Shirt Fashion: ಮೆನ್ಸ್ ಹೈ ಫ್ಯಾಷನ್‌ಗೆ ಲಗ್ಗೆ ಇಟ್ಟ ಪ್ರಯೋಗಾತ್ಮಕ ರ‍್ಯಾಂಪ್‌ ಶರ್ಟ್ - Vistara News

ಫ್ಯಾಷನ್

Shirt Fashion: ಮೆನ್ಸ್ ಹೈ ಫ್ಯಾಷನ್‌ಗೆ ಲಗ್ಗೆ ಇಟ್ಟ ಪ್ರಯೋಗಾತ್ಮಕ ರ‍್ಯಾಂಪ್‌ ಶರ್ಟ್

ಇದೀಗ ಬಾಲಿವುಡ್‌ ನಟ ಹರ್ಷವರ್ಧನ್‌ ರಾಣೆ ಧರಿಸಿದ ಪಾರ್ಟಿವೇರ್‌ ರ‍್ಯಾಂಪ್‌ ಶರ್ಟ್ (Shirt Fashion), ಹೈ ಫ್ಯಾಷನ್‌ಗೆ ಸೈ ಎನ್ನುವ ಯುವಕರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೇರಿಕೊಂಡಿದೆ. ಏನಿದು ಪಾರ್ಟಿವೇರ್‌ ವ್ರಾಪ್‌ ಶರ್ಟ್? ಏನಿದರ ವಿಶೇಷತೆ? ಈ ಕುರಿತಂತೆ ಮೆನ್ಸ್ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Shirt Fashion
ಚಿತ್ರಗಳು: ಹರ್ಷವರ್ಧನ್‌ ರಾಣೆ, ನಟ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರ‍್ಯಾಂಪ್‌ ಶರ್ಟ್ (Shirt Fashion) ಇದೀಗ ಪಾರ್ಟಿವೇರ್‌ ಯುವಕರನ್ನು ಸವಾರಿ ಮಾಡತೊಡಗಿದೆ. ಹೌದು, ಇದಕ್ಕೆ ಪೂರಕ ಎಂಬಂತೆ, ಇವೆಂಟ್‌ವೊಂದರಲ್ಲಿ ಬಾಲಿವುಡ್‌ ನಟ ಹರ್ಷ್ ವರ್ಧನ್‌ ರಾಣೆ ಧರಿಸಿದ್ದ ಪಾರ್ಟಿವೇರ್‌ ವ್ರಾಪ್‌ ಬ್ಲ್ಯಾಕ್‌ ಶರ್ಟ್, ಹೈ ಫ್ಯಾಷನ್‌ ಫಾಲೋ ಮಾಡುವ ಯುವಕರನ್ನು ಆವರಿಸಿಕೊಂಡಿದೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಈ ವ್ರಾಪ್‌ ಶರ್ಟ್ ಈ ಮೊದಲು ಸಿನಿಮಾ ಹಾಗೂ ಮಾಡೆಲಿಂಗ್‌ ಜಗತ್ತಿನ ಯುವಕರನ್ನು ಸೆಳೆದಿತ್ತು. ಇದೀಗೆ ಹೈ ಫ್ಯಾಷನ್‌ ಲುಕ್‌ ಬಯಸುವ ಹುಡುಗರನ್ನು ಸೆಳೆಯಲಾರಂಭಿಸಿದೆ. ಡಿಫರೆಂಟ್‌ ಇಮೇಜ್‌ ಬಯಸುವ ಪುರುಷರನ್ನು ಶೃಂಗರಿಸಿದೆ.

Shirt Fashion

ಏನಿದು ವ್ರಾಪ್‌ ಶರ್ಟ್?

ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ಹೊಂದಿರುವ ಈ ಶರ ಪಾರ್ಟಿವೇರ್‌ ಔಟ್‌ಫಿಟ್‌ ಲಿಸ್ಟ್‌ಗೆ ಸೇರುತ್ತವೆ. ಸಾಮಾನ್ಯ ಶರ್ಟ್‌ನಂತೆ ಬಟನ್‌ಗಳನ್ನು ಹೊಂದಿರುವುದಿಲ್ಲ. ಬದಲಿಗೆ ಕಾಲರ್‌ ಜೊತೆಜೊತೆಗೆ ವ್ರಾಪ್‌ ಮಾಡುವಂತಹ ವಿನ್ಯಾಸ ಹೊಂದಿರುತ್ತವೆ. ಬಲಗಡೆ ಅಥವಾ ಎಡಗಡೆ ಸೈಡ್‌ನಲ್ಲಿ ಕಟ್ಟುವಂತಹ ಟೈಯಿಂಗ್‌ ಅಪ್ಷನ್‌ ಹೊಂದಿರುತ್ತವೆ. ಕೆಲವು ಸಿಂಪಲ್‌ ಡಿಸೈನ್‌ನಲ್ಲಿರುತ್ತವೆ. ಇನ್ನು ಕೆಲವು ಕ್ರಾಪ್ಡ್ ಕುರ್ತಾದಂತೆ ಕಾಣುತ್ತವೆ. ಮತ್ತೆ ಕೆಲವು ಗಿಡ್ಡನಾದ ಜಾಕೆಟ್‌ನಂತೆಯೂ ಕಾಣಿಸುತ್ತವೆ. ಒಟ್ಟಿನಲ್ಲಿ, ಒಂದೆಡೆ ವ್ರಾಪ್‌ ಮಾಡುವಂತಹ ಶರ್ಟ್ ಡಿಸೈನ್‌ ಹೊಂದಿರುತ್ತವೆ ಎನ್ನಬಹುದು ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಾಘವ್‌. ಅವರ ಪ್ರಕಾರ, ಈ ವಿನ್ಯಾಸದ ಶರ್ಟ್‌ಗಳು ಇತ್ತೀಚೆಗೆ ಟ್ರೆಂಡಿಯಾಗತೊಡಗಿವೆ. ಮೊದಲು ಇವುಗಳನ್ನು ಕೇವಲ ಸೆಲೆಬ್ರೆಟಿಗಳು ಮಾತ್ರ ಪಾರ್ಟಿಗಳಲ್ಲಿ ಧರಿಸುತ್ತಿದ್ದರು ಎನ್ನುತ್ತಾರೆ.

Shirt Fashion

ಪಾರ್ಟಿವೇರ್‌ ವ್ರಾಪ್‌ ಶರ್ಟ್ಸ್

ಈ ಔಟ್‌ಫಿಟ್ ಸಾಮಾನ್ಯವಾಗಿ ಫಾರ್ಮಲ್ಸ್ ಸೆಟ್‌ನಲ್ಲಿ ಕಂಡು ಬರುತ್ತವೆ. ಮಾನೋಕ್ರೋಮ್‌ ಶೇಡ್‌ಗಳಲ್ಲಿ ಇವು ಹೆಚ್ಚಾಗಿ ಬಿಡುಗಡೆಗೊಳ್ಳುತ್ತವೆ. ಡಿಸೈನರ್‌ಗಳ ಬಳಿ ವಿಶೇಷವಾಗಿ ಕಸ್ಟಮೈಸ್ಡ್‌ ಡಿಸೈನ್‌ನಲ್ಲಿ ಇವು ಲಭ್ಯ. ಇತ್ತೀಚೆಗೆ ಆನ್‌ಲೈನ್‌ ಶಾಪ್‌ಗಳಲ್ಲೂ, ನಾನಾ ಡಿಸೈನ್‌ನವು ದೊರೆಯುತ್ತಿವೆ.

Shirt Fashion

ಸೆಲೆಬ್ರೆಟಿಗಳ ಪ್ರಯೋಗಾತ್ಮಕ ಇಮೇಜ್‌

ಅಂದಹಾಗೆ, ಸೆಲೆಬ್ರೆಟಿಗಳ ಮುಖಾಂತರ ಇಂತಹ ರ‍್ಯಾಂಪ್‌ ಶರ್ಟ್‌ಗಳು ಸಾಮಾನ್ಯ ಪುರುಷರ ಫ್ಯಾಷನ್‌ಗೆ ಕಾಲಿಟ್ಟಿವೆ ಎನ್ನಬಹುದು. ಸಿನಿಮಾಗಳಲ್ಲಿ ಹಾಗೂ ಫ್ಯಾಷನ್‌ ರ‍್ಯಾಂಪ್‌ಗಳಲ್ಲಿ ಇವುಗಳನ್ನು ಸೆಲೆಬ್ರೆಟಿಗಳು ಧರಿಸಿ ಕಾಣಿಸಿಕೊಂಡ ನಂತರವೇ, ಇವುಗಳನ್ನು ಡಿಸೈನ್‌ ಮಾಡಿಸುವವರ ಸಂಖ್ಯೆ ಕ್ರಮೇಣ ಹೆಚ್ಚಾಯಿತು ಎನ್ನುತ್ತಾರೆ ಡಿಸೈನರ್ಸ್.

Shirt Fashion

ಮೆನ್ಸ್ ಹೈ ಫ್ಯಾಷನ್‌ಗೆ ಸಾಥ್‌

ಮಾಡರ್ನ್‌ ಪಾರ್ಟಿ ಪ್ರಿಯ ಹುಡುಗರ ಹೈ ಫ್ಯಾಷನ್‌ಗೆ ಇವು ಸಾಥ್‌ ನೀಡುತ್ತಿವೆ. ಪ್ರಯೋಗಾತ್ಮಕ ವಿನ್ಯಾಸದ ಈ ಶೈಲಿಯ ಶರ್ಟ್ಸ್, ಡಿಫರೆಂಟ್‌ ಲುಕ್‌ ಬಯಸುವ ಯುವಕರನ್ನು ಬರಸೆಳೆಯುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Monsoon Fashion Do’s & Don’ts: ಹುಡುಗಿಯರ ಮಾನ್ಸೂನ್‌ ಡ್ರೆಸ್‌ ಹೇಗಿರಬೇಕು? ಹೇಗಿರಬಾರದು?

Monsoon Fashion do’s & don’ts: ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರು ಧರಿಸುವ ಸ್ಟೈಲಿಶ್‌ ಡ್ರೆಸ್‌ಗಳು ಹೇಗಿರಬೇಕು? ಹೇಗಿರಬಾರದು ? ಎಂಬುದನ್ನು ತಿಳಿಸಿರುವ ಫ್ಯಾಷನಿಸ್ಟಾಗಳು ಈ ಕುರಿತಂತೆ ಹುಡುಗಿಯರಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Fashion Do’s & Don’ts
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಹುಡುಗಿಯರು ಧರಿಸುವ (Monsoon Fashion do’s & don’ts) ಉಡುಪುಗಳು ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು, ಧರಿಸಿದಾಗ ಕಂಫರ್ಟಬಲ್‌ ಆಗಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ಗೆ ತಕ್ಕಂತಿರಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ಹುಡುಗಿಯರು ಸ್ಟೈಲಿಶ್‌ ಆಗಿ ಕಾಣಿಸಲು ಮಾನ್ಸೂನ್‌ನಲ್ಲೂ ಸಮ್ಮರ್‌ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತಾರಂತೆ. ಇನ್ನು, ಕೆಲವು ಯುವತಿಯರು ಮಾನ್ಸೂನ್‌ ಸೀಸನ್‌ನಲ್ಲಿ ಹೊದ್ದುಕೊಂಡಂತಿರುವ ಉಡುಪುಗಳನ್ನು ಧರಿಸುತ್ತಾರಂತೆ. ಆದರೆ, ಫ್ಯಾಷನಿಸ್ಟ್‌ಗಳ ಪ್ರಕಾರ, ಆಯಾ ವರ್ಗದ ಅನುಗುಣವಾಗಿ ಹುಡುಗಿಯರು ಧರಿಸುವ ಉಡುಪುಗಳು ಬದಲಾಗುತ್ತವಂತೆ. ಅದರಲ್ಲೂ, ಜೆನ್‌ ಜಿ ಹುಡುಗಿಯರು, ಯಾವುದೇ ಸೀಸನ್‌ ಟ್ರೆಂಡ್‌ ಫಾಲೋ ಮಾಡುವುದಿಲ್ಲ, ಬದಲಾಗಿ ತಮ್ಮದೇ ಆದ ಸ್ಟೈಲಿಶ್‌ ಮಾರ್ಗವನ್ನು ಹಿಡಿಯುತ್ತಾರಂತೆ. ಅಂದ ಹಾಗೆ, ಇದೆಲ್ಲಾ ಓಕೆ, ಹಾಗೆಂದು ಸೀಸನ್‌ಗೆ ವಿರುದ್ಧವಾಗಿ ಕಾಣಿಸುವುದು ದಿನಚರಿಯಾಗಬಾರದು! ಇದು ಆರೋಗ್ಯಕ್ಕೂ ಮಾರಕ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾದಲ್ಲಿ, ಈ ಸೀಸನ್‌ನಲ್ಲಿ ಯಾವ ರೀತಿಯ ಡ್ರೆಸ್‌ಗಳು ಬೆಸ್ಟ್? ಯಾವುದು ನಾಟ್‌ ಓಕೆ ! ಎಂಬುದನ್ನು ಫ್ಯಾಷನಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

Monsoon Fashion

ಮಾನ್ಸೂನ್‌ ಡ್ರೆಸ್‌ಗಳು

ಮಳೆಗಾಲದಲ್ಲಿ ಟ್ರೆಂಡಿಯಾಗುವ ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌-ಫ್ರಾಕ್ಸ್, ಸ್ಕೆಟರ್‌ ಡ್ರೆಸ್, ಮಿಡಿ ಡ್ರೆಸ್‌, ಹೈ ವೇಸ್ಟ್ ಶಾಟ್ಸ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆಗೆ ಟ್ರೆಂಡಿಯಾಗಿಯೂ ಬಿಂಬಿಸುತ್ತವೆ.

Monsoon Fashion

ಗಿಡ್ಡ ಪ್ಯಾಂಟ್‌ಗೆ ಓಕೆ ಹೇಳಿ

ಆಂಕೆಲ್‌ ಲೆಂಥ್‌, ಕ್ರಾಪ್ಡ್ ಪ್ಯಾಂಟ್‌, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪುಶ್‌ ಬ್ಯಾಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಪಲ್ಹಾಜೋ, ಪ್ಯಾರಲಲ್‌, ಬೂಟ್‌ ಕಟ್‌, ಶರರಾ, ಘರಾರದಂತಹ ಅಗಲವಾದ ನೆಲಹಾಸುವಂತಹ ಪ್ಯಾಂಟ್‌ಗಳನ್ನು ಧರಿಸಬೇಡಿ.

Monsoon Fashion

ನೆಲ ಮುಟ್ಟುವ ಗೌನ್‌ಗಳನ್ನು ದೂರವಿಡಿ

ನಡೆಯುವಾಗ ನೆಲವನ್ನು ಮುಟ್ಟುವಂತಹ ಉದ್ದುದ್ದ ಮ್ಯಾಕ್ಸಿ, ಗೌನ್‌ಗಳಿಗೆ ಸದ್ಯಕ್ಕೆ ಬೈ ಹೇಳಿ. ಇವು ನೋಡಲು ಮಾತ್ರ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ನಿರ್ವಹಣೆ ಮಾಡುವುದು ಕಷ್ಟ.

Monsoon Fashion

ಭಾರವಿಲ್ಲದ ಲೈಟ್‌ವೈಟ್‌ ಉಡುಗೆ ಧರಿಸಿ

ಲೇಯರಿಂಗ್‌ ಹೆಸರಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳು ಉಸಿರುಕಟ್ಟಿಸಬಹುದು. ಮಳೆಯಲ್ಲಿ ಒದ್ದೆಯಾದರಂತೂ ಕಿರಿಕಿರಿ ಎನಿಸಬಹುದು. ಇದನ್ನು ಅವಾಯ್ಡ್ ಮಾಡಲು, ಬೇಗನೇ ಒಣಗುವ ಲೈಟ್‌ವೈಟ್‌ ಡ್ರೆಸ್‌ಗಳಿಗೆ ಸೈ ಎನ್ನಿ.

ಇದನ್ನೂ ಓದಿ: Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

ಹೆವಿ ಎಥ್ನಿಕ್‌ ಡಿಸೈನರ್‌ವೇರ್‌ ಅವಾಯ್ಡ್ ಮಾಡಿ

ಹೆವಿ ಎಥ್ನಿಕ್‌ವೇರ್‌ಗಳನ್ನು ಆವಾಯ್ಡ್ ಮಾಡಿ. ಎಥ್ನಿಕ್‌ವೇರ್‌ ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ಆಂಕೆಲ್‌ ಲೆಂಥ್‌ ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ. ಶಾರ್ಟ್ ಕುರ್ತಾ, ಆಂಕೆಲ್‌ ಲೆಂಥ್‌ ಚೂಡಿದಾರ್‌, ಸಲ್ವಾರ್‌ಗಳನ್ನು ಧರಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ವೈವಿಧ್ಯಮಯ ಬಾರ್ಡರ್‌ ಸೀರೆಗಳು

Varamahalakshmi Festival 2024: ಈ ಸಾಲಿನ ವರಮಹಾಲಕ್ಷ್ಮಿ ಹಬ್ಬಕ್ಕೆ ವೈವಿಧ್ಯಮಯ ಬಾರ್ಡರ್‌ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ರೇಷ್ಮೆ ಮಾತ್ರವಲ್ಲ, ನಾನಾ ಬಗೆಯ ಬಾರ್ಡರ್‌ ಹೊಂದಿದ ಸೀರೆಗಳು ಟ್ರೆಂಡಿಯಾಗಿವೆ. ಇದಕ್ಕೆ ಕಾರಣವೇನು? ಸದ್ಯ ಚಾಲ್ತಿಯಲ್ಲಿರುವ ಬಾರ್ಡರ್ ಸೀರೆಗಳ್ಯಾವುವು? ಇಲ್ಲಿದೆ ವರದಿ.

VISTARANEWS.COM


on

Varamahalakshmi Festival 2024
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ವರಮಹಾಲಕ್ಷ್ಮಿ (Varamahalakshmi Festival 2024) ಹಬ್ಬದ ಸಂಭ್ರಮ ಹೆಚ್ಚಿಸಲು ಈ ಬಾರಿ ನಾನಾ ಬಗೆಯ ಬಾರ್ಡರ್ ಸೀರೆಗಳು ಫೆಸ್ಟಿವ್‌ ಸೀಸನ್‌ಗೆ ಲಗ್ಗೆ ಇಟ್ಟಿವೆ.

Varamahalakshmi Festival 2024

ಹಬ್ಬಕ್ಕೆ ವೈವಿಧ್ಯಮಯ ಬಾರ್ಡರ್ ಸೀರೆಗಳು

ಸಡಗರ ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ನೆಚ್ಚಿನ ಹಬ್ಬ. ಈ ಹಬ್ಬಕ್ಕೆ ದೇವಿ ಲಕ್ಷ್ಮಿಗೆ ಸೀರೆ ಉಡಿಸಿ ಸಿಂಗರಿಸುವುದು ಮಾತ್ರವಲ್ಲ, ತಾವು ಕೂಡ ಸೀರೆಗಳನ್ನು ಉಟ್ಟು ಸಂತಸ ಪಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ, ಮಾನಿನಿಯರ ಬೇಡಿಕೆಗೆ ತಕ್ಕಂತೆ, ಸೀರೆ ಲೋಕವು ಲೆಕ್ಕವಿಲ್ಲದಷ್ಟು ಸೀರೆಗಳನ್ನು ಬಿಡುಗಡೆಗೊಳಿಸಿದೆ. ಅವುಗಳಲ್ಲಿ ರೇಷ್ಮೆ ಸೀರೆಗಳು ಮಾತ್ರವಲ್ಲ, ನಾನಾ ಬಗೆಯ ವೈವಿಧ್ಯಮಯ ಸೀರೆಗಳು ಸೇರಿವೆ. ಇದಕ್ಕೆ ಪೂರಕ ಎಂಬಂತೆ, ಈ ಬಾರಿ ಅತಿ ಹೆಚ್ಚು ಬಾರ್ಡರ್‌ ಸೀರೆಗಳು, ಅತಿ ಹೆಚ್ಚು ಕಾಂಬಿನೇಷನ್‌ ಹಾಗೂ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯ ವೈವಿಧ್ಯಮಯ ಫ್ಯಾಬ್ರಿಕ್‌ನಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಡಿಸೈನರ್ಸ್ ಜಾನಕಿ ಹಾಗೂ ದೀಪ್‌ವೀರ್‌.

Varamahalakshmi Festival 2024

ಟ್ರೆಂಡಿ ಬಾರ್ಡರ್‌ ಸೀರೆಗಳು

ರೇಷ್ಮೆ ಬಾರ್ಡರ್ ಸೀರೆಗಳಲ್ಲಿ ಇದೀಗ ಸಿಂಗಲ್‌, ಡಬ್ಬಲ್‌, ಬಿಗ್‌ ಬಾರ್ಡರ್‌ನವು ಮೊದಲಿನಿಂದಲೂ ಎವರ್‌ಗ್ರೀನ್‌ ಟ್ರೆಂಡ್‌ ಲಿಸ್ಟ್‌ನಲ್ಲಿವೆ. ಇನ್ನು, ಇತರೇ ಫ್ಯಾಬ್ರಿಕ್‌ನ ಸೀರೆಗಳಲ್ಲಿ ಇದೀಗ ಗೋಲ್ಡ್‌ ಜರಿ ಬಾರ್ಡರ್‌, ಕಾಂಟ್ರಾಸ್ಟ್ ಬಾರ್ಡರ್‌, ಸಿಲ್ವರ್‌ ವರ್ಕ್‌ ಬಾರ್ಡರ್‌, ಎಂಬ್ರಾಯ್ಡರಿ ಡಿಸೈನ್‌ ಬಾರ್ಡರ್‌, ಲೇಸ್‌ ಡಿಸೈನ್‌ ಬಾರ್ಡರ್‌, ಫ್ಲೋರಲ್‌ ಬಾರ್ಡರ್‌, ಬುಟ್ಟಾ ವರ್ಕ್‌, ಟೆಂಪಲ್‌ ಡಿಸೈನ್‌ ಬಾರ್ಡರ್‌ನವು ಟ್ರೆಂಡಿಯಾಗಿವೆ. ಇನ್ನು, ಪ್ಯಾಚ್‌ ಬಾರ್ಡರ್‌, ಟ್ಯಾಸೆಲ್ಸ್ , ಮಿರರ್‌ ವರ್ಕ್‌, ಕಟ್‌ ವರ್ಕ್ ಬಾರ್ಡರ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಬಾರ್ಡರ್‌ ಸೀರೆಗಳು ಊಹೆಗೂ ಮೀರಿದ ಡಿಫರೆಂಟ್‌ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಕೆಲವಂತೂ ಯೂನಿಕ್‌ ಡಿಸೈನ್‌ ಇರುವಂತಹ ಡಿಸೈನರ್‌ ಬಾರ್ಡರ್‌ ಸೀರೆಗಳು, ಬೆರಳೆಣಿಕೆ ಲೆಕ್ಕದಲ್ಲಿ ಲಭ್ಯ. ಹಾಗಾಗಿ ಅವುಗಳ ಡಿಸೈನ್‌ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಸೀರೆ ಶಾಪ್‌ವೊಂದರ ಸೇಲ್ಸ್ ಮ್ಯಾನೇಜರ್‌ ವರದರಾಜು.

ಬಾರ್ಡರ್‌ ಸೀರೆ ಟ್ರೆಂಡಿಯಾಗಿರುವುದು ಯಾಕೆ?

ಅಂದಹಾಗೆ, ಹಬ್ಬಗಳ ಸೀಸನ್‌ನಲ್ಲಿ ಅತಿ ಹೆಚ್ಚು ವಿನ್ಯಾಸದ ಬಾರ್ಡರ್‌ ಸೀರೆಗಳು ಟ್ರೆಂಡಿಯಾಗುತ್ತವೆ. ಇದಕ್ಕೆ ಕಾರಣವೂ ಇದೆ. ರೇಷ್ಮೆ ಸೀರೆಯಾಗಲಿ ಅಥವಾ ಯಾವುದೇ ಸೀರೆಯಾಗಲಿ ಬಾರ್ಡರ್‌ ಇದ್ದಾಗ ಅವು ಟ್ರೆಡಿಷನಲ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ ರಾಮಕೃಷ್ಣ.

  • ಸೀರೆಯು ಫ್ಯಾಬ್ರಿಕ್‌ಗೆ ತಕ್ಕಂತೆ ಬಾರ್ಡರ್ ಡಿಸೈನ್‌ ಅನ್ನು ಒಳಗೊಂಡಿರುತ್ತವೆ.
  • ರೇಷ್ಮೆಯ ಬಾರ್ಡರ್ ಸೀರೆ ಕೊಳ್ಳುವಾಗ ಸಿಲ್ಕ್ ಮಾರ್ಕ್‌ ಗಮನಿಸಿ.
  • ಕಂಟೆಂಪರರಿ ಬಾರ್ಡರ್‌ ಡಿಸೈನ್‌ನವು ಟ್ರೆಂಡ್‌ನಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

Continue Reading

ಫ್ಯಾಷನ್

Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

Blazer Saree Fashion: ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಲೇಯರ್‌ ಲುಕ್ ನೀಡುವ ಆಕರ್ಷಕ ಬ್ಲೇಜರ್‌ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ ಏನಿದು ಬ್ಲೇಜರ್‌ ಸೀರೆ ? ಈ ಬಗ್ಗೆ ಅವರೇನು ಹೇಳಿದ್ದಾರೆ? ಮಾನ್ಸೂನ್‌ಗೆ ಅವರು ನೀಡಿರುವ ಟಿಪ್ಸ್ ಏನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Blazer Saree Fashion
ಚಿತ್ರಗಳು: ಶ್ವೇತಾ ಚೆಂಗಪ್ಪ , ನಟಿ, ನಿರೂಪಕಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಸೀಸನ್‌ನಲ್ಲಿ ಬ್ಲೇಜರ್‌ ಸೀರೆ ನಟಿ ಶ್ವೇತಾ ಚೆಂಗಪ್ಪ (Blazer Saree Fashion) ಅವರನ್ನು ಸಿಂಗರಿಸಿದೆ. ಹೌದು, ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಲೇಯರ್‌ ಲುಕ್ ನೀಡುವ ಆಕರ್ಷಕ ಬ್ಲ್ಯಾಕ್‌ ಬ್ಲೇಜರ್‌ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಇದು ಅವರಿಗೆ ಕ್ಲಾಸಿ ಲುಕ್‌ ನೀಡಿದೆ. ಅಂದಹಾಗೆ, ಶ್ವೇತಾ ಚೆಂಗಪ್ಪ ಮೊದಲಿನಿಂದಲೂ ಫ್ಯಾಷೆನಬಲ್‌ ಲೇಡಿ. ರಿಯಾಲಿಟಿ ಶೋಗಳಲ್ಲಿ ನಾನಾ ಬಗೆಯ ಪ್ರಯೋಗಾತ್ಮಕ ಡಿಸೈನರ್‌ವೇರ್‌ ಹಾಗೂ ಸೀರೆಗಳಲ್ಲಿ ಅಂದವಾಗಿ ಕಾಣಿಸಿಕೊಳ್ಳುವ ಇವರು ನಟಿ ಕೂಡ. ಇನ್ನು, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಈ ಫ್ಯಾಷನೆಬಲ್‌ ಲುಕ್‌ಗಾಗಿ ಫಾಲೋವರ್ಸ್ ಕೂಡ ಹೊಂದಿದ್ದಾರೆ.

ಏನಿದು ಬ್ಲೇಜರ್‌ ಸೀರೆ ಫ್ಯಾಷನ್‌?

ಎಥ್ನಿಕ್‌ ಡಿಸೈನ್‌ ಹೊಂದಿದ ಬ್ಲೇಜರ್‌ ಮೇಲೆ ಧರಿಸುವ ಸೀರೆಯಿದು. ಬ್ಲೇಜರ್‌ ಡಿಸೈನ್‌ನಿಂದ ಸ್ಪೂರ್ತಿಗೊಂಡ ಸೀರೆ ಮೇಲೆ ಧರಿಸುವ ಡಿಸೈನರ್‌ ಮೇಲುಡುಗೆಯಿದು. ಸೀರೆಗೆ ಲೇಯರ್‌ ಲುಕ್‌ ಕಲ್ಪಿಸುತ್ತದೆ. ಅಲ್ಲದೇ, ನೋಡಲು ಅತ್ಯಾಕರ್ಷಕವಾಗಿ ಬಿಂಬಿಸುತ್ತದೆ. ಶ್ವೇತಾ ಚಂಗಪ್ಪ ಉಟ್ಟಿರುವ ಈ ಸೀರೆಯನ್ನು ಮಯಾರಾ ಕೌಚರ್‌ ವಿನ್ಯಾಸಗೊಳಿಸಿದೆ. ಸಾಲಿಡ್‌ ಬ್ಲ್ಯಾಕ್‌ ಶೇಡ್‌ನ ಈ ಸೀರೆಯ ಬ್ಲೇಜರ್‌ ಕಂಪ್ಲೀಟ್‌ ಎಂಬ್ರಾಯ್ಡರಿ ಒಳಗೊಂಡಿದೆ. ಸಾದಾ ಸೀರೆಯೊಳಗಿನ ಪಲ್ಲು ಕೂಡ ಬಾರ್ಡರ್‌ ಡಿಸೈನ್‌ನಿಂದ ಅಲಂಕಾರಗೊಂಡಿದೆ. ಇನ್ನು, ಈ ಬ್ಲೇಜರ್‌ನ ಸ್ಲೀವ್‌ ಡಿಫರೆಂಟ್‌ ಎಂಬ್ರಾಯ್ಡರಿ ಹೊಂದಿದ್ದು, ಬಟನ್‌ ಇಲ್ಲದ ಈ ಬ್ಲೇಜರ್‌, ಸೀರೆಯ ಅಂದ ಹೆಚ್ಚಿಸಿದೆ.

ಶ್ವೇತಾ ಚೆಂಗಪ್ಪ ಮಾನ್ಸೂನ್‌ ಫ್ಯಾಷನ್‌

ತಮ್ಮ ಈ ಲುಕ್‌ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡ ಶ್ವೇತಾ ಚೆಂಗಪ್ಪ, ಮಾನ್ಸೂನ್‌ನಲ್ಲಿ ಆದಷ್ಟೂ ಕಂಫರ್ಟಬಲ್‌ ಫ್ಯಾಷನ್‌ ಅಳವಡಿಸಿಕೊಳ್ಳುತ್ತಾರಂತೆ. ಯಾವುದೇ ಉಡುಗೆಯಾದರೂ ಸೀಸನ್‌ಗೆ ತಕ್ಕಂತೆ ಇರುವುದರೊಂದಿಗೆ ಕ್ಲಾಸಿಯಾಗಿಯೂ ಕಾಣಿಸಬೇಕು ಎನ್ನುತ್ತಾರೆ. ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವಾಗ ಎಥ್ನಿಕ್‌ ಡಿಸೈನರ್‌ವೇರ್‌ ಧರಿಸುವುದು ನನಗಿಷ್ಟ, ಔಟಿಂಗ್‌ನಲ್ಲಿ ಸಿಂಪಲ್‌ ಸ್ಟೈಲ್‌ಸ್ಟೇಟ್‌ಮೆಂಟ್‌ಗಳಿಷ್ಟ ಎನ್ನುತ್ತಾರೆ.

ಮಾನ್ಸೂನ್‌ ಲುಕ್‌ಗೆ ಶ್ವೇತಾ 3 ಸಿಂಪಲ್‌ ಟಿಪ್ಸ್

  1. ಲೇಯರ್‌ ಲುಕ್‌ ಮಾಡುವಾಗ ಕಂಫರ್ಟಬಲ್‌ ಫ್ಯಾಷನ್‌ಗೆ ಆದ್ಯತೆ ನೀಡಬೇಕು.
  2. ಟ್ರಾವೆಲ್‌ ಮಾಡುವಾಗ ಆದಷ್ಟೂ ರಿಂಕಲ್‌ ಫ್ರೀ ಫ್ಯಾಷನ್‌ವೇರ್ಸ್ ಕ್ಯಾರಿ ಮಾಡುವುದು ಉತ್ತಮ.
  3. ಮಾನ್ಸೂನ್‌ನಲ್ಲಿ ಸಿಂಪಲ್‌ ಮೇಕಪ್‌ ಮಾಡಿ.

ಇದನ್ನೂ ಓದಿ: National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್‌ ಲೂಮ್‌ ಸೀರೆಗಳಿವು

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್‌ ಲೂಮ್‌ ಸೀರೆಗಳಿವು

National Handloom day 2024: ಕರ್ನಾಟಕದ ಪ್ರಮುಖ ಹ್ಯಾಂಡ್‌ ಲೂಮ್‌ ಸೀರೆಗಳು ಗಡಿ ದಾಟಿ ಜನಪ್ರಿಯಗೊಂಡು ಮಹಿಳೆಯರನ್ನು ಆಕರ್ಷಿಸತೊಡಗಿವೆ. ಇಳಕಲ್‌ನಲ್ಲಿ ಸಿದ್ಧಗೊಳ್ಳುವ ಸೀರೆಗಳಂತೂ 8ನೇ ಶತಮಾನದಲ್ಲೆ ಉಡಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಅಂದಿನಿಂದ ಇಂದಿನವರೆಗೂ ಇಳಕಲ್‌ ಸೀರೆಗಳು ಯೂನಿಕ್‌ ಡಿಸೈನ್‌ ಆದ ಚುಕ್ಕಿ ಬಾರ್ಡರ್‌, ತೆನಿ ಪಲ್ಲು ಡಿಸೈನ್‌ನಿಂದಲೇ ಸೆಳೆಯುತ್ತಿವೆ. ಇಂಥ ಇನ್ನೂ ಹಲವು ಸೀರೆಗಳು ಯಾವುವು? ಅವುಗಳ ವಿಶೇಷತೆಯೇನು? ಈ ಕುರಿತಂತೆ ಸೀರೆ ಪರಿಣತರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

National Handloom day 2024
ಚಿತ್ರಗಳು: ರೇಣುಕಾ ಪ್ರಕಾಶ್‌, ಡಿಸೈನರ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕರ್ನಾಟಕದಲ್ಲಿ ನಾನಾ (National Handloom day 2024) ಹ್ಯಾಂಡ್‌ಲೂಮ್‌ ಸೀರೆಗಳು ತಯಾರಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವುಗಳಲ್ಲಿ ಕೆಲವು ಹ್ಯಾಂಡ್‌ಲೂಮ್‌ ಸೀರೆಗಳು, ಇತ್ತೀಚೆಗೆ ಗಡಿಯಾಚೆಗೂ ದಾಟಿ ಜನಪ್ರಿಯಗೊಂಡಿವೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಹಾಗಾದಲ್ಲಿ ಈ ಕೆಟಗರಿಯಲ್ಲಿ ಬರುವ ಹ್ಯಾಂಡ್‌ಲೂಮ್‌ ಸೀರೆಗಳು ಯಾವುವು? ಅವುಗಳ ವಿಶೇಷತೆಯೇನು? ಈ ಕುರಿತಂತೆ ಸೀರೆ ಪರಿಣತರು ಇಲ್ಲಿ ವಿವರಿಸಿದ್ದಾರೆ.

Ilakal saree

ಇಳಕಲ್‌ ಸೀರೆಗಳು

ಉತ್ತರ ಕರ್ನಾಟಕದ ಸೀರೆಗಳಿವು. ಮೂಲತಃ ಇಳಕಲ್‌ನಲ್ಲಿ ಸಿದ್ಧಗೊಳ್ಳುವ ಈ ಸೀರೆಗಳನ್ನು 8ನೇ ಶತಮಾನದಲ್ಲೆ ಉಡಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಅಂದಿನಿಂದ ಇಂದಿನವರೆಗೂ ಇಳಕಲ್‌ ಸೀರೆಗಳು ಯೂನಿಕ್‌ ಡಿಸೈನ್‌ ಆದ ಚುಕ್ಕಿ ಬಾರ್ಡರ್‌, ತೆನಿ ಪಲ್ಲು ಡಿಸೈನ್‌ನಿಂದಲೇ ಸೆಳೆಯುತ್ತಿವೆ.

pattada anchu saree

ಪಟ್ಟೆದ ಅಂಚು ಸೀರೆಗಳು

ವೃತ್ತಿಪರ ಮಹಿಳೆಯರ ಆಯ್ಕೆಯಲ್ಲಿ, ಇತ್ತೀಚೆಗೆ ಸೇರಿರುವ ಈ ಪಟ್ಟೆದ ಅಂಚು ಸೀರೆಗಳು 10ನೇ ಶತಮಾನದಿಂದಲೇ ಇದೆ. ಸೀರೆಯ ಬಾರ್ಡರ್‌ ಮತ್ತು ಚೆಕ್ಸ್ ವಿನ್ಯಾಸವನ್ನು ಹೈಲೈಟ್‌ ಮಾಡುವ ಇವು ಎದ್ದು ಕಾಣುವ ಹಳದಿ, ಕೆಂಪು, ಹಸಿರು ಹಾಗೂ ಗುಲಾಬಿ ಶೇಡ್‌ನಲ್ಲಿ ದೊರೆಯುತ್ತವೆ.

gulugudda khan saree

ಗುಳೆದಗುಡ್ಡ ಖಣ ಸೀರೆಗಳು

ಬಾಗಲಕೋಟೆಯ ಗುಳೇದಗುಡ್ಡ ಗ್ರಾಮದಲ್ಲಿ ಸಿದ್ಧಗೊಳ್ಳುವ ಈ ಸೀರೆಗಳೀಗ ವ್ಯಾಪ್ತಿ ಪ್ರದೇಶವನ್ನು ಮೀರಿ ಖ್ಯಾತಿ ಗಳಿಸಿವೆ. ಗುಳೇದಗುಡ್ಡ ಖಣ ಫ್ಯಾಬ್ರಿಕ್‌ನಿಂದ ತಯಾರಾಗುವ ಈ ಸೀರೆ ಇದೀಗ ಶರ್ಟ್, ಡ್ರೆಸ್‌ ಹಾಗೂ ಪಿಲ್ಲೋ ಕವರ್‌, ಪರದೆಗಳಿಗೂ ಬಳಕೆಯಾಗುತ್ತಿದೆ.

Molakalmuru silk saree

ಮೊಳಕಾಲ್ಮೂರು ಸಿಲ್ಕ್ ಸೀರೆ

ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ತಯಾರಾಗುವ ಸಿಲ್ಕ್‌ ಸೀರೆಗಳಿವು. ಮೈಸೂರು ಮಹಾರಾಜರ ಕಾಲದಿಂದಲೇ ಸಾಕಷ್ಟು ಜನಪ್ರಿಯಗೊಂಡಿದ್ದ ಸೀರೆಗಳಿವು. ಬಾರ್ಡರ್‌ ಹಾಗೂ ಪಲ್ಲುವಿನಲ್ಲಿ ಮೊಟಿಫ್‌ ಸೇರಿದಂತೆ ನಾನಾ ಡಿಸೈನ್‌ ಒಳಗೊಂಡಿರುತ್ತವೆ.

 Gajendragarh Sarees

ಗಜೇಂದ್ರಗಢ್‌ನ ಸೀರೆ

ಗದಗ್‌ ಜಿಲ್ಲೆಯ ಗಜೇಂದ್ರಗಢ್‌ನ ಕೋಟೆ ಕಾಟನ್‌ ಸೀರೆಗಳು ಈ ಮೊದಲು ಅಷ್ಟಾಗಿ ಜನಪ್ರಿಯಗೊಂಡಿರಲಿಲ್ಲ. ಇದೀಗ ಆನ್‌ಲೈನ್‌ನಲ್ಲಿ ದೊರಕಲಾರಂಭಿಸಿದ ನಂತರ ಹೆಚ್ಚು ಪಾಪುಲಾರಿಟಿ ಪಡೆದುಕೊಂಡಿವೆ. ಇವುಗಳಲ್ಲಿ ರಿವರ್ಸಿಬಲ್‌ ಪಲ್ಲು ಇರುವಂತವು ಲಭ್ಯ.

Udupi Cotton Sarees

ಉಡುಪಿ ಕಾಟನ್‌ ಸೀರೆಗಳು

ಕದಿಕೆ ಟ್ರಸ್ಟ್‌ ,ತಾಳಿಪಾಡಿ ನೇಕಾರರ ಸಹಕಾರ ಸಂಘದ ಸಹಯೋಗದೊಂದಿಗೆ ನೈಜ ಬಣ್ಣಗಳಿಂದ ತಯಾರಾಗುವ ಈ ಉಡುಪಿ ಸೀರೆಗಳು ಪರಿಸರ ಸ್ನೇಹಿ ಸೀರೆಗಳು. ಈ ಸೀರೆಗಳ ಪುನಶ್ಚೇತನದ ಹಿಂದೆ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಅವರ ಪರಿಶ್ರಮವಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
neeraj chopra kashinath naik 1
ಕ್ರೀಡೆ1 min ago

Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಏನ್‌ ಹೇಳ್ತಾರೆ ನೋಡಿ

Bhavishya
ಭವಿಷ್ಯ11 mins ago

Bhavishya: ಅಂಗೈಯಲ್ಲಿರುವ ʼಹೃದಯ ರೇಖೆಗಳುʼ ನಿಮ್ಮ ವ್ಯಕ್ತಿತ್ವ ಏನೆಂದು ಹೇಳುತ್ತವೆ; ಚೆಕ್‌ ಮಾಡಿ ನೋಡಿ!

BBMP Property Tax Hike postpone
ಬೆಂಗಳೂರು30 mins ago

BBMP Property Tax: ಬಿಬಿಎಂಪಿ ಆಸ್ತಿ ತೆರಿಗೆ ಬಾಕಿದಾರರಿಗೆ ಗುಡ್ ನ್ಯೂಸ್, ಬಾಕಿ ಪಾವತಿಗೆ ಸೆ.30ರವರೆಗೆ ಅವಧಿ ವಿಸ್ತರಣೆ

ರಾಜಮಾರ್ಗ ಅಂಕಣ nagara panchami
ಅಂಕಣ54 mins ago

ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

Govt Teachers
ಪ್ರಮುಖ ಸುದ್ದಿ2 hours ago

Govt Teachers: ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಆಲಿಸಿದ ಸಚಿವ ಮಧು ಬಂಗಾರಪ್ಪ; ಹೋರಾಟ ನಿಲ್ಲದು ಎಂದ ಸಂಘ

Herbal Supplement
ಆರೋಗ್ಯ2 hours ago

Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

Paris Olympics 2024
ಕ್ರೀಡೆ2 hours ago

Paris Olympics 2024: ಒಲಿಂಪಿಕ್ಸ್‌ನಲ್ಲಿ ಇಂದು ಭಾರತದ ಸ್ಪರ್ಧಿಗಳ ಕಾದಾಟ; ಯಾವ ಪದಕ ನಿರೀಕ್ಷೆ? ಇಲ್ಲಿದೆ ವೇಳಾಪಟ್ಟಿ

Nagara Panchami 2024
ಕರ್ನಾಟಕ2 hours ago

Nagara Panchami 2024: ನಾಗದೋಷ ಎಂದರೇನು? ಇದರ ಪರಿಹಾರ ಕ್ರಮಗಳು ಏನೇನು?

karnataka weather forecast
ಮಳೆ2 hours ago

Karnataka Weather : ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

Dina Bhavishya
ಭವಿಷ್ಯ3 hours ago

Dina Bhavishya : ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ; ವಾತಾವರಣ ಹದಗೆಡದಂತೆ ಜಾಗ್ರತೆ ವಹಿಸಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ14 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ15 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ17 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