Site icon Vistara News

Ramzan Fashion: ಇಫ್ತಾರ್‌ ಪಾರ್ಟಿ ಫ್ಯಾಷನ್‌ನಲ್ಲಿ 3 ಶೈಲಿಯ ಗ್ರ್ಯಾಂಡ್‌ ಸಲ್ವಾರ್‌ ಸೂಟ್ಸ್ ಹಂಗಾಮ!

Ramzan Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್‌ (Ramzan Fashion) ಫೆಸ್ಟೀವ್‌ ಸೀಸನ್‌ನಲ್ಲಿ ನಡೆಯುವ ಇಫ್ತಾರ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುವವರಿಗೆಂದೇ ಲೆಕ್ಕವಿಲ್ಲದಷ್ಟು ಬಗೆಯ ಗ್ರ್ಯಾಂಡ್‌ ಸಲ್ವಾರ್‌ ಸೂಟ್ಸ್ ಆಗಮಿಸಿವೆ. ನೋಡಲು ಆಕರ್ಷಕ ವಿನ್ಯಾಸದೊಂದಿಗೆ ಟ್ರೆಂಡಿ ಕಲರ್‌ನಲ್ಲಿ ಕಾಲಿಟ್ಟಿವೆ. ಅವುಗಳಲ್ಲಿ 3 ಬಗೆಯವು ಹೆಚ್ಚು ಟ್ರೆಂಡಿಯಾಗಿವೆ. ಅವು ಯಾವ್ಯುವು? ಯಾವ್ಯಾವ ವಿನ್ಯಾಸದವು ಹೆಚ್ಚು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಮಾನೋಕ್ರೋಮ್‌ ಸಿಲ್ಕ್‌ ಸಲ್ವಾರ್ ಸೂಟ್‌

ಇಡೀ ಡ್ರೆಸ್‌ ಒಂದೇ ಶೇಡ್‌ನಲ್ಲಿ ಇರುವಂತವು, ಸೆಲ್ಫ್‌ ಡಿಸೈನ್‌ನವು ಅದರಲ್ಲೂ ಗ್ರ್ಯಾಂಡ್‌ ಫ್ಯಾಬ್ರಿಕ್‌ನವು ಈ ಬಾರಿಯ ಇಫ್ತಾರ್‌ ಪಾರ್ಟಿ ಫ್ಯಾಷನ್‌ಗೆ ಸೇರಿವೆ. ಬಾಲಿವುಡ್‌ ತಾರೆಯರಿಂದಿಡಿದು ಸಾಮಾನ್ಯದವರು ಧರಿಸಬಹುದಾದ ಡಿಸೈನ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಸನ್‌ ಕಲರ್‌, ಕ್ರೀಮ್‌-ಪಿಂಕ್‌, ಪಾಸ್ಟೆಲ್‌ ಶೇಡ್ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವ ಡಿಸೈನ್‌ನಲ್ಲಿ ಇವು ಆಗಮಿಸಿವೆ.

ಗ್ರ್ಯಾಂಡ್‌ ಬಾರ್ಡರ್ ಸಲ್ವಾರ್ ಸೂಟ್

ಸಲ್ವಾರ್‌ ಸೂಟ್‌ಗಳಲ್ಲಿ ಇದೀಗ ಗ್ರ್ಯಾಂಡ್‌ ಬಾರ್ಡರ್‌ನವು ಹೆಚ್ಚು ಮಾರಾಟವಾಗುತ್ತಿವೆ. ಚಿಕ್ಕ ಕ್ರಿಸ್ಟಲ್‌ ಬಾರ್ಡರ್‌ನಿಂದಿಡಿದು, ದೊಡ್ಡ ಅಟ್ಯಾಚ್‌ ಮಾಡಿರುವಂತಹ ಬಾರ್ಡರ್‌ನ ಸಲ್ವಾರ್‌ಗಳು ಈ ಬಾರಿ ಎಲ್ಲರನ್ನೂ ಸೆಳೆದಿವೆ. ಕಟೌಟ್‌ ಬಾರ್ಡರ್‌ನಂತವು ಯುವತಿಯರನ್ನು ಆಕರ್ಷಿಸಿದರೇ, ಎಂಬ್ರಾಯ್ಡರಿ ಇರುವಂತಹ ಗೋಲ್ಡನ್‌ ಹಾಗೂ ಸಿಲ್ವರ್‌ ಬೀಡ್ಸ್‌ನ ಬಾರ್ಡರ್ ಸಲ್ವಾರ್ ಸೂಟ್‌ಗಳು ಮಾನಿನಿಯರನ್ನು ಸೆಳೆದಿವೆ. ಇವುಗಳೊಂದಿಗೆ ಬರುವ ದುಪಟ್ಟಾಗಳು ಅಷ್ಟೇ, ಸೇಮ್‌ ಟು ಸೇಮ್‌ ಡಿಸೈನ್‌ ಹೊಂದಿರುತ್ತವೆ. ಹಾಗಾಗಿ ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕಾಂಟ್ರಾಸ್ಟ್ ಶೇಡ್‌ ಸಲ್ವಾರ್‌ ಸೂಟ್‌

ಟಾಪ್‌ ಒಂದು ಕಲರ್‌ನದ್ದು, ಬಾಟಮ್‌ ಮತ್ತೊಂದು ಕಲರ್‌ ಇವುಗಳಿಗೆ ಮ್ಯಾಚ್‌ ಆಗುವ ಮಿಕ್ಸ್‌ ಮ್ಯಾಚ್‌ ಕಲರ್‌ನ ದುಪಟ್ಟಾ ಹೀಗೆ ನಾನಾ ಬಗೆಯ ಕಾಂಟ್ರಾಸ್ಟ್ ಶೇಡ್‌ನ ಸಲ್ವಾರ್‌ ಸೂಟ್‌ ಪ್ರಚಲಿತದಲ್ಲಿವೆ. ಅವುಗಳಲ್ಲಿ ಕ್ರೀಮ್‌-ಪಿಂಕ್‌, ಬ್ಲಾಕ್‌-ಸಿಲ್ವರ್‌, ಪಿಂಕ್‌-ಗ್ರೀನ್‌, ವೈಟ್‌-ಗ್ರೀನ್‌ ಕಾಂಬೀನೇಷನ್‌ ಸೇರಿದಂತೆ ನಾನಾ ಬಣ್ಣದವು ಬಂದಿವೆ.

ಇಫ್ತಾರ್‌ ಪಾರ್ಟಿ ಸಲ್ವಾರ್‌ ಆಯ್ಕೆಗೆ ಸ್ಟೈಲಿಸ್ಟ್ಸ್ ಟಿಪ್ಸ್

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version