Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ! - Vistara News

ಫ್ಯಾಷನ್

Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!

ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ಕ್ಯಾಶುವಲ್‌ ಹಾಗೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ಯಾವ್ಯಾವ ಶೈಲಿಯವು ಟ್ರೆಂಡಿಯಾಗಿವೆ? ಹೇಗೆಲ್ಲಾ ಹೆಣೆದುಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Season Hairstyle
ಚಿತ್ರಕೃಪೆ: ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ವೀಕೆಂಡ್‌ ಔಟಿಂಗ್‌ ಕ್ಯಾಶುವಲ್‌ ಲುಕ್‌ನಲ್ಲಿ ಅದರಲ್ಲೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ.

Season Hairstyle

ಜಡೆಯ ಮೂಲರೂಪ

“ಎರಡು ಜಡೆ ಹೇರ್‌ಸ್ಟೈಲ್‌ ನಿನ್ನೆ ಮೊನ್ನೆಯದೇನಲ್ಲ! ಹಿಂದಿನ ಕಾಲದಿಂದಲೂ ಇದೆ. ಅದರಲ್ಲೂ ನಮ್ಮಲ್ಲಿ ಹೆಣ್ಣುಮಕ್ಕಳು ಚಿಕ್ಕವರಿದ್ದಾಗ ಎರಡು ಜಡೆ ಹಾಕುವುದು ಈಗಲೂ ಇದೆ. ಇನ್ನು ಎಣ್ಣೆ ಹಚ್ಚಿ ಎರಡು ಜಡೆ ಹಾಕಿಕೊಳ್ಳುವ ಹೆಣ್ಣುಮಕ್ಕಳು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಾಣ ಸಿಗುತ್ತಾರೆ. ಆ ಮಟ್ಟಿಗೆ ಈ ಎರಡು ಜಡೆ ತನ್ನ ಮೂಲತನವನ್ನು ಉಳಿಸಿಕೊಂಡಿದೆ. ಇದೀಗ ಇವಕ್ಕೆ ಹೇರ್‌ಸ್ಟೈಲಿಸ್ಟ್‌ಗಳು ಮತ್ತೆ ಮರು ಜೀವ ತುಂಬಿ ಒಂದಿಷ್ಟು ಹೊಸತನದಲ್ಲಿ ಪ್ರೆಸೆಂಟ್‌ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ರೂಪದಲ್ಲಿ ಎರಡು ಜಡೆಗಳು ಆಗಮಿಸಿವೆ. ನಾನಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಇದೀಗ 3 ಬಗೆಯವು ಹೆಚ್ಚು ಪ್ರಚಲಿದಲ್ಲಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ದಿಗಂತ್‌.

ಫ್ರೆಂಚ್‌ ಫ್ಲಾಟ್‌ನಂತಹ ಎರಡು ಜಡೆ

ತಲೆಯ ಅಂದರೆ, ಹಣೆ ಮುಂಭಾಗದಿಂದಲೇ ಎರಡು ಜಡೆ ಹೆಣೆದು, ಕೆಳಗಿನ ಭಾಗದವರೆಗೂ ಜಡೆ ಕಂಟಿನ್ಯೂ ಮಾಡುವ ಈ ಹೇರ್‌ಸೈಲ್‌ ಇದೀಗ ಟೀನೇಜ್‌ ಹುಡುಗಿಯರನ್ನು ಆವರಿಸಿಕೊಂಡಿದೆ. ಇದರಲ್ಲೆ ನಾನಾ ಪ್ರಕಾರದ ಜಡೆಗಳು ಇನ್‌ಸ್ಟಾ ಬ್ಯೂಟಿ ಬ್ಲಾಗ್‌ಗಳಿಂದ ಚಾಲ್ತಿಗೆ ಬಂದಿವೆ.

Season Hairstyle

ಫಿಶ್‌ಟೈಲ್‌ ಜಡೆ

ಮೇಲಿನಿಂದ ಹೆಣೆದ ಜಡೆಯು ಕೊನೆಯಲ್ಲಿ ಫಿಶ್‌ ಟೈಲ್‌ನಂತೆ ಲುಕ್‌ ನೀಡಲಾಗುತ್ತದೆ. ಈ ಹೇರ್‌ಸ್ಟೈಲ್‌ ಕೂಡ ಸಾಕಷ್ಟು ಚಾಲ್ತಿಯಲ್ಲಿದೆ. ಮಾಡೆಲಿಂಗ್‌ ಶೋಗಳಲ್ಲಿ ಕೆಲಕಾಲ ಈ ಹೇರ್‌ಸ್ಟೈಲ್‌ ಪ್ರಚಲಿತದಲ್ಲಿತ್ತು. ಇನ್ನು ಕೆಲವು ಸೆಲೆಬ್ರೆಟಿಗಳ ಫೋಟೋ ಶೂಟ್‌ಗಳಲ್ಲೂ ಇವನ್ನು ಕಾಣಬಹುದು.

ಉಲ್ಟಾ ಜಡೆ

ಹಣೆಯ ಮುಂಭಾಗ ಇಲ್ಲವೇ ಕಿವಿಯ ಹಿಂಭಾಗದಿಂದ ಕಂಪ್ಲೀಟ್‌ ಉಲ್ಟಾ ಶೈಲಿಯಲ್ಲಿ ಹೆಣೆಯುವ ಈ ಉಲ್ಟಾ ಎರಡು ಜಡೆ ಕೂಡ ಫ್ಯಾಷೆನಬಲ್‌ ಹುಡುಗಿಯರನ್ನು ಆವರಿಸಿದೆ. ಇವು ನೋಡಲು ಡಿಫರೆಂಟ್‌ ಲುಕ್‌ ನೀಡುತ್ತವೆ. ಔಟಿಂಗ್‌ ಹೋದಾಗ ಹಾಕಿಕೊಂಡಲ್ಲಿ, ಕೂದಲು ಅಲ್ಲಾಡುವುದಿಲ್ಲ. ಕೆದರುವುದು ಇಲ್ಲ.

Season Hairstyle

ಎರಡು ಜಡೆ ಪ್ರಿಯರಿಗೆ ಒಂದಿಷ್ಟು ಟಿಪ್ಸ್‌

 • ಔಟಿಂಗ್‌ ಹೋಗುವಾಗ ಈ ಜಡೆಗಳನ್ನು ಹೆಣೆಯುವುದು ಸೂಕ್ತ.
 • ಜಡೆ ಹೆಣೆದ ಮಾರನೇ ದಿನ ಬಿಚ್ಚಿದಲ್ಲಿ ಕೂದಲು ಗುಂಗುರಾಗುತ್ತದೆ.
 • ಆದಷ್ಟೂ ಸಾಫ್ಟ್‌ ಹೇರ್‌ಬ್ಯಾಂಡ್‌ಗಳನ್ನು ಬಳಸಿ.
 • ಹೆಣ್ಣುಮಕ್ಕಳಿಗೆ ಕಲರ್‌ಫುಲ್‌ ಬ್ಯಾಂಡ್‌ಗಳಿಂದ ಮಲ್ಟಿ ಲೇಯರ್‌ ಜಡೆ ಲುಕ್‌ ನೀಡಬಹುದು.
 • ಎಣ್ಣೆ ಹಚ್ಚಿ ಜಡೆ ಹೆಣೆಯುವುದು ನಾಟ್‌ ಓಕೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Sherwani Fashion: ಮೆನ್ಸ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಪಿನ್‌ ಟಕ್‌ ಸಿಂಪಲ್‌ ಶೆರ್ವಾನಿ!

Sherwani Fashion: ನಟ ಆದಿತ್ಯಾ ರಾಯ್‌ ಕಪೂರ್‌ ಧರಿಸಿದ್ದ ಸಾಲಿಡ್‌ ನೆವಿ ಬ್ಲ್ಯೂ ಕಲರ್‌ನ ಸಿಂಪಲ್‌ ಪಿನ್‌ ಟಕ್‌ ಶೆರ್ವಾನಿ ಇದೀಗ ಮೆನ್ಸ್ ಫ್ಯಾಷನ್‌ನಲ್ಲಿ ನುಸುಳಿದ್ದು, ಹುಡುಗರನ್ನು ಸೆಳೆದಿದೆ. ಹೆಚ್ಚು ಗ್ರ್ಯಾಂಡ್‌ ಆಗಿರದ ಈ ಶೆರ್ವಾನಿ ಇದೀಗ ಟ್ರೆಂಡ್‌ ಲಿಸ್ಟ್‌ಗೆ ಸೇರಿದೆ. ಇದ್ಯಾವ ಬಗೆಯ ಶೆರ್ವಾನಿ? ಸ್ಟೈಲಿಂಗ್‌ ಹೇಗೆ? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Sherwani Fashion
ಚಿತ್ರಗಳು : ಆದಿತ್ಯಾ ರಾಯ್‌ ಕಪೂರ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಿಂಪಲ್ಲಾಗಿರುವ ಪಿನ್‌ ಟಕ್‌ ಶೆರ್ವಾನಿ, ಇದೀಗ ಮೆನ್ಸ್ ಫ್ಯಾಷನ್‌ಗೆ ಲಗ್ಗೆ ಇಟ್ಟಿದ್ದು, ಈ ಜನರೇಷನ್‌ ಹುಡುಗರನ್ನು ಆಕರ್ಷಿಸಿದೆ. ಹೌದು, ಇತ್ತೀಚೆಗೆ ಇವೆಂಟ್‌ವೊಂದರಲ್ಲಿ ನಟ ಆದಿತ್ಯಾ ರಾಯ್‌ ಕಪೂರ್‌ ಧರಿಸಿದ್ದ, ಡಿಸೈನರ್‌ ಕುನಾಲ್‌ ರಾವಲ್‌ ಅವರು ಡಿಸೈನ್‌ ಮಾಡಿದ, ಸಾಲಿಡ್‌ ನೆವಿ ಬ್ಲ್ಯೂ ಕಲರ್‌ನ ಸಿಂಪಲ್‌ ಲುಕ್‌ ನೀಡುವ ಪಿನ್‌ ಟಕ್‌ ಶೆರ್ವಾನಿ, ಮೆನ್ಸ್ ಫ್ಯಾಷನ್‌ನಲ್ಲಿ ಸಖತ್‌ ಟ್ರೆಂಡಿಯಾಗಿದ್ದು, ಸೆಮಿ ಎಥ್ನಿಕ್‌ ಮೆನ್ಸ್ ಫ್ಯಾಷನ್‌ ಕೆಟಗರಿಗೆ ಸೇರಿದೆ.

ಏನಿದು ಪಿನ್‌ ಟಕ್‌ ಶೆರ್ವಾನಿ?

ಅತಿ ಚಿಕ್ಕದಾಗಿ ಮಾಡಿದ ಪ್ಲೀಟಿಂಗ್‌ ಅಥವಾ ಕಣ್ಣಿಗೆ ಕಾಣಿಸದಂತಹ ಮಿನಿ ಟಕ್‌ ಹಿಡಿದಂತಹ ಡಿಸೈನನ್ನು ಪಿನ್‌ ಟಕ್‌ ಎನ್ನಲಾಗುತ್ತದೆ. ಪುಟ್ಟ ಪುಟ್ಟ ಪ್ಲೀಟ್ಸ್ ಇರುವಂತಹ ಪಿನ್‌ ಟಕ್‌ ಮಾಡಿದಂತಹ ಫ್ಯಾಬ್ರಿಕ್‌ನಲ್ಲಿ ಶೆರ್ವಾನಿ ಡಿಸೈನ್‌ ಮಾಡಿದಾಗ ಅದನ್ನು ಪಿನ್‌ ಟಕ್‌ ಶೆರ್ವಾನಿ ಎಂದು ಕರೆಯಲಾಗುತ್ತದೆ. ಇದು ನೋಡಲು ಸಾದಾ ಸಿಂಪಲ್‌ ಡಿಸೈನ್‌ನಂತೆ ಬಿಂಬಿಸುತ್ತದೆ. ಹೆಚ್ಚು ಗ್ರ್ಯಾಂಡ್‌ ಆಗಿ ಕಾಣಿಸುವುದಿಲ್ಲ. ಮಿರಮಿರ ಮಿನುಗುವ ಶೆರ್ವಾನಿಗಳನ್ನು ಇಷ್ಟಪಡದ ಪುರುಷರಿಗೆ ಇಂತಹ ಡಿಸೈನ್‌ಗಳು ಸೂಕ್ತ ಎಂಬುದು ಈ ಡಿಸೈನ್‌ ಮಾಡಿರುವ ಸೆಲೆಬ್ರೆಟಿ ಡಿಸೈನರ್‌ ಕುನಾಲ್‌ ರಾವಲ್‌ ಅವರ ಅಭಿಪ್ರಾಯ.

ಪಿನ್‌ ಟಕ್‌ ಶೆರ್ವಾನಿಯಲ್ಲಿ ಆದಿತ್ಯಾ ರಾಯ್‌ ಕಪೂರ್‌ ಲುಕ್‌

ನಟ ಆದಿತ್ಯಾ ರಾಯ್‌ ಕಪೂರ್‌ ಸಿಂಪಲ್‌ ಡಿಸೈನ್‌ ಇರುವಂತಹ ನೆವಿ ಬ್ಲ್ಯೂ ಸಾಲಿಡ್‌ ಶೇಡ್‌ನ ಪಿನ್‌ ಟಕ್‌ ಶೆರ್ವಾನಿಯಲ್ಲಿ ಕಾಣಿಸಿಕೊಂಡದ್ದೇ ತಡ, ಮೆನ್ಸ್ ಫ್ಯಾಷನ್‌ನಲ್ಲಿ ಅದರಲ್ಲೂ ಸೆಮಿ ಎಥ್ನಿಕ್‌ ಅಥವಾ ಎಥ್ನಿಕ್‌ ಫ್ಯಾಷನ್‌ವೇರ್‌ ಆದ ಶೆರ್ವಾನಿ ಕೆಟಗರಿಯಲ್ಲಿ ಇದು ಟಾಪ್‌ ಲಿಸ್ಟ್‌ಗೆ ಸೇರಿತು. ಈ ಮೊದಲು ಈ ಡಿಸೈನ್‌ ಇದ್ದರೂ, ಆದಿತ್ಯಾ ಧರಿಸಿದ ನಂತರ ಇದಕ್ಕೆ ಮತ್ತಷ್ಟು ಪ್ರಮೋಷನ್‌ ದೊರಕಿದೆ ಎನ್ನುತ್ತಾರೆ ಡಿಸೈನರ್ಸ್.

ಇದನ್ನೂ ಓದಿ: Ambani Wedding Fashion: ಅಂಬಾನಿ ಫ್ಯಾಮಿಲಿಯ ಅರಿಷಿನ ಶಾಸ್ತ್ರದಲ್ಲಿ ರಂಗು ರಂಗಾದ ಸೆಲೆಬ್ರೆಟಿಗಳು!

ಪಿನ್‌ ಟಕ್‌ ಶೆರ್ವಾನಿ ಸ್ಟೈಲಿಂಗ್‌ ಹೇಗೆ?

 • ಸ್ಲಿಮ್‌ ಹುಡುಗರಿಗೆ ಇದು ಹೇಳಿ ಮಾಡಿಸಿದ ಶೆರ್ವಾನಿ ಎನ್ನಬಹುದು. ಸ್ಕಿನ್‌ ಟೋನ್‌ಗೆ ಹೊಂದುವ ಕಲರ್‌ ಆಯ್ಕೆ ಮಾಡುವುದು ಉತ್ತಮ.
 • ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯ ಇಲ್ಲ.
 • ಆದಷ್ಟೂ ಸಾದಾ ಕಲರ್‌ಗಳು ಈ ಡಿಸೈನ್‌ನಲ್ಲಿ ಆಕರ್ಷಕವಾಗಿಸುತ್ತವೆ. ಸಿಂಪಲ್‌ ಸ್ಟೈಲಿಂಗ್‌ ಸಾಕು!
 • ಫಾರ್ಮಲ್‌ ಶೂಗಳು ಶೆರ್ವಾನಿಗೆ ಮ್ಯಾಚ್‌ ಆಗುತ್ತವೆ.
 • ಇದಕ್ಕೆ ಧರಿಸುವ ಪ್ಯಾಂಟ್‌ ಕೂಡ ಫಿಟ್‌ ಆಗಿದ್ದರೇ ಉತ್ತಮ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Ambani Wedding Fashion: ಅನಂತ್ ಅಂಬಾನಿ ಮದುವೆಯ ಡ್ರೆಸ್ ಕೋಡ್ ಏನಿತ್ತು? ಗಣ್ಯರ ಉಡುಗೆ ಹೇಗಿತ್ತು?

Ambani Wedding Fashion: ಅಂಬಾನಿ ಫ್ಯಾಮಿಲಿಯ ಅನಂತ್‌-ರಾಧಿಕಾ ಮರ್ಚೆಂಟ್‌ ಪ್ರಿ- ವೆಡ್ಡಿಂಗ್‌ ಮೆಹಂದಿ ಕಾರ್ಯಕ್ರಮದಲ್ಲಿ ನಾನಾ ಶೇಡ್‌ನ ಬ್ಲ್ಯೂ, ಪರ್ಪಲ್‌ ಹಾಗೂ ಗೋಲ್ಡ್ ಎಥ್ನಿಕ್‌ ಡಿಸೈನರ್‌ವೇರ್‌ಗಳನ್ನು ಧರಿಸಿದ ಗಣ್ಯರು ಹಾಗೂ ಸೆಲೆಬ್ರೆಟಿಗಳು ಸಮಾರಂಭದ ಕಳೆ ಹೆಚ್ಚಿಸಿದರು. ಯಾರ್ಯಾರು ಹೇಗೆಲ್ಲಾ ಕಾಣಿಸಿಕೊಂಡರು ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Ambani Wedding Fashion
ಚಿತ್ರಗಳು : ಅಂಬಾನಿ ಫ್ಯಾಮಿಲಿಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಬ್ಬಬ್ಬಾ., ಒಬ್ಬೊಬ್ಬರದು ಒಂದೊಂದು ವಿನ್ಯಾಸದ ಡಿಸೈನರ್‌ವೇರ್ಸ್ (Ambani Wedding Fashion! ಟ್ರೆಡಿಷನಲ್‌ ಡಿಸೈನರ್‌ವೇರ್‌ಗಳಲ್ಲೂ ಇಷ್ಟೊಂದು ಬಗೆಯ ವೆರೈಟಿಗಳಿವೆಯೇ ಎನಿಸುವಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ಎಕ್ಸ್‌ಕ್ಲೂಸಿವ್‌ ಡಿಸೈನರ್‌ವೇರ್‌ಗಳು ಪ್ರಿ-ವೆಡ್ಡಿಂಗ್‌ನ ಮೆಹಂದಿ ಕಾರ್ಯಕ್ರಮದಲ್ಲಿ ಅನಾವರಣಗೊಂಡವು.

ಮೆಹಂದಿ ಕಾರ್ಯಕ್ರಮಕ್ಕೂ ಡ್ರೆಸ್‌ಕೋಡ್‌

ಹೌದು. ಅಂಬಾನಿ ಫ್ಯಾಮಿಲಿಯ ಪ್ರಿ- ವೆಡ್ಡಿಂಗ್‌ನ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಎಥ್ನಿಕ್‌ ಡಿಸೈನರ್‌ವೇರ್‌ಗಳು ಸಮಾರಂಭದ ಕಳೆ ಹೆಚ್ಚಿಸಿದವು. ಈ ಮೊದಲೇ ನಿಗದಿಪಡಿಸಿದಂತೆ ಬ್ಲ್ಯೂ, ಪರ್ಪಲ್‌ ಹಾಗೂ ಗೋಲ್ಡ್ ಶೇಡ್‌ನ ಡಿಸೈನರ್‌ವೇರ್‌ಗಳ ಡ್ರೆಸ್‌ಕೋಡ್‌ಗೆ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಇದಕ್ಕೆ ತಕ್ಕಂತೆ ಕಾಣಿಸಿಕೊಂಡ ಅವರ ಕುಟುಂಬದವರ ಹಾಗೂ ಸೆಲೆಬ್ರೆಟಿಗಳ ಡಿಸೈನರ್‌ವೇರ್‌ಗಳ ಸಂಕ್ಷೀಪ್ತ ವಿವರ ಇಲ್ಲಿದೆ.

Ambani Wedding Fashion

ಅಂಬಾನಿ ಫ್ಯಾಮಿಲಿಯ ಲೇಡಿ ಬಾಸ್‌ ನೀತಾ ಅಂಬಾನಿ ಲೆಹೆಂಗಾ

ಅಬು ಜಾನಿ ಸಂದೀಪ್‌ ಕೋಸ್ಲಾ ಡಿಸೈನ್‌ನ ಬ್ಲ್ಯೂ & ಗ್ರೀನ್‌ನ ಮಲ್ಟಿ ಶೇಡ್‌ನ ಥಾರದ್‌ ಲೆಹೆಂಗಾದಲ್ಲಿ ಅಂಬಾನಿ ಫ್ಯಾಮಿಲಿಯ ಲೇಡಿ ಬಾಸ್‌ ನೀತಾ ಅಂಬಾನಿ ಕಾಣಿಸಿಕೊಂಡರು. ಇದಕ್ಕೆ ಅವರು ತಮ್ಮ ಹಳೆಯ ಬಿಗ್‌ ಕುಂದನ್‌ನ ಪೋಲ್ಕಿ ಜ್ಯುವೆಲರಿ ಧರಿಸಿದ್ದು, ಎಲ್ಲರ ಮಧ್ಯೆ ಎದ್ದು ಕಾಣುವಂತೆ ಮಾಡಿತ್ತು.

Ambani Wedding Fashion

ರಾಧಿಕಾ –ಅನಂತ್‌ ಡಿಸೈನರ್‌ವೇರ್ಸ್

ರಾಧಿಕಾ –ಅನಂತ್‌ ಅಂಬಾನಿಯವರ ಡಿಸೈನರ್‌ವೇರ್‌ಗಳು, ಪ್ರತಿ ಚಿಕ್ಕ ಕಾರ್ಯಕ್ರಮಗಳಿಗೂ ಬದಲಾಗುತ್ತಲೇ ಇದ್ದವು. ಮೆಹಂದಿ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ, ಅನಂತ್‌ ಬ್ಲ್ಯೂ ಬಂದಗಾಲ ಎಥ್ನಿಕ್‌ ಸೂಟ್‌ನಲ್ಲಿ ಕಾಣಿಸಿಕೊಂಡರೇ, ಕ್ರೀಮೀಶ್‌ ಗೋಲ್ಡನ್‌ ಫ್ಲೋರಲ್‌ ಮಿಕ್ಸ್ ಬ್ಲ್ಯೂ ಗಾಗ್ರಾದಲ್ಲಿ ರಾಧಿಕಾ ಸಿಂಪಲ್‌ ಆಗಿ ಕಾಣಿಸಿಕೊಂಡರು.

Ambani Wedding Fashion

ಶ್ಲೋಕಾ ಗೋಲ್ಡ್ ಲುಕ್‌

ಶ್ಲೋಕಾ ಅಂಬಾನಿ ಗರ್ಬಾ ಕಾರ್ಯಕ್ರಮದಲ್ಲಿ ಬಹುತೇಕ ನೀತಾ ಲೆಹೆಂಗಾದಂತೆ ಸೇಮ್‌ ಎಂದೆನಿಸುವ ಅಬು ಜಾನಿ ಸಂದೀಪ್‌ ಕ್ಲೋಸಾ ಅವರ ಬ್ಲ್ಯೂ & ಗ್ರೀನ್‌ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದರು. ಮೆಹಂದಿ ಕಾರ್ಯಕ್ರಮದಲ್ಲಿ ಮಾತ್ರ ಮಸಾಬಾ ಡಿಸೈನ್‌ನ ಗೋಲ್ಡನ್‌ ಸೀರೆ ಲುಕ್‌ನಲ್ಲಿ ಹೈಲೈಟಾದರು. ಅಜ್ಜಿ ಕಾಲದ ವಿಂಟೇಜ್‌ ಜ್ಯುವೆಲರಿ ಧರಿಸಿ ಓಲ್ಡ್ ಈಸ್‌ ಗೋಲ್ಡ್ ಎಂಬುದನ್ನು ಪ್ರೂವ್‌ ಮಾಡಿದರು.

ಇದನ್ನೂ ಓದಿ: Ambani Wedding Fashion: ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ ರಾಧಿಕಾ ಮರ್ಚೆಂಟ್‌ ದುಂಡು ಮಲ್ಲಿಗೆ ದುಪಟ್ಟಾ! ಏನಿದು ಫೂಲೋಂಕಾ ಚಾದರ್‌?

ಬಾಲಿವುಡ್‌ ತಾರೆಯರ ಡಿಸೈನರ್‌ವೇರ್ಸ್

ರಣವೀರ್‌ ಸಿಂಗ್‌ ಹಾಫ್‌ ವೈಟ್‌ ಶೇಡ್‌ನ ಗೋಲ್ಡನ್‌ ಸಿಂಪಲ್‌ ಹ್ಯಾಂಡ್‌ವರ್ಕ್‌ ಸಿಂಪಲ್‌ ಕುರ್ತಾದಲ್ಲಿ, ಸಂಜಯ್‌ದತ್‌ ಸಾದಾ ಗೋಲ್ಡನ್‌ ಕುರ್ತಾದಲ್ಲಿ ಕಾಣಿಸಿಕೊಂಡರು. ಶನಾಯಾ ಕಪೂರ್‌ ಲೈಟ್‌ ಪರ್ಪಲ್‌ ಕಲರ್‌ನ ಅನಾರ್ಕಲಿಯಂತಹ ಲಾಂಗ್‌ ಸಲ್ವಾರ್‌ ಸೂಟ್‌ನಲ್ಲಿ, ಅನನ್ಯಾ ರಾಯಲ್‌ ಬ್ಲ್ಯೂ ಲೆಹೆಂಗಾದಲ್ಲಿ, ಜಾನ್ವಿ ಡಾರ್ಕ್ ಪರ್ಪಲ್‌ ಡಿಸೈನರ್‌ ಲೆಹೆಂಗಾದಲ್ಲಿ ಹೈಲೈಟಾದರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

How Does Plastic Affect Cancer: ಪ್ಲಾಸ್ಟಿಕ್‌‌‌ ಬಳಕೆಯಿಂದ ಕ್ಯಾನ್ಸರ್ ಬರದಂತೆ ತಡೆಯುವುದು ಹೇಗೆ?

How does plastic affect cancer?: ಮನುಷ್ಯನ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್‌ ಬೆರೆತು ಹೋಗಿದೆ. ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಪ್ಲಾಸ್ಟಿಕ್‌ನ ಬಳಕೆ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್‌ನ ಬಳಕೆ ಕೇವಲ ಪರಿಸರವಷ್ಟೇ ಅಲ್ಲ, ಮನುಷ್ಯನಿಗೆ ಕ್ಯಾನ್ಸರ್‌ ಬರುವ ಸಾಧ್ಯತೆಯೂ ಹೆಚ್ಚು ಎಂದು ವೈದ್ಯಕೀಯ ಲೋಕ ಹೇಳುತ್ತಿದೆ. ಪ್ಲಾಸ್ಟಿಕ್‌ ಬಳಕೆಯಿಂದ ಆರೋಗ್ಯದ ಮೇಲಾಗುವ ಅನಾನುಕೂಲದ ಬಗ್ಗೆ ವೈದ್ಯರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

How Does Plastic Affect Cancer
Koo

ಡಾ ಮಂಗೇಶ್ ಪಿ ಕಾಮತ್, ಹೆಚ್ಚುವರಿ ನಿರ್ದೇಶಕರು, ವೈದ್ಯಕೀಯ ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆ, ಬೆಂಗಳೂರು.
ಪ್ಲಾಸ್ಟಿಕ್‌ ಬಳಕೆ ಮನುಷ್ಯ ಹಾಗೂ ಪರಿಸರ ಇಬ್ಬರಿಗೂ ಮಾರಕವೆಂದು ತಿಳಿದಿದ್ದರು, ಮನುಷ್ಯನ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್‌ ಬೆರೆತು ಹೋಗಿದೆ. ಎಷ್ಟೇ ಜಾಗೃತಿ ಮೂಡಿಸುತ್ತಿದ್ದರು ಸಹ ಪ್ಲಾಸ್ಟಿಕ್‌ನ ಬಳಕೆ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್‌ನ ಬಳಕೆ ಕೇವಲ ಪರಿಸರವಷ್ಟೇ ಅಲ್ಲ, ಮನುಷ್ಯನಿಗೆ ಕ್ಯಾನ್ಸರ್‌ ಬರುವ ಸಾಧ್ಯತೆಯೂ ಹೆಚ್ಚು ಎಂದು ವೈದ್ಯಕೀಯ ಲೋಕ ಹೇಳುತ್ತಿದೆ. ಪ್ಲಾಸ್ಟಿಕ್‌ ಬಳಕೆಯಿಂದ ಆರೋಗ್ಯದ ಮೇಲಾಗುವ ಅನಾನುಕೂಲದ ಬಗ್ಗೆ ವೈದ್ಯರು (How does plastic affect cancer) ವಿವರಿಸಿದ್ದಾರೆ.

Plastic

ಪ್ಲಾಸ್ಟಿಕ್‌ನಿಂದಾಗುವ ಅಪಾಯವೇನು?

ಅನೇಕ ಪ್ಲಾಸ್ಟಿಕ್‌ಗಳು “ಬಿಸ್ಫೆನಾಲ್ ಎ” (BPA) ಮತ್ತು “ಥಾಲೇಟ್‌” ಎಂಬ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವು ಅಂತಃಸ್ತ್ರಾವ ಗ್ರಂಥಿಗಳ ಕಾರ್ಯಕ್ಷಮತೆಯ ಅಡಿಯಲ್ಲಿ ಬರುತ್ತವೆ, ಅಂದರೆ ಈ ರಾಸಾಯನಿಕವು ನಮ್ಮ ದೇಹದಲ್ಲಿ ಹಾರ್ಮೋನುಗಳೊಂದಿಗೆ ಸುಲಭವಾಗಿ ಸೇರಲಿದೆ. ಇದರಿಂದ ವಿವಿಧ ಜೈವಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಲಿದೆ. ಸಂಶೋಧನೆಯ ಪ್ರಕಾರ ಈ ರಾಸಾಯನಿಕಗಳಿಂದ ಕೆಲವು ಮಾರಕ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಇದ್ದು, ವಿಶೇಷವಾಗಿ ಸ್ತನ, ಪ್ರಾಸ್ಟೇಟ್ ಮತ್ತು ಅಂಡಾಶಯದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಮುಖ್ಯವಾಗಿ ಪುರುಷ ಹಾಗೂ ಮಹಿಳೆಯರಲ್ಲಿ ಬಂಜೆತನ ಹೆಚ್ಚಿಸುತ್ತಿದೆ.

ಪ್ಲಾಸ್ಟಿಕ್‌ ಹೇಗೆ ಮನುಷ್ಯನ ದೇಹ ಸೇರಲಿದೆ?

BPA ಮತ್ತು ಥಾಲೇಟ್‌ ರಾಸಾಯನಿಕಗಳು ಬಹುತೇಕ ಕಡಿಮೆ ಕ್ವಾಲಿಟಿ ಇರುವ ಏಕಬಳಕೆಯ ಪ್ಲಾಸ್ಟಿಕ್‌ ಕಂಟೇನರ್‌ಗಳು, ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಇರಲಿದೆ. ಇವುಗಳಲ್ಲಿ ಬಿಸಿ ಆಹಾರವನ್ನು ಪ್ಯಾಕ್‌ ಮಾಡಿಸಿಕೊಳ್ಳುವುದುರಿಂದ ಈ ರಾಸಾಯನಿಕವು ಸುಲಭವಾಗಿ ಕರಗಿ ಆಹಾರದೊಂದಿಗೆ ಬೆರೆತುಕೊಳ್ಳಲಿದೆ. ಇದನ್ನು ಸೇವಿಸುವುದರಿಂದ ಮನುಷ್ಯನ ಈಸ್ಟ್ರೊಜೆನ್‌ ಹಾರ್ಮೋನ್‌ಗಳೊಂದಿಗೆ ದೇಹದಲ್ಲಿ ನಿಯಂತ್ರಿತ ಜೀವಕೋಶದ ಬೆಳವಣಿಗೆಗೆ ಕಾರಣವಾಗಬಹುದು, ಇದು ಕ್ಯಾನ್ಸರ್‌ ಅಪಾಯವನ್ನು ಸುಲಭವಾಗಿ ಹೆಚ್ಚಿಸಲಿದೆ.

ಇದನ್ನೂ ಓದಿ: Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು

ಮುನ್ನೆಚ್ಚರಿಕೆಗಳೇನು?

ಪ್ಲಾಸ್ಲಿಕ್‌ ಬಳಕೆಯಿಂದ ಕ್ಯಾನ್ಸರ್‌ನ ಆಹ್ವಾನ ಮಾಡಿಕೊಳ್ಳುವ ಬದಲು ಅದರ ಬಳಕೆಯ ಮೇಲೆಯೇ ನಿಷೇಧ ಹೇರುವುದು ಉತ್ತಮ.

 • ಪ್ಲಾಸ್ಟಿಕ್ ಬಳಕೆಯನ್ನು ಮಿತಿಗೊಳಿಸಿ: ಆಹಾರ ಶೇಖರಣೆಗಾಗಿ ಗಾಜು, ಸ್ಟೇನ್‌ಲೆಸ್ ಸ್ಟೀಲ್ ಅಥವಾ ಸೆರಾಮಿಕ್ ಪಾತ್ರೆಗಳನ್ನು ಆರಿಸಿಕೊಳ್ಳಿ.
 • ಲೇಬಲ್‌ಗಳನ್ನು ಪರಿಶೀಲಿಸಿ: ಸಾಧ್ಯವಾದಾಗಲೆಲ್ಲಾ BPA-ಮುಕ್ತ ಮತ್ತು ಥಾಲೇಟ್-ಮುಕ್ತ ಪ್ಲಾಸ್ಟಿಕ್‌ಗಳನ್ನು ನೋಡಿ ಖರೀದಿಸಿ
 • ಬಿಸಿ ಮಾಡುವಾಗ ಎಚ್ಚರಿಕೆ: ಮೈಕ್ರೋವೇವ್‌ನಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಿಸಿ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ರಾಸಾಯನಿಕ ಸೋರಿಕೆಯನ್ನು ವೇಗಗೊಳಿಸುತ್ತದೆ.
 • ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ: ಸಂಸ್ಕರಿಸಿದ ಆಹಾರಗಳು ಹೆಚ್ಚಾಗಿ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿ ಬರುತ್ತವೆ. ಸಾಧ್ಯವಾದಾಗಲೆಲ್ಲಾ ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ತಿನ್ನಿರಿ.
Continue Reading

ಫ್ಯಾಷನ್

Ambani Wedding Fashion: ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ ರಾಧಿಕಾ ಮರ್ಚೆಂಟ್‌ ದುಂಡು ಮಲ್ಲಿಗೆ ದುಪಟ್ಟಾ! ಏನಿದು ಫೂಲೋಂಕಾ ಚಾದರ್‌?

Ambani wedding fashion: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಅರಿಷಿನ ಶಾಸ್ತ್ರದ ಕಾರ್ಯಕ್ರಮದಲ್ಲಿ ವಧು ರಾಧಿಕಾ ಮರ್ಚೆಂಟ್‌ ಧರಿಸಿದ ಡಿಸೈನರ್‌ ದುಂಡು ಮಲ್ಲಿಗೆಯ ದುಪಟ್ಟಾ, ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ಗೆ ನಾಂದಿ ಹಾಡಿದೆ. ಅಂದಹಾಗೆ, ಏನಿದು ಫೂಲೋಂಕಾ ಚಾದರ್‌! ಡಿಸೈನರ್‌ ಯಾರು? ಇಲ್ಲಿದೆ ವಿವರ.

VISTARANEWS.COM


on

Ambani Wedding Fashion
ಚಿತ್ರಗಳು: ದುಂಡು ಮಲ್ಲಿಗೆಯ ದುಪಟ್ಟಾದಲ್ಲಿ ರಾಧಿಕಾ ಮರ್ಚೆಂಟ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಅರಿಷಿನ (Ambani wedding fashion) ಶಾಸ್ತ್ರದ ಕಾರ್ಯಕ್ರಮದಲ್ಲಿ ವಧು ರಾಧಿಕಾ ಮರ್ಚೆಂಟ್‌ ಧರಿಸಿದ ದುಂಡು ಮಲ್ಲಿಗೆಯ ಡಿಸೈನರ್‌ ದುಪಟ್ಟಾ, ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ನ್ಯಾಚುರಲ್‌ ಫ್ಲೋರಲ್‌ ಡಿಸೈನರ್‌ವೇರ್ಸ್ ಟ್ರೆಂಡ್‌ಗೆ ನಾಂದಿ ಹಾಡಿದೆ. ಅಂದಹಾಗೆ, ನೀವು ಹೂವಿನ ಆಭರಣ ಧರಿಸಿರುತ್ತೀರಾ? ಯಾವತ್ತಾದರೂ ಹೂಗಳ ದುಪಟ್ಟಾವನ್ನು ಹೊದ್ದುಕೊಂಡಿದ್ದೀರಾ! ಖಂಡಿತಾ ಇರಲಿಕ್ಕಿಲ್ಲ! ಅಲ್ಲವೇ! ಯಾಕೆಂದರೇ ಇದುವರೆಗೂ ಯಾವುದೇ ವೆಡ್ಡಿಂಗ್‌ ಫ್ಯಾಷನ್‌ನ ಅರಿಷಿಣ ಶಾಸ್ತ್ರದಲ್ಲಿ ಈ ಕಾನ್ಸೆಪ್ಟ್ ಬಂದಿರಲಿಲ್ಲ. ಇದುವರೆಗೂ ನಾನಾ ಬಗೆಯ ಹೂವುಗಳಿಂದ ಸಿದ್ಧಪಡಿಸಿದ ನೈಜ ಆಭರಣಗಳನ್ನು ನೋಡಿರಬಹುದು. ಹೆಚ್ಚೆಂದರೆ, ಡ್ರೆಸ್‌ ಮೇಲೆ ಹೂವುಗಳನ್ನು ಸಿಕ್ಕಿಸಿ, ಡಿಸೈನ್‌ ಮಾಡಿರುವುದನ್ನು ಕಂಡಿರಬಹುದು. ಆದರೆ, ಮದುಮಗಳ ಕಾಸ್ಟ್ಯೂಮ್‌ಗೆ ಹೊಂದುವಂತೆ, ದುಂಡು ಮಲ್ಲಿಗೆಯ ದುಪಟ್ಟಾ ಧರಿಸಿರುವುದನ್ನು ಮೊದಲ ಬಾರಿ ನೋಡಿರುತ್ತೀರಿ! ಹೌದು, ಇದೇ ರಾಧಿಕಾ ಮರ್ಚೆಂಟ್‌ ಧರಿಸಿದ ಎಕ್ಸ್‌ಲ್ಯೂಸಿವ್‌ ನ್ಯಾಚುರಲ್‌ ಫ್ಲೋರಲ್‌ ಡಿಸೈನ್‌ನ ದುಪಟ್ಟಾ. ಈ ದುಪಟ್ಟಾ ಫ್ಯಾಷನ್‌, ರಾತ್ರಿ ಬೆಳಗಾಗುವುದರೊಳಗೆ ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ಡಿಸೈನರ್‌ವೇರ್‌ಗಳ ಲಿಸ್ಟ್‌ನಲ್ಲಿ ಸೇರಿಕೊಂಡಿದೆ. ಟ್ರೆಂಡ್‌ಗೆ ನಾಂದಿಯಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಏನಿದು ದುಂಡು ಮಲ್ಲಿಗೆ ದುಪಟ್ಟಾ?

ಘಮಘಮ ಎನ್ನುವ ದುಂಡು ಮಲ್ಲಿಗೆಗಳನ್ನು ಜೋಡಿಸಿ, ಅತಿ ಸೂಕ್ಷ್ಮವಾಗಿ ಹೆಣೆದು, ದುಪಟ್ಟಾ ರೂಪ ನೀಡಲಾಗಿದೆ. ಎಲ್ಲಿಯೂ ದಾರಗಳು ಕಾಣದಂತೆ ಹೂಗಳ ತೊಟ್ಟಿನಿಂದಲೇ ಸೇರಿಸಿ, ಫಿನಿಶಿಂಗ್‌ ಟಚ್‌ ನೀಡಲಾಗಿದೆ.

ಅನಾಮಿಕಾ ಖನ್ನಾರ ಫೂಲೋಂಕಿ ಚಾದರ್‌

ಸೆಲೆಬ್ರೆಟಿ ಡಿಸೈನರ್‌ ಅನಾಮಿಕಾ ಖನ್ನಾ, ಈ ಹೊಸ ಪ್ರಯೋಗ ಮಾಡಿದ್ದು, ಹೂವಿನ ಆಭರಣಗಳೊಂದಿಗೆ ಫೂಲೋಂಕಿ ಚಾದರ್‌ ಹೆಸರಿನ ದುಂಡು ಮಲ್ಲಿಗೆ ಹೂಗಳ ಮಾರುದ್ದದ ದುಪಟ್ಟಾವನ್ನು ವಿನ್ಯಾಸಗೊಳಿಸಿದ್ದಾರೆ. ರಾಧಿಕಾ ಮರ್ಚೆಂಟ್‌ರ ಹಳದಿ ಲೆಹೆಂಗಾಗೆ ಇಳೆ ಬಿದ್ದಿರುವಂತೆ ಬಿಂಬಿಸುವ ದುಂಡು ಮಲ್ಲಿಗೆಗೆ ಪಾರದರ್ಶಕ ಲುಕ್‌ ನೀಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಅರಿಷಿನ ಶಾಸ್ತ್ರದ ಫ್ಯಾಷನ್‌ನಲ್ಲಿ ಹೂವುಗಳು ಕೇವಲ ಆಭರಣಗಳನ್ನು ಸಿದ್ಧಪಡಿಸಲು ಮಾತ್ರ ಸೀಮಿತವಲ್ಲ! ಇದರಿಂದ ಡಿಸೈನರ್‌ವೇರ್‌ಗಳನ್ನು ರೂಪಿಸಬಹುದು ಎಂಬುದನ್ನು ಪ್ರೂವ್‌ ಮಾಡಿದ್ದಾರೆ. ಒಟ್ಟಿನಲ್ಲಿ, ಮುಂಬರುವ ರಾಯಲ್‌ ಮದುವೆಗಳಲ್ಲಿ ನೈಜ ಹೂಗಳ ನಾನಾ ಬಗೆಯ ಡಿಸೈನರ್‌ವೇರ್‌ಗಳನ್ನು ಕಾಣುವ ದಿನಗಳು ದೂರವಿಲ್ಲ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Ambani Wedding Fashion: ಅಂಬಾನಿ ಫ್ಯಾಮಿಲಿಯ ಅರಿಷಿನ ಶಾಸ್ತ್ರದಲ್ಲಿ ರಂಗು ರಂಗಾದ ಸೆಲೆಬ್ರೆಟಿಗಳು!

Continue Reading
Advertisement
Bear Attack
ವಿಜಯನಗರ19 mins ago

Bear Attack : ವಿಜಯನಗರದ ಪಾರ್ಕ್‌, ಸ್ಟೇಡಿಯಂ‌ನಲ್ಲಿ ಸುತ್ತಾಡಿದ ಕರಡಿ; ದಿಕ್ಕಾಪಾಲಾಗಿ ಓಡಿದ ಜನರು

ED Raid
ಕರ್ನಾಟಕ25 mins ago

ED Raid: ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ; ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ

Emergency
ದೇಶ30 mins ago

Emergency: ತುರ್ತು ಪರಿಸ್ಥಿತಿ ಕರಾಳ ನೆನಪು; ಜೂನ್‌ 25ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಕೇಂದ್ರ

Shiva Rajkumar karataka damanaka In ott
ಸ್ಯಾಂಡಲ್ ವುಡ್34 mins ago

Shiva Rajkumar: ಶಿವಣ್ಣನ ಬರ್ತ್‌ಡೇ ದಿನ, ಬರೋಬ್ಬರಿ 4 ತಿಂಗಳ ಬಳಿಕ ಒಟಿಟಿಗೆ ʻಕರಟಕ ದಮನಕʼ ಎಂಟ್ರಿ!

Champions Trophy 2025
ಕ್ರೀಡೆ36 mins ago

Champions Trophy 2025: ಚಾಂಪಿಯನ್ಸ್‌ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?

BS Yediyurappa
ಕರ್ನಾಟಕ51 mins ago

BS Yediyurappa: ಪೋಕ್ಸೊ ಕೇಸ್‌ನಲ್ಲಿ ಖುದ್ದು ಹಾಜರಿಯಿಂದ ಬಿಎಸ್‌ವೈಗೆ ವಿನಾಯ್ತಿ; ಕೇಸ್‌ ರದ್ದು ಕೋರಿದ್ದ ಅರ್ಜಿ ವಿಚಾರಣೆ ಜು.26ಕ್ಕೆ

Earthquake
ದೇಶ58 mins ago

Earthquake: ಜಮ್ಮು-ಕಾಶ್ಮೀರದಲ್ಲಿ 4.1 ತೀವ್ರತೆಯ ಭೂಕಂಪ; ಮನೆಯಿಂದ ಓಡಿಬಂದ ಜನ

ಬೆಂಗಳೂರು1 hour ago

KEA : ಜು.13,14ಕ್ಕೆ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ; ಅಕ್ರಮ ತಡೆಯಲು ಮೊದಲ ಬಾರಿಗೆ ವೆಬ್ ಕಾಸ್ಟಿಂಗ್

Prajwal Revanna Case
ಕರ್ನಾಟಕ1 hour ago

Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿದ್ದ ಎಸ್‌ಐಟಿ ಅರ್ಜಿ ವಿಚಾರಣೆ 3 ವಾರ ಮುಂದೂಡಿಕೆ

Saina Nehwal
ಕ್ರೀಡೆ1 hour ago

Saina Nehwal: ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದ ಸೈನಾ ನೆಹ್ವಾಲ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effect
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ3 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ3 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ3 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ4 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 days ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ5 days ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