Site icon Vistara News

Shirt Dress Fashion: ಶರ್ಟ್ ಡ್ರೆಸ್‌ ನ್ಯೂ ಲುಕ್‌ಗೆ 3 ಸಿಂಪಲ್‌ ಐಡಿಯಾ

Shirt Dress Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀಸನ್‌ ಬದಲಾದರೂ ಶರ್ಟ್ ಡ್ರೆಸ್‌ ಫ್ಯಾಷನ್‌ (Shirt Dress Fashion) ಮಾತ್ರ ಸೈಡಿಗೆ ಸರಿಯುವುದಿಲ್ಲ! ಬದಲಿಗೆ ನಾನಾ ಸ್ಟೈಲಿಂಗ್‌ಗಳಲ್ಲಿ ಡಿಫರೆಂಟ್‌ ವಿನ್ಯಾಸದಲ್ಲಿ ಆಗಾಗ್ಗೆ ಲಗ್ಗೆ ಇಡುತ್ತಲೇ ಇರುತ್ತದೆ. ಪ್ರತಿ ಹುಡುಗಿಯ ಬಳಿಯೂ ಒಂದಲ್ಲ ಒಂದು ಶರ್ಟ್ ಡ್ರೆಸ್ ಇದ್ದೇ ಇರುತ್ತದೆ. ಅದು ಸಿಂಪಲ್‌ ಆಗಿರಬಹುದು ಅಥವಾ ಪ್ರಿಂಟೆಡ್‌ ಆಗಿರಬಹುದು, ಇಲ್ಲವೇ ಚೆಕ್ಸ್, ಗಿಂಗ್ನಂ ಹೀಗೆ ನಾನಾ ವಿನ್ಯಾಸದ್ದಾಗಿರಬಹುದು. ಸದಾ ಒಂದೇ ಶೈಲಿಯಲ್ಲಿ ಇವನ್ನು ಧರಿಸಿದಲ್ಲಿ ನೋಡಲು ಒಂದೇ ತರಹದ್ದಾಗಿ ಕಾಣಿಸಬಹುದು. ಇದರ ಬದಲು ಧರಿಸುವ ಶೈಲಿಯನ್ನು ಬದಲಿಸಿದಲ್ಲಿ ನ್ಯೂ ಲುಕ್‌ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶರ್ಟ್ ಡ್ರೆಸ್‌ಗೂ ನ್ಯೂ ಲುಕ್‌

ಹೌದು. ನಿಮ್ಮ ಬಳಿಯಿರುವ ಯಾವುದೇ ಬಗೆಯ ಶರ್ಟ್ ಡ್ರೆಸ್‌ಗೆ ಹೊಸ ಲುಕ್‌ ನೀಡಬಹುದು. ಸದಾ ಹಳೇ ಸ್ಟೈಲಿಂಗ್‌ನಲ್ಲೆ ಕಾಣಿಸಿಕೊಳ್ಳುತ್ತಿರುವ ನಿಮಗೆ ಈ ಹೊಸ ಐಡಿಯಾ ಡಿಫರೆಂಟ್‌ ಇಮೇಜ್‌ ನೀಡಬಹುದು ಎನ್ನುವ ಫ್ಯಾಷನಿಸ್ಟ್‌ಗಳು, 3 ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ.

ಶರ್ಟ್ ಡ್ರೆಸ್‌ಗೆ ಬಿಗ್‌ ಬಕಲ್‌ ಬೆಲ್ಟ್

ಶರ್ಟ್ ಡ್ರೆಸ್‌ಗೆ ಬಿಗ್‌ ಬೆಲ್ಟ್‌ಗಳನ್ನು ಧರಿಸಿದಲ್ಲಿ ಇಡೀ ಡ್ರೆಸ್‌ನ ಲುಕ್‌ ಬದಲಾಗುವುದು. ಜೊತೆಗೆ ನೋಡಲು ಡಿಫರೆಂಟಾಗಿ ಕಾಣಿಸುವುದು. ನೋಡಲು ಮಿಡಿ ಸ್ಕರ್ಟ್‌ನಂತೆ ಕಾಣಿಸುವುದು. ಇದೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಕಲ್‌ ಬೆಲ್ಟ್‌ಗಳು ಹಾಗೂ ಸ್ಟೇಟ್‌ಮೆಂಟ್‌ ಬೆಲ್ಟ್‌ಗಳು ಈ ಡ್ರೆಸ್‌ಗೆ ಸಖತ್ತಾಗಿ ಮ್ಯಾಚ್‌ ಆಗುತ್ತವೆ. ಬ್ಲ್ಯಾಕ್‌ ಶೇಡ್‌ ಹೊರತುಪಡಿಸಿ, ಇತರೇ ಡಿಸೈನ್‌ ಹಾಗೂ ಕಲರ್‌ಗಳಲ್ಲೂ ಲಭ್ಯವಿರುವ ಇವನ್ನು ಧರಿಸಿದಲ್ಲಿ, ಹೊಸ ಡ್ರೆಸ್‌ನಂತೆ ಕಾಣುವುದು.

ಇನ್ನರ್‌ ಟಾಪ್‌ ಮೇಲೆ ಶರ್ಟ್ ಡ್ರೆಸ್‌

ಇನ್ನರ್‌ ಟಾಪ್‌ ಧರಿಸಿ ಅದರ ಮೇಲೆ ಶರ್ಟ್ ಡ್ರೆಸ್‌ ಧರಿಸಬಹುದು. ಆದರೆ, ಇದಕ್ಕಾಗಿ ಒಂದೆರೆಡು ಬಟನ್‌ಗಳು ಓಪನ್‌ ಆಗಿರಬೇಕು. ಆಗ ಮಾತ್ರ, ಮಿಕ್ಸ್ ಮ್ಯಾಚ್‌ ಆದಂತಿರುವ ಶರ್ಟ್ ಡ್ರೆಸ್‌ ಹೈಲೈಟಾಗುತ್ತದೆ. ಕಾಂಟ್ರಸ್ಟ್ ಶೇಡ್‌ನವನ್ನು ಧರಿಸಬಹುದು. ಬೇಕಿದ್ದಲ್ಲಿ ಶರ್ಟ್ ಡ್ರೆಸ್‌ನ ಬಟನ್‌ ಕೋಟ್‌ನಂತೆ ಅರ್ಧಂಬರ್ಧ ಓಪನ್‌ ಮಾಡಬಹುದು. ಕೋಟ್‌ ಡ್ರೆಸ್‌ನಂತೆ ಕಾಣಿಸುವುದು.

ಇದನ್ನೂ ಓದಿ: Monsoon Footwear Fashion: ಮಳೆಗಾಲಕ್ಕೆ ತಕ್ಕಂತೆ ಬದಲಾಗುವ ಫುಟ್‌ವೇರ್‌ ಸ್ಟೈಲಿಂಗ್‌

ಲೇಯರ್‌ ಲುಕ್‌

ಮಳೆಗಾಲದಲ್ಲೂ ಲೇಯರ್‌ ಲುಕ್‌ ನೀಡಬಹುದು. ಶರ್ಟ್ ಡ್ರೆಸ್‌ ಮೇಲೆ ತೆಳುವಾದ ಅಥವಾ ಶೀರ್‌ ಕೋಟ್‌ನಂತಹ ಲಾಂಗ್‌ ಶ್ರಗ್ಸ್ ಅಥವಾ ಜಾಕೆಟ್‌ ಧರಿಸಿದಲ್ಲಿ ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡುವುದರಲ್ಲಿ ಸಂಶಯವಿಲ್ಲ!

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version