Site icon Vistara News

Red Saree Fashion: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ರೆಡ್‌ ಸೀರೆ ಹಂಗಾಮ!

Red Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ರೆಡ್‌ ಡಿಸೈನರ್‌ ಸೀರೆಗಳು (Red Saree Fashion) ಲಗ್ಗೆ ಇಟ್ಟಿವೆ. ಈ ಸೀಸನ್‌ನಲ್ಲಿ ಬರುವ ಪ್ರೇಮಿಗಳ ದಿನಚಾರಣೆಯ ಸೆಲೆಬ್ರೇಷನ್‌ ಹಿನ್ನೆಲೆಯಲ್ಲಿ ಯುವತಿಯರಿಗೆ ಪ್ರಿಯವಾಗುವಂತಹ ನಾನಾ ಬಗೆಯ ಲೆಕ್ಕವಿಲ್ಲದಷ್ಟು ಶೈಲಿಯ ಡಿಸೈನರ್‌ ರೆಡ್‌ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ.

ಕೆಂಪು ಸೀರೆಗಳ ಖರೀದಿಗೆ ಸಕಾಲ

“ಈ ಸೀಸನ್‌ನಲ್ಲಿ, ಅದರಲ್ಲೂ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಸಾಕಷ್ಟು ಬಗೆಯ ರೆಡ್‌ ಸೀರೆಗಳು ಸೀರೆ ಲೋಕಕ್ಕೆ ಆಗಮಿಸುತ್ತವೆ. ಊಹೆಗೂ ಮೀರಿದ ಡಿಸೈನ್‌ನ, ಫ್ಯಾಬ್ರಿಕ್‌ನ ಡಿಸೈನರ್‌ ಸೀರೆಗಳು ಕಾಲಿಡುತ್ತವೆ. ಈ ಶೇಡ್‌ನ ಸೀರೆ ಪ್ರಿಯರು, ಇತರೇ ಸೀಸನ್‌ಗಿಂತ ಈ ಸೀಸನ್‌ನಲ್ಲಿ ಕೆಂಪು ವರ್ಣದ ಬಗೆಬಗೆಯ ನ್ಯೂ ಕಾನ್ಸೆಪ್ಟ್‌ನ ಸೀರೆಗಳನ್ನು ಕೊಳ್ಳಬಹುದು. ಆ ಮಟ್ಟಿಗೆ ವಿನೂತನ ಶೈಲಿಯ ಹಾಗೂ ಹೊಸ ಡಿಸೈನ್‌ನ ರೆಡ್‌ ಸೀರೆಗಳು ಈ ದಿನಗಳಲ್ಲಿ ದೊರಕುತ್ತವೆ. ಹಾಗಾಗಿ ಕೇವಲ ಪ್ರೇಮಿಗಳು ಮಾತ್ರವಲ್ಲ! ಸೀರೆ ಪ್ರಿಯ ಮಾನಿನಿಯರು ಖರೀದಿ ಮಾಡುವುದು ಹೆಚ್ಚಾಗಿದೆ. ಒಟ್ಟಾರೆ, ಕೆಂಪು ಶೇಡ್‌ನ ಸೀರೆಗಳನ್ನು ಖರೀದಿಸಲು ಇದು ಸಕಾಲ” ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ರೆಡ್‌ ಸೀರೆಗಳನ್ನು ವ್ಯಾಲೆಂಟೈನ್ಸ್ ಡೇಗೆ ಮಾತ್ರವಲ್ಲ, ಇತರೇ ದಿನಗಳಲ್ಲೂ ಉಡಬಹುದು ಎನ್ನುತ್ತಾರೆ.

ಟ್ರೆಂಡಿಯಾಗಿರುವ ರೆಡ್‌ ಸೀರೆಗಳು

ಜಾರ್ಜೆಟ್ ರೆಡ್‌ ಸೀರೆ, ಕ್ರೇಪ್‌ ಪ್ರಿಂಟ್ಸ್‌ನವು, ಶಿಫಾನ್‌ ಡಿಸೈನರ್‌ ಸೀರೆ, ಸ್ಟೋನ್‌, ಮಿರರ್‌ ವರ್ಕ್, ಬ್ರಾಸೋ, ಕೆಂಪು ಜರಿ ಸಿಲ್ಕ್‌, ಸಾಫ್ಟ್ ನೆಟ್‌, ಸ್ಯಾಟಿನ್‌, ಜಾರ್ಜೆಟ್‌ ಸಿಕ್ವಿನ್ಸ್ ಸೇರಿದಂತೆ ನಾನಾ ಫ್ಯಾಬ್ರಿಕ್‌ನ ರೆಡ್‌ ಸೀರೆಗಳು ಮಾರುಕಟ್ಟೆಯಲ್ಲಿ ಅನಾವರಣಗೊಂಡಿದ್ದು, ಕೊಳ್ಳುವವರ ಸಂಖ್ಯೆ ಅಧಿಕಗೊಂಡಿದೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳಾದ ರಚನಾ ಹಾಗೂ ನಮಿತಾ.

ರೆಡ್‌ ಸೀರೆ ಗಿಫ್ಟ್

ಇನ್ನು ಪ್ರೇಮಿಗಳು ಮಾತ್ರವಲ್ಲ, ಮದುವೆಯಾಗಿರುವ ಗಂಡ-ಹೆಂಡತಿ ಕೂಡ ಈ ವ್ಯಾಲೆಂಟೈನ್ಸ್ ವೀಕ್‌ ಆಚರಿಸುವುದರಿಂದ ರೆಡ್‌ ಸೀರೆಯನ್ನು ಗಿಫ್ಟ್ ಕೊಡುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಸೀರೆ ಅಂಗಡಿಯೊಂದರ ಸೇಲ್ಸ್ ಮ್ಯಾನ್‌. ಇನ್ನು ಆನ್‌ಲೈನ್‌ ಶಾಪ್‌ಗಳಲ್ಲೂ ರೆಡ್‌ ಸೀರೆಗಳ ಸಾಲು ಸಾಲು ಡಿಸೈನ್‌ಗಳು ಅನಾರವರಣಗೊಳ್ಳುತ್ತಿವೆ. ಸೀರೆ ಜೊತೆ ಇನ್ನಿತರೇ ಗಿಫ್ಟ್ ನೀಡುವ ಸುಲಭವಾದ ವಿಧಾನಗಳನ್ನುಮುಂದಿಟ್ಟಿವೆ.

ರೆಡ್‌ ಸೀರೆ ಕಮಾಲ್‌

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Kiss Proof Lipsticks: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್ಸ್ !

Exit mobile version