ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಎಂದ್ರೆ ನನಗಿಷ್ಟ ಎನ್ನುವ ನಟಿ ಮೇಘಾ ಶ್ರೀ, ಈ ಸೀಸನ್‌ನನ್ನು ಸಖತ್ ಎಂಜಾಯ್ ಮಾಡುತ್ತಾರಂತೆ. ಶೂಟಿಂಗ್‌ಗಾಗಿ ಎಲ್ಲೆ ಇರಲಿ, ಬ್ಯೂಟಿ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾರಂತೆ. ಇನ್ನು, ಈ ಸೀಸನ್‌ನಲ್ಲಿ ಸೌಂದರ್ಯ ಸಂರಕ್ಷಣೆಗೆ (Star Monsoon Beauty Secret) ಏನೆಲ್ಲಾ ಮಾಡುತ್ತಾರೆ ಎಂಬುದನ್ನು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಓದುಗರು ಕೂಡ ಈ ಟಿಪ್ಸ್ ಫಾಲೋ ಮಾಡಬಹುದು ಎಂದು ತಿಳಿಸಿದ್ದಾರೆ.
ಮಾನ್ಸೂನ್ ಆರೈಕೆ ಹೀಗೆ
ಪ್ರತಿ ಮಾನ್ಸೂನ್‌ನಲ್ಲೂ ಎಲ್ಲರಿಗೂ ಆರೋಗ್ಯದ ಕಡೆ ಗಮನವಿರಬೇಕು. ಇದಕ್ಕೆ ಪೂರಕ ಎಂಬಂತೆ, ನಾನು ಆದಷ್ಟೂ ವಾರ್ಮ್ ಉಡುಪುಗಳನ್ನು ಹಾಗೂ ಪಾದಗಳಿಗೆ ಕಾಲಿಗೆ ಸಾಕ್ಸ್ ಧರಿಸುತ್ತೇನೆ. ಇವು ದೇಹವನ್ನು ಬೆಚ್ಚಗಿಡುತ್ತವೆ ಎನ್ನುತ್ತಾರೆ ಮೇಘಾ ಶ್ರೀ.
ಮಳೆಗಾಲಕ್ಕೂ ಮಾಯಿಶ್ಚರೈಸರ್
ಕೆಲವರು ಬೇಸಿಗೆಗೆ ಮಾತ್ರ ಮಾಯಿಶ್ಚರೈಸರ್ ಬಳಸುತ್ತಾರೆ, ಆದರೆ, ಚರ್ಮ ಈ ಸೀಸನ್‌ನಲ್ಲೂ ಒಣಗುವುದರಿಂದ ಮಾಯಿಶ್ಚರೈಸರ್ ಹಚ್ಚುವುದು ಉತ್ತಮ. ಇದು ಚರ್ಮವನ್ನು ಸುಕೋಮಲವಾಗಿ ಇರಿಸುತ್ತದೆ. ಪ್ರತಿದಿನ ಮೂರ್ನಾಲ್ಕು ಬಾರಿಯಾದರೂ ಲೇಪಿಸುತ್ತೇನೆ ಎನ್ನುತ್ತಾರೆ ಮೇಘಾ ಶ್ರೀ.
ಮೇಘಾ ಜಾಕೆಟ್ ಪ್ರೇಮಿ
ಪ್ರತಿ ವರ್ಷ ಮಾನ್ಸೂನ್‌ಗೆಂದು ಹೊಸ ಹೊಸ ಜಾಕೆಟ್‌ಗಳನ್ನು ಖರೀದಿಸುತ್ತೇನೆ. ಇದು ನನ್ನ ಫ್ಯಾಷನ್ ಲುಕ್‌ಗೆ ಸಾಥ್ ನೀಡುತ್ತದೆ. ಫೋಟೋಗಳಲ್ಲಂತೂ ಆಕರ್ಷಕವಾಗಿ ಕಾಣುತ್ತವೆ. ಟ್ರೆಂಡಿ ಜಾಕೆಟ್‌ಗಳು ಮಾನ್ಸೂನ್ ಲೇಯರ್ಡ್ ಲುಕ್‌ಗೆ ಸಹಕಾರಿ. ನೀವೂ ಬಳಸಿ ಎನ್ನುತ್ತಾರೆ ಮೇಘಾ ಶ್ರೀ.
ಮಳೆಗಾಲಕ್ಕಿರಲಿ ಲೈಟ್ ಮೇಕಪ್
ಈ ಸೀಸನ್‌ನಲ್ಲಿ ಲೈಟ್ ಮೇಕಪ್ ಮಾಡುವುದು ಉತ್ತಮ. ನಾನಂತೂ ಸಮಾರಂಭ ಹಾಗೂ ಶೂಟಿಂಗ್ ಹೊರತುಪಡಿಸಿ ಹೆಚ್ಚು ಫೌಂಡೇಷನ್ ಹಾಗೂ ಮೇಕಪ್ ವರ್ಧಕಗಳನ್ನು ಹೆಚ್ಚು ಬಳಸುವುದಿಲ್ಲ. ಹಾಗಾಗಿ ನಾನು ಹೇಳುವುದು ಇಷ್ಟೇ! ಈ ಸೀಸನ್‌ನಲ್ಲಿ, ಆದಷ್ಟೂ ಹೆವ್ವಿ ಮೇಕಪ್ ಮಾಡಬೇಡಿ.
ಕಡಲೆಹಿಟ್ಟಿನ ಬಾತ್
ಸೌಂದರ್ಯ ಹೆಚ್ಚಿಸುವ ಕಡಲೆ ಹಿಟ್ಟನ್ನು ವಾರಕ್ಕೆ ಒಮ್ಮೆಯಾದರೂ ಮುಖ ಹಾಗೂ ದೇಹಕ್ಕೆ ಹಚ್ಚಿಕೊಂಡು ಬಾತ್ ಮಾಡುತ್ತೇನೆ. ಇದು ಚರ್ಮದ ಆರೋಗ್ಯ ಹೆಚ್ಚಿಸುವುದರೊಂದಿಗೆ ಗ್ಲೋ ನೀಡುತ್ತದೆ. ಇದು ನ್ಯಾಚುರಲ್ ಸ್ಕಿನ್ ಸ್ಕ್ರಬ್ ಅಥವಾ ಪ್ಯಾಕ್ ಎಂದೇ ಹೇಳಬಹುದು. ಇದನ್ನು ಹುಡುಗಿಯರು ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸಬಹುದು ಎಂದು ಸಲಹೆ ನೀಡುತ್ತಾರೆ ಮೇಘಾ ಶ್ರೀ.
(ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Stars Travel Fashion: ಅಭಿಮಾನಿಗಳ ಹುಬ್ಬೇರಿಸಿದ ಕಿರುತೆರೆ ನಟಿಯರ ಬಿಂದಾಸ್ ಬಾಲಿ ಹಾಲಿಡೇ ಫ್ಯಾಷನ್!