-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಿಂಪಲ್ಲಾಗಿರುವ ಪಿನ್ ಟಕ್ ಶೆರ್ವಾನಿ, ಇದೀಗ ಮೆನ್ಸ್ ಫ್ಯಾಷನ್‌ಗೆ ಲಗ್ಗೆ ಇಟ್ಟಿದ್ದು, ಈ ಜನರೇಷನ್ ಹುಡುಗರನ್ನು ಆಕರ್ಷಿಸಿದೆ. ಹೌದು, ಇತ್ತೀಚೆಗೆ ಇವೆಂಟ್‌ವೊಂದರಲ್ಲಿ ನಟ ಆದಿತ್ಯಾ ರಾಯ್ ಕಪೂರ್ ಧರಿಸಿದ್ದ, ಡಿಸೈನರ್ ಕುನಾಲ್ ರಾವಲ್ ಅವರು ಡಿಸೈನ್ ಮಾಡಿದ, ಸಾಲಿಡ್ ನೆವಿ ಬ್ಲ್ಯೂ ಕಲರ್‌ನ ಸಿಂಪಲ್ ಲುಕ್ ನೀಡುವ ಪಿನ್ ಟಕ್ ಶೆರ್ವಾನಿ, ಮೆನ್ಸ್ ಫ್ಯಾಷನ್‌ನಲ್ಲಿ ಸಖತ್ ಟ್ರೆಂಡಿಯಾಗಿದ್ದು, ಸೆಮಿ ಎಥ್ನಿಕ್ ಮೆನ್ಸ್ ಫ್ಯಾಷನ್ ಕೆಟಗರಿಗೆ ಸೇರಿದೆ.
ಏನಿದು ಪಿನ್ ಟಕ್ ಶೆರ್ವಾನಿ?
ಅತಿ ಚಿಕ್ಕದಾಗಿ ಮಾಡಿದ ಪ್ಲೀಟಿಂಗ್ ಅಥವಾ ಕಣ್ಣಿಗೆ ಕಾಣಿಸದಂತಹ ಮಿನಿ ಟಕ್ ಹಿಡಿದಂತಹ ಡಿಸೈನನ್ನು ಪಿನ್ ಟಕ್ ಎನ್ನಲಾಗುತ್ತದೆ. ಪುಟ್ಟ ಪುಟ್ಟ ಪ್ಲೀಟ್ಸ್ ಇರುವಂತಹ ಪಿನ್ ಟಕ್ ಮಾಡಿದಂತಹ ಫ್ಯಾಬ್ರಿಕ್‌ನಲ್ಲಿ ಶೆರ್ವಾನಿ ಡಿಸೈನ್ ಮಾಡಿದಾಗ ಅದನ್ನು ಪಿನ್ ಟಕ್ ಶೆರ್ವಾನಿ ಎಂದು ಕರೆಯಲಾಗುತ್ತದೆ. ಇದು ನೋಡಲು ಸಾದಾ ಸಿಂಪಲ್ ಡಿಸೈನ್‌ನಂತೆ ಬಿಂಬಿಸುತ್ತದೆ. ಹೆಚ್ಚು ಗ್ರ್ಯಾಂಡ್ ಆಗಿ ಕಾಣಿಸುವುದಿಲ್ಲ. ಮಿರಮಿರ ಮಿನುಗುವ ಶೆರ್ವಾನಿಗಳನ್ನು ಇಷ್ಟಪಡದ ಪುರುಷರಿಗೆ ಇಂತಹ ಡಿಸೈನ್‌ಗಳು ಸೂಕ್ತ ಎಂಬುದು ಈ ಡಿಸೈನ್ ಮಾಡಿರುವ ಸೆಲೆಬ್ರೆಟಿ ಡಿಸೈನರ್ ಕುನಾಲ್ ರಾವಲ್ ಅವರ ಅಭಿಪ್ರಾಯ.
ಪಿನ್ ಟಕ್ ಶೆರ್ವಾನಿಯಲ್ಲಿ ಆದಿತ್ಯಾ ರಾಯ್ ಕಪೂರ್ ಲುಕ್
ನಟ ಆದಿತ್ಯಾ ರಾಯ್ ಕಪೂರ್ ಸಿಂಪಲ್ ಡಿಸೈನ್ ಇರುವಂತಹ ನೆವಿ ಬ್ಲ್ಯೂ ಸಾಲಿಡ್ ಶೇಡ್‌ನ ಪಿನ್ ಟಕ್ ಶೆರ್ವಾನಿಯಲ್ಲಿ ಕಾಣಿಸಿಕೊಂಡದ್ದೇ ತಡ, ಮೆನ್ಸ್ ಫ್ಯಾಷನ್‌ನಲ್ಲಿ ಅದರಲ್ಲೂ ಸೆಮಿ ಎಥ್ನಿಕ್ ಅಥವಾ ಎಥ್ನಿಕ್ ಫ್ಯಾಷನ್‌ವೇರ್ ಆದ ಶೆರ್ವಾನಿ ಕೆಟಗರಿಯಲ್ಲಿ ಇದು ಟಾಪ್ ಲಿಸ್ಟ್‌ಗೆ ಸೇರಿತು. ಈ ಮೊದಲು ಈ ಡಿಸೈನ್ ಇದ್ದರೂ, ಆದಿತ್ಯಾ ಧರಿಸಿದ ನಂತರ ಇದಕ್ಕೆ ಮತ್ತಷ್ಟು ಪ್ರಮೋಷನ್ ದೊರಕಿದೆ ಎನ್ನುತ್ತಾರೆ ಡಿಸೈನರ್ಸ್.
ಇದನ್ನೂ ಓದಿ: Ambani Wedding Fashion: ಅಂಬಾನಿ ಫ್ಯಾಮಿಲಿಯ ಅರಿಷಿನ ಶಾಸ್ತ್ರದಲ್ಲಿ ರಂಗು ರಂಗಾದ ಸೆಲೆಬ್ರೆಟಿಗಳು!
ಪಿನ್ ಟಕ್ ಶೆರ್ವಾನಿ ಸ್ಟೈಲಿಂಗ್ ಹೇಗೆ?
- ಸ್ಲಿಮ್ ಹುಡುಗರಿಗೆ ಇದು ಹೇಳಿ ಮಾಡಿಸಿದ ಶೆರ್ವಾನಿ ಎನ್ನಬಹುದು. ಸ್ಕಿನ್ ಟೋನ್ಗೆ ಹೊಂದುವ ಕಲರ್ ಆಯ್ಕೆ ಮಾಡುವುದು ಉತ್ತಮ.
- ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯ ಇಲ್ಲ.
- ಆದಷ್ಟೂ ಸಾದಾ ಕಲರ್ಗಳು ಈ ಡಿಸೈನ್ನಲ್ಲಿ ಆಕರ್ಷಕವಾಗಿಸುತ್ತವೆ. ಸಿಂಪಲ್ ಸ್ಟೈಲಿಂಗ್ ಸಾಕು!
- ಫಾರ್ಮಲ್ ಶೂಗಳು ಶೆರ್ವಾನಿಗೆ ಮ್ಯಾಚ್ ಆಗುತ್ತವೆ.
- ಇದಕ್ಕೆ ಧರಿಸುವ ಪ್ಯಾಂಟ್ ಕೂಡ ಫಿಟ್ ಆಗಿದ್ದರೇ ಉತ್ತಮ.
( ಲೇಖಕಿ ಫ್ಯಾಷನ್ ಪತ್ರಕರ್ತೆ )