ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ವಿನ್ಯಾಸದ ಸ್ಪೈಡರ್ ಇಯರಿಂಗ್ಸ್ (High Street Fashion Spider Earrings), ಸ್ಟಡ್ಸ್, ಹ್ಯಾಂಗಿಂಗ್ಸ್ ಹೈ ಫ್ಯಾಷನ್‌ಗೆ ಕಾಲಿಟ್ಟಿವೆ. ಹೌದು. ಇದೀಗ ಹೈ ಫ್ಯಾಷನ್‌ನ ಸ್ಟ್ರೀಟ್ ಫಂಕಿ ಸ್ಟೈಲ್‌ನಲ್ಲಿ ನಾನಾ ಬಗೆಯ ಸ್ಪೈಡರ್ ಜಂಕ್ ಫಂಕಿ ಇಯರಿಂಗ್ಸ್ ಎಂಟ್ರಿ ನೀಡಿವೆ. ನೋಡಲು ವೈಲ್ಡ್ ಲುಕ್ ನೀಡುವ ಇವು ವೆಸ್ಟರ್ನ್ ಲುಕ್‌ಗೆ ಸಾಥ್ ನೀಡುತ್ತಿವೆ.
ಡಿಫರೆಂಟ್ ಇಮೇಜ್
ನಾನಾ ಜಾತಿಯ ಜೇಡಗಳ ಚಿತ್ತಾರದಂತಿರುವ ಅಥವಾ ಆಕೃತಿಯಂತಿರುವ ವಿವಿಧ ಬಗೆಯ ಸ್ಪೈಡರ್ ಇಯರಿಂಗ್‌ಗಳು, ಈಗಾಗಲೇ ಆನ್‌ಲೈನ್ ಆಫ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಹೈ ಫ್ಯಾಷನ್ ಪ್ರಿಯ ಹೆಣ್ಣುಮಕ್ಕಳು, ಅದರಲ್ಲೂ ಜೆನ್ ಜಿ ಹುಡುಗಿಯರು, ಕಾಲೇಜು ಯುವತಿಯರು ಇವುಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಅಲ್ಟ್ರಾ ಮಾಡರ್ನ್ ಲುಕ್‌ಗಾಗಿ ಇವನ್ನು ಬಳಸತೊಡಗಿದ್ದಾರೆ. ಇನ್ನು, ಡಿಫರೆಂಟ್ ಲುಕ್‌ಗಾಗಿಯೂ ಸಾಕಷ್ಟು ಹುಡುಗಿಯರು ಧರಿಸತೊಡಗಿದ್ದಾರೆ. ತಮಗೆ ವಿಭಿನ್ನ ಲುಕ್ ಬೇಕು ಎನ್ನುವವರು ಕೂಡ ಇವನ್ನು ಧರಿಸತೊಡಗಿದ್ದಾರೆ. ವೆಸ್ಟರ್ನ್ ವೇರ್‌ನಲ್ಲಿ ಸದಾ ಕಾಣಿಸುವವರು ಇವನ್ನು ಹೆಚ್ಚಾಗಿ ಧರಿಸತೊಡಗಿದ್ದಾರೆ. ವಿಚಿತ್ರ ವಾಗಿ ಕಾಣುವ ಈ ಇಯರಿಂಗ್‌ಗಳು ಡಿಫರೆಂಟ್ ಇಮೇಜ್ ಬಯಸುವವರಿಗಾಗಿ ಮಾತ್ರ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳಾದ ರೀನಾ ಹಾಗೂ ಜೀನತ್. ಅವರ ಪ್ರಕಾರ, ಇದು ಎಥ್ನಿಕ್ ಲುಕ್‌ಗೆ ಮಾತ್ರ ನಾಟ್ ಓಕೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಸ್ಪೈಡರ್ ಇಯರಿಂಗ್ಸ್
ಹಾಲೋ ಸ್ಪೈಡರ್ ಸ್ಟಡ್ಸ್, ಸ್ಪೈಡರ್ ಹ್ಯಾಂಗಿಂಗ್ಸ್, ಸ್ಪೈಡರ್ ಬಿಗ್ ಇಯರಿಂಗ್ಸ್, ಸ್ಟೇಟ್‌ಮೆಂಟ್ ಸ್ಪೈಡರ್ ಸ್ಟಡ್ಸ್, ಜೈಂಟ್ ಸ್ಪೈಡರ್ ಇಯರಿಂಗ್ಸ್, ಮಿನಿ ಕೂಲ್ ಸ್ಪೈಡರ್ ಒಲೆಗಳು, ಸಫೈರ್ ಸ್ಪೈಡರ್ ಇಯರಿಂಗ್ಸ್, ಸ್ಪೈಡರ್ ರಿಂಗ್ಸ್, ಬ್ಲ್ಯಾಕ್ ವಿಡೋ ಸ್ಪೈಡರ್ ಹ್ಯಾಂಗಿಂಗ್ಸ್, ಪಂಕ್ ಬ್ಲ್ಯಾಕ್ ಸ್ಪೈಡರ್ ಸೇರಿದಂತೆ ನಾನಾ ಡಿಸೈನ್‌ನವು ಆನ್‌ಲೈನ್ ಶಾಪ್‌ಗಳಲ್ಲಿ ಲಗ್ಗೆ ಇಟ್ಟಿವೆ.
ವಿಭಿನ್ನ ಲುಕ್‌ಗಾಗಿ ಸ್ಪೈಡರ್ ಬಿಗ್ ಇಯರಿಂಗ್ಸ್
“ಸ್ಪೈಡರ್ ಬಿಗ್ ಇಯರಿಂಗ್ಸ್ ವೆಸ್ಟರ್ನ್ ಉಡುಪಿಗೆ ಧರಿಸಿದಾಗ ವೈಲ್ಡ್ ಲುಕ್ ನೀಡುತ್ತವೆ. ಇವು ಮಾಡೆಲ್ ಲುಕ್‌ಗೆ ಸಾಥ್ ನೀಡುತ್ತವೆ. ನೋಡುಗರ ಗಮನ ಸೆಳೆಯುತ್ತವೆ. ವಿಭಿನ್ನವಾಗಿ ನಮ್ಮನ್ನು ಬಿಂಬಿಸುತ್ತವೆ” ಎನ್ನುತ್ತಾರೆ ಮಾಡೆಲ್ ಹಾಗೂ ನಟಿ ಕೀರ್ತಿ ಕುಲ್ಹಾರಿ.
ಸ್ಪೈಡರ್ ಇಯರಿಂಗ್ಸ್ ಪ್ರಿಯರಿಗೆ 4 ಟಿಪ್ಸ್
- ಆನ್ಲೈನ್ನಲ್ಲಿ ಲೆಕ್ಕವಿಲ್ಲದಷ್ಟು ಡಿಸೈನ್‌ನವು ದೊರೆಯುತ್ತವೆ.
- ಫಂಕಿ ಲುಕ್‌ಗೆ ಹೇಳಿ ಮಾಡಿಸಿದ ಕಿವಿಯೊಲೆಗಳಿವು.
- ಯಾವುದೇ ಕಾರಣಕ್ಕೆ ಎಥ್ನಿಕ್ ಲುಕ್‌ಗೆ ಧರಿಸಬೇಡಿ.
- ಮಾಡೆಲ್ ಫೋಟೋಶೂಟ್ಗೆ ಬೆಸ್ಟ್ ಇಯರಿಂಗ್ಸ್ ಎನ್ನಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)