ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವಿನ್ಯಾಸದ ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್ಗಳು (Salwar Suit Fashion) ಈ ಬಾರಿಯ ಈದ್ ಮಿಲಾದ್ ಹಬ್ಬದ ಸೀಸನ್ನಲ್ಲಿ ಎಂಟ್ರಿ ನೀಡಿವೆ. ಹೌದು. ಈ ಫೆಸ್ಟಿವ್ ಸೀಸನ್ಗೆ ಮ್ಯಾಚ್ ಆಗುವಂತಹ ಗ್ರ್ಯಾಂಡ್ ಆ್ಯಂಕೆಲ್ ಲೆಂಥ್ನ ಹ್ಯಾಂಡ್ ಹಾಗೂ ಮೆಷಿನ್ ವರ್ಕ್ ಇರುವಂತಹ ಸಲ್ವಾರ್ ಸೂಟ್ಗಳು ಯುವತಿಯರನ್ನು ಸೆಳೆದಿದ್ದು, ಊಹೆಗೂ ಮೀರಿದ ಡಿಸೈನ್ನಲ್ಲಿ ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿವೆ.
ಆ್ಯಂಕೆಲ್ ಲೆಂಥ್ ಸಲ್ವಾರ್ ಡಿಸೈನರ್ವೇರ್
ಪಾದದಿಂದ ಮೇಲೆ ನಿಲ್ಲುವ ಪ್ಯಾಂಟ್ಗಳೇ ಈ ಸಲ್ವಾರ್ನ ವಿಶೇಷತೆ. ಬಹಳಷ್ಟು ಸಲ್ವಾರ್ನ ಪ್ಯಾಂಟ್ಗಳು ಪಾದಗಳನ್ನು ಮುಚ್ಚುತ್ತವೆ. ಇಲ್ಲವೇ ಮುಳುಗಿಸುತ್ತವೆ. ಆದರೆ, ಈ ಆ್ಯಂಕೆಲ್ ಲೆಂಥ್ನ ಸಲ್ವಾರ್ ಸೂಟ್ನಲ್ಲಿ ಪಾದದ ಮೇಲೆ ನಿಲ್ಲುತ್ತವೆ. ಇನ್ನು ಇದಕ್ಕೆ ಹೊಂದುವಂತಹ ಕುರ್ತಿ ಶೈಲಿಯ ಅಥವಾ ಅನಾರ್ಕಲಿ, ಫ್ಲೇರ್ ಅಥವಾ ಕಮೀಝ್ ಶೈಲಿಯ ಟಾಪ್ಗಳು ಮ್ಯಾಚ್ ಮಾಡಿದ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ. ನೋಡಲು ಒಂದೇ ಬಗೆಯ ವರ್ಕ್ ಕೂಡ ಹೊಂದಿರುತ್ತವೆ.
ಫೆಸ್ಟಿವ್ ಸೀಸನ್ಗೆ ಸಲ್ವಾರ್ ಸೂಟ್
ಮುಂಬರುತ್ತಿರುವ ಈದ್ ಮಿಲಾದ್ ವಿಶೇಷವಾಗಿ ನಾನಾ ಬಗೆಯ ಸಲ್ವಾರ್ ಸೂಟ್ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಅವುಗಳಲ್ಲಿ ಈ ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್ಗಳು ಉದ್ಯೋಗಸ್ಥ ಹಾಗೂ ಕಾಲೇಜು ಹುಡುಗಿಯರನ್ನು ಬರಸೆಳೆದಿವೆ. ಇದಕ್ಕೆ ಪ್ರಮುಖ ಕಾರಣ, ಓಡಾಡುವಾಗ ಕಾಲಿಗೆ ಸಿಕ್ಕಿಹಾಕಿಕೊಳ್ಳದ ಪ್ಯಾಂಟ್ ವಿನ್ಯಾಸ ಹಾಗೂ ಎಲಿಗೆಂಟ್ ಲುಕ್ ನೀಡುತ್ತಿರುವುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಬಗೆಬಗೆಯ ಆ್ಯಂಕೆಲ್ ಲೆಂಥ್ ಸಲ್ವಾರ್
ಧೋತಿ ಆ್ಯಂಕೆಲ್ ಲೆಂಥ್ ವಿನ್ಯಾಸ, ಸ್ಟ್ರೇಟ್ ಕಟ್ ಪ್ಯಾಂಟ್, ಟೈಟ್ ಪುಶ್ ಬ್ಯಾಕ್ ಆ್ಯಂಕೆಲ್ ಲೆಂಥ್ ಪ್ಯಾಂಟ್ ಸೇರಿದಂತೆ ನಾನಾ ಬಗೆಯ ಪಾದದ ಮೇಲೆ ನಿಲ್ಲುವಂತ ಪ್ಯಾಂಟ್ ಹೊಂದಿರುವ ಸಲ್ವಾರ್ ಸೂಟ್ಗಳು ಪ್ರಚಲಿತದಲ್ಲಿವೆ. ಕೆಲವು ಸಲ್ವಾರ್ಗಳಂತೂ ಆಕರ್ಷಕ ವಿನ್ಯಾಸದಲ್ಲಿ ಇಂದಿನ ಹೆಣ್ಣು ಮಕ್ಕಳಿಗೆ ಇಷ್ಟವಾಗುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್ಗಳು.
ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಧೋತಿಯಾದಲ್ಲಿ ಎಥ್ನಿಕ್ ಫುಟ್ವೇರ್ ಧರಿಸಿ.
- ಈ ಶೈಲಿಯ ಸಲ್ವಾರ್ಗಳಿಗೆ ಹಾಫ್ ಶೂ ಮ್ಯಾಚ್ ಆಗುತ್ತದೆ.
- ಕಾಲ್ಗೆಜ್ಜೆಯನ್ನು ಈ ಉಡುಪಿನೊಂದಿಗೆ ಧರಿಸಿದಲ್ಲಿ ಚೆನ್ನಾಗಿ ಕಾಣುತ್ತದೆ.
- ಸೆಮಿ ಸ್ಟಿಚ್ನವು ದೊರೆಯುತ್ತವೆ.
- ಬಾಡಿ ಮಾಸ್ ಇಂಡೆಕ್ಸ್ಗೆ ಸೂಟ್ ಆಗುವಂತವನ್ನು ಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: South India Fashion Week News: ಸೌತ್ ಇಂಡಿಯಾ ಫ್ಯಾಷನ್ ವೀಕ್ಗೆ ಡಾ. ಸಂಜಯ್ ನೀಲನ್ ಚೇರಿ ಕೊರಿಯಾಗ್ರಫಿ