Site icon Vistara News

Star Summer Fashion: ಸಾನ್ಯಾ ಅಯ್ಯರ್ ಬಟನ್‌ ಓಪನ್‌ ಪೋಸ್! ಇದು ಸಮ್ಮರ್ ಹಾಟ್‌ ಫ್ಯಾಷನ್‌!

Star Summer fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ ಹಾಲಿಡೇ ಲುಕ್‌ನಲ್ಲಿ (Star Summer fashion) ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌. ಹೌದು, ಕೂರ್ಗ್ ಸುತ್ತಮುತ್ತ ಹಾಲಿಡೇಯಲ್ಲಿರುವ ಸಾನ್ಯಾ, ಬೇಸಿಗೆಯ ಬಿರು ಬಿಸಿಲಿಗೆ ಅಲ್ಟ್ರಾ ಮಾಡರ್ನ್ ಫ್ಯಾಷನ್‌ಗೆ ಮೊರೆ ಹೋಗಿದ್ದಾರೆ.

ಫ್ಯಾಷೆನಬಲ್‌ ಸಾನ್ಯಾ

“ನಟಿ ಸಾನ್ಯಾ ಫ್ಯಾಷೆನಬಲ್‌ ನಟಿ. ಧಾರಾವಾಹಿಗಳ ಮೂಲಕ ನಟನೆಗೆ ಕಾಲಿಟ್ಟ ಇವರು ಬಿಗ್‌ಬಾಸ್‌ ನಂತರ ಮತ್ತಷ್ಟು ಖ್ಯಾತಿ ಗಳಿಸಿದರು. ಫ್ಯಾಷನ್‌ ವೀಕ್‌ಗಳಲ್ಲೂ ರ‍್ಯಾಂಪ್‌ ವಾಕ್‌ ಮಾಡಿ ಮಾಡೆಲಿಂಗ್‌ಗೂ ಸೈ ಎನಿಸಿಕೊಂಡರು. ಇನ್ನು ಇದೀಗ ಸಮರಜೀತ್‌ ಜೊತೆ ಸಿನಿಮಾದಲ್ಲಿ ನಾಯಕಿಯಾಗಿಯೂ ಅಭಿನಯಿಸುತ್ತಿದ್ದಾರೆ. ಆಗಾಗ ಡಾನ್ಸ್ ಕೂಡ ಮಾಡುತ್ತಾರೆ. ಸಿಕ್ಕ ಸಮಯದಲ್ಲಿ ತಮ್ಮ ಅಮ್ಮ ದೀಪಾ ಅಯ್ಯರ್‌ ಅವರೊಂದಿಗೆ ದೇವಾಲಯಗಳಿಗೆ ವಿಸಿಟ್‌ ಕೂಡ ಹಾಕುತ್ತಾರೆ. ಇನ್ನು ಟ್ರೆಕ್ಕಿಂಗ್‌ ಹಾಗೂ ಟ್ರಾವೆಲಿಂಗ್‌ ಕೂಡ ಮಾಡುತ್ತಿರುತ್ತಾರೆ. ಆಯಾ ಸಂದರ್ಭಕ್ಕೆ ತಕ್ಕಂತೆ ಹಾಗೂ ಸಮಯಕ್ಕೆ ತಕ್ಕಂತೆ ಡ್ರೆಸ್ಸಿಂಗ್‌ ಶೈಲಿ ಬದಲಿಸುತ್ತಿರುತ್ತಾರೆ. ಇದು ಅವರ ಪರ್ಫೆಕ್ಟ್ ಡ್ರೆಸ್‌ ಸೆನ್ಸ್‌ಗೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಸಾನ್ಯಾ ಸಮ್ಮರ್‌ ಹಾಲಿಡೇ ಫ್ಯಾಷನ್‌ ಸ್ಟೇಟ್‌ಮೆಂಟ್‌

ಬಟನ್‌ ಓಪನ್‌ ಮಾಡಿದ ಸನ್‌ ಕಲರ್‌ ಸಾದಾ ಶರ್ಟ್ ಜೊತೆ ಕ್ರೀಮ್‌ ಬಿಸ್ಕಟ್ ಮಿನಿ ಸಾದಾ ಸ್ಕರ್ಟ್, ಅದರೊಳಗೆ ರಾಣಿ ಪಿಂಕ್‌ ಡಿಸೈನರ್‌ ಬ್ರಾಲೆಟ್‌ ಧರಿಸಿ, ಹಾಟ್‌ ಪೋಸ್‌ ನೀಡಿದ್ದಾರೆ. ಇದರೊಂದಿಗೆ ಧರಿಸಿರುವ ಲೇಯರ್‌ ಚೈನ್‌ ಮ್ಯಾಚ್‌ ಆಗಿದೆ. ಸನ್‌ಗ್ಲಾಸ್‌ ಸಮ್ಮರ್‌ ಸೀಸನ್‌ ಲುಕ್‌ಗೆ ಸಾಥ್‌ ನೀಡಿದೆ. ಫಂಕಿ ಪ್ಲಿಫ್‌ ಫ್ಲಾಪ್‌ ಸ್ಯಾಂಡಲ್ಸ್ ಬೇಸಿಗೆಗೆ ಕೂಲ್‌ ಲುಕ್‌ ನೀಡಿದೆ. ಇವೆಲ್ಲಾ ಅಲ್ಟ್ರಾ ಮಾಡರ್ನ್ ಸಮ್ಮರ್‌ ಹಾಲಿಡೇ ಲುಕ್‌ ನೀಡಿದೆ. ನೋಡಲು ಬಾಲಿವುಡ್‌ ಸ್ಟಾರ್‌ ಸ್ಟೈಲಿಂಗ್‌ ಎಂದನಿಸುವಂತಿದೆ. ಬಾಲಿವುಡ್‌ ತಾರೆಯರನ್ನು ಮೀರಿಸುವಂತೆ ಈ ಪೋಟೋಪೋಸ್‌ಗಳು ಹಾಟ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ರಂಜಿನಿ. ಅವರ ಪ್ರಕಾರ, ಸಾನ್ಯಾ ಈ ಲುಕ್‌ ಮಾತ್ರವಲ್ಲ, ಬಹುತೇಕ ಎಲ್ಲಾ ಸ್ಟೈಲ್‌ ಸ್ಟೇಟ್ಮೆಂಟ್‌ಗಳು ಆಕರ್ಷಕವಾಗಿ ಬಿಂಬಿಸಿವೆ ಎನ್ನುತ್ತಾರೆ.

ಸಾನ್ಯಾ ಪರ್ಫೆಕ್ಟ್ ಸ್ಟೈಲಿಂಗ್‌

ನಟಿ ಸಾನ್ಯಾ ಸ್ಟೈಲಿಂಗ್‌ನಲ್ಲಿ ಸದಾ ಪರ್ಫೆಕ್ಟ್. “ನಾನು ಆಯಾ ಸಂದರ್ಭ ಹಾಗೂ ಸನ್ನಿವೇಶಗಳಿಗೆ ತಕ್ಕಂತೆ ಸ್ಟೈಲಿಂಗ್‌ ಮಾಡುತ್ತೇನೆ. ಇನ್ನು ಹಾಲಿ ಡೇ ಎಂದ ಮೇಲೇ ಕೇಳಬೇಕೇ! ಅದಕ್ಕೆ ಸೂಟ್‌ ಆಗುವಂತಹ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಓಕೆ ಹೇಳುತ್ತೇನೆ. ಸೋ, ಇದು ನನಗೆ ಮ್ಯಾಚ್‌ ಆಗುತ್ತದೆ” ಎನ್ನುತ್ತಾರೆ ಸಾನ್ಯಾ.
ಕಳೆದ ಬಾರಿ ವಿಸ್ತಾರ ನ್ಯೂಸ್‌ನೊಂದಿಗೆ ಫ್ಯಾಷನ್‌ ಸ್ಟೇಟ್‌ಮೆಂಟ್‌ ಕುರಿತಂತೆ ಸಂದರ್ಶನ ನೀಡಿದಾಗಲೂ ಸಾನ್ಯಾ ಇದನ್ನೇ ಹೇಳಿದ್ದರು. ನನಗೆ ಎಲ್ಲಾ ಬಗೆಯ ಫ್ಯಾಷನ್‌ವೇರ್‌ಗಳು ಇಷ್ಟ. ಅದರಲ್ಲೂ ಹಾಲಿಡೇ ಫ್ಯಾಷನ್ ವಿಷಯಕ್ಕೆ ಬಂದರೇ, ಸೀಸನ್‌ಗೆ ತಕ್ಕಂತೆ ಬದಲಿಸುತ್ತೇನೆ ಎಂದಿದ್ದರು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Hathphool jewel Fashion: ರಂಜಾನ್‌ ಸೀಸನ್‌ಗೆ ಲಗ್ಗೆ ಇಟ್ಟ ವೈವಿಧ್ಯಮಯ ಹಾಥ್‌ಫೂಲ್‌ ಆಭರಣ

Exit mobile version