ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಟ್ ವರ್ಕ್ ಬಾರ್ಡರ್ ಪಾರ್ಟಿವೇರ್ ಸೀರೆಗಳು (Saree Fashion) ಇದೀಗ ಮಾನಿನಿಯರ ಮನ ಗೆದ್ದಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಸೀರೆಗಳು ಪಾರ್ಟಿವೇರ್ ಡಿಸೈನರ್ ಸೀರೆಗಳ ಕೆಟಗರಿಯಲ್ಲಿಬಿಡುಗಡೆಗೊಂಡಿವೆ. “ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಡಿಸೈನ್‌ನಲ್ಲಿ ಅಥವಾ ಹೊಸ ರೂಪದಲ್ಲಿ ಪಾರ್ಟಿವೇರ್ ಸೀರೆಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಕೆಲವು ಜಗಮಗಿಸುವ ಪ್ರಿಂಟ್ಸ್‌ನಲ್ಲಿ ವಿನ್ಯಾಸಗೊಂಡಿದ್ದರೇ, ಇನ್ನು ಕೆಲವು ಡಿಸೆಂಟ್ ಲುಕ್ ನೀಡುವಂತವು, ಮತ್ತೆ ಕೆಲವು ಪ್ರಿಂಟೆಡ್ ಶೈಲಿಯವು ಚಾಲ್ತಿಗೆ ಬರುತ್ತವೆ. ಮಹಿಳೆಯರು ಕೂಡ ತಮ್ಮ ಮನೋಭಿಲಾಷೆಗೆ ತಕ್ಕಂತೆ ಸೀರೆಗಳ ಆಯ್ಕೆ ಮಾಡುತ್ತಾರೆ. ನೋಡಲು ಡಿಸೆಂಟಾಗಿಯೂ ಕಾಣಿಸಬೇಕು. ಹೆಚ್ಚು ಎದ್ದು ಕಾಣುವಂತಹ ಡಿಸೈನ್ ಇರಬಾರದು, ಆಕರ್ಷಕ ಡಿಸೈನ್ ಕೂಡ ಇರಬೇಕು ಎನ್ನುವವರು ಈ ರೀತಿಯ ಸಾದಾ ಸೀರೆ ಅದರಲ್ಲಿ ಕಟ್ ವರ್ಕ್ ಬಾರ್ಡರ್ ಇರುವಂತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆಂದೇ ನಾನಾ ಶೈಲಿಯ ಕಟ್ ವರ್ಕ್ ಬಾರ್ಡರ್ ಸೀರೆಗಳು ಹಲವು ವಿನ್ಯಾಸದಲ್ಲಿ ಬಂದಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫ ರ್ಟ್ ಜೀವಿತಾ. ಅವರ ಪ್ರಕಾರ, ಈ ಶೈಲಿಯ ಬಾರ್ಡರ್ ಸೀರೆಗಳು ಯೂನಿಕ್ ಲುಕ್ ನೀಡುತ್ತವಂತೆ.
ಏನಿದು ಕಟ್ ವರ್ಕ್ ಬಾರ್ಡರ್ ಸೀರೆ?
ಅಂಚು ಅಂದರೇ, ಬಾರ್ಡರ್ ಕಟ್ ಆಗಿರುವಂತಹ ವಿನ್ಯಾಸಗೊಂಡಿರುವಂತಹ ಶೈಲಿಯಲ್ಲಿರುತ್ತವೆ. ಇತರೇ ಬಾರ್ಡರ್‌ಗಳಂತೆ ಒಂದೇ ಲೈನ್‌ನಲ್ಲಿರುವುದಿಲ್ಲ! ಕೆಲವು ಅಟ್ಯಾಚ್ ಆದಂತೆ ಕಾಣಿಸುತ್ತವೆ. ಈ ಕಟ್ವರ್ಕ್ ಡಿಸೈನ್ ಇಡೀ ಸೀರೆಯ ಲುಕ್ಕನ್ನು ಬದಲಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಟ್ರೆಂಡಿಯಾಗಿರುವ ಕಟ್ ವರ್ಕ್ ಬಾರ್ಡರ್ ಪಾರ್ಟಿವೇರ್ ಸೀರೆ
ಇದೀಗ ಬಾರ್ಡರ್‌ನಲ್ಲಿ ಹ್ಯಾಂಡ್ ವರ್ಕ್ ಅಥವಾ ಮೆಷಿನ್ ವರ್ಕ್ ಇರುವಂತಹ ನಾನಾ ಬಗೆಯ ಎಂಬ್ರಾಯ್ಡರಿ ಡಿಸೈನ್ಸ್, ಬಗೆಬಗೆಯ ಶೇಡ್‌ನ ಅಥವಾ ಮಾನೋಕ್ರೋಮ್ ವರ್ಣದ ಸಿಕ್ವೀನ್ಸ್ ಹಾಗೂ ವೆರೈಟಿ ಎಂಬಾಲಿಶ್ಡ್ ಡಿಸೈನ್ ಇರುವಂತಹ ಕಟ್ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
ಕಟ್ ವರ್ಕ್ ಬಾರ್ಡರ್ ಸೀರೆ ಬಗ್ಗೆ ತಿಳಿದಿರಬೇಕಾದ 3 ಸಂಗತಿಗಳು
- ಜಾರ್ಜೆಟ್ ಸೀರೆಯಲ್ಲಿ ಕಟ್ ವರ್ಕ್ ಡಿಸೈನ್ಸ್ ಹೆಚ್ಚು ಹೈಲೈಟಾಗುತ್ತವೆ.
- ಸೀರೆಯ ಫ್ಯಾಬ್ರಿಕ್ ನೋಡಿ, ಖರೀದಿಸುವುದು ಉತ್ತಮ.
- ಸಾದಾ ಸೀರೆಯಲ್ಲಾದಲ್ಲಿ ಈ ಕಟ್ ವರ್ಕ್ ಡಿಸೈನ್ ಕಾಣುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್ ಐಡಿಯಾ