ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಡಿಷನಲ್ ಹೇರ್‌ಸ್ಟೈಲ್ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ವೀಕೆಂಡ್ ಔಟಿಂಗ್ ಕ್ಯಾಶುವಲ್ ಲುಕ್‌ನಲ್ಲಿ ಅದರಲ್ಲೂ ವೆಸ್ಟರ್ನ್ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ.
ಜಡೆಯ ಮೂಲರೂಪ
“ಎರಡು ಜಡೆ ಹೇರ್‌ಸ್ಟೈಲ್ ನಿನ್ನೆ ಮೊನ್ನೆಯದೇನಲ್ಲ! ಹಿಂದಿನ ಕಾಲದಿಂದಲೂ ಇದೆ. ಅದರಲ್ಲೂ ನಮ್ಮಲ್ಲಿ ಹೆಣ್ಣುಮಕ್ಕಳು ಚಿಕ್ಕವರಿದ್ದಾಗ ಎರಡು ಜಡೆ ಹಾಕುವುದು ಈಗಲೂ ಇದೆ. ಇನ್ನು ಎಣ್ಣೆ ಹಚ್ಚಿ ಎರಡು ಜಡೆ ಹಾಕಿಕೊಳ್ಳುವ ಹೆಣ್ಣುಮಕ್ಕಳು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಾಣ ಸಿಗುತ್ತಾರೆ. ಆ ಮಟ್ಟಿಗೆ ಈ ಎರಡು ಜಡೆ ತನ್ನ ಮೂಲತನವನ್ನು ಉಳಿಸಿಕೊಂಡಿದೆ. ಇದೀಗ ಇವಕ್ಕೆ ಹೇರ್‌ಸ್ಟೈಲಿಸ್ಟ್‌ಗಳು ಮತ್ತೆ ಮರು ಜೀವ ತುಂಬಿ ಒಂದಿಷ್ಟು ಹೊಸತನದಲ್ಲಿ ಪ್ರೆಸೆಂಟ್ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ರೂಪದಲ್ಲಿ ಎರಡು ಜಡೆಗಳು ಆಗಮಿಸಿವೆ. ನಾನಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಇದೀಗ 3 ಬಗೆಯವು ಹೆಚ್ಚು ಪ್ರಚಲಿದಲ್ಲಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ದಿಗಂತ್.
ಫ್ರೆಂಚ್ ಫ್ಲಾಟ್‌ನಂತಹ ಎರಡು ಜಡೆ
ತಲೆಯ ಅಂದರೆ, ಹಣೆ ಮುಂಭಾಗದಿಂದಲೇ ಎರಡು ಜಡೆ ಹೆಣೆದು, ಕೆಳಗಿನ ಭಾಗದವರೆಗೂ ಜಡೆ ಕಂಟಿನ್ಯೂ ಮಾಡುವ ಈ ಹೇರ್‌ಸೈಲ್ ಇದೀಗ ಟೀನೇಜ್ ಹುಡುಗಿಯರನ್ನು ಆವರಿಸಿಕೊಂಡಿದೆ. ಇದರಲ್ಲೆ ನಾನಾ ಪ್ರಕಾರದ ಜಡೆಗಳು ಇನ್‌ಸ್ಟಾ ಬ್ಯೂಟಿ ಬ್ಲಾಗ್‌ಗಳಿಂದ ಚಾಲ್ತಿಗೆ ಬಂದಿವೆ.
ಫಿಶ್‌ಟೈಲ್ ಜಡೆ
ಮೇಲಿನಿಂದ ಹೆಣೆದ ಜಡೆಯು ಕೊನೆಯಲ್ಲಿ ಫಿಶ್ ಟೈಲ್‌ನಂತೆ ಲುಕ್ ನೀಡಲಾಗುತ್ತದೆ. ಈ ಹೇರ್‌ಸ್ಟೈಲ್ ಕೂಡ ಸಾಕಷ್ಟು ಚಾಲ್ತಿಯಲ್ಲಿದೆ. ಮಾಡೆಲಿಂಗ್ ಶೋಗಳಲ್ಲಿ ಕೆಲಕಾಲ ಈ ಹೇರ್‌ಸ್ಟೈಲ್ ಪ್ರಚಲಿತದಲ್ಲಿತ್ತು. ಇನ್ನು ಕೆಲವು ಸೆಲೆಬ್ರೆಟಿಗಳ ಫೋಟೋ ಶೂಟ್‌ಗಳಲ್ಲೂ ಇವನ್ನು ಕಾಣಬಹುದು.
ಉಲ್ಟಾ ಜಡೆ
ಹಣೆಯ ಮುಂಭಾಗ ಇಲ್ಲವೇ ಕಿವಿಯ ಹಿಂಭಾಗದಿಂದ ಕಂಪ್ಲೀಟ್ ಉಲ್ಟಾ ಶೈಲಿಯಲ್ಲಿ ಹೆಣೆಯುವ ಈ ಉಲ್ಟಾ ಎರಡು ಜಡೆ ಕೂಡ ಫ್ಯಾಷೆನಬಲ್ ಹುಡುಗಿಯರನ್ನು ಆವರಿಸಿದೆ. ಇವು ನೋಡಲು ಡಿಫರೆಂಟ್ ಲುಕ್ ನೀಡುತ್ತವೆ. ಔಟಿಂಗ್ ಹೋದಾಗ ಹಾಕಿಕೊಂಡಲ್ಲಿ, ಕೂದಲು ಅಲ್ಲಾಡುವುದಿಲ್ಲ. ಕೆದರುವುದು ಇಲ್ಲ.
ಎರಡು ಜಡೆ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಔಟಿಂಗ್ ಹೋಗುವಾಗ ಈ ಜಡೆಗಳನ್ನು ಹೆಣೆಯುವುದು ಸೂಕ್ತ.
- ಜಡೆ ಹೆಣೆದ ಮಾರನೇ ದಿನ ಬಿಚ್ಚಿದಲ್ಲಿ ಕೂದಲು ಗುಂಗುರಾಗುತ್ತದೆ.
- ಆದಷ್ಟೂ ಸಾಫ್ಟ್ ಹೇರ್ಬ್ಯಾಂಡ್ಗಳನ್ನು ಬಳಸಿ.
- ಹೆಣ್ಣುಮಕ್ಕಳಿಗೆ ಕಲರ್ಫುಲ್ ಬ್ಯಾಂಡ್ಗಳಿಂದ ಮಲ್ಟಿ ಲೇಯರ್ ಜಡೆ ಲುಕ್ ನೀಡಬಹುದು.
- ಎಣ್ಣೆ ಹಚ್ಚಿ ಜಡೆ ಹೆಣೆಯುವುದು ನಾಟ್ ಓಕೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್ ಟೀ ಶರ್ಟ್ ಸ್ಟೈಲಿಂಗ್‌ಗೆ 3 ಐಡಿಯಾ