ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರ್ಲ್ ಹೂಪ್ ರಿಂಗ್‌ಗಳು ಯುವತಿಯರ ಕಿವಿಯನ್ನು ಅಲಂಕರಿಸುತ್ತಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಪರ್ಲ್ ಹೂಪ್ ರಿಂಗ್‌ಗಳು (Pearl Hoop Ring Fashion) ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರನ್ನು ಸೆಳೆಯುತ್ತಿರುವುದು ಮಾತ್ರವಲ್ಲ, ವೈಟ್ ಔಟ್‌ಫಿಟ್‌ಗಳಿಗೆ ಧರಿಸುವುದು ಹೆಚ್ಚಾಗಿದೆ. ನೋಡಲು ಒಂದೇ ತರಹನಾಗಿ ಇವು ಕಂಡರೂ ನಾನಾ ಶೈಲಿಯವು ಮಾರುಕಟ್ಟೆಗೆ ಕಾಲಿಟ್ಟಿವೆ.
ಟ್ರೆಂಡ್‌ನಲ್ಲಿರುವ ಪರ್ಲ್ ಹೂಪ್ ರಿಂಗ್
ಬ್ಯಾಂಗಲ್ ಶೇಪ್ ಪರ್ಲ್ ಹೂಪ್ ರಿಂಗ್, ಹಾಫ್ ಹೂಪ್, ಸ್ಟಡ್ಸ್ ಸ್ಟೈಲ್ ಹೂಪ್, ಡಬ್ಬಲ್-ತ್ರಿಬಲ್ ಹೂಪ್ ವಿನ್ಯಾಸದ ಪರ್ಲ್ ರಿಂಗ್‌ಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಇವು ಧರಿಸಿದಾಗ ಎದ್ದು ಕಾಣುತ್ತವೆ ಎನ್ನುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್‌ಗಳು.
ವೈಟ್ ಔಟ್‌ಫಿಟ್ಸ್‌ಗೆ ಪರ್ಲ್ ಹೂಪ್ ಮ್ಯಾಚಿಂಗ್
ಯಾವುದೇ ವೈಟ್ ವರ್ಣದ ಔಟ್‌ಫಿಟ್‌ಗಳಿಗೆ ಪರ್ಲ್ ಹೂಪ್ ರಿಂಗ್‌ಗಳು ಮ್ಯಾಚ್ ಆಗುವುದು ಮಾತ್ರವಲ್ಲ, ಆಕರ್ಷಕವಾಗಿ ಕಾಣುತ್ತವೆ. ಅದರೊಂದಿಗೆ ಇಡೀ ಔಟ್‌ಫಿಟ್ಟನ್ನು ಹೈಲೈಟ್ ಮಾಡುತ್ತವೆ. ಅದರಲ್ಲೂ ಇಂಡೋ-ವೆಸ್ಟರ್ನ್ ಉಡುಪಿಗೆ ಹೇಳಿ ಮಾಡಿಸಿದಂತಿರುತ್ತವೆ.
ಲೈಟ್‌ವೈಟ್ ಪರ್ಲ್ ಹೂಪ್‌ಗೆ ಆದ್ಯತೆ
ಪರ್ಲ್ ಹೂಪ್ ಇಯರಿಂಗ್ಸ್ ಖರೀದಿಸುವಾಗ ಆದಷ್ಟೂ ಲೈಟ್‌ವೈಟ್‌ಗೆ ಆದ್ಯತೆ ನೀಡಬೇಕು. ಯಾಕೆಂದರೇ ಇವುಗಳ ಆಕಾರ ದೊಡ್ಡದಾದಂತೆ ಭಾರವಾಗುತ್ತವೆ. ಅಷ್ಟು ಮಾತ್ರವಲ್ಲ, ಜಗ್ಗಿದಂತೆ ಕಾಣುತ್ತವೆ.
ಎಥ್ನಿಕ್-ಕ್ಯಾಶುವಲ್ ಎರಡಕ್ಕೂ ಮ್ಯಾಚಿಂಗ್
ಇಂಡೋ-ವೆಸ್ಟರ್ನ್ ಡಿಸೈನರ್‌ವೇರ್‌ಗಳಿಗೆ ಮಾತ್ರವಲ್ಲ, ಎಥ್ನಿಕ್ ಡಿಸೈನರ್‌ವೇರ್‌ಗಳಿಗೂ ಇವು ಮ್ಯಾಚ್ ಆಗುತ್ತವೆ. ಕ್ಯಾಶುವಲ್ ಔಟ್‌ಫಿಟ್‌ಗಳಿಗೂ ಹೊಂದುತ್ತವೆ. ಆದರೆ, ಪರ್ಲ್‌ಗಳ ಬಣ್ಣ ಉಡುಪಿನ ಬಣ್ಣಕ್ಕೆ ಹೊಂದಿಕೆಯಾಗಬೇಕಷ್ಟೇ!
ಪರ್ಲ್‌ಗಳ ಶೇಡ್ಸ್ ಆಯ್ಕೆ ಹೀಗಿರಲಿ
ನಿಮಗೆ ಕಂಪ್ಲೀಟ್ ಶ್ವೇತ ವರ್ಣದ ಪರ್ಲ್ ಮ್ಯಾಚ್ ಆದಲ್ಲಿ, ಅದನ್ನೇ ಸೆಲೆಕ್ಟ್ ಮಾಡಿ. ಇವುಗಳಲ್ಲೂ ಐವರಿ, ಹಾಫ್ ವೈಟ್, ಕ್ರೀಮ್ ವೈಟ್, ಮಿಲ್ಕಿ ವೈಟ್ ಹೀಗೆ ನಾನಾ ಶೇಡ್‌ಗಳವು ದೊರೆಯುತ್ತವೆ. ನಿಮ್ಮ ಬಳಿ ಅತಿ ಹೆಚ್ಚಾಗಿರುವ ವೈಟ್ ಉಡುಪುಗಳ ಶೇಡ್ಸ್‌ಗೆ ಹೊಂದುವಂತೆ ನೋಡಿ, ಆಯ್ಕೆ ಮಾಡಿ.
ಪರ್ಲ್ ಹೂಪ್ ರಿಂಗ್ ಟಿಪ್ಸ್
- ಲೈಟ್ವೈಟ್ನದ್ದನ್ನು ಆಯ್ಕೆ ಮಾಡಿ.
- ಮುಖದ ಆಕಾರಕ್ಕೆ ತಕ್ಕ ಸೈಝ್ ಧರಿಸಿ.
- ಹೂಪ್ ರಿಂಗ್ ಧರಿಸುವ ಮುನ್ನವೇ ಹೇರ್ಸ್ಟೈಲ್ ಮಾಡಿ.
- ಧರಿಸುವ ಹೂಪ್ ರಿಂಗ್ ಭುಜವನ್ನು ತಗುಲಬಾರದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಳೆಗಾಲದ ಫ್ಯಾಷನ್‌ನಲ್ಲಿ ಹೂಡಿಗೂ ಬಿತ್ತು ಕತ್ತರಿ!