-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರ‍್ಯಾಂಪ್ ಶರ್ಟ್ (Shirt Fashion) ಇದೀಗ ಪಾರ್ಟಿವೇರ್ ಯುವಕರನ್ನು ಸವಾರಿ ಮಾಡತೊಡಗಿದೆ. ಹೌದು, ಇದಕ್ಕೆ ಪೂರಕ ಎಂಬಂತೆ, ಇವೆಂಟ್‌ವೊಂದರಲ್ಲಿ ಬಾಲಿವುಡ್ ನಟ ಹರ್ಷ್ ವರ್ಧನ್ ರಾಣೆ ಧರಿಸಿದ್ದ ಪಾರ್ಟಿವೇರ್ ವ್ರಾಪ್ ಬ್ಲ್ಯಾಕ್ ಶರ್ಟ್, ಹೈ ಫ್ಯಾಷನ್ ಫಾಲೋ ಮಾಡುವ ಯುವಕರನ್ನು ಆವರಿಸಿಕೊಂಡಿದೆ. ನೋಡಲು ಡಿಫರೆಂಟ್ ಲುಕ್ ನೀಡುವ ಈ ವ್ರಾಪ್ ಶರ್ಟ್ ಈ ಮೊದಲು ಸಿನಿಮಾ ಹಾಗೂ ಮಾಡೆಲಿಂಗ್ ಜಗತ್ತಿನ ಯುವಕರನ್ನು ಸೆಳೆದಿತ್ತು. ಇದೀಗೆ ಹೈ ಫ್ಯಾಷನ್ ಲುಕ್ ಬಯಸುವ ಹುಡುಗರನ್ನು ಸೆಳೆಯಲಾರಂಭಿಸಿದೆ. ಡಿಫರೆಂಟ್ ಇಮೇಜ್ ಬಯಸುವ ಪುರುಷರನ್ನು ಶೃಂಗರಿಸಿದೆ.
ಏನಿದು ವ್ರಾಪ್ ಶರ್ಟ್?
ಅಸ್ಸೆಮ್ಮಿಟ್ರಿಕಲ್ ಡಿಸೈನ್ ಹೊಂದಿರುವ ಈ ಶರ ಪಾರ್ಟಿವೇರ್ ಔಟ್‌ಫಿಟ್ ಲಿಸ್ಟ್‌ಗೆ ಸೇರುತ್ತವೆ. ಸಾಮಾನ್ಯ ಶರ್ಟ್‌ನಂತೆ ಬಟನ್‌ಗಳನ್ನು ಹೊಂದಿರುವುದಿಲ್ಲ. ಬದಲಿಗೆ ಕಾಲರ್ ಜೊತೆಜೊತೆಗೆ ವ್ರಾಪ್ ಮಾಡುವಂತಹ ವಿನ್ಯಾಸ ಹೊಂದಿರುತ್ತವೆ. ಬಲಗಡೆ ಅಥವಾ ಎಡಗಡೆ ಸೈಡ್‌ನಲ್ಲಿ ಕಟ್ಟುವಂತಹ ಟೈಯಿಂಗ್ ಅಪ್ಷನ್ ಹೊಂದಿರುತ್ತವೆ. ಕೆಲವು ಸಿಂಪಲ್ ಡಿಸೈನ್‌ನಲ್ಲಿರುತ್ತವೆ. ಇನ್ನು ಕೆಲವು ಕ್ರಾಪ್ಡ್ ಕುರ್ತಾದಂತೆ ಕಾಣುತ್ತವೆ. ಮತ್ತೆ ಕೆಲವು ಗಿಡ್ಡನಾದ ಜಾಕೆಟ್‌ನಂತೆಯೂ ಕಾಣಿಸುತ್ತವೆ. ಒಟ್ಟಿನಲ್ಲಿ, ಒಂದೆಡೆ ವ್ರಾಪ್ ಮಾಡುವಂತಹ ಶರ್ಟ್ ಡಿಸೈನ್ ಹೊಂದಿರುತ್ತವೆ ಎನ್ನಬಹುದು ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಾಘವ್. ಅವರ ಪ್ರಕಾರ, ಈ ವಿನ್ಯಾಸದ ಶರ್ಟ್‌ಗಳು ಇತ್ತೀಚೆಗೆ ಟ್ರೆಂಡಿಯಾಗತೊಡಗಿವೆ. ಮೊದಲು ಇವುಗಳನ್ನು ಕೇವಲ ಸೆಲೆಬ್ರೆಟಿಗಳು ಮಾತ್ರ ಪಾರ್ಟಿಗಳಲ್ಲಿ ಧರಿಸುತ್ತಿದ್ದರು ಎನ್ನುತ್ತಾರೆ.
