ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಿಂಟೆಡ್ ಹ್ಯಾಂಡ್‌ಬ್ಯಾಗ್ಸ್ (Printed Handbags Fashion) ಇದೀಗ ಉದ್ಯೋಗಸ್ಥ ಮಹಿಳೆಯರನ್ನು ಸೆಳೆದಿವೆ. ಸಾಲಿಡ್ ಶೇಡ್ಸ್ ಡಿಸೈನ್ ಹೊಂದಿದ ಹ್ಯಾಂಡ್‌ಬ್ಯಾಗ್ಸ್ ಟ್ರೆಂಡ್ ನಡುವೆ ಇದೀಗ ನಾನಾ ಬಗೆಯ ಪ್ರಿಂಟ್ಸ್ ಇರುವಂತವು ಕೂಡ ಟ್ರೆಂಡಿಯಾಗಿವೆ. ಎಲ್ಲಾ ಬಗೆಯ ಉಡುಪು ಹಾಗೂ ಸೀರೆಯೊಂದಿಗೂ ಮ್ಯಾಚ್ ಮಾಡಬಹುದಾದಂತಹ ಮಲ್ಟಿಶೇಡ್‌ನವು ಹೆಚ್ಚಾಗಿ ಮಹಿಳೆಯರನ್ನು ಆಕರ್ಷಿಸತೊಡಗಿವೆ.
ಪ್ರಿಂಟೆಡ್ ಹ್ಯಾಂಡ್‌ಬ್ಯಾಗ್ಸ್ ಜರ್ನಿ
“ಪ್ರಿಂಟೆಡ್ ಹ್ಯಾಂಡ್ ಬ್ಯಾಗ್ಸ್ ಮೊದಲಿನಿಂದಲೂ ಇದ್ದವು. ಆದರೆ, ಈ ಮೊದಲು ಅಷ್ಟಾಗಿ ಟ್ರೆಂಡಿಯಾಗಿರಲಿಲ್ಲ. ಮಹಿಳೆಯರು ಹೆಚ್ಚಾಗಿ ಸಾದಾ ಹಾಗೂ ಸಾಲಿಶ್ ಶೇಡ್‌ನವನ್ನು ಮಾತ್ರ ಬಳಸುತ್ತಿದ್ದರು. ಇನ್ನು, ದೊಡ್ಡ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರ, ಈ ಪ್ರಿಂಟೆಡ್ ಡಿಸೈನ್‌ನವು ದೊರೆಯುತ್ತಿದ್ದವು. ಆದರೆ, ಅವುಗಳ ಬೆಲೆ ದುಬಾರಿಯಾಗಿರುತ್ತಿದ್ದದ್ದರಿಂದ ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆಯಿತ್ತು. ಬರಬರುತ್ತಾ ಈ ಡಿಸೈನ್‌ನವು ಕೂಡ ಸಾಮಾನ್ಯ ಮಹಿಳೆಯರ ಕೈಗೆಟಕುವಂತಹ ದರದಲ್ಲಿ ದೊರೆಯಲಾರಂಭಿಸಿದವು. ಬ್ರಾಂಡ್‌ರಹಿತವಾಗಿಯೂ ಸಿಗಲಾರಂಭಿಸಿದವು. ಪರಿಣಾಮ, ಪ್ರಿಂಟೆಡ್ ಹ್ಯಾಂಡ್ ಬ್ಯಾಗ್‌ಗಳು ಚಾಲ್ತಿಗೆ ಬಂದವು ಎನ್ನುತ್ತಾರೆ ಇಮೇಜ್ ಸ್ಟೈಲಿಸ್ಟ್ ರೀಟಾ.
ಟ್ರೆಂಡಿಯಾಗಿರುವ ಪ್ರಿಂಟೆಡ್ ಬ್ಯಾಗ್ಸ್
ಫ್ಲೋರಲ್, ಟ್ರಾಪಿಕಲ್, ಜೆಮಿಟ್ರಿಕಲ್, ಸ್ಟ್ರೈಪ್ಸ್, ಜೀಬ್ರಾ ಪ್ರಿಂಟ್ಸ್, ವೈಲ್ಡ್ ಅನಿಮಲ್ ಪ್ರಿಂಟ್ಸ್, ರಂಗೋಲಿ ಡಿಸೈನ್ಸ್, ಮಂಡಲಾ ಆರ್ಟ್, ಅಬ್‌ಸ್ಟ್ರಾಕ್ಟ್ ಆರ್ಟ್ ಸೇರಿದಂತೆ ನಾನಾ ಪ್ರಿಂಟ್ಸ್‌ಗಳಿರುವ ಹ್ಯಾಂಡ್‌ಬ್ಯಾಗ್‌ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಚಿಕ್ಕ ಪರ್ಸ್‌ನಂತಹ ಸೈಜಿನಿಂದಿಡಿದು ಟೊಟೆ ಬ್ಯಾಗ್‌ನಂತಹ ದೊಡ್ಡ ಹ್ಯಾಂಡ್‌ಬ್ಯಾಗ್‌ಗಳ ವಿನ್ಯಾಸದಲ್ಲೂ ದೊರೆಯುತ್ತಿವೆ.
ಪ್ರಿಂಟೆಡ್ ಹ್ಯಾಂಡ್‌ಬ್ಯಾಗ್ಸ್ ರಿಪ್ಲೀಕಾ
ದೊಡ್ಡ ಬ್ರಾಂಡ್‌ಗಳ ಪ್ರಿಂಟೆಡ್ ಹ್ಯಾಂಡ್ ಬ್ಯಾಗ್‌ಗಳು ಕೊಂಚ ದುಬಾರಿ. ಇದನ್ನು, ಮನಗೊಂಡ ಲೋಕಲ್ ಹ್ಯಾಂಡ್‌ಬ್ಯಾಗ್ ತಯಾರಕರು ಅವುಗಳ ಕಾಪಿ ತರಲಾರಂಭಿಸಿದ್ದಾರೆ. ಬ್ರಾಂಡ್ ಹೆಸರು ಅಚ್ಚಾಗಾದಿದ್ದರೂ ನೋಡಲು ಥೇಟ್ ಅವುಗಳಂತೆಯೇ ಕಾಣಿಸುತ್ತವೆ. ಇವು ಕೈಗೆಟಕುವ ಬೆಲೆಯಲ್ಲಿ ದೊರೆಯಲಾರಂಭಿಸಿವೆ ಎನ್ನುತ್ತಾರೆ ಬ್ಯಾಗ್ ಮಾರಾಟಗಾರರು
ಇದನ್ನೂ ಓದಿ: New Trend: ಕೋಟ್ ರಹಿತ ಪ್ಯಾಂಟ್ ಸೂಟ್ಸ್ ಇದೀಗ ಹೊಸ ಟ್ರೆಂಡ್!
ಪ್ರಿಂಟೆಡ್ ಬ್ಯಾಗ್ ಆಯ್ಕೆ ಹೇಗೆ?
- ಟ್ರೆಂಡಿಯಾಗಿರುವ ಪ್ರಿಂಟ್ಸ್ ಇರುವಂತವನ್ನು ಸೆಲೆಕ್ಟ್ ಮಾಡಿ.
- ಬ್ಲ್ಯಾಕ್ ಹಾಗೂ ವೈಟ್ ಎಲ್ಲಾ ಔಟ್ ಫಿಟ್ಗಳಿಗೂ ಮ್ಯಾಚ್ ಮಾಡಬಹುದು.
- ಟೂ ಇನ್ ಒನ್ ಶೈಲಿಯಲ್ಲಿ ಧರಿಸಬಹುದಾದಂಥವು ಟ್ರೆಂಡ್ನಲ್ಲಿವೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )