Site icon Vistara News

Promise Day Finger Rings Fashion: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ಪ್ರಾಮಿಸ್‌ ಫಿಂಗರ್‌ ರಿಂಗ್ಸ್

Promise day finger rings fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಪ್ರಾಮಿಸ್‌ ಡೇ (ಫೆ.11) ಪ್ರಯುಕ್ತ ನಾನಾ ಬಗೆಯ ಫಿಂಗರ್‌ ರಿಂಗ್‌ಗಳು (Promise Day Finger Rings Fashion) ಆಗಮಿಸಿವೆ. ಅವುಗಳಲ್ಲಿ ಬಂಗಾರೇತರ ಬಂಗಾರದ ಹಾಗೂ ಪ್ಲಾಟಿನಂ ಶೈಲಿಯವು ಟ್ರೆಂಡಿಯಾಗಿವೆ.

ಪ್ರಿ-ಎಂಗೇಜ್‌ಮೆಂಟ್‌ ಫಿಂಗರ್‌ ರಿಂಗ್‌ಗಳಿವು

“ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬರುವ ಪ್ರಾಮಿಸ್‌ ಡೇಯಂದು ಮನಸ್ಸಿಗೆ ಇಷ್ಟವಾಗುವ ಗಿಫ್ಟ್ ಕೊಡುವ ಪ್ರೇಮಿಗಳು ಸದಾ ಅವರೊಂದಿಗೆ ಇರುವಂತಹ ವಸ್ತುವನ್ನು ನೀಡಲು ಬಯಸುತ್ತಾರೆ. ಅವುಗಳಲ್ಲಿ ಈ ಪ್ರಾಮಿಸ್‌ ಕೈ ಉಂಗುರಗಳು ಕೂಡ ಒಂದು. ಇವು ಸದಾ ಪ್ರೇಮಿಗಳ ಕೈಗಳಲ್ಲಿಯೇ ಇರುವುದರಿಂದ ಗಿಫ್ಟ್ ನೀಡಿದವರಿಗೂ ಖುಷಿಯಾಗುತ್ತದೆ. ಇವನ್ನು ಪ್ರಿ-ಎಂಗೇಜ್‌ಮೆಂಟ್‌ ಫಿಂಗರ್‌ ರಿಂಗ್‌ಗಳೆಂದು ಕರೆಬಹುದು. ಇದಕ್ಕೆ ಪೂರಕ ಎಂಬಂತೆ, ಜ್ಯುವೆಲರಿ ಶಾಪ್‌ಗಳು ಕೂಡ ನಾನಾ ಬಗೆಯ ಕೈ ಉಂಗುರಗಳನ್ನು ಬಿಡುಗಡೆಗೊಳಿಸಿವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ದಾಮಿನಿ. ಅವರ ಪ್ರಕಾರ, ಜಂಕ್‌ ಹಾಗೂ ಆರ್ಟಿಫಿಶಿಯಲ್‌ ಉಂಗುರಗಳಿಗಿಂತ ಬೆಲೆ ಬಾಳುವ ಬಂಗಾರದ ಹಾಗೂ ಪ್ಲಾಟಿನಂ ಉಂಗುರಗಳಿಗೆ ಆದ್ಯತೆ ನೀಡುವುದು ಇಂದು ಹೆಚ್ಚಾಗಿದೆ ಎನ್ನುತ್ತಾರೆ.

ಏನಿದು ಪ್ರಾಮಿಸ್‌ ಫಿಂಗರ್‌ ರಿಂಗ್ಸ್

ಯಾವುದೇ ಆಫಿಶಿಯಲ್‌ ಕಮಿಟ್‌ಮೆಂಟ್‌ಗೊಳಗಾಗದೇ ಇಷ್ಟಪಟ್ಟು ನೀಡುವ ಕೈ ಉಂಗುರಗಳಿವು. ಇವು ಎಂಗೇಜ್‌ಮೆಂಟ್‌ ರಿಂಗ್‌ಗಳಲ್ಲ! ಆದರೆ, ನೋಡಲು ಹಾಗೆಯೇ ಕಾಣಿಸುತ್ತವೆ. ಸಂಗಾತಿಯಲ್ಲಿನ ನಂಬಿಕೆಯ ಧ್ಯೋತಕ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌. ಅವರು ಹೇಳುವಂತೆ, ಮದುವೆಗೆ ಹಾಗೂ ಎಂಗೇಜ್‌ಮೆಂಟ್‌ಗೆ ಇನ್ನು ರೆಡಿಯಿಲ್ಲ, ಆದರೆ, ಮುಂದೊಮ್ಮೆ ಭವಿಷ್ಯದ ಹಾದಿಯಲ್ಲಿ ನಿನ್ನೊಂದಿಗೆ ನಡೆಯಲು ಇಚ್ಛಿಸುತ್ತೇನೆ ಎನ್ನುವ ಸಿಂಬಾಲಿಕ್‌ ಅರ್ಥವನ್ನು ಇವು ಒಳಗೊಂಡಿರುತ್ತವೆ ಎನ್ನುತ್ತಾರೆ.

ಟ್ರೆಂಡಿಯಾಗಿರುವ ಪ್ರಾಮಿಸ್‌ ಫಿಂಗರ್‌ರಿಂಗ್‌ಗಳಿವು

ಆನ್‌ಲೈನ್‌ನಲ್ಲಿ ದೊರೆಯುತ್ತಿರುವ ಸ್ಟೀಲ್‌ ಸಿಲ್ವರ್‌ ಪ್ಲೇಟೆಡ್‌, ಗೋಲ್ಡ್ ಪ್ಲೇಟೆಡ್‌, ಫ್ಯಾಷನ್‌ ಫ್ರಿಲ್‌ ಮೆಟಲ್‌ ರಿಂಗ್ಸ್, ಸಿಲ್ವರ್‌ ಕಪಲ್‌ ರಿಂಗ್ಸ್ ನಿಂದಿಡಿದು ಬಂಗಾರದ ಫ್ಯಾನ್ಸಿ ಪ್ರಾಮಿಸ್‌ ಕೈ ಉಂಗುರಗಳು, ಪ್ಲಾಟಿನಂನವು, ಅಮೆರಿಕನ್‌ ಡೈಮಂಡ್‌ನವು ಸೊಲಿಟೈರ್‌ ಡೈಮಂಡ್‌ ರಿಂಗ್‌ಗಳು ಈ ಸೀಸನ್‌ನಲ್ಲಿ ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾಗಿವೆ. ಪ್ರೇಮಿಗಳ ಸ್ಟೇಟಸ್‌ಗೆ ಅನುಗುಣವಾಗಿ ಇವು ಸಂಗಾತಿಗಳ ಕೈ ಸಿಂಗರಿಸುತ್ತಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Valentines Week Red Dress: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾಗಿವೆ ಈ 5 ರೆಡ್‌ ಡ್ರೆಸ್‌

Exit mobile version