ಪಾರ್ಟಿವೇರ್ ವ್ರಾಪ್ ಶರ್ಟ್ಸ್
ಈ ಔಟ್‌ಫಿಟ್ ಸಾಮಾನ್ಯವಾಗಿ ಫಾರ್ಮಲ್ಸ್ ಸೆಟ್‌ನಲ್ಲಿ ಕಂಡು ಬರುತ್ತವೆ. ಮಾನೋಕ್ರೋಮ್ ಶೇಡ್‌ಗಳಲ್ಲಿ ಇವು ಹೆಚ್ಚಾಗಿ ಬಿಡುಗಡೆಗೊಳ್ಳುತ್ತವೆ. ಡಿಸೈನರ್‌ಗಳ ಬಳಿ ವಿಶೇಷವಾಗಿ ಕಸ್ಟಮೈಸ್ಡ್ ಡಿಸೈನ್‌ನಲ್ಲಿ ಇವು ಲಭ್ಯ. ಇತ್ತೀಚೆಗೆ ಆನ್‌ಲೈನ್ ಶಾಪ್‌ಗಳಲ್ಲೂ, ನಾನಾ ಡಿಸೈನ್‌ನವು ದೊರೆಯುತ್ತಿವೆ.
ಸೆಲೆಬ್ರೆಟಿಗಳ ಪ್ರಯೋಗಾತ್ಮಕ ಇಮೇಜ್
ಅಂದಹಾಗೆ, ಸೆಲೆಬ್ರೆಟಿಗಳ ಮುಖಾಂತರ ಇಂತಹ ರ‍್ಯಾಂಪ್ ಶರ್ಟ್‌ಗಳು ಸಾಮಾನ್ಯ ಪುರುಷರ ಫ್ಯಾಷನ್‌ಗೆ ಕಾಲಿಟ್ಟಿವೆ ಎನ್ನಬಹುದು. ಸಿನಿಮಾಗಳಲ್ಲಿ ಹಾಗೂ ಫ್ಯಾಷನ್ ರ‍್ಯಾಂಪ್‌ಗಳಲ್ಲಿ ಇವುಗಳನ್ನು ಸೆಲೆಬ್ರೆಟಿಗಳು ಧರಿಸಿ ಕಾಣಿಸಿಕೊಂಡ ನಂತರವೇ, ಇವುಗಳನ್ನು ಡಿಸೈನ್ ಮಾಡಿಸುವವರ ಸಂಖ್ಯೆ ಕ್ರಮೇಣ ಹೆಚ್ಚಾಯಿತು ಎನ್ನುತ್ತಾರೆ ಡಿಸೈನರ್ಸ್.
ಮೆನ್ಸ್ ಹೈ ಫ್ಯಾಷನ್‌ಗೆ ಸಾಥ್
ಮಾಡರ್ನ್ ಪಾರ್ಟಿ ಪ್ರಿಯ ಹುಡುಗರ ಹೈ ಫ್ಯಾಷನ್‌ಗೆ ಇವು ಸಾಥ್ ನೀಡುತ್ತಿವೆ. ಪ್ರಯೋಗಾತ್ಮಕ ವಿನ್ಯಾಸದ ಈ ಶೈಲಿಯ ಶರ್ಟ್ಸ್, ಡಿಫರೆಂಟ್ ಲುಕ್ ಬಯಸುವ ಯುವಕರನ್ನು ಬರಸೆಳೆಯುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು