Site icon Vistara News

Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!

Saree Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರ ವರ್ಣದ ಡಿಸೈನರ್‌ ಸೀರೆಗಳು (Saree Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಸೆಲೆಬ್ರೆಟಿ ಲುಕ್‌ ನೀಡುವ ಈ ಶೇಡ್‌ನ ಸೀರೆಗಳು, ನಾನಾ ಫ್ಯಾಬ್ರಿಕ್‌ ಹಾಗೂ ವಿನ್ಯಾಸದಲ್ಲಿ ಕಾಲಿಟ್ಟಿದ್ದು, ಪಾರ್ಟಿಪ್ರಿಯ ಮಹಿಳೆಯರನ್ನು ಆಕರ್ಷಿಸಿವೆ. “ಗೋಲ್ಡನ್‌ ಶೇಡ್‌ನ ಡಿಸೈನರ್‌ ಸೀರೆಗಳು ಎಂತಹ ಮಹಿಳೆಯರನ್ನು ಕೂಡ ಅಂದವಾಗಿ ಬಿಂಬಿಸುತ್ತವೆ. ಈ ವರ್ಣದ ಸೀರೆಗೆ ಹೆಚ್ಚು ಆಕ್ಸೆಸರೀಸ್‌ ಹಾಕುವ ಅಗತ್ಯವಿಲ್ಲ, ಸೀರೆಗಳೇ ಮಿನುಗುತ್ತವೆ. ಜಗಮಗಿಸುತ್ತವೆ. ಆ ಮಟ್ಟಿಗೆ ಈ ಗೋಲ್ಡನ್‌ ಶೇಡ್‌ನ ಮಿರಮಿರ ಮಿನುಗುವ ಸೀರೆಗಳು ಆಗಮಿಸಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ನೋಡಲು ಒಂದೇ ಶೇಡ್‌ ಆದರೂ ಇದರಲ್ಲೆ ಕೊಂಚ ಡಾರ್ಕ್, ಲೈಟ್‌ ಹಾಗೂ ಬಗೆಬಗೆಯ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್‌. ಅವರ ಪ್ರಕಾರ, ಗೋಲ್ಡನ್‌ ವರ್ಣದ ಸೀರೆಗಳು ಈ ಸೀಸನ್‌ನಲ್ಲಿ ಸಖತ್‌ ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಗೋಲ್ಡನ್‌ ವರ್ಣದ ಸೀರೆಗಳು

ಸಿಕ್ವೀನ್ಸ್ ಗೋಲ್ಡನ್‌ ಸೀರೆ, ಶಿಮ್ಮರ್‌ ಗೋಲ್ಡನ್‌ ಸೀರೆ, ಎಂಬಾಲಿಶ್ಡ್, ಎಂಬ್ರಾಯ್ಡರಿ ಇರುವಂತಹ ಗೋಲ್ಡನ್‌ ಸೀರೆ, ನೆಟ್ಟೆಡ್‌ ಗೋಲ್ಡನ್‌, ಜಾರ್ಜೆಟ್ ಗೋಲ್ಡನ್‌, ಸಾಟಿನ್‌ ಗೋಲ್ಡನ್‌ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನ ಗೋಲ್ಡನ್‌ ಸೀರೆಗಳು ಟ್ರೆಂಡಿಯಾಗಿವೆ. ಮಹಿಳೆಯರು ಕೂಡ ಅವರವರ ಅಭಿಲಾಷೆಗೆ ತಕ್ಕಂತೆ ಈ ಶೇಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ ಎನ್ನುತ್ತಾರೆ ಮಾರಾಟಗಾರರು.

ಪಾರ್ಟಿ ಪ್ರಿಯರ ಗೋಲ್ಟನ್‌ ಸೀರೆ

ಸೆಲೆಬ್ರೆಟಿಗಳು ಹಾಗೂ ಪಾರ್ಟಿ ಪ್ರಿಯರು ಅತಿ ಹೆಚ್ಚು ಗೋಲ್ಡನ್‌ ಸೀರೆಗಳನ್ನು ಇಷ್ಟಪಡುತ್ತಾರಂತೆ. ಹಾಗೆಂದು ಒಂದು ಬ್ಯೂಟಿ ಅಕಾಡೆಮಿಯ ಸಮೀಕ್ಷೆ ಕೂಡ ತಿಳಿಸಿದೆ.

ಸೆಲೆಬ್ರೆಟಿ ಲುಕ್‌ಗಾಗಿ ಗೋಲ್ಡನ್‌ ಸೀರೆ

ಇನ್ನು, ಸೆಲೆಬ್ರೆಟಿಯಂತೆ ತಾವು ಕೂಡ ಕಾಣಿಸಬೇಕು ಎಂದು ಬಯಸುವವರು ಕೂಡ ಗೋಲ್ಡನ್‌ ಸೀರೆಗಳನ್ನು ಇಷ್ಟಪಡುತ್ತಾರಂತೆ.

ಗೋಲ್ಡನ್‌ ಸೀರೆಗೆ ಕಾಂಟ್ರಾಸ್ಟ್ ಬ್ಲೌಸ್‌ ಮ್ಯಾಚ್‌

ಗೋಲ್ಡನ್‌ ಸೀರೆಗೆ ಅದೇ ರೀತಿಯ ಬ್ಲೌಸ್‌ ಹಾಕುವುದು ಇದೀಗ ತೀರಾ ಕಡಿಮೆಯಾಗಿದೆ. ಬ್ಲಾಕ್‌, ವೆಲ್ವೆಟ್‌, ಸ್ಲಿವ್‌ಲೆಸ್‌, ಹಾಲ್ಟರ್‌ ನೆಕ್‌, ಬಿಕಿನಿ ಬ್ಲೌಸ್‌, ಬ್ಯಾಕ್‌ಲೆಸ್‌ ಬ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಇದು ಗ್ಲಾಮರಸ್‌ ಲುಕ್‌ ನೀಡುವುದು ಎನ್ನುತ್ತಾರೆ ಸ್ಟೈಲಿಸ್ಟ್ ಜೀತು.

ಇದನ್ನೂ ಓದಿ: Heera Mandi Fashion: ರೀಕ್ರಿಯೆಟ್‌ ಆಗುತ್ತಿದೆ ಹೀರಾಮಂಡಿ ಲುಕ್‌!

ಗೋಲ್ಡನ್‌ ಸೀರೆ ಆಯ್ಕೆ ಹೀಗಿರಲಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version