ಸಂದರ್ಶನ: ಶೀಲಾ ಸಿ. ಶೆಟ್ಟಿ
ಮಾನ್ಸೂನ್ ಸೀಸನ್‌ನಲ್ಲಿ, ಜಿಮ್ ಫ್ಯಾಷನ್ ಲುಕ್ಸ್‌ನಲ್ಲಿ ಆಕರ್ಷಕವಾಗಿ (Star Monsoon gym fashion) ಕಾಣಿಸಿಕೊಂಡಿದ್ದಾರೆ ನಟ & ಮಾಡೆಲ್ ಕಾರ್ತಿಕ್ ಜಯರಾಮ್.
ಫ್ಯಾಷನಬಲ್ ಜೆಕೆ
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ ನಟ ಕಾರ್ತಿಕ್ ಜಯರಾಮ್, ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿಯೂ ಕಾಣಿಸಿಕೊಂಡರು. ನಂತರ ಹಿಂದಿ ಪೌರಾಣಿಕ ಧಾರವಾಹಿಯಲ್ಲಿ ರಾವಣನಾಗಿ ನಟಿಸುವುದರ ಮೂಲಕ ಭಾರತದ ಎಲ್ಲೆಡೆ ಹೆಸರು ಮಾಡಿದರು. ಆಗಾಗ್ಗೆ ಫ್ಯಾಷನ್ ವೀಕ್‌ಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿಯೂ ಕಾಣಿಸಿಕೊಳ್ಳುವ ಇವರು ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಮೂಲಕ ಗುರುತಿಸಿಕೊಂಡಿದ್ದಾರೆ. ತಮ್ಮ ತಂದೆಯ ಲೈಫ್‌ಸ್ಟೈಲ್, ಡ್ರೆಸ್ಸಿಂಗ್ ಸೆನ್ಸ್ ಹಾಗೂ ಶಿಸ್ತು ಬದ್ಧ ಜೀವನ ನನಗೆ ಸದಾ ಸ್ಪೂರ್ತಿ ಎನ್ನುವ ಕಾರ್ತಿಕ್ ಜಯರಾಮ್, ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್ ಹಾಗೂ ಲೈಫ್‌ಸ್ಟೈಲ್ ಕುರಿತಂತೆ ಮಾತನಾಡಿದರು. ಜಿಮ್ ಪ್ರಿಯ ಯುವಕರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದರು.
ವಿಸ್ತಾರ ನ್ಯೂಸ್: ನಿಮ್ಮ ಮಾನ್ಸೂನ್ ಫ್ಯಾಷನ್ ಮಂತ್ರ?
ಕಾರ್ತಿಕ್ ಜಯರಾಮ್: ಸಾಮಾನ್ಯವಾಗಿ ಹೂಡಿ ಧರಿಸುತ್ತೇನೆ. ಇವೆಂಟ್‌ಗಳಲ್ಲಿ ಕ್ಲಾಸಿ ಲುಕ್ ನೀಡುವ ಕೋಟ್‌ಗಳನ್ನು ಧರಿಸುತ್ತೇನೆ. ಬೇಝ್, ನಿಯಾನ್‌ನಂತಹ ವೈಬ್ರೆಂಟ್ ಶೇಡ್‌ಗಳ ಔಟ್‌ಫಿಟ್ಸ್ ಧರಿಸುತ್ತೇನೆ.
ವಿಸ್ತಾರ ನ್ಯೂಸ್: ನಿಮ್ಮ ಫ್ಯಾಷನ್ ಐಕಾನ್?
ಕಾರ್ತಿಕ್ ಜಯರಾಮ್: ಬಾಲಿವುಡ್ ನಟ ಹೃತಿಕ್ ರೋಷನ್
ವಿಸ್ತಾರ ನ್ಯೂಸ್: ನಿಮ್ಮ ಜಿಮ್ ಫ್ಯಾಷನ್ ಯುವಕರನ್ನು ಆಕರ್ಷಿಸಿದೆ. ಈ ಬಗ್ಗೆ ಹೇಳಿ?
ಕಾರ್ತಿಕ್ ಜಯರಾಮ್: ಜಿಮ್‌ಗೂ ಅದರದ್ದೇ ಆದ ಫ್ಯಾಷನ್ ರೂಲ್ಸ್ ಇದೆ. ಯಾವುದೋ ಉಡುಪನ್ನು ಧರಿಸಿ ವರ್ಕೌಟ್ ಮಾಡಲಾಗದು. ಇನ್ನು ಸೀಸನ್‌ಗೆ ತಕ್ಕಂತೆ ಆಯಾ ಜಿಮ್‌ನ ಪರಿಸರಕ್ಕೆ ಸೂಕ್ತವಾಗುವಂತೆ ಡ್ರೆಸ್‌ಕೋಡ್ ಕೂಡ ಧರಿಸುವುದು ಉತ್ತಮ. ಅದರಲ್ಲೂ, ಈ ಸೀಸನ್‌ನಲ್ಲಿ ಬೆಚ್ಚಗಿಡುವಂತಹ ಔಟ್‌ಫಿಟ್‌ಗೆ ಆದ್ಯತೆ ನೀಡುವುದು ಉತ್ತಮ.
ವಿಸ್ತಾರ ನ್ಯೂಸ್: ಹಣ ವೆಚ್ಚ ಮಾಡದೇ ಯುವಕರು ವರ್ಕೌಟ್ ಫ್ಯಾಷನ್ ಫಾಲೋ ಮಾಡುವುದು ಹೇಗೆ?
ಕಾರ್ತಿಕ್ ಜಯರಾಮ್: ತುಂಬಾ ಈಸಿ! ನಿಮ್ಮ ಬಳಿಯಿರುವ ಟೀ ಶರ್ಟ್ ಸ್ಲೀವ್ ಕಟ್ ಮಾಡಿ. ಧರಿಸಿ. ಇಲ್ಲವಾದಲ್ಲಿ, ಕಾಟನ್ ಟೀ ಶರ್ಟ್, ಪ್ಯಾಂಟ್ ಧರಿಸಿ.
ವಿಸ್ತಾರ ನ್ಯೂಸ್: ಯುವಕರಿಗೆ ನೀವು ನೀಡುವ 3 ಮಾನ್ಸೂನ್ ಫ್ಯಾಷನ್ ಟಿಪ್ಸ್ ಏನು?
ಕಾರ್ತಿಕ್ ಜಯರಾಮ್: 1. ನಿಮಗೆ ಚೆನ್ನಾಗಿ ಕಾಣುವ ಫ್ಯಾಷನ್ ಪಾಲಿಸಿ.
- ಉತ್ತಮ ಇಮೇಜ್ಗೆ ಔಟ್ಫಿಟ್ ಕಾರಣವಾಗಬಲ್ಲದು. ಹಾಗಾಗಿ ಸದಾ ಆಕರ್ಷಕವಾಗಿ ಕಾಣಿಸಿಕೊಳ್ಳಿ.
- ಹೊಸತನ್ನು ಖರೀದಿಸಲಾಗದಿದ್ದಲ್ಲಿ, ಚಿಂತೆ ಬೇಡ! ಮಿಕ್ಸ್ ಮ್ಯಾಚ್ ಮಾಡಿ. ಸಸ್ಟೈನಬಲ್ ಫ್ಯಾಷನ್ ಅಳವಡಿಸಿಕೊಳ್ಳಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )