ ಗುಲಾಬಿಯ ದಳಗಳಿಂದ ಸಿದ್ಧಪಡಿಸಲಾಗಿದ್ದ ಡಿಸೈನರ್ ಶಾಫರೆಲ್ಲಿ ಅವರ ಅತ್ಯಾಕರ್ಷಕ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಫ್ಯಾಷನ್ ಪ್ರಿಯರ ಮನಗೆದ್ದರು.

ಇದನ್ನೂ ಓದಿ: High Boots Fashion: ವಿಂಟರ್‌ನಲ್ಲಿ ಹೈ ಬೂಟ್ಸ್ ಧರಿಸುವವರಿಗೆ 5 ಸ್ಟೈಲಿಂಗ್‌ ಟಿಪ್ಸ್!

ಖ್ಯಾತ ಸೆಲೆಬ್ರೆಟಿಗಳ ಹಾಜರಿ

ಸೂಪರ್ ಮಾಡೆಲ್ ನಿಯೊಮಿ, ಗಾಯಕಿ ಜಯಾನ್ ಮಲಿಕ್, ರಿಹಾನಾ, ನತಾಲಿಯಾ, ಸೌತ್ ಕೊರಿಯಾ ನಟಿ ಹಾ ಸೊ-ಹೀ ಸೇರಿದಂತೆ ಸಾಕಷ್ಟು ನಟಿಯರು ರ‍್ಯಾಂಪ್ ಶೋನಲ್ಲಿ, ಪಾಲ್ಗೊಂಡು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡರು.

ಒಟ್ಟಾರೆ, ಈ ಬಾರಿಯ ಪ್ಯಾರೀಸ್ ಹಾಟ್ ಕೌಚರ್ ಶೋ ಹೆಚ್ಚು ಅಬ್ಬರವಿಲ್ಲದೆ ನಡೆದದ್ದೇ ವಿಶೇಷ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

Exit mobile version