-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಮಾನ್ಸೂನ್ ಸೀಸನ್‌ನಲ್ಲಿ ಹುಡುಗಿಯರಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಗ್ಲಾಮರಸ್ ಲುಕ್ ನೀಡುವಂತಹ ಸಿಕ್ವೀನ್ಸ್ ರೆಟ್ರೋ ಸ್ಪೆಕ್ಟ್ರಮ್ ಡ್ರೆಸ್‌ಗಳು (Spectrum Dress Fashion) ಎಂಟ್ರಿ ನೀಡಿವೆ.
ಸೀಸನ್ ಗ್ಲಾಮರಸ್ ಫ್ಯಾಷನ್‌ನಲ್ಲಿ ಸ್ಪೆಕ್ಟ್ರಮ್ ಡ್ರೆಸ್
ಮಳೆಗಾಲದಲ್ಲಿ ಗ್ಲಾಮರಸ್ ಆಗಿ ಕಾಣಿಸುವ ಔಟ್‌ಫಿಟ್‌ಗಳು ಬಿಡುಗಡೆಗೊಳ್ಳುವುದು ತೀರಾ ಕಡಿಮೆ. ಬಿಡುಗಡೆಗೊಂಡರೂ ಅವು ಹೈ ಫ್ಯಾಷನ್ ಅಥವಾ ಹೈ ಸ್ಟ್ರೀಟ್ ಫ್ಯಾಷನ್ ಇಲ್ಲವೇ ಸೆಲೆಬ್ರೆಟಿ ಔಟ್‌ಫಿಟ್ ಕೆಟಗರಿಗೆ ಸೇರಿಕೊಂಡಿರುತ್ತವೆ. ಹಾಗಾಗಿ ಬೆಲೆಯೂ ದುಬಾರಿಯಾಗಿರುತ್ತದೆ. ಇನ್ನು, ಮಾನ್ಸೂನ್‌ನಲ್ಲಿ ಸ್ಲಿವ್‌ಲೆಸ್ ಫ್ಯಾಷನ್ ಇಲ್ಲದಿದ್ದರೂ, ಈ ಸೀಸನ್‌ನಲ್ಲಿ ಗ್ಲಾಮರಸ್ ಆಗಿ ಕಾಣುವ ಸಲುವಾಗಿ ಈ ವಿನ್ಯಾಸಗಳು ಬಾಡಿಕಾನ್ ಡ್ರೆಸ್‌ನೊಳಗೆ ಸೇರಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರೀತು. ಅವರು ಹೇಳುವಂತೆ ಮಾನ್ಸೂನ್‌ನಲ್ಲಿ ಈ ಔಟ್‌ಫಿಟ್‌ಗಳು ಹುಡುಗಿಯರ ಮನಸೂರೆಗೊಂಡಿವೆ. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ.
ಏನಿದು ರೆಟ್ರೊ ಸ್ಪೆಕ್ಟ್ರಮ್ ಡ್ರೆಸ್?
ಸಾದಾ ಸಿಕ್ವೀನ್ಸ್ ಡ್ರೆಸ್ ಮೇಲೆ ಕಲರ್‌ಫುಲ್ ರೈನ್ಬೋ ಚಿತ್ತಾರದಂತೆ ವಿನ್ಯಾಸಗೊಂಡಿರುವ ಈ ಔಟ್‌ಫಿಟ್, ಕಾಳೇಜು ಹುಡುಗಿಯರ ಹಾಗೂ ಜೆನ್ ಜಿ ಗ್ಲಾಮರಸ್ ಯುವತಿಯರ ಫ್ಯಾಷನ್ ಚಾಯ್ಸ್ನಲ್ಲಿ ಸೇರಿಕೊಂಡಿವೆ. ಈ ಉಡುಪಿನಲ್ಲಿ ಅತಿಯಾದ ವಿನ್ಯಾಸದ ಹಾವಳಿ ಇರದ ಕಾರಣ, ಈ ಉಡುಗೆ , ನೋಡಲು ತೀರಾ ಸಿಂಪಲ್ ಡಿಸೈನ್ ಎಂದೆನಿಸುತ್ತದೆ. ಆದರೆ, ಲೈಟ್‌ನಲ್ಲಿ ಜಗಮಗಿಸುತ್ತದೆ. ಸಿಕ್ವೀನ್ಸ್ ಡಿಸೈನ್ ನಿಂದಾಗಿ ಪಾರ್ಟಿವೇರ್‌ನಂತೆಯೂ ಕಾಣಿಸುವುದು. ಇದರಿಂದಾಗಿ, ಬಹಳಷ್ಟು ಹುಡುಗಿಯರು ಈ ಡ್ರೆಸ್‌ಗಳನ್ನು ಪಾರ್ಟಿವೇರ್‌ಗಳಾಗಿಯೂ ಧರಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಇನ್ನು, ರೆಟ್ರೊ ಶೈಲಿಯಲ್ಲಿ ಔಟ್‌ಫಿಟ್ ಕಾಣಿಸುವುದರಿಂದ ಈ ಡ್ರೆಸ್‌ಗೆ ರೆಟ್ರೊ ಸ್ಪೆಕ್ಟ್ರಮ್ ಡ್ರೆಸ್ ಎಂದೂ ಕೂಡ ಹೇಳಲಾಗುತ್ತದೆ ಎನ್ನುತ್ತಾರೆ ಡಿಸೈನರ್ ಶ್ರೀಜಾ.
ಇದನ್ನೂ ಓದಿ: Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!
ಸ್ಪೆಕ್ಟ್ರಮ್ ಡ್ರೆಸ್ ಆಯ್ಕೆ & ಮೇಕೋವರ್ ಹೇಗೆ ?
- ಆದಷ್ಟೂ ಬಾಡಿ ಟೈಪ್ಗೆ ಹೊಂದುವಂತಹ ಡಿಸೈನ್ನವನ್ನು ಕೊಳ್ಳಿ.
- ಡಾರ್ಕ್ ಕಲರ್ನಲ್ಲಿ ಬ್ಲ್ಯಾಕ್ ಶೇಡ್ನ ಸ್ಪೆಕ್ಟ್ರಮ್ ಡ್ರೆಸ್‌ಗಳು ಟ್ರೆಂಡ್ನಲ್ಲಿವೆ.
- ಈ ಔಟ್‌ಫಿಟ್ ಮೇಲೆ ಕ್ರಾಪ್ ಜಾಕೆಟ್ ಧರಿಸಿ, ಮಾನ್ಸೂನ್ ಲುಕ್ ನೀಡಬಹುದು.
- ಹೀಲ್ಸ್ ಫುಟ್ವೇರ್ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.
- ಮಿನಿಮಲ್ ಆಕ್ಸೆಸರೀಸ್ ಕೂಡ ಆಕರ್ಷಕವಾಗಿ ಬಿಂಬಿಸುತ್ತದೆ.
( ಲೇಖಕಿ : ಫ್ಯಾಷನ್ ಪತ್ರಕರ್ತೆ )