ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಾರ್ಡ್ರೋಬ್ ಮಾಲ್‌ಫಂಕ್ಷನ್ (Wardrobe Malfunction 2024) ಎಂಬುದು ದೊಡ್ಡ ದೊಡ್ಡ ಸ್ಟಾರ್‌ಗಳಿಗೂ ಹೊರತಾಗಿಲ್ಲ! ಇದಕ್ಕೆ ಉದಾಹರಣೆ ಎಂಬಂತೆ, ಅಂಬಾನಿ ಫ್ಯಾಮಿಲಿಯ ಪ್ರಿ ವೆಡ್ಡಿಂಗ್ ಸಮಾರಂಭದಲ್ಲಿ ಪಾಪ್ ಐಕಾನ್ ರಿಹಾನಾ ಸ್ಟೇಜ್ ಶೋ ನೀಡುವಾಗ ಇದ್ದಕ್ಕಿಂದ್ದಂತೆ, ಪರ್ಫಮಾನ್ಸ್ ಮಧ್ಯೆ ಆಕೆ ಧರಿಸಿದ್ದ ಫ್ಲೊರಸೆಂಟ್ ಗ್ರೀನ್ ಶೇಡ್‌ನ ತೆಳುವಾದ ಡಿಸೈನರ್‌ವೇರ್ ಕೈಗಳ ಕೆಳಗೆ ಹರಿದು ಹೋಗಿದ್ದು… ತಕ್ಷಣಕ್ಕೆ ಆಕೆಗೆ ಇದು ಗೊತ್ತಾಗದಿದ್ದರೂ, ಆಕೆಯ ಬಹುತೇಕ ಫೋಟೋಗಳಲ್ಲಿ ಇದು ದಾಖಲಾಗಿ ಉಳಿದು ಹೋಯಿತು. ಅರೆರೆ, ಸೆಲೆಬ್ರೆಟಿ ಡಿಸೈನರ್‌ಗಳು ಡಿಸೈನ್ ಮಾಡಿದ ದುಬಾರಿ ಡಿಸೈನರ್‌ವೇರ್‌ಗಳೂ ಹೀಗೆ ಇದ್ದಕ್ಕಿದ್ದಂತೆ ಹರಿದು ಹೋಗುತ್ತವೆಯೇ! ಇದ್ಯಾಕೆ ಹೀಗೆ! ಎಂಬ ಸಂಶಯ ಎಲ್ಲರಲ್ಲೂ ಮೂಡಬಹುದು. ಇಂತಹ ಸನ್ನಿವೇಶಗಳು ಸೃಷ್ಟಿಯಾಗದಂತೆ ಏನೆಲ್ಲಾ ಮಾಡಬಹುದು? ಆದಲ್ಲಿ, ಏನು ಮಾಡಬಹುದು ಎಂಬುದರ ಬಗ್ಗೆ ಫ್ಯಾಷನ್ ಎಕ್ಸ್‌ಫರ್ಟ್ ಕರೀಷ್ಮಾ ಇಲ್ಲಿ ಟಿಪ್ಸ್ ನೀಡಿದ್ದಾರೆ.
ವಾರ್ಡ್ರೋಬ್ ಮಲ್‌ಫಂಕ್ಷನ್
ಅಂದಹಾಗೆ, ಸ್ಟೇಜ್ ಮೇಲೆ ಕಾರ್ಯಕ್ರಮ ನೀಡುವಾಗ, ಫ್ಯಾಷನ್ ಶೋಗಳಲ್ಲಿ ನಡೆಯುವಾಗ ಸ್ಟಾರ್‌ಗಳು ಇಂತಹ ಮುಜುಗರಕ್ಕೊಳಗೀಡಾಗಿರುವುದು ಇದು ಮೊದಲೇನಲ್ಲ! ಬಾಲಿವುಡ್‌ನ ಕಂಗನಾರಿಂದ ಹಿಡಿದು, ಸ್ಯಾಂಡಲ್‌ವುಡ್‌ನ ರಾಗಿಣಿಯೂ ಕೂಡ ಇದನ್ನು ಎದುರಿಸಿದ್ದಾರೆ. ಇನ್ನು, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪಾಪ್ ಐಕಾನ್ ರಿಹಾನಾಳ ಉಡುಪು ಪ್ರೋಗ್ರಾಂ ನಡುವೆ, ಇದ್ದಕ್ಕಿದ್ದಂತೆ ಹರಿದು ಹೋಗಿರುವುದು ಹೊಸತೇನಲ್ಲ! ಕಾರಣ ಇಷ್ಟೇ! ಕೆಲವು ಸೆಲೆಬ್ರೆಟಿಗಳು ಕಾರ್ಯಕ್ರಮಕ್ಕೆ ಕೆಲವೇ ಕ್ಷಣಗಳಿರುವಾಗ, ಟ್ರಯಲ್ ನೋಡದೇ, ಡೈರೆಕ್ಟ್ ಆಗಿ ಧರಿಸುವ ಡಿಸೈನರ್‌ವೇರ್‌ಗಳು ಹೀಗಾಗುತ್ತವೆ. ವಾರ್ಡ್ರೋಬ್ ಮಲ್‌ಫಂಕ್ಷನ್‌ಗೆ ಒಳಗಾಗುತ್ತವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಇನ್ನು, ಸಾಮಾನ್ಯ ಯುವತಿಯರು ಬಹಳಷ್ಟು ಬಾರಿ, ಇಂತಹ ಸನ್ನಿವೇಶಗಳನ್ನು ಆಗಾಗ್ಗೆ ನಾನಾ ವಿಧದಲ್ಲಿ ಎದುರಿಸುತ್ತಿರುತ್ತಾರೆ. ಇದರಿಂದ ಪಾರಾಗಲು ಏನು ಮಾಡಬಹುದು? ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಟಿಪ್ಸ್.
ಕಾರ್ಯಕ್ರಮಗಳಿಗೆ ಧರಿಸುವ ಮುನ್ನ ಟ್ರಯಲ್ ಮಾಡಿ ನೋಡಿ
ಯಾವುದೇ ಡಿಸೈನರ್‌ವೇರ್ ಧರಿಸುವ ಮುನ್ನ, ಟ್ರಯಲ್ ಮಾಡಿ ನೋಡುವುದು ಅಗತ್ಯ. ಇಲ್ಲವಾದಲ್ಲಿ ಧರಿಸಿದ ನಂತರ ಟೈಟಾಗಿ ಹರಿದುಹೋಗಬಹುದು. ಹಾಗಾಗಿ ಉಡುಪಿನ ಬಗ್ಗೆ ಅತಿ ಹೆಚ್ಚು ಆತ್ಮವಿಶ್ವಾಸ ಬೇಡ.
ಡೆಲಿಕೇಟ್ ಡಿಸೈನರ್‌ವೇರ್ ಆಯ್ಕೆ
ಡೆಲಿಕೇಟ್ ಡಿಸೈನರ್‌ವೇರ್ಸ್ ಆಯ್ಕೆ ಮಾಡುವಾಗ, ನಿಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ಅದು ಹೊಂದುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.
ಪಾರದರ್ಶಕ ಶೀರ್ ಫ್ಯಾಬ್ರಿಕ್ ಬಗ್ಗೆ ಎಚ್ಚರ
ಪಾರದರ್ಶಕವಾಗಿರುವ ಔಟ್‌ಫಿಟ್‌ಗಳು ಅತಿ ಬೇಗ ಹರಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಔಟ್‌ಫಿಟ್‌ಗಳ ಫಿಟ್ಟಿಂಗ್ ಕೊಂಚ ಲೂಸಾಗಿದ್ದರೇ ಉತ್ತಮ.
ಉತ್ತಮ ಫ್ಯಾಬ್ರಿಕ್‌ಗೆ ಆದ್ಯತೆ
ಕಂಫರ್ಟಬಲ್ ಡಿಸೈನರ್‌ವೇರ್‌ಗೆ ಆದ್ಯತೆ ನೀಡಿ. ಲೆಬೆಲ್ ಹಾಗೂ ಬ್ರಾಂಡ್ ಹೆಸರಿಗಾಗಿ ಉಡುಪನ್ನು ಧರಿಸಬೇಡಿ. ಬದಲಿಗೆ ಗುಣಮಟ್ಟದ ಫ್ಯಾಬ್ರಿಕ್‌ಗೆ ಮಾನ್ಯತೆ ನೀಡಿ.
ಪಾರಾಗಲು ಹೀಗೆ ಮಾಡಿ
ನಿಮ್ಮ ಬಳಿ ಅಲ್ಟರ್‌ನೇಟಿವ್ ಔಟ್‌ಫಿಟ್, ಜಾಕೆಟ್ ಅಥವಾ ದುಪಟ್ಟಾ ಜೊತೆಗಿರಲಿ. ವಾರ್ಡ್ರೋಬ್ ಮಲ್‌ಫಂಕ್ಷನ್ ಆದರೂ ತಕ್ಷಣ ಬೆಚ್ಚಿ ಬೀಳದೇ, ಈಸಿಯಾಗಿ ಕ್ಯಾರಿ ಮಾಡಲು ಟ್ರೈ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)