ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಹಬ್ಬದ ಸೀಸನ್‌ನಲ್ಲಿ (Set Bangles fashion) ಎಲ್ಲಿ ನೋಡಿದರೂ ಗ್ರ್ಯಾಂಡ್ ಸೆಟ್ ಬ್ಯಾಂಗಲ್‌ಗಳ ಕಲರವ! ಹೌದು, ಮುಂಬರುವ ರಂಜಾನ್ ಮತ್ತು ಯುಗಾದಿ ಫೆಸ್ಟೀವ್ ಸೀಸನ್‌ಗೆ ಪೂರಕವಾಗುವಂತೆ, ಈಗಾಗಲೇ ಮಾರುಕಟ್ಟೆಯಲ್ಲಿ, ನಾನಾ ಬಗೆಯ ವಿನ್ಯಾಸದ ಗ್ರ್ಯಾಂಡ್ ಸೆಟ್ ಬ್ಯಾಂಗಲ್‌ಗಳು ಬಿಡುಗಡೆಗೊಂಡಿದ್ದು, ಸದ್ದು ಹೆಚ್ಚಾಗಿದೆ. ನೋಡಲು ಅತ್ಯಾಕರ್ಷಕ ಬಗೆಬಗೆಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿರುವ ಈ ಕಲರ್ಫುಲ್ ಸೆಟ್ ಬ್ಯಾಂಗಲ್‌ಗಳು, ಎರಡೆರಡು ಹಬ್ಬಗಳಲ್ಲಿ ಮಾನಿನಿಯರ ಕೈಗಳನ್ನು ಸಿಂಗರಿಸಲು ಸಜ್ಜಾಗಿವೆ.
ಎಥ್ನಿಕ್‌ವೇರ್ಸ್‌ಗೆ ಪರ್ಫೆಕ್ಟ್ ಮ್ಯಾಚಿಂಗ್
“ಬಳೆಗಳಿಗೂ ಮಾನಿನಿಯರಿಗೂ ಎಲ್ಲಿಲ್ಲದ ನಂಟು. ಹಬ್ಬ-ಹರಿ ದಿನಗಳಲ್ಲಿ ಮಾತ್ರವಲ್ಲ, ಮದುವೆ ಕಾರ್ಯಕ್ರಮಗಳಲ್ಲೂ ಎಥ್ನಿಕ್‌ವೇರ್‌ಗಳಿಗೆ ತಕ್ಕಂತೆ ಸೆಟ್ ಬ್ಯಾಂಗಲ್‌ಗಳನ್ನು ಧರಿಸುವುದು ಇದೀಗ ಸಾಮಾನ್ಯವಾಗಿದೆ. ಇನ್ನು ಈ ಫೆಸ್ಟೀವ್ ಸೀಸನ್‌ನಲ್ಲಿ ಯುವತಿಯರು ಹಾಗೂ ಮಧ್ಯ ವಯಸ್ಕ ಮಹಿಳೆಯರಿಗೆ ಇಷ್ಟವಾಗುವಂತಹ ನಾನಾ ವಿನ್ಯಾಸದ ಬಳೆಗಳು ಅಂದರೆ, ಡಜನ್‌ಗಟ್ಟಲೆ ಇರುವಂತಹ ಸೆಟ್ ಬ್ಯಾಂಗಲ್ಸ್ ಕಾಲಿಟ್ಟಿವೆ. ಇವು ಉಡುಪಿಗೆ ತಕ್ಕಂತೆ ಮ್ಯಾಚಿಂಗ್ ಕಾನ್ಸೆಪ್ಟ್ಗಳಲ್ಲಿ ದೊರೆಯುತ್ತಿವೆ” ಎನ್ನುತ್ತಾರೆ ಆಕ್ಸೆಸರೀಸ್ ಸ್ಟೈಲಿಸ್ಟ್ ದಿವ್ಯಾ. ಅವರ ಪ್ರಕಾರ, ಸೆಟ್ ಬ್ಯಾಂಗಲ್ಸ್ ಅಂದವನ್ನು ಹೆಚ್ಚಿಸುವುದರೊಂದಿಗೆ ಎಥ್ನಿಕ್ ಲುಕ್‌ಗೆ ಸಾಥ್ ನೀಡುತ್ತವಂತೆ.
