ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆಯುವಂತಹ ಡಿಸೈನ್ನಲ್ಲಿ ಸಿಲ್ವರ್ ಜ್ಯುವೆಲರಿಗಳು (Silver Jewel Trend) ಇದೀಗ ಟ್ರೆಂಡಿಯಾಗಿವೆ. ಮಾನಿನಿಯರ ಸಾಮಾನ್ಯ ಡಿಸೈನ್ಗಳಿಂದಿಡಿದು ಬ್ರೈಡಲ್ ಜ್ಯುವೆಲರಿಗಳಲ್ಲೂ (Bridal Jewellery) ಎಂಟ್ರಿ ನೀಡಿವೆ. ವೆಡ್ಡಿಂಗ್ ಸೀಸನ್ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಲೆಕ್ಕವಿಲ್ಲದಷ್ಟು ಬಂಗಾರದ ಇಮಿಟೇಷನ್ ಡಿಸೈನ್ಗಳಲ್ಲೂ ಬಿಡುಗಡೆಗೊಂಡಿವೆ.
ಸಿಲ್ವರ್ ಜ್ಯುವೆಲರಿಗಳಲ್ಲಿ ಬಂತು ವೆಡ್ಡಿಂಗ್ ಆಭರಣಗಳು
“ಸಿಲ್ವರ್ ಜ್ಯುವೆಲರಿಗಳು ಈ ಸೀಸನ್ನಲ್ಲಿ ಅತಿ ಹೆಚ್ಚು ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ. ವೆಡ್ಡಿಂಗ್ ಸೀಸನ್ಗೆ ಊಹೆಗೂ ಮೀರಿದ ಡಿಸೈನ್ನಲ್ಲಿ ಆಗಮಿಸಿವೆ. ಒಂದಕ್ಕಿಂತ ಒಂದು ಡಿಸೈನ್ಗಳು ಬಂಗಾರದ ಆಭರಣಗಳ ಡಿಸೈನ್ಗಳನ್ನು ಮೀರಿಸಿವೆ. ಹಾಗಾಗಿ ಮದುವೆಯಾಗುವ ಹೆಣ್ಣು ಮಕ್ಕಳು ಮಾತ್ರವಲ್ಲ, ಫ್ಯಾಮಿಲಿಯ ಇತರೇ ಹೆಣ್ಣು ಮಕ್ಕಳು , ಮಾನಿನಿಯರು ಕೂಡ ಇವನ್ನು ಕೊಳ್ಳತೊಡಗಿದ್ದಾರೆ. ಆ ಮಟ್ಟಿಗೆ ಇವು ಮಾನಿನಿಯರನ್ನು ಸೆಳೆದಿವೆ” ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರು.
ಟ್ರೆಂಡಿಯಾಗಿರುವ ಸಿಲ್ವರ್ ಜ್ಯುವೆಲರಿಗಳು
ಆಂಟಿಕ್ ಆಭರಣಗಳ ಸೆಟ್, ಪ್ರೀಶಿಯಸ್ ಜ್ಯುವೆಲರಿಗಳು, ಟೆಂಪಲ್ ಜ್ಯುವೆಲರಿ, ಕಂಟೆಂಪರರಿ ಡಿಸೈನ್ಸ್, ಹವಳದ ಸೆಟ್, ಮುತ್ತಿನ ಸೆಟ್, ಎಮರಾಲ್ಡ್ ಸೆಟ್, ಮೋಹನ್ಮಾಲ, ಬಿಗ್ ಚೋಕರ್ಸ್, ಸೊಂಟದ ಪಟ್ಟಿ, ಬಾಜುಬಂಧ್, ಕಡಗ, ಬಂಗಾರದ ಬಳೆಗಳ ಸೆಟ್, ಜಡೆನಾಗರ, ಮಾಟಿ, ಕಿವಿಯ ಬಿಗ್ ಮುತ್ತಿನ ಜುಮಕಿಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್ನ ಸಿಲ್ವರ್ ಆಭರಣಗಳು ಎಂಟ್ರಿ ನೀಡಿವೆ. ಅದರಲ್ಲೂ ಬಂಗಾರದ ಹಾಗೂ ವಜ್ರಾಭರಣಗಳ ಸೆಟ್ಗಳು ಅತಿ ಹೆಚ್ಚು ವೆಡ್ಡಿಂಗ್ ಬ್ರೈಡಲ್ ಸೆಟ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.
ಮೆನ್ಸ್ ಗೂ ಬಂತು ಸಿಲ್ವರ್ ಜ್ಯುವೆಲರಿ
ಬ್ರೇಸ್ಲೆಟ್ಸ್, ಕತ್ತಿನ ನಾನಾ ಬಗೆಯ ಚೈನ್ಗಳು, ಕೈ ಉಂಗುರಗಳು ಇದೀಗ ಮೆನ್ಸ್ ಜ್ಯುವೆಲರಿ ಕೆಟಗರಿಯಲ್ಲಿ ದೊರೆಯುತ್ತಿವೆ. ಬಂಗಾರ ಖರೀದಿಸಲು ಆಗದಿದ್ದವರಿಂದಿಡಿದು, ವೆರೈಟಿ ಡಿಸೈನ್ ಸೆಟ್ಗಳನ್ನು ಧರಿಸಲು ಬಯಸುವವರು, ಒಮ್ಮೆ ಧರಿಸಿ, ಮತ್ತೆ ರಿಪೀಟ್ ಮಾಡಲು ಬಯಸದವರು ಸಿಲ್ವರ್ ಜ್ಯುವೆಲರಿಗಳನ್ನು ಖರೀದಿಸತೊಡಗಿದ್ದಾರೆ.
ಕೈಗೆಟಕುವ ಬೆಲೆಯಲ್ಲಿ ಸಿಲ್ವರ್ ಜ್ಯುವೆಲರಿ
“ಮೊದಮೊದಲು ಕೇವಲ ಹೆಣ್ಣು ಮಕ್ಕಳ ಸಿಲ್ವರ್ ಜ್ಯುವೆಲರಿಗಳು ಹೆಚ್ಚು ಲಭ್ಯವಿದ್ದವು. ಇದೀಗ ಪುರುಷರ ಜ್ಯುವೆಲರಿಗಳು ಬಂದಿವೆ. ಕಡಿಮೆ ದರದಲ್ಲಿ ಅಂದರೇ ಸಾವಿರಾರು ರೂ.ಗಳಲ್ಲಿ ಭಾರಿ ಡಿಸೈನ್ನವನ್ನು ಖರೀದಿಸಬಹುದೆಂಬ ಲೆಕ್ಕಚಾರ ಹಲವರದ್ದು. ಲಕ್ಷಗಟ್ಟಲೇ ಬಂಗಾರಕ್ಕೆ ಸುರಿಯುವ ಬದಲು ಅದರ ತದ್ರೂಪದಂತಿರುವ ಸಿಲ್ವರ್ ಜ್ಯುವೆಲರಿಗಳನ್ನು ಖರೀದಿಸಿ, ಧರಿಸುವುದು ಇದೀಗ ಕಾಮನ್ ಆಗಿದೆ” ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ಸ್.
ಇದನ್ನೂ ಓದಿ: Fashion Trend: ಯುವತಿಯರನ್ನು ಸೆಳೆದಿರುವ 3 ಶೈಲಿಯ ವೈಟ್ ಪ್ಯಾಂಟ್ಗಳಿವು!
ಸಿಲ್ವರ್ ಜ್ಯುವೆಲರಿ ಪ್ರಿಯರು ಖರೀದಿಗೆ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ್ದು…
- ಟ್ರೆಂಡಿಯಾಗಿರುವ ವಿನ್ಯಾಸದವನ್ನು ಖರೀದಿಸಿ.
- ಹೆವ್ವಿ ಬಂಗಾರದ ರಿಪ್ಲೀಕಾ ಡಿಸೈನ್ನವು ಹೆಚ್ಚು ಚಾಲ್ತಿಯಲ್ಲಿವೆ.
- ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
- ನೀರು ಸೋಕಿಸಿದಲ್ಲಿ ಮಾಸಬಹುದು.
- ಪಾಲಿಶ್ ಕಡಿಮೆಯಾದಾಗ ಮತ್ತೊಮ್ಮೆ ಹಾಕಿಸಲು ಅಂಗಡಿಯವರನ್ನು ಸಂಪರ್ಕಿಸಿ.
- ರೀಸೇಲ್ ವ್ಯಾಲ್ಯೂ ಬಗ್ಗೆ ತಿಳಿದುಕೊಂಡು ಖರೀದಿಸಿ.
- ಬ್ರಾಂಡೆಡ್ ಆಭರಣ ಮಾರಾಟಗಾರರ ಬಳಿ ಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)