-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ (Sandalwood Festive Fashion) ತಾರೆಯರು ದೀಪಾವಳಿ ಹಬ್ಬವನ್ನು ಗ್ರ್ಯಾಂಡ್ ಲುಕ್ ನೀಡುವ ಟ್ರೆಡಿಷನಲ್‌ವೇರ್ ಧರಿಸಿ ಆಚರಿಸಿದರು.
ನಟಿಯರ ಆಕರ್ಷಕ ಟ್ರೆಡಿಷನಲ್ ಸ್ಟೈಲ್ ಸ್ಟೇಟ್‌ಮೆಂಟ್
ಝರಿಯ ರೇಷ್ಮೆ ಸೀರೆ, ಡಿಸೈನರ್ ಸೀರೆ ಹಾಗೂ ಮನಮೋಹಕ ಲೆಹೆಂಗಾ, ಗಾಗ್ರ ಸೇರಿದಂತೆ ನಾನಾ ಶೈಲಿಯ ಡಿಸೈನರ್‌ವೇರ್‌ಗಳನ್ನು ಧರಿಸಿದ ತಾರೆಯರು ದೀಪಾವಳಿ ಹಬ್ಬವನ್ನು ಆಚರಿಸಿರುವುದು ಮಾತ್ರವಲ್ಲ, ಭಾರತೀಯ ಸಂಸ್ಕೃತಿಗೆ ಪೂರಕವಾಗುವಂತಹ ತಮ್ಮ ಫೆಸ್ಟೀವ್ ಸ್ಟೈಲ್‌ಸ್ಟೇಟ್‌ಮೆಂಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿ ಬಿಂಬಿಸುವ ಉಡುಪುಗಳಿಗೆ ನಾಂದಿ ಹಾಡಿದ್ದಾರೆ.
“ಹಬ್ಬದಲ್ಲಿ ತಾರೆಯರದ್ದು, ಒಬ್ಬೊಬ್ಬರದು ಒಂದೊಂದು ಬಗೆಯ ಸಾಂಪ್ರಾದಾಯಿಕ ಉಡುಗೆಗಳು. ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ. ನೋಡಲು ಅತ್ಯಾಕರ್ಷಕವಾಗಿ ಕಾಣುತ್ತಿದ್ದ ತಾರೆಯರು ಹಬ್ಬಗಳಿಗೆಂದೇ ಫೆಸ್ಟೀವ್ ಕಲೆಕ್ಷನ್ ಉಡುಪುಗಳ ಫೋಟೋಶೂಟ್ ಮಾಡಿಸಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡಿಕೊಂಡಿದ್ದಾರೆ. ಬಾಲಿವುಡ್‌ಗರನ್ನು ಮೀರಿಸುವಂತಹ ಅತ್ಯಾಕರ್ಷಕ ಡಿಸೈನರ್ಸ್ ಟ್ರೆಡಿಷನಲ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ” ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ಅಮಿತ್.
ಇದನ್ನೂ ಓದಿ | Deepawali Mens Royal Fashion | ದೀಪಾವಳಿ ಸಂಭ್ರಮಕ್ಕೆ ಎಂಟ್ರಿ ಕೊಟ್ಟ ಮೆನ್ಸ್ ರಾಯಲ್ ಡಿಸೈನರ್‌ವೇರ್ಸ್
ಸೀರೆಯಲ್ಲಿ ಸ್ಯಾಂಡಲ್‌ವುಡ್ ತಾರೆಯರು
ಇತ್ತೀಚೆಗೆ ಕಾಂತಾರಾ ಸಿನಿಮಾ ಮೂಲಕ ಮೂಗುತಿ ಸಿಂಗಾರಕ್ಕೆ ನಾಂದಿ ಹಾಡಿರುವ ನಟಿ ಸಪ್ತಮಿ ಗೌಡ ಹಬ್ಬದಂದು ಬಾರ್ಡರ್ ಸೀರೆ, ಜುಮಕಿ, ನೆಕ್ಲೇಸ್ ಧರಿಸಿ ಸಿಂಪಲ್ ಆಗಿಯೇ ಅಭಿಮಾನಿಗಳನ್ನು ಸೆಳೆದಿದ್ದಾರೆ. ಇನ್ನು ನಟಿ ಆಶಿಕಾ ರಂಗನಾಥ್ ಹಬ್ಬಕ್ಕೆ ಸೀರೆಯೇ ಚೆನ್ನ ಎಂಬಂತೆ ಪಕ್ಕಾ ಕನ್ನಡತಿ ಲುಕ್‌ನಲ್ಲಿರುವ ಫೋಟೋದಲ್ಲಿ ಮಿಂಚಿದ್ದಾರೆ. ಗ್ಲಾಮರಸ್ ರಾಗಿಣಿ ದ್ವಿವೇದಿ, ಶ್ವೇತಾ ಶ್ರೀವಾತ್ಸವ್, ನಟಿ ರಮ್ಯಾ, ನಿಶ್ವಿಕಾ ಕೂಡ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಂಜನಾ ಗರ್ಲಾನಿ ಕೂಡ ಹಳದಿ ಬಾರ್ಡರ್ ಸೀರೆಯಲ್ಲಿ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ.
ಡಿಸೈನರ್‌ವೇರ್‌ಗಳಲ್ಲಿ ನಟಿಯರು
ನಟಿ ಅಮೂಲ್ಯ ಲೆಹೆಂಗಾದಲ್ಲಿ ಮಿನುಗಿದರೆ, ಸಂಯಕ್ತಾ ಹೆಗಡೆ ಮಿಕ್ಸ್ ಮ್ಯಾಚ್ ಶೇಡ್‌ನ ಟಿಪಿಕಲ್ ಔಟ್‌ಫಿಟ್‌ನಲ್ಲಿ, ಹಿತಾ ಇಂಡೋ-ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಲಕ್ಷ್ಮೀ ಕೃಷ್ಣ ಲೆಬೆಲ್‌ನ ಸನ್ ಕಲರ್‌ನ ಕಮೀಜ್‌ನಲ್ಲಿ , ನಟಿ ಪ್ರಿಯಾಂಕಾ ಉಪೇಂದ್ರ, ರಾಧಿಕಾ ಪಂಡಿತ್ ಡಿಸೈನರ್ ಸಲ್ವಾರ್ ಸೂಟ್‌ನಲ್ಲಿ ಹಬ್ಬ ಆಚರಿಸಿದ್ದಾರೆ.
ಕಿರುತೆರೆ ನಟಿಯರ ಕಲರ್‌ಫುಲ್ ಗ್ರ್ಯಾಂಡ್ ಲುಕ್
ಇನ್ನು ಕಿರುತೆರೆ ನಟಿಯರಾದ ಮೋಕ್ಷಿತಾ ಪೈ, ಸಾರಾ, ಶುಭಾ ರಕ್ಷಾ, ರಂಜಿನಿ ರಾಘವನ್, ನಿಶಾ ಮಿಲನಾ ಸೇರಿದಂತೆ ಸಾಕಷ್ಟು ತಾರೆಯರು, ಸೀರಿಯಲ್‌ಗಳ ಹಬ್ಬದ ಆಚರಣೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಟ್ರೆಡಿಷನಲ್ ಔಟ್‌ಲುಕ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Deepawali Saree Fashion | ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬಂತು ಕಲರ್‌ಫುಲ್ ಡಿಸೈನರ್ ಸೀರೆಗಳು