ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡ ರ‍್ಯಾಪರ್, ಬಿಗ್ ಬಾಸ್ ಕಂಟೆಸ್ಟಂಟ್ ಇಶಾನಿ ವಿಭಿನ್ನ ಡಿಸೈನರ್ ರಫಲ್ ಸೀರೆಯಲ್ಲಿ (Saree Fashion) ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಈ ಶೈಲಿಯ ಸೀರೆ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರನ್ನು ಕೂಡ ಸೆಳೆದಿದೆ.
ಇಶಾನಿ ನೆವಿ ಬ್ಲ್ಯೂ ರಫಲ್ ಸೀರೆ ಪ್ರೇಮ
ಬಿಗ್‌ಬಾಸ್ 10ರಲ್ಲಿ ಪಾಲ್ಗೊಂಡಿದ್ದ ಇಶಾನಿ, ತಮ್ಮ ಕನ್ನಡ ರ‍್ಯಾಪರ್ ಹಾಡುಗಳ ಮೂಲಕ ನಾಡಿಗೆ ಚಿರಪರಿಚಿತರು. ಇದರೊಂದಿಗೆ ಇದೀಗ ಮತ್ತೊಂದು ಕಾಮಿಡಿ ರಿಯಾಲಿಟಿ ಶೋ ಮೂಲಕ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯನ್ನು ಡಿಫರೆಂಟಾಗಿ ಮಾತನಾಡುವ ಇವರು, ತಮ್ಮ ಕ್ರಿಯೇಟಿವ್ ಕನ್ನಡ ಹಾಡುಗಳ ಆಲ್ಬಂ ಮೂಲಕ ಆಗಾಗ್ಗೆ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇವುಗಳೆಲ್ಲದರ ಮಧ್ಯೆ ನಾನಾ ಫೋಟೋಶೂಟ್‌ಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ವಿಭಿನ್ನ ಡಿಸೈನರ್‌ವೇರ್ ನೆವಿ ಬ್ಲ್ಯೂ ಶೇಡ್‌ನ ಈ ರಫಲ್ ಸೀರೆಯಲ್ಲಿ ಮಿಂಚಿದ್ದಾರೆ. ಇಶಾನಿ ಉಟ್ಟಿರುವ ಈ ನೀಲಿ ಸೀರೆ, ರಫಲ್ ಸೀರೆಯಾಗಿದ್ದು, ಅದಕ್ಕೆ ಅವರು ಧರಿಸಿರುವ ಸ್ಟೋನ್‌ನಿಂದ ಸಿಂಗಾರಗೊಂಡಿರುವ ಡಿಸೈನರ್ ಸ್ಲಿವ್‌ಲೆಸ್ ಬ್ಲೌಸ್ ಅವರನ್ನು ಮತ್ತಷ್ಟು ಮನಮೋಹಕವಾಗಿ ಬಿಂಬಿಸಿದೆ. ಒಟ್ಟಿನಲ್ಲಿ, ಇಶಾನಿಯ ಈ ಸೀರೆಯಲ್ಲಿನ ಲುಕ್ ಸೀರೆ ಪ್ರಿಯರನ್ನು ಬರಸೆಳೆದಿದೆ ಎನ್ನಬಹುದು.
ಇಶಾನಿ ಸೀರೆ ಫ್ಯಾಷನ್ ಟಾಕ್
“ನನಗಂತೂ ಈ ರಫಲ್ ಸೀರೆ ಉಟ್ಟಾಗ ಉಲ್ಲಾಸ ಹೆಚ್ಚಾಯಿತು. ಸಾಮಾನ್ಯ ಸೀರೆಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಇನ್ನು ಈ ಸೀರೆಗೆ ನಾನು ಧರಿಸಿರುವ ಡಿಸಿಲ್ವರ್ ಜ್ಯುವೆಲರಿಗಳು ಹಾಗೂ ದಿವ್ಯಾ ನಾಗರಾಜ್‌ರ ಮೇಕಪ್ ಮತ್ತು ಹೇರ್‌ಸ್ಟೈಲ್ ಮನಮೋಹಕ ಟಚ್ ನೀಡಿವೆ. ಒಟ್ಟಾರೆ, ಈ ಸೀರೆ ಲುಕ್ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ” ಎನ್ನುವ ಇಶಾನಿಗೆ ಈ ಸೀರೆಯ ಸ್ಟೈಲಿಂಗ್ ಬಹಳ ಇಷ್ಟವಾಗಿದೆಯಂತೆ.
ಸೆಲೆಬ್ರೆಟಿ ಡಿಸೈನರ್ ಅಶ್ವಿನಿ ಡಿಸೈನರ್ ಸೀರೆ
ಇನ್ನು, ಸೆಲೆಬ್ರೆಟಿ ಡಿಸೈನರ್ ಅಶ್ವಿನಿ, ಇಶಾನಿಯ ಈ ಡಿಸೈನರ್ ಸೀರೆ ಡಿಸೈನ್ ಮಾಡಿದ್ದು, ಅವರಿಗೊಪ್ಪುವ ಸ್ಟೈಲಿಂಗ್‌ಗೆ ತಕ್ಕಂತೆ ರೂಪಿಸಿದ್ದಾರೆ. ಅಂದಹಾಗೆ, ಇದು ಸಿಂಪಲ್ ಆಗಿ ಧರಿಸುವ ರೆಡಿ ರಫಲ್ ಸೀರೆಯಾಗಿದೆ. ಉಡುವ ಅಥವಾ ಡ್ರೇಪಿಂಗ್‌ನ ತಲೆ ಬಿಸಿಯಿಲ್ಲ! ಈ ಸಿಂಪಲ್ ಸೀರೆಗೆ ಆಕರ್ಷಕವಾದ ಬ್ಲೌಸ್ ಮ್ಯಾಚ್ ಮಾಡಲಾಗಿದೆ. ಸ್ಟೋನ್‌ಗಳಿಂದ ಸಿಂಗಾರಗೊಂಡಿರುವ ಈ ಹ್ಯಾಂಡ್‌ವರ್ಕ್ ಇರುವಂತಹ ಶೋಲ್ಡರ್‌ಲೆಸ್ ಡಿಸೈನರ್ ಬ್ಲೌಸ್ ಇಂಡೋ-ವೆಸ್ಟರ್ನ್ ಲುಕ್ ನೀಡಿದೆ. “ಇಶಾನಿಗೆ ಡಿಸೈನ್ ಮಾಡಲಾದ ಈ ಡಿಸೈನರ್ ರಫಲ್ ಸೀರೆ ಯೂನಿಕ್ ಸ್ಟೈಲ್ ಲುಕ್ ನೀಡಿದ್ದು, ಅವರ ಇಂಡೋ-ವೆಸ್ಟರ್ನ್ ಲುಕ್‌ಗೆ ಸಾಥ್ ನೀಡಿದೆ” ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಅಶ್ವಿನಿ.
ರಫಲ್ ಸೀರೆಯ ಹೈಲೈಟ್ಸ್
- ಸೀಸನ್ಗೆ ತಕ್ಕಂತಿರುವ ಈ ಸೀರೆ ಆಕರ್ಷಕ ಲುಕ್ ನೀಡುತ್ತದೆ.
- ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯವಿರುವುದಿಲ್ಲ.
- ಇಂಡೋ-ವೆಸ್ಟರ್ನ್ ಲುಕ್ ನೀಡುವುದು ಗ್ಯಾರಂಟಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್ ಪೂಲ್‌ಸೈಡ್ ಹಾಟ್ ಲುಕ್!