ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್ ಹಬ್ಬಕ್ಕೆ (Ramzan Fashion) ವೈವಿಧ್ಯಮಯ ಗ್ರ್ಯಾಂಡ್ ಲುಕ್ ಟ್ರೆಂಡಿಯಾಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣುವ ಮೇಕಪ್ ಮಾತ್ರವಲ್ಲ, ಬಗೆಬಗೆಯ ಹೆವ್ವಿ ಡಿಸೈನರ್‌ವೇರ್‌ಗಳು ಹಾಗೂ ವೈವಿಧ್ಯಮಯ ಹೇರ್ ಸ್ಟೈಲಿಂಗ್ ಕೂಡ ಪ್ರಚಲಿತದಲ್ಲಿವೆ. ಧರಿಸುವ ಡಿಸೈನರ್‌ವೇರ್ ಜೊತೆ ಜೊತೆಗೆ ಮುಖದ ಮೇಕಪ್ ಹಾಗೂ ಎಥ್ನಿಕ್ ಲುಕ್‌ಗೆ ಸಾಥ್ ನೀಡುವ ಹೇರ್‌ಸ್ಟೈಲ್‌ಗಳು ಮಾನಿನಿಯರ ಹಾಗೂ ಹುಡುಗಿಯರ ಜೊತೆಯಾಗಿವೆ.
ಹೆವಿ ಡಿಸೈನ್‌ನ ಗಾಗ್ರ-ಲೆಹೆಂಗಾ-ಸಲ್ವಾರ್
ಹೆವ್ವಿ ಡಿಸೈನ್‌ನ ನಾನಾ ಬಗೆಯ ಡಿಸೈನರ್‌ವೇರ್‌ಗಳು ಈ ಫೆಸ್ಟೀವ್ ಸೀಸನ್‌ನಲ್ಲಿ ಕಾಲಿಟ್ಟಿದ್ದು, ಒಂದಕ್ಕಿಂತ ಒಂದು ಡಿಸೈನ್‌ಗಳು ಈ ರಂಜಾನ್‌ನಲ್ಲಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಅವುಗಳಲ್ಲಿ, ಸಿಲ್ವರ್-ಗೋಲ್ಡ್ ಎಂಬ್ರಾಯ್ಡರಿ ಥ್ರೆಡ್ ವಿನ್ಯಾಸ ಇರುವಂತಹ ಡಿಸೈನ್‌ನವು, ಮಿರರ್ ವರ್ಕ್ ಇರುವಂತವು, ಕುಂದನ್ ಡಿಸೈನ್‌ನವು ಮಲ್ಟಿ ಶೇಡ್‌ನ ಚಿತ್ತಾರ ಇರುವಂತಹ ಡಿಸೈನರ್‌ವೇರ್‌ಗಳು ಮಹಿಳೆಯರನ್ನು ಸೆಳೆದಿವೆ. ಜಗಮಗಿಸುವ ಡಿಸೈನ್‌ಗಳು ಹೆಚ್ಚೆಚ್ಚು ವಿನ್ಯಾಸದಲ್ಲಿ ಎಲ್ಲರನ್ನೂ ಸೆಳೆದಿವೆ.
ನೋ ಮೇಕಪ್ ಕಾನ್ಸೆಪ್ಟ್
ಈ ಫೆಸ್ಟೀವ್ ಸೀಸನ್‌ನಲ್ಲಿ ಮೇಕಪ್ ಮಾಡದಂತೆ ಕಾಣಿಸುವ ನೋ ಮೇಕಪ್ ಕಾನ್ಸೆಪ್ಟ್ ಚಾಲ್ತಿಯಲ್ಲಿದೆ. ಸಿಂಪಲ್ ಲುಕ್ ನೀಡುವ ಈ ಮೇಕಪ್ ಟ್ರೆಂಡ್ ಈ ಹಬ್ಬದ ಸೀಸನ್‌ನಲ್ಲಿ ಈಗಾಗಲೇ ಪ್ರಚಲಿತದಲ್ಲಿದೆ. ನ್ಯುಡ್ ಮೇಕಪ್ ಎನ್ನಲಾಗುವ ಇದರಲ್ಲಿ ಲೈಟಾಗಿರುವ ಬ್ಲಷರ್, ಲಿಪ್‌ಸ್ಟಿಕ್, ಗ್ಲಿಟರ್ ಇರದ ಐ ಮೇಕಪ್ ಸಿಂಪಲ್ ಲುಕ್ ನೀಡುತ್ತದೆ. ಬೇಕಿದ್ದಲ್ಲಿ ಗ್ರ್ಯಾಂಡ್ ಲುಕ್ ನೀಡುವ ಗ್ಲಿಟ್ಟರ್ ಐ ಮೇಕಪ್ ಹಬ್ಬದಂದು ಸೇರಿಸಿಕೊಳ್ಳಬಹುದು ಎನ್ನುತ್ತಾರೆ ಮೇಕಪ್ ಆಟಿಸ್ಟ್‌ಗಳು.
ಎಥ್ನಿಕ್ ಲುಕ್ಗೆ ಮೆಸ್ಸಿ ಹೇರ್‌ಸ್ಟೈಲ್
ಇದೀಗ ಲೂಸಾಗಿ ಹಾಕಬಹುದಾದ ಮೆಸ್ಸಿ ಜಡೆಗಳು ಹಬ್ಬದ ಅಲಂಕಾರದಲ್ಲಿ ಸೇರಿವೆ. ಫ್ರೆಂಚ್ ಫ್ಲಾಟ್, ಉಲ್ಟಾ ಜಡೆಗಳು, ಮಿಕ್ಸ್ ಮ್ಯಾಚ್ ಪಫ್ ಹೇರ್‌ಸ್ಟೈಲ್‌ಗಳು ಹಬ್ಬದ ಲುಕ್‌ಗೆ ಸಾಥ್ ನೀಡುತ್ತಿವೆ. ಇವುಗಳಿಗೆ ಮಿರ ಮಿರ ಮಿನುಗುವ ಜಗಮಗಿಸುವ ಕ್ಲಿಪ್‌ಗಳು, ಆಟಿಫಿಶಿಯಲ್ ಹೇರ್ ಆಕ್ಸೆಸರೀಸ್‌ಗಳು ಸಿಂಗಾರಕ್ಕೆ ಸಾಥ್ ನೀಡುತ್ತಿವೆ.
“ರಂಜಾನ್‌ನಲ್ಲಿ ಟ್ರೆಂಡಿಯಾಗುವ ಡಿಸೈನರ್‌ವೇರ್‌ಗಳು, ಆಕ್ಸೆಸರೀಸ್‌ಗಳು ಇತರೇ ಗ್ರ್ಯಾಂಡ್ ಸಮಾರಂಭಗಳಲ್ಲೂ ಧರಿಸಬಹುದು ಅಷ್ಟೇಕೆ! ಹಬ್ಬ ಆಚರಿಸದವರೂ ಕೂಡ ಈ ಕಾನ್ಸೆಪ್ಟ ಅನ್ನು ಗ್ರ್ಯಾಂಡ್ ಕಾಯಕ್ರಮಗಳಲ್ಲಿ ಬಳಸಿಕೊಳ್ಳಬಹುದು. ಆ ಮಟ್ಟಕ್ಕೆ ಈ ಸೀಸನ್‌ನ ಟ್ರೆಂಡಿ ಡಿಸೈನರ್‌ವೇರ್‌ಗಳು ಎಲ್ಲಾ ಸಮುದಾಯದ ಯುವತಿಯರಿಗೆ ಪ್ರಿಯವಾಗಿವೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಗ್ರ್ಯಾಂಡ್ ಲುಕ್ ಪ್ರಿಯರಿಗೆ ಖರೀದಿ ಮಾಡಲು ಹಾಗೂ ಕಾನ್ಸೆಪ್ಟ್ ಬಳಸಿಕೊಳ್ಳಲು ಇದು ಸಕಾಲ” ಎನ್ನುತ್ತಾರೆ.
- ರಂಜಾನ್ ಹಬ್ಬ ಟ್ರೆಂಡಿ ಡಿಸೈನರ್ವೇರ್ಗಳ ಸೀಸನ್.
- ಗ್ರ್ಯಾಂಡ್ ಹೇರ್‌ಸ್ಟೈಲ್ ಆಕ್ಸೆಸರೀಸ್ ಈ ಸೀಸನ್‌ನಲ್ಲಿ ಕೊಳ್ಳಿ.
- ಈ ಸೀಸನ್‌ನಲ್ಲಿ ಟ್ರೆಂಡಿಯಾಗುವ ಔಟ್ಫಿಟ್ಸ್ ಇತರೇ ಸಮಾರಂಭಗಳಲ್ಲೂ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Beach Fashion: ಸಮ್ಮರ್ ಬೀಚ್‌ಸೈಡ್ ಫ್ಯಾಷನ್‌ನಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಅಂಶಗಳು