Star Monsoon Gym Fashion: ನಟ ಕಾರ್ತಿಕ್‌ ಜಯರಾಮ್‌ ಮಾನ್ಸೂನ್‌ ಜಿಮ್‌ ಫ್ಯಾಷನ್‌ ಮಂತ್ರ ಹೀಗಿದೆ! - Vistara News

ಫ್ಯಾಷನ್

Star Monsoon Gym Fashion: ನಟ ಕಾರ್ತಿಕ್‌ ಜಯರಾಮ್‌ ಮಾನ್ಸೂನ್‌ ಜಿಮ್‌ ಫ್ಯಾಷನ್‌ ಮಂತ್ರ ಹೀಗಿದೆ!

Star Monsoon gym fashion: ಮಾನ್ಸೂನ್‌ ಸೀಸನ್‌ನಲ್ಲಿ ಜಿಮ್‌ ಫ್ಯಾಷನ್‌ ಲುಕ್ಸ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ನಟ & ಮಾಡೆಲ್‌ ಕಾರ್ತಿಕ್‌ ಜಯರಾಮ್‌ ತಮ್ಮ ಫ್ಯಾಷನ್‌ ಹಾಗೂ ಲೈಫ್‌ ಸ್ಟೈಲ್‌ ಬಗ್ಗೆ ವಿಸ್ತಾರ ನ್ಯೂಸ್‌ ನೊಂದಿಗೆ ಮಾತನಾಡಿದ್ದಾರೆ. ಅಲ್ಲದೇ, ಜಿಮ್‌ ಪ್ರಿಯ ಯುವಕರಿಗೆ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಕೂಡ ನೀಡಿದ್ದಾರೆ.

VISTARANEWS.COM


on

Star Monsoon gym fashion
ಚಿತ್ರಗಳು: ಕಾರ್ತಿಕ್‌ ಜಯರಾಮ್‌, ನಟ & ಮಾಡೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ: ಶೀಲಾ ಸಿ. ಶೆಟ್ಟಿ
ಮಾನ್ಸೂನ್‌ ಸೀಸನ್‌ನಲ್ಲಿ, ಜಿಮ್‌ ಫ್ಯಾಷನ್‌ ಲುಕ್ಸ್‌ನಲ್ಲಿ ಆಕರ್ಷಕವಾಗಿ (Star Monsoon gym fashion) ಕಾಣಿಸಿಕೊಂಡಿದ್ದಾರೆ ನಟ & ಮಾಡೆಲ್‌ ಕಾರ್ತಿಕ್‌ ಜಯರಾಮ್‌.

Star Monsoon gym fashion

ಫ್ಯಾಷನಬಲ್‌ ಜೆಕೆ

ಅಶ್ವಿನಿ ನಕ್ಷತ್ರ ಸೀರಿಯಲ್‌ ಮೂಲಕ ಖ್ಯಾತಿ ಗಳಿಸಿದ ನಟ ಕಾರ್ತಿಕ್‌ ಜಯರಾಮ್‌, ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿಯೂ ಕಾಣಿಸಿಕೊಂಡರು. ನಂತರ ಹಿಂದಿ ಪೌರಾಣಿಕ ಧಾರವಾಹಿಯಲ್ಲಿ ರಾವಣನಾಗಿ ನಟಿಸುವುದರ ಮೂಲಕ ಭಾರತದ ಎಲ್ಲೆಡೆ ಹೆಸರು ಮಾಡಿದರು. ಆಗಾಗ್ಗೆ ಫ್ಯಾಷನ್‌ ವೀಕ್‌ಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿಯೂ ಕಾಣಿಸಿಕೊಳ್ಳುವ ಇವರು ಮಾಡೆಲಿಂಗ್‌ ಕ್ಷೇತ್ರದಲ್ಲೂ ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳ ಮೂಲಕ ಗುರುತಿಸಿಕೊಂಡಿದ್ದಾರೆ. ತಮ್ಮ ತಂದೆಯ ಲೈಫ್‌ಸ್ಟೈಲ್‌, ಡ್ರೆಸ್ಸಿಂಗ್‌ ಸೆನ್ಸ್ ಹಾಗೂ ಶಿಸ್ತು ಬದ್ಧ ಜೀವನ ನನಗೆ ಸದಾ ಸ್ಪೂರ್ತಿ ಎನ್ನುವ ಕಾರ್ತಿಕ್‌ ಜಯರಾಮ್‌, ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಹಾಗೂ ಲೈಫ್‌ಸ್ಟೈಲ್‌ ಕುರಿತಂತೆ ಮಾತನಾಡಿದರು. ಜಿಮ್‌ ಪ್ರಿಯ ಯುವಕರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದರು.

Star Monsoon gym fashion

ವಿಸ್ತಾರ ನ್ಯೂಸ್‌: ನಿಮ್ಮ ಮಾನ್ಸೂನ್‌ ಫ್ಯಾಷನ್‌ ಮಂತ್ರ?

ಕಾರ್ತಿಕ್‌ ಜಯರಾಮ್‌: ಸಾಮಾನ್ಯವಾಗಿ ಹೂಡಿ ಧರಿಸುತ್ತೇನೆ. ಇವೆಂಟ್‌ಗಳಲ್ಲಿ ಕ್ಲಾಸಿ ಲುಕ್‌ ನೀಡುವ ಕೋಟ್‌ಗಳನ್ನು ಧರಿಸುತ್ತೇನೆ. ಬೇಝ್‌, ನಿಯಾನ್‌ನಂತಹ ವೈಬ್ರೆಂಟ್‌ ಶೇಡ್‌ಗಳ ಔಟ್‌ಫಿಟ್ಸ್ ಧರಿಸುತ್ತೇನೆ.

ವಿಸ್ತಾರ ನ್ಯೂಸ್‌: ನಿಮ್ಮ ಫ್ಯಾಷನ್‌ ಐಕಾನ್‌?

ಕಾರ್ತಿಕ್‌ ಜಯರಾಮ್‌: ಬಾಲಿವುಡ್‌ ನಟ ಹೃತಿಕ್‌ ರೋಷನ್‌

Star Monsoon gym fashion

ವಿಸ್ತಾರ ನ್ಯೂಸ್‌: ನಿಮ್ಮ ಜಿಮ್‌ ಫ್ಯಾಷನ್‌ ಯುವಕರನ್ನು ಆಕರ್ಷಿಸಿದೆ. ಈ ಬಗ್ಗೆ ಹೇಳಿ?

ಕಾರ್ತಿಕ್‌ ಜಯರಾಮ್‌: ಜಿಮ್‌ಗೂ ಅದರದ್ದೇ ಆದ ಫ್ಯಾಷನ್‌ ರೂಲ್ಸ್ ಇದೆ. ಯಾವುದೋ ಉಡುಪನ್ನು ಧರಿಸಿ ವರ್ಕೌಟ್‌ ಮಾಡಲಾಗದು. ಇನ್ನು ಸೀಸನ್‌ಗೆ ತಕ್ಕಂತೆ ಆಯಾ ಜಿಮ್‌ನ ಪರಿಸರಕ್ಕೆ ಸೂಕ್ತವಾಗುವಂತೆ ಡ್ರೆಸ್‌ಕೋಡ್‌ ಕೂಡ ಧರಿಸುವುದು ಉತ್ತಮ. ಅದರಲ್ಲೂ, ಈ ಸೀಸನ್‌ನಲ್ಲಿ ಬೆಚ್ಚಗಿಡುವಂತಹ ಔಟ್‌ಫಿಟ್‌ಗೆ ಆದ್ಯತೆ ನೀಡುವುದು ಉತ್ತಮ.

ವಿಸ್ತಾರ ನ್ಯೂಸ್‌: ಹಣ ವೆಚ್ಚ ಮಾಡದೇ ಯುವಕರು ವರ್ಕೌಟ್‌ ಫ್ಯಾಷನ್‌ ಫಾಲೋ ಮಾಡುವುದು ಹೇಗೆ?

ಕಾರ್ತಿಕ್‌ ಜಯರಾಮ್‌: ತುಂಬಾ ಈಸಿ! ನಿಮ್ಮ ಬಳಿಯಿರುವ ಟೀ ಶರ್ಟ್ ಸ್ಲೀವ್‌ ಕಟ್‌ ಮಾಡಿ. ಧರಿಸಿ. ಇಲ್ಲವಾದಲ್ಲಿ, ಕಾಟನ್‌ ಟೀ ಶರ್ಟ್, ಪ್ಯಾಂಟ್‌ ಧರಿಸಿ.

Star Monsoon gym fashion

ವಿಸ್ತಾರ ನ್ಯೂಸ್‌: ಯುವಕರಿಗೆ ನೀವು ನೀಡುವ 3 ಮಾನ್ಸೂನ್‌ ಫ್ಯಾಷನ್‌ ಟಿಪ್ಸ್ ಏನು?

ಕಾರ್ತಿಕ್‌ ಜಯರಾಮ್‌: 1. ನಿಮಗೆ ಚೆನ್ನಾಗಿ ಕಾಣುವ ಫ್ಯಾಷನ್‌ ಪಾಲಿಸಿ.

  • ಉತ್ತಮ ಇಮೇಜ್‌ಗೆ ಔಟ್‌ಫಿಟ್‌ ಕಾರಣವಾಗಬಲ್ಲದು. ಹಾಗಾಗಿ ಸದಾ ಆಕರ್ಷಕವಾಗಿ ಕಾಣಿಸಿಕೊಳ್ಳಿ.
  • ಹೊಸತನ್ನು ಖರೀದಿಸಲಾಗದಿದ್ದಲ್ಲಿ, ಚಿಂತೆ ಬೇಡ! ಮಿಕ್ಸ್ ಮ್ಯಾಚ್‌ ಮಾಡಿ. ಸಸ್ಟೈನಬಲ್‌ ಫ್ಯಾಷನ್‌ ಅಳವಡಿಸಿಕೊಳ್ಳಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Kaftan Kurta Fashion: ಸಿಂಪಲ್‌ ಲುಕ್‌ಗೆ ಸಾಥ್‌ ನೀಡುವ ದೊಗಲೆ ಕಫ್ತಾನ್‌ ಕುರ್ತಾ!

Kaftan kurta fashion: ದೊಗಲೆಯಾಗಿ ಕಾಣಿಸುವ ಕಫ್ತಾನ್‌ ಶೈಲಿಯ ಕುರ್ತಾ ಸೆಟ್‌ ಫ್ಯಾಷನ್‌ ಇದೀಗ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ನೋಡಲು ಫಿಟ್ಟಿಂಗ್‌ ಇಲ್ಲದಂತೆ ಕಾಣುವ ಈ ಔಟ್‌ಫಿಟ್‌ಗಳು ಕಂಫರ್ಟಬಲ್‌ ಫೀಲ್‌ನೀಡುವುದರೊಂದಿಗೆ ಸಿಂಪಲ್‌ ಲುಕ್ ನೀಡುತ್ತವೆ. ಈ ಉಡುಗೆಯ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Kaftan Kurta Fashion
ಚಿತ್ರಗಳು: ರಕುಲ್‌ ಪ್ರೀತ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಫ್ತಾನ್‌ ಕುರ್ತಾ ಫ್ಯಾಷನ್‌ ಇದೀಗ (Kaftan kurta fashion) ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಸಿನಿಮಾ ನಟಿಯರು ಕೂಡ ತಮ್ಮ ಸಿಂಪಲ್‌ ಲುಕ್‌ಗಾಗಿ ಈ ಔಟ್‌ಫಿಟ್‌ ಧರಿಸಲಾರಂಭಿಸಿದ್ದಾರೆ. ತಕ್ಷಣಕ್ಕೆ ನೋಡಲು ದೊಗಲೆಯಾಗಿ ಕಾಣಿಸುವ, ಈ ಶೈಲಿಯ ಕುರ್ತಾ ಸೆಟ್‌ ಫ್ಯಾಷನ್‌ ಪ್ರತಿಯೊಬ್ಬರ ವಾರ್ಡ್ರೋಬ್‌ನಲ್ಲೂ ಸ್ಥಾನ ಪಡೆದಿದೆ. ಧರಿಸಿದಾಗ ನೋಡಲು ಫಿಟ್ಟಿಂಗ್‌ ಇಲ್ಲದಂತೆ ಕಾಣುವ ಈ ಉಡುಗೆ ಧರಿಸಿದವರಿಗೆ ಸಿಂಪಲ್‌ ಲುಕ್ ಕಲ್ಪಿಸುತ್ತಿವೆ. ಇತ್ತೀಚೆಗೆ ನಟಿ ರಕುಲ್‌ ಪ್ರೀತ್‌ ಧರಿಸಿದ ಈ ಶೈಲಿಯ ಕುರ್ತಾ ಸೆಟ್‌ಗಳು ಈಗಾಗಲೇ ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Kaftan Kurta Fashion

