Site icon Vistara News

Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

Sequins partywear fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಿಕ್ವೀನ್ಸ್‌ ಪಾರ್ಟಿವೇರ್ಸ್‌ (Sequins Partywear Fashion) ಇದೀಗ ಸಖತ್‌ ಟ್ರೆಂಡಿಯಾಗಿವೆ. ಅದರಲ್ಲೂ ಪಾರ್ಟಿ ಪ್ರಿಯರಿಗೆ ಪ್ರಿಯವಾಗುವಂತಹ ನಾನಾ ಬಗೆಯ ಮಿರಮಿರ ಮಿನುಗುವ ಸಿಕ್ವೀನ್ಸ್‌ ಫ್ಯಾಷನ್‌ವೇರ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿದ್ದು, ನೋಡಲು ಕಣ್ಣು ಕುಕ್ಕುವ ಶೇಡ್ಸ್‌ಗಳಲ್ಲಿ ಹಾಗೂ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಒಂದಕ್ಕಿಂತ ಒಂದು ವಿನ್ಯಾಸ ಮನಮೋಹಕವಾಗಿ ನೋಡುಗರನ್ನು ಸೆಳೆಯುತ್ತಿವೆ.

ಮಿರಮಿರ ಮಿನುಗುವ ಸಿಕ್ವೀನ್ಸ್‌ ಪಾರ್ಟಿವೇರ್ಸ್‌

ಜಗಮಗಿಸುವ ಸಿಕ್ವೀನ್ಸ್‌ ಫ್ಯಾಬ್ರಿಕ್‌ ಹೊಂದಿರುವ ಫ್ಯಾಷನ್‌ವೇರ್‌ಗಳಿವು. ಚಿಕ್ಕ ಚಿಕ್ಕ ಮಿರ ಮಿರ ಎನ್ನುವ ಕಿರಿದಾದ ಬಟನ್‌ ಶೈಲಿಯ ಮೆಟೀರಿಯಲ್‌ನಿಂದ ರೂಪುಗೊಳ್ಳುವ ಒಂದು ಔಟ್‌ಫಿಟ್‌ ಕನಿಷ್ಠವೆಂದರೂ ಲಕ್ಷಗಟ್ಟಲೇ ಥ್ರೆಡ್‌ನಿಂದ ಕೂರಿಸಲಾದ ಮೈಕ್ರೋ ಸಿಕ್ವೀನ್ಸ್‌ ಬಟನ್‌ ಶೈಲಿಯವನ್ನು ಹೊಂದಿರುತ್ತವೆ. ಇವೆಲ್ಲವೂ ಒಟ್ಟಿಗೆ ಸೇರಿದಾಗ ಮಿರಮಿರ ಮಿನುಗುವ ಸಿಕ್ವೀನ್ಸ್‌ ಉಡುಪಾಗಿ ರೂಪುಗೊಳ್ಳುತ್ತವೆ. ಮೊದಲೆಲ್ಲಾ ಕೇವಲ ಸೀರೆಗಳಲ್ಲಿ ಕಾಣಿಸಿಕೊಂಡಿದ್ದ ಈ ಮೇಟಿರಿಯಲ್‌ ಇದೀಗ ವೆಸ್ಟರ್ನ್‌ವೇರ್‌ಗಳಲ್ಲಿ ಬಂದಿದ್ದು, ಪಾರ್ಟಿವೇರ್‌ಗಳಲ್ಲಿ ಸೂಪರ್‌ ಹಿಟ್‌ ಆಗಿವೆ.

ಸೆಲೆಬ್ರೆಟಿಗಳ ಫೇವರೇಟ್‌ ಔಟ್‌ಫಿಟ್ಸ್‌

ಸಿಕ್ವೀನ್ಸ್‌ ಪಾರ್ಟಿವೇರ್‌ಗಳು ಸೆಲೆಬ್ರೆಟಿಗಳ ಫೇವರೇಟ್‌ ಪಾರ್ಟಿವೇರ್ಸ್‌ ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೇ, ಆ ಮಟ್ಟಿಗೆ ಬಾಲಿವುಡ್‌ ಸೆಲೆಬ್ರೆಟಿಗಳು ನಾನಾ ಶೈಲಿಯಲ್ಲಿ ನಾನಾ ಡಿಸೈನ್‌ನ ಪಾರ್ಟಿವೇರ್ಸ್‌ ಧರಿಸುತ್ತಿರುತ್ತಾರೆ. ಇನ್ನು ವೆಸ್ಟರ್ನ್‌ವೇರ್‌ ಡಿಸೈನ್‌ನಲ್ಲಿ, ಸೆಲೆಬ್ರೆಟಿ ಡಿಸೈನರ್‌ಗಳು ಕೂಡ ಆಯಾ ಬಾಲಿವುಡ್‌ ತಾರೆಯರ ಅಭಿಲಾಷೆಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಿಕೊಡುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಿಚಾ.

ಟ್ರೆಂಡಿಯಾಗಿರುವ ಸಿಕ್ವೀನ್ಸ್‌ ಪಾರ್ಟಿವೇರ್ಸ್‌

ನೈಟ್‌ಪಾರ್ಟಿಗಳಲ್ಲಿ ಅತಿ ಹೆಚ್ಚಾಗಿ ಸಿಕ್ವೀನ್ಸ್‌ ಡಿಸೈನರ್‌ವೇರ್‌ಗಳನ್ನು ಧರಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಅವುಗಳಲ್ಲಿ, ಬಾಡಿಕಾನ್‌ ಸ್ಲಿಟ್‌ ಗೌನ್ಸ್‌, ಬ್ಯಾಕ್‌ಲೆಸ್‌ ಸಿಕ್ವೀನ್ಸ್‌ ಗೌನ್ಸ್‌, ಹಾಲ್ಟರ್‌ ನೆಕ್‌ ಗೌನ್ಸ್‌, ಮಿನಿ ಫ್ರಾಕ್ಸ್‌, ಸ್ವಿಂಗ್‌ ಫ್ರಾಕ್ಸ್‌, ಡಿವೈಡಿಂಗ್‌ ಪ್ಯಾಂಟ್ಸ್‌, ಕಟೌಟ್‌ ಟಾಪ್‌ ಹಾಗೂ ಸ್ಕೆಟರ್‌ ಡ್ರೆಸ್‌ಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಇನ್ನು, ಗೋಲ್ಡ್‌ ಹಾಗೂ ಸಿಲ್ವರ್‌ ಶೇಡ್‌ನವು ಅತಿ ಹೆಚ್ಚು ಪಾರ್ಟಿವೇರ್‌ಗಳ ಕೆಟಗರಿಯಲ್ಲಿ ಪಾಪುಲರ್‌ ಆಗಿವೆ. ನೋಡಲು ಆಕರ್ಷಕವಾಗಿ ಕಾಣಿಸುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಕೆಲವಂತೂ ಬಿಕಿನಿ ಶೈಲಿಯ ಟಾಪ್‌ ಹಾಗೂ ಶಾರ್ಟ್ಸ್‌ ಸ್ಕರ್ಟ್‌ಗಳಲ್ಲಿ ಬಂದಿವೆ. ಪೇಜ್‌ 3 ಪಾರ್ಟಿಪ್ರಿಯರ ವಾರ್ಡ್ರೋಬ್‌ಗೆ ಸೇರಿವೆ. ಪರಿಣಾಮ, ಯಾವ ಪಾರ್ಟಿಯಲ್ಲಿ ನೋಡಿದರೂ ಈ ಸಿಕ್ವೀನ್ಸ್‌ ಡಿಸೈನರ್‌ವೇರ್‌ಗಳ ಕಾರುಬಾರು ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್ಸ್‌ ರಿಯಾ ಹಾಗೂ ದೇವ್‌.

ಮಾಡೆಲ್‌ಗಳ ಸಿಕ್ವೀನ್ಸ್‌ ಲವ್‌

ಇದಕ್ಕೆ ಪೂರಕ ಎಂಬಂತೆ, ಸಿಕ್ವೀನ್ಸ್‌ ಪಾರ್ಟಿ ಪ್ರಿಯರಲ್ಲಿ ಇದೀಗ ಮಾಡೆಲ್‌ಗಳು ಸೇರಿದ್ದಾರೆ. ಮಾಡೆಲ್‌ ರಿಯಾ, ಜಾನು ಹಾಗೂ ರೀಟಾ ಅವರಿಗೂ ಸಿಕ್ವೀನ್ಸ್‌ ಪಾರ್ಟಿವೇರ್‌ಗಳೆಂದರೇ ಬಲು ಪ್ರೀತಿಯಂತೆ. ಇವರುಗಳಿಗೆ ಮಾತ್ರವಲ್ಲ, ಸಾಕಷ್ಟು ಮಾಡೆಲ್‌ಗಳಿಗೆ ಬಿಂದಾಸ್‌ ಲುಕ್‌ ನೀಡುವ ಈ ಸಿಕ್ವೀನ್ಸ್‌ ಔಟ್‌ಫಿಟ್ಸ್‌ ಎಂದರೇ ಸಖತ್‌ ಇಷ್ಟವಂತೆ.

ಇದನ್ನೂ ಓದಿ: Mango Facepack: ಆಕರ್ಷಕ ತ್ವಚೆಗಾಗಿ ಸೀಸನ್‌ ಮ್ಯಾಂಗೋ ಫೇಸ್‌ಪ್ಯಾಕ್‌

ಸಿಕ್ವೀನ್ಸ್‌ ಪಾರ್ಟಿವೇರ್ಸ್‌ ಮೇಕೋವರ್‌ಗೆ 3 ಐಡಿಯಾ

  1. ವೆಸ್ಟರ್ನ್‌ ಲುಕ್‌ಗೆ ಆಕ್ಸೆಸರೀಸ್‌ ಮ್ಯಾಚ್‌ ಮಾಡಿ.
  2. ಮೇಕಪ್‌ ಲೈಟಾಗಿರಲಿ, ಐ ಮೇಕಪ್‌ ಹೈ ಲೈಟಾಗಿರಲಿ.
  3. ಹೈ ಹೀಲ್ಸ್‌ ಹಾಗೂ ಹೇರ್‌ಸ್ಟೈಲ್‌ ಆಕರ್ಷಕವಾಗಿರಲಿ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Exit mobile version