ರಂಜಾನ್‌ಗೆ ಬಂತು ಮಿನುಗುವ ಸೆಟ್ ಬ್ಯಾಂಗಲ್ಸ್
ಇನ್ನು, ರಂಜಾನ್ ಹಬ್ಬಕ್ಕೆ ಮಿನುಗುವ ಸೆಟ್ ಬ್ಯಾಂಗಲ್‌ಗಳು ಬಂದಿವೆ. ಮೆಟಲ್, ಫೈಬರ್ ಹಾಗೂ ಗಾಜಿನಲ್ಲೂ ಈ ಸೆಟ್ ಬ್ಯಾಂಗಲ್ಸ್ ದೊರೆಯುತ್ತಿವೆ. ಒಂದಕ್ಕಿಂತ ಒಂದು ಶೈಲಿಯ ಸೆಟ್ ಗ್ರ್ಯಾಂಡ್ ವಿನ್ಯಾಸದಲ್ಲಿ ದೊರೆಯುತ್ತಿವೆ. ಶೈನಿಂಗ್ ಶೇಡ್‌ಗಳಲ್ಲಿ ಅದರಲ್ಲೂ ಗೋಲ್ಡನ್ ಹಾಗೂ ಸಿಲ್ವರ್ ಕಲರ್‌ನವು ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಸೆಟ್ ಬ್ಯಾಂಗಲ್ಸ್ ಮಧ್ಯೆ ಬಿಗ್ ಬ್ಯಾಂಗಲ್‌ಗಳು ಸೇರಿಕೊಂಡಿವೆ. ಇವು ಸೈಡ್ ಬ್ಯಾಂಗಲ್‌ಗಳ ಅಂದ ಹೆಚ್ಚಿಸುತ್ತವೆ ಎನ್ನುತ್ತಾರೆ ಪರಿಣತರು.
ಯುಗಾದಿಗೆ ಗ್ರ್ಯಾಂಡ್ ಕಲರ್ ಸೆಟ್ ಬ್ಯಾಂಗಲ್ಸ್
ಇನ್ನು ಯುಗಾದಿ ಹಬ್ಬಕ್ಕೆ ನಾನಾ ಬಗೆಯ ಗ್ರ್ಯಾಂಡ್ ಶೇಡ್‌ನ ಕಲರ್‌ಫುಲ್ ಸೆಟ್ ಬ್ಯಾಂಗಲ್‌ಗಳು ಆಗಮಿಸಿದ್ದು, ನಾನಾ ಕಲರ್‌ಗಳಲ್ಲಿ ಲಭ್ಯ. ಲೆಹೆಂಗಾ, ಸೀರೆ, ಲಂಗ-ದಾವಣಿಗೆ ಮ್ಯಾಚ್ ಆಗುವಂತಹ, ಸೈಡ್‌ನಲ್ಲಿ, ಕಡದಂತಹ ಡಿಸೈನ್ ಹೊಂದಿರುವ ಬಳೆಗಳು ಇವುಗಳೊಂದಿಗೆ ಬಂದಿವೆ. ಇವನ್ನು ಮಿಕ್ಸ್ ಮಾಡಿ ಕೂಡ ಧರಿಸಬಹುದು.
ಫೆಸ್ಟೀವ್ ಸೀಸನ್ ಸೆಟ್ ಬ್ಯಾಂಗಲ್ಸ್ ಖರೀದಿಗೆ 3 ಟಿಪ್ಸ್
- ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದಾದ ಸೆಟ್ ಬ್ಯಾಂಗಲ್ಸ್ ಖರೀದಿಸಿ.
- ಗೋಲ್ಡ್-ಸಿಲ್ವರ್ ಸೆಟ್ ಬ್ಯಾಂಗಲ್ಸ್ ಎಲ್ಲವಕ್ಕೂ ಹೊಂದುತ್ತವೆ.
- ಡಜನ್‌ಗಟ್ಟಲೆ ಸಿಗುವ ಸೆಟ್ ಬ್ಯಾಂಗಲ್ಸ್ ಆಯ್ಕೆ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬೇಸಿಗೆ ಬಿಸಿಲಿಗೆ ಮತ್ತೆ ಬಂತು ಸನ್ ಡ್ರೆಸ್ ಫ್ಯಾಷನ್!