ಪ್ಲಂಪಿಯಾಗಿರುವವರಿಗೆ ಉತ್ತಮ ಆಯ್ಕೆ

ಕಫ್ತಾನ್‌ ಶೈಲಿಯ ಕುರ್ತಾ-ಪ್ಯಾಂಟ್‌ ಸೆಟ್‌ ಫ್ಯಾಷನ್‌ ಹೊಸತೇನಲ್ಲ! ಬಹಳ ಹಿಂದಿನಿಂದಲೇ ಇದೆ. ಉತ್ತರ ಭಾರತದವರ ರಿಲ್ಯಾಕ್ಸಿಂಗ್‌ ಉಡುಗೆಯಿದು. ಅಂದಹಾಗೆ, ಕುರ್ತಾ –ಪ್ಯಾಂಟ್‌ಗಳಲ್ಲಿ ಊಹೆಗೂ ಮೀರಿದ ಡಿಸೈನ್‌ಗಳಿವೆ. ಅವುಗಳಲ್ಲಿ, ಇದೀಗ ಈ ಕಫ್ತಾನ್‌ ಶೈಲಿಯ ಕುರ್ತಾ ಫ್ಯಾಷನ್‌ ಸೇರಿಕೊಂಡಿದೆ. ತೆಳ್ಳಗಿರುವವರಿಗಿಂತ ಕೊಂಚ ಪ್ಲಂಪಿಯಾಗಿರುವವರಿಗೆ ಇವು ಚೆನ್ನಾಗಿ ಕಾಣಿಸುತ್ತವೆ. ಧರಿಸಿದಾಗ ದಪ್ಪಗಿರುವವರ ಓರೆ-ಕೋರೆಗಳನ್ನು ಮುಚ್ಚಿಹಾಕುತ್ತವೆ. ನೋಡಲು ಲೂಸಾಗಿರುವಂತೆ ಕಾಣುವ ಇವು ದೇಹದ ಆಕಾರವನ್ನು ಮರೆಮಾಚುತ್ತವೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ಛಾಯಾ.

ಟ್ರೆಂಡಿಯಾಗಿರುವ ನಾನಾ ಬಗೆಯ ಕಫ್ತಾನ್‌ ಕುರ್ತಾ ಸೆಟ್ಸ್

ಕಫ್ತಾನ್‌ ಶೈಲಿಯಲ್ಲಿ ಇದೀಗ ಶಾರ್ಟ್ ಲೆಂಥ್‌ನ ಕುರ್ತಾ ಸೆಟ್‌, ಶರಾರ ಶೈಲಿಯ ಕುರ್ತಾ, ಸ್ಟ್ರೇಟ್‌ ಕಟ್‌ ಕುರ್ತಾ, ಅಸ್ಸೆಮ್ಮಿಟ್ರಿಕಲ್‌ ಕುರ್ತಾ, ಕೇಪ್‌ ಸ್ಟೈಲ್‌ ಕುರ್ತಾ ಸೇರಿದಂತೆ ನಾನಾ ವಿನ್ಯಾಸದವು ಟ್ರೆಂಡ್‌ನಲ್ಲಿವೆ. ಮಾನೋಕ್ರೋಮ್‌ ಬಗೆಯವು ಮಾರುಕಟ್ಟೆಯಲ್ಲಿ ಹೆಚ್ಚು ಚಾಲ್ತಿಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Kaftan Kurta Fashion

ಕಫ್ತಾನ್‌ ಕುರ್ತಾ ಪ್ರಿಯರ ಆಯ್ಕೆ ಹೀಗಿರಲಿ

  • ತೀರಾ ದೊಗಲೆಯಾದವು ಆಕರ್ಷಕವಾಗಿ ಕಾಣಿಸುವುದಿಲ್ಲ!
  • ಕಫ್ತಾನ್‌ ಕುರ್ತಾಗಳು ಹರಡಿಕೊಳ್ಳುವುದರಿಂದ ಸಾಫ್ಟ್ ಫ್ಯಾಬ್ರಿಕ್‌ನದ್ದನ್ನು ಚೂಸ್‌ ಮಾಡಿ.
  • ಇವು ಕೋ –ಆರ್ಡ್ ಸೆಟ್‌ನಂತೆಯೂ ಕಾಣಿಸುವುದರಿಂದ ಟ್ರೆಂಡಿ ಶೇಡ್‌ನವನ್ನು ಧರಿಸಬಹುದು.
  • ನೆಕ್‌ಲೈನ್‌ ಡಿಸೈನ್‌ ಪರಿಶೀಲಿಸಿ ಖರೀದಿಸಿ.
  • ಪ್ರಿಂಟೆಡ್‌ನವು ಸದ್ಯ ಈ ಸೀಸನ್‌ನಲ್ಲಿಲ್ಲ !

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Jacket Fashion: ಸ್ಟೈಲಿಶ್‌ ಜಾಕೆಟ್ ಸ್ಟೈಲಿಂಗ್‌ಗೆ ನಟ ದರ್ಶ್ ಚಂದ್ರಪ್ಪ ಸಿಂಪಲ್‌ ರೂಲ್ಸ್!

Monsoon Jacket Fashion: ಮಾನ್ಸೂನ್‌ ಮೆನ್ಸ್ ಫ್ಯಾಷನ್‌ಗೆ ಸೈ ಎಂದಿರುವ ನಟ ದರ್ಶ್ ಚಂದ್ರಪ್ಪರಿಗೆ ಜಾಕೆಟ್‌ಗಳೆಂದರೇ ಬಲು ಪ್ರಿಯವಂತೆ. ಮಳೆಗಾಲದಲ್ಲಿ ಜಾಕೆಟ್‌ಗಳು ಸ್ಟೈಲಿಶ್‌ ಲುಕ್‌ ನೀಡುತ್ತವೆ ಎನ್ನುವ ಅವರು ಯುವಕರಿಗೆ ಜಾಕೆಟ್‌ ಸ್ಟೈಲಿಂಗ್‌ ಬಗ್ಗೆ ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Jacket Fashion
ಚಿತ್ರಗಳು : ದರ್ಶ್ ಚಂದ್ರಪ್ಪ, ನಟ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಮೆನ್ಸ್ ಫ್ಯಾಷನ್‌ಗೆ (Monsoon Jacket Fashion) ಸೈ ಎಂದಿರುವ ನಟ ದರ್ಶ್ ಚಂದ್ರಪ್ಪರವರಿಗೆ ಜಾಕೆಟ್‌ಗಳೆಂದರೇ ಬಲು ಪ್ರಿಯವಂತೆ. ಸೀಸನ್‌ಗೆ ