ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರೆಗ್ನೆನ್ಸಿ ಫೋಟೊಶೂಟ್‌ಗಳಲ್ಲಿ (Pregnancy Gown Fashion) ಇದೀಗ ಅಸ್ಸೆಮ್ಮಿಟ್ರಿಕಲ್ ಗೌನ್‌ಗಳದ್ದೇ ಕಾರುಬಾರು! ಹೌದು. ನೋಡಲು ಮನಮೋಹಕವೆನಿಸುವ ವೆಸ್ಟರ್ನ್ ಲುಕ್ ನೀಡುವ ಅಸ್ಸೆಮ್ಮಿಟ್ರಿಕಲ್ ವೈಬ್ರೆಂಟ್ ಶೇಡ್‌ಗಳ ಮಾನೋಕ್ರೋಮ್ ಗೌನ್‌ಗಳ ಬಳಕೆ ಮೊದಲಿಗಿಂತ ಹೆಚ್ಚಾಗಿದೆ. ಅಂದಹಾಗೆ, ಈ ಸೀಸನ್‌ನಲ್ಲಿ ಫ್ಲೇರ್ಡ್, ಫ್ರಿಲ್ ಹಾಗೂ ಫ್ರಾಕ್ ಶೈಲಿಯವು ಅತಿ ಹೆಚ್ಚು ಟ್ರೆಂಡ್‌ನಲ್ಲಿವೆ.
ಗಾಳಿಯಲ್ಲಿ ಹಾರಾಡುವ ಫ್ಲೇರ್ಡ್ ಗೌನ್ಸ್
ಗಾಳಿಯಲ್ಲಿ ಹಾರಾಡುವಂತಹ ಫ್ಲೇರ್ಡ್ ಗೌನ್‌ಗಳು ಅತಿ ಹೆಚ್ಚಾಗಿ ಫೋಟೊಶೂಟ್‌ಗಳಲ್ಲಿ ಬಳಕೆಯಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ, ಈ ಗೌನ್‌ಗಳಲ್ಲಿ ಕ್ಲಿಕ್ಕಿಸಿದ ಫೋಟೊಗಳು ಮನಮೋಹಕವಾಗಿ ಗರ್ಭಿಣಿಯನ್ನು ಬಿಂಬಿಸುತ್ತವೆ. ಅಲ್ಲದೇ, ಫೇರಿ ಟೇಲ್ ಥೀಮ್‌ಗೆ ಮ್ಯಾಚ್ ಆಗುತ್ತವೆ ಎಂಬುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗೆಯ ಸಾಫ್ಟ್ ಫ್ಯಾಬ್ರಿಕ್‌ನ ಗೌನ್‌ಗಳು ತೀರಾ ಪ್ಲಂಪಿಯಾಗಿರುವ ಹಾಗೂ ಕುಳ್ಳಗಿರುವ ಗರ್ಭಿಣಿಯನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತವೆ ಎನ್ನುತ್ತಾರೆ.
ಆಕರ್ಷಕವಾಗಿಸುವ ಮಲ್ಟಿ ಫ್ರಿಲ್ ಲೇಯರ್ಡ್ ಗೌನ್ಸ್
ಇನ್ನು ಮಲ್ಟಿ ಫ್ರಿಲ್‌ಗಳಿರುವ ಸಾಫ್ಟ್ ಫ್ಯಾಬ್ರಿಕ್‌ನ ಗೌನ್‌ಗಳು ಕೂಡ ಸಾಕಷ್ಟು ಫೋಟೊಶೂಟ್‌ಗಳಲ್ಲಿ ಕಾಣಬಹುದು. ಕ್ರೇಪ್, ಜಾರ್ಜೆಟ್‌ನಿಂದಿಡಿದು ಸಾಟಿನ್‌ವರೆಗಿನ ಫ್ಯಾಬ್ರಿಕ್‌ಗಳಲ್ಲಿ ಈ ಫ್ರಿಲ್ ಗೌನ್‌ಗಳನ್ನು ಕಾಣಬಹುದು. ಮಲ್ಟಿ ಲೇಯರ್ಡ್‌ನವು ಈ ಪ್ರೆಗ್ನೆನ್ಸಿ ಫೋಟೊಶೂಟ್‌ಗಳಲ್ಲಿ ಟ್ರೆಂಡಿಯಾಗಿವೆ.
ಫ್ರಾಕ್ ಶೈಲಿಯ ಗೌನ್
ನೋಡಲು ಕ್ಯಾಶುವಲ್ ಲುಕ್ ನೀಡುವ ಹಾಗೂ ದೇಹದ ಮೇಲೆ ಹಾಗೆಯೇ ಫ್ಲೋ ಆಗುವಂತಹ ಫ್ರಾಕ್ ಶೈಲಿಯ ಗೌನ್‌ಗಳು ಕೂಡ ಪ್ರೆಗ್ನೆನ್ಸಿ ಫೋಟೊಶೂಟ್‌ಗಳಲ್ಲಿ ಕಂಡು ಬರುವುದು ಹೆಚ್ಚಾಗಿದೆ. ಬಬ್ಲಿ ಸ್ವಭಾವವನ್ನು ಈ ಗೌನ್ ಬಿಂಬಿಸುತ್ತದೆ. ಜತೆಗೆ ಮುದ್ದು ಮುದ್ದಾಗಿ ಕಾಣಿಸುತ್ತದೆ. ನಾನಾ ಶೈಲಿಯಲ್ಲಿ ಇಂತಹ ಗೌನ್‌ಗಳು ಪ್ರೆಗ್ನೆನ್ಸಿ ಫೋಟೊಶೂಟ್‌ಗಳಲ್ಲಿ ಬಳಕೆಯಾಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
- ಫೋಟೊಶೂಟ್ಗಾಗಿ ಧರಿಸುವ ಗೌನ್‌ಗಳನ್ನು ಡೈಲಿ ರೂಟೀನ್ನಲ್ಲಿ ಧರಿಸಲಾಗುವುದಿಲ್ಲ ಎಂಬುದು ನೆನಪಿರಲಿ.
- ಕಂಫರ್ಟಬಲ್ ಗೌನ್ಗಳಿಗೆ ಆದ್ಯತೆ ಹೆಚ್ಚಾಗಿದೆ.
- ಇಂತಹ ಗೌನ್ಗಳಿಗೆ ಮಿನಿಮಲ್ ಆಕ್ಸೆಸರಿಸ್ ಫಾಲೋ ಮಾಡಬೇಕಾಗುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fringe Jackets Fashion: ಕಾಲೇಜು ಹುಡುಗಿಯರನ್ನು ಸವಾರಿ ಮಾಡುತ್ತಿರುವ ಫ್ರಿಂಜ್ ಕ್ರಾಪ್ ಜಾಕೆಟ್ಸ್