Site icon Vistara News

Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Star Holiday Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ, ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ (Star Holiday Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ತಮ್ಮ ಅವಳಿ-ಜವಳಿ ಮಕ್ಕಳ ಆರೈಕೆಯಲ್ಲೆ ಮುಳುಗಿ ಹೋಗಿದ್ದ ಅಮೂಲ್ಯ, ಸಾಕಷ್ಟು ಗ್ಯಾಪ್‌ ನಂತರ ಒಂದಿಷ್ಟು ವೆಸ್ಟರ್ನ್ ಡ್ರೆಸ್‌ಗಳಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ, ಪತಿ ಜಗದೀಶ್‌ರೊಂದಿಗೆ ಕಳೆದ ಹಾಲಿ ಡೇ ಲುಕ್‌ನ ಫೋಟೋಗಳಲ್ಲಿ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಫ್ಯಾಷನ್‌ ಸೆನ್ಸ್

ನಟಿ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಮದುವೆಯಾದ ನಂತರ ಕೆಲಕಾಲ ಮನೆ-ಪತಿ-ಮಕ್ಕಳು ಎಂಬುದರಲ್ಲೆ ಬ್ಯುಸಿಯಾಗಿದ್ದರು. ಈ ಮಧ್ಯೆ ಕೇವಲ ಎಥ್ನಿಕ್‌ ಫೋಟೋಗಳಲ್ಲೆ ಕಾಣಿಸಿಕೊಳ್ಳುತ್ತಿದ್ದರು. ಹಬ್ಬದ ಸಮಯದಲ್ಲಿ ರೇಷ್ಮೆ ಸೀರೆಗಳನ್ನು ಧರಿಸಿ, ಪತಿ ಇಲ್ಲವೇ ಮಕ್ಕಳೊಂದಿಗೆ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಪತಿಯೊಂದಿಗೆ ಹಾಲಿ ಡೇ ಯಲ್ಲಿ ಸಮ್ಮರ್‌ ಸೀಸನ್‌ನ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುವ ಫ್ಯಾಷನ್‌ ವಿಶ್ಲೇಷಕರು ಹೇಳುವಂತೆ, ಅಮೂಲ್ಯಗೆ ಎಲ್ಲಾ ಶೈಲಿಯ ಉಡುಗೆಗಳು ಹೊಂದುತ್ತವೆ. ಹಾಗಾಗಿ ಅವರು ಸೀರೆಯಲ್ಲೂ ಅಂದವಾಗಿ ಕಾಣಿಸುತ್ತಾರೆ. ವೆಸ್ಟರ್ನ್ ಔಟ್‌ಫಿಟ್‌ನಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎಂದು ಹೇಳುತ್ತಾರೆ.

ಅಮೂಲ್ಯ ಹಾಲಿ ಡೇ ಪ್ರಿಂಟ್‌ ಮ್ಯಾಕ್ಸಿ ಡ್ರೆಸ್ ಡ್ರೆಸ್‌

ಕೆಲವು ದಿನಗಳ ಹಿಂದೆ ಅಮೂಲ್ಯ ಧರಿಸಿದ್ದ ಹಾಲಿ ಡೇ ಪ್ರಿಂಟ್ಸ್ ಇರುವಂತಹ ಲೆನಿನ್‌ ಬ್ಲೆಂಟ್‌ ಆಗಿರುವಂತಹ ಫ್ಯಾಬ್ರಿಕ್‌ನ ಸ್ವಿಂಗ್‌ ಸ್ಪೆಗೆಟಿ ಮ್ಯಾಕ್ಸಿ ಸ್ಟ್ರಾಪ್‌ ಡ್ರೆಸ್‌ ಕೂಡ ಅವರನ್ನು ಆಕರ್ಷಕವಾಗಿ ಬಿಂಬಿಸಿತ್ತು. ಇಡೀ ಡ್ರೆಸ್‌ನಲ್ಲಿದ್ದ ನಾನಾ ಬೀಚ್‌ನ ಚಿತ್ರಗಳು ಸಮ್ಮರ್‌ ಸೀಸನನ್ನು ಹೈಲೈಟ್‌ ಮಾಡಿತ್ತು.

ಕ್ರ್ಯೂಸ್‌ನಲ್ಲಿ ವೈಟ್‌ ಟೀ ಶರ್ಟ್ ಡ್ರೆಸ್‌

ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಂಡಿರುವ ಅಮೂಲ್ಯ, ಮಧ್ಯೆ ಮಧ್ಯೆ ಮಿನುಗುವ ವೈಟ್‌ ಸ್ಟೋನ್‌ ಇರುವಂತಹ ಶ್ವೇತ ವರ್ಣದ ಟೀ ಶರ್ಟ್ ಡ್ರೆಸ್‌ ಧರಿಸಿದ್ದಾರೆ. ಮಂಡಿಯಿಂದ ಮೇಲಿರುವ ಈ ಉಡುಪಿಗೆ, ಲೆದರ್‌ ಸ್ಲಿಂಗ್‌ ಬ್ಯಾಗ್‌ ಮ್ಯಾಚ್‌ ಮಾಡಿರುವುದು ಅವರಿಗೆ ಕಂಪ್ಲೀಟ್‌ ಹಾಲಿ ಡೇ ಲುಕ್‌ ನೀಡಿದೆ.

ಇದನ್ನೂ ಓದಿ: Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ನೋ ಮೇಕಪ್‌ ಮಂತ್ರ

ಈ ಹಾಲಿ ಡೇ ಲುಕ್‌ಗೆ ಅಮೂಲ್ಯ ಮಿನಿಮಲ್‌ ಮೇಕಪ್‌ ಮಾಡಿದ್ದು, ಮತ್ತೊಂದು ಔಟ್‌ಫಿಟ್‌ನಲ್ಲಿ ಮಾತ್ರ ನೋ ಮೇಕಪ್‌ಗೆ ಸೈ ಎಂದಿದ್ದಾರೆ. ಇದು ಅವರನ್ನು ನ್ಯಾಚುರಲ್‌ ಆಗಿ ಬಿಂಬಿಸಿದೆ. ಆಕ್ಸೆಸರೀಸ್‌ ಕೂಡ ಧರಿಸಿಲ್ಲ, ಇದು ಅವರಿಗೆ ವೆಸ್ಟರ್ನ್ ಟಚ್‌ ನೀಡಿದೆ. ಬೀಚ್‌ ಹಾಗೂ ಕ್ರ್ಯೂಸ್‌ ಟೂರ್‌ನ ಸಂದರ್ಭಕ್ಕೆ ಹೊಂದುವ ಅಮೂಲ್ಯ ಅವರ ಈ ಲುಕ್‌, ಹಾಲಿ ಡೇಯ ಪರ್ಫೆಕ್ಟ್ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version