Site icon Vistara News

Santhosh Lad Foundation Fashion Show: ಧಾರವಾಡದಲ್ಲಿ ಯಶಸ್ವಿಯಾದ ಸಂತೋಷ್‌ ಲಾಡ್ ಫೌಂಡೇಶನ್‌ನ ವರ್ಣ ರಂಜಿತ ಫ್ಯಾಷನ್‌ ಶೋ

Santhosh Lad Foundation Fashion Show

ಶೀಲಾ ಸಿ. ಶೆಟ್ಟಿ, ಬೆಂಗಳೂರು
ರ‍್ಯಾಂಪ್‌ ಮೇಲೆ ಪ್ರೊಫೆಷನಲ್ ಮಾಡೆಲ್‌ಗಳು (Santhosh Lad Foundation Fashion Show) ಹೆಜ್ಜೆ ಹಾಕಿ ನಡೆಯುತ್ತಿದ್ದರೇ , ಅವರು ಧರಿಸಿದ್ದ, ಸ್ಥಳೀಯ ಸಂಸ್ಕೃತಿ ಬಿಂಬಿಸುವ ಹಾಗೂ ನೆಲದ ಫ್ಯಾಬ್ರಿಕ್‌ ಸೀರೆಗಳನ್ನು ಉತ್ತೇಜಿಸುವ ವಸ್ತ್ರಗಳು, ಸೀರೆಗಳು ನೆರೆದಿದ್ದವರ ಗಮನ ಸೆಳೆಯುತ್ತಿದ್ದವು. ಅಂದಹಾಗೆ, ಇಲ್ಲಿ ಹೆಜ್ಜೆ ಹಾಕಿದವರೆಲ್ಲರೂ ಸಾಮಾನ್ಯ ಮಾಡೆಲ್‌ಗಳಲ್ಲ! ಬದಲಿಗೆ ಮಿಸ್‌ ಇಂಡಿಯಾ ಟೈಟಲ್‌ ವಿಜೇತರಾಗಿದ್ದವರು, ಸುಮಾರು 15 ಮಂದಿ ಪ್ರೊಫೆಷನಲ್‌ ಟೈಟಲ್‌ ಪಡೆದ ದಿವಾಗಳಿವರು. ತಮ್ಮ ಕಿರೀಟವನ್ನು ಮುಡಿಗೇರಿಸಿಕೊಂಡು ,ಡಿಸೈನರ್‌ಗಳ ಹಾಗೂ ಬ್ರಾಂಡ್‌ಗಳ ಸೀರೆಗಳನ್ನು ಉಟ್ಟು ಕ್ಯಾಟ್‌ ವಾಕ್‌ ಮಾಡಿದರು.

ವರ್ಣರಂಜಿತ ಫ್ಯಾಷನ್‌ ಶೋ

ಧಾರವಾಡದ ಕೆಸಿಡಿ ಕಾಲೇಜಿನ ಆವರಣದಲ್ಲಿ ಸಚಿವರಾದ ಸಂತೋಷ್‌ ಲಾಡ್ ಫೌಂಡೇಶನ್‌ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ನಡೆದ ಫ್ಯಾಷನ್‌ ಶೋ ನೇತೃತ್ವವನ್ನು ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಅವರು ವಹಿಸಿಕೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಡ್ಯಾನ್ಸ್ ಹಾಗೂ ಸ್ಕಿಟ್ಸ್‌ ಸೇರಿದಂತೆ ನಾನಾ ಕಾರ್ಯಕ್ರಮಗಳೊಂದಿಗೆ ಆರಂಭವಾದ ಈ ವರ್ಣರಂಜಿತ ಸಮಾರಂಭದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಹುಬ್ಬಳ್ಳಿ-ಧಾರವಾಡ ಎರಡೂ ನಗರಗಳಿಂದ ಆಗಮಿಸಿದ್ದ ಜನರು ಅತ್ಯುತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಉತ್ತರ ಕರ್ನಾಟಕದ ಸೀರೆಗಳ ಪ್ರದರ್ಶನ

ಫ್ಯಾಷನ್‌ ಶೋನಲ್ಲಿ, ಉತ್ತರ ಕರ್ನಾಟಕದ ಅತ್ಯಂತ ಬೇಡಿಕೆ ಇರುವ ಸೀರೆಗಳಾದ ಮೊಳಕಾಲ್ಮುರು, ಇಳ್ಕಲ್‌ ಹಾಗೂ ಧಾರವಾಡದ ಕಾಟನ್‌ ಸೀರೆಗಳನ್ನು ಉಟ್ಟ ಮಾಡೆಲ್‌ಗಳು ನೆಲದ ಸಂಸ್ಕೃತಿಗೆ ತಕ್ಕಂತೆ ಕಾಣಿಸಿಕೊಂಡರು. ವಿಮೂರ್‌ನ ಪವಿತ್ರಾ ಮುದ್ದಯ್ಯ ಹಾಗೂ ಬೆಂಗಳೂರಿನ ದೀಪಂ ಸಿಲ್ಕ್ಸ್ ಮತ್ತು ಸ್ಪಟಿಕಾ ಜ್ಯುವೆಲರ್ಸ್ ಮಾಡೆಲ್‌ಗಳ ಸೀರೆ ಹಾಗೂ ಜ್ಯುವೆಲರಿಗಳನ್ನು ಆಯೋಜನೆ ಮಾಡಿದ್ದರು.

ಮಿಸ್‌ ಇಂಡಿಯಾ ಮಾಡೆಲ್‌ಗಳ ಕ್ಯಾಟ್‌ವಾಕ್

ಮೈಸೂರು ಸಿಲಕ್‌, ಕಾಂಚೀಪುರಂ ಸೀರೆಗಳನ್ನು ಹ್ಯಾಂಡ್‌ ಎಂಬ್ರಾಯ್ಡರಿ ಮೂಲಕ ಡಿಸೈನ್‌ ಮಾಡಿರುವ ಸೀರೆಗಳನ್ನು ಉಟ್ಟ ಮಿಸ್‌ ಇಂಡಿಯಾ ಮಾಡೆಲ್‌ಗಳು ಅತ್ಯಾಕರ್ಷಕವಾಗಿ ರ್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಈ ಸೀರೆಗಳನ್ನುಫೌಂಡೇಷನ್‌ನ ಟ್ರಸ್ಟಿ ಕೀರ್ತಿ ಲಾಡ್‌ ಅವರ ಮಾರ್ಗದರ್ಶನದಲ್ಲಿ ತರಬೇತು ಪಡೆದ ಮಹಿಳೆಯರು ಡಿಸೈನ್‌ ಮಾಡಿದ್ದರು. ರ‍್ಯಾಂಪ್‌ ಮೇಲೆ ತಮ್ಮ ಈ ಡಿಸೈನ್ ಮಾಡಿದ ಸೀರೆಗಳ ಕುರಿತಂತೆ ಕೀರ್ತಿ ಮಾತನಾಡಿದರು.

ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಟಾಕ್

ಶೋ ಡೈರೆಕ್ಟರ್‌ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್‌ ಫ್ಯಾಷನ್‌ ಶೋ ಹುಬ್ಬಳ್ಳಿ-ಧಾರವಾಡ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಸ್ಥಳೀಯ ಫ್ಯಾಬ್ರಿಕ್‌ಗಳು ಹಾಗೂ ಸೀರೆಗಳು ಇಂದು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಅವನ್ನು ಮತ್ತಷ್ಟು ಉತ್ತೇಜಿಸುವ ಕೆಲಸವಾಗಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಸಚಿವರಾದ ಸಂತೋಷ್‌ ಲಾಡ್‌, ಅವರ ಪುತ್ರ ಕರಣ್‌ ಭಾಗವಹಿಸಿದ್ದರು. ಇವರೊಂದಿಗೆ ಗಾಯಕಿ ಎಂಡಿ ಪಲ್ಲವಿ, ಸಲ್ಮಾನ್‌ ಅಲಿ, ನಾಗೇಂದ್ರಪ್ರಸಾದ್‌ ಹಾಗೂ ಪ್ರಾಚಿಕಾ ತೆಹ್ಲಾನ್ ಪಾಲ್ಗೊಂಡಿದ್ದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Funky Sunglasses Fashion: ಟ್ರೆಂಡಿಯಾಯ್ತು ಕಲರ್‌ಫುಲ್‌ ಫ್ರೇಮ್‌ನ ಫಂಕಿ ಸನ್‌ಗ್ಲಾಸ್‌ ಫ್ಯಾಷನ್‌

Exit mobile version