Site icon Vistara News

Newyork Fashion Week 2024: ನ್ಯೂಯಾರ್ಕ್ ಫ್ಯಾಷನ್‌ ವೀಕ್‌ನಲ್ಲಿ ಪ್ರೆಗ್ನೆಂಟ್‌, ತಾಯಿ ಮತ್ತು ವಿಶೇಷಚೇತನ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌!

Newyork Fashion week 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ಮೊದಲ ಪ್ರತಿಷ್ಠಿತ ನ್ಯೂಯಾರ್ಕ್ ಫ್ಯಾಷನ್‌ ವೀಕ್‌ನಲ್ಲಿ (Newyork Fashion week 2024) ಈ ಬಾರಿ ಮಗುವಿನ ತಾಯಿ, ಗರ್ಭಿಣಿ ಹಾಗೂ ಟ್ರಾನ್ಸ್ ವಿಶೇಷಚೇತನ ಮಾಡೆಲ್‌ಗಳು ರನ್‌ ವೇ ಫ್ಯಾಷನ್‌ ರ‍್ಯಾಂಪ್‌ನಲ್ಲಿ ವಾಕ್‌ ಮಾಡಿದರು. ಇದರೊಂದಿಗೆ ಖ್ಯಾತ ಫ್ಯಾಷನ್‌ ಡಿಸೈನರ್‌ಗಳು ತಂತಮ್ಮ ಡಿಸೈನರ್‌ವೇರ್‌ಗಳನ್ನು ಅನಾವರಣಗೊಳಿಸಿದರು. ಈ ಕುರಿತಂತೆ ಇಲ್ಲಿದೆ ವರದಿ.

ಬೆರಗು ಮೂಡಿಸಿದ ರ‍್ಯಾಂಪ್‌ ವಾಕ್‌

ಡಿಸೈನರ್‌ ಹಿಲ್ಲರಿ ಟೇಮೂರ್‌ ಅವರ ಸ್ವಾಗತದಿಂದ ಆರಂಭಗೊಂಡ ಫಾಲ್‌ ವಿಂಟರ್‌ 2024 ನ್ಯೂಯಾರ್ಕ್ ಫ್ಯಾಷನ್‌ ವೀಕ್‌ನಲ್ಲಿ ಡೆಡ್‌ ಸ್ಟಾಕ್‌ನಲ್ಲಿರುವ ಟೆಕ್ಸ್‌ಟೈಲ್‌ಗಳನ್ನು ಬಳಸಿ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಲಾಗಿತ್ತು. ಗ್ರಾಫಿಕ್ಸ್, ಮೌಲ್ಡೆಂಡ್‌ ಡೆನೀಮ್‌, ಫ್ಲನೆಲ್‌ ಟಾಪ್ಸ್, ಕ್ಲಾಸಿಕ್‌, ಹೈಬ್ರಿಡ್‌ ಫಾರ್ಮಲ್‌ವೇರ್‌ ಸೇರಿದಂತೆ ವಿಭಿನ್ನವಾದ ಡಿಸೈನರ್‌ವೇರ್‌ಗಳನ್ನು ಮಾಡೆಲ್‌ಗಳು ಅನಾವರಣಗೊಳಿಸಿದರು. ಅವರಲ್ಲಿ ಮಗುವನ್ನು ಎತ್ತಿಕೊಂಡು ರ‍್ಯಾಂಪ್‌ ವಾಕ್‌ ಮಾಡಿದ ತಾಯಿ, ಹೊಟ್ಟೆ ಹೊತ್ತುಕೊಂಡು ಹೆಜ್ಜೆ ಹಾಕಿದ ಪ್ರೆಗ್ನೆಂಟ್‌ ಹಾಗೂ ಟ್ರಾನ್ಸ್ ವಿಶೇಷಚೇತನ ಮಾಡೆಲ್‌ಗಳು ನೆರೆದಿದ್ದ ಪ್ರೇಕ್ಷಕರಲ್ಲಿ ಬೆರಗು ಮೂಡಿಸಿದರು. ಇದು ಫ್ಯಾಷನ್‌ ಲೋಕದಲ್ಲಿ ದಾಖಲೆ ಕೂಡ ಬರೆಯಿತು.

ನ್ಯೂಯಾರ್ಕ್ ಫ್ಯಾಷನ್‌ ವೀಕ್‌ನಲ್ಲಿ ಸೋನಂ ಕಪೂರ್‌

ನ್ಯೂಯಾರ್ಕ್ ಫ್ಯಾಷನ್‌ ವೀಕ್‌ನ ಫಾಲ್‌ ವಿಂಟರ್‌ 2024 ರಲ್ಲಿ ಡಿಸೈನರ್‌ ಟಾಮಿ ಹಿಲ್‌ಫಿಗೆರ್‌ ಅವರ ಶೋನಲ್ಲಿ ಭಾಗವಹಿಸಿದ್ದರು. ಪಿನ್‌ ಸ್ಟ್ರೈಪೆಡ್ ಶರ್ಟ್ ದೊಗಲೆಯಾದ ಓವರ್‌ಸೈಝ್‌ನ ಬ್ಲ್ಯಾಕ್‌ ಪ್ಯಾಂಟ್‌ಸೂಟ್‌ ಧರಿಸಿದ್ದ ಅವರು ಮನಮೋಹಕವಾಗಿ ಕಾಣಿಸುತ್ತಿದ್ದರು.

ಸೋನಂ ಕಪೂರ್‌ ಮಾತು

“ನ್ಯೂಯಾರ್ಕ್ ಫ್ಯಾಷನ್‌ ಶೋನಲ್ಲಿ ನನಗೆ ಭಾಗವಹಿಸಿದ್ದು ಖುಷಿ ತಂದಿದೆ. ಫ್ಯಾಷನ್‌ ಲೋಕದ ನಾನಾ ಮಜಲುಗಳನ್ನು ನೋಡುವ ಭಾಗ್ಯ ನನ್ನದಾಗಿದೆ. ಮತ್ತೊಮ್ಮೆ ಈ ರೀತಿಯ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸುವ ಇರಾದೆಯಿದೆ” ಎಂದು ಬಾಲಿವುಡ್‌ ನಟಿ ಸೋನಂ ಕಪೂರ್‌ ಹೇಳಿದ್ದಾರೆ. ಅಲ್ಲದೇ, ಟಾಮ್‌ ಅವರೊಂದಿಗಿನ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಅಪ್‌ಡೇಟ್‌ ಮಾಡಿಕೊಂಡಿದ್ದಾರೆ.

ವೇರಬಲ್‌ ನಾನ್‌ವೇರಬಲ್‌ ಡಿಸೈನರ್‌ವೇರ್ಸ್

ಎಂದಿನಂತೆ, ಈ ಫ್ಯಾಷನ್‌ ವೀಕ್‌ನಲ್ಲೂ ಕೂಡ ಅಂತರಾಷ್ಟ್ರೀಯ ಮಟ್ಟದ ಡಿಸೈನರ್‌ಗಳು , ಮಾಡೆಲ್‌ಗಳು ಪಾಲ್ಗೊಂಡಿದ್ದರು. ವೇರಬಲ್‌ ಹಾಗೂ ನಾನ್‌ ವೇರಬಲ್‌ ಉಡುಪುಗಳು ರ‍್ಯಾಂಪ್‌ನಲ್ಲಿ ಅನಾವರಣಗೊಂಡವು.
ಅಂದಹಾಗೆ, ಈ ಫ್ಯಾಷನ್‌ ವೀಕ್‌, ಫೆಬ್ರವರಿ 14ರವರೆಗೂ ಮುಂದುವರಿಯಲಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cotton Saree Blouse Mix Match: ಕಾಟನ್ ಸೀರೆಯ ವೈವಿಧ್ಯಮಯ ಸ್ಟೈಲಿಂಗ್ ಪ್ರಯೋಗ !

Exit mobile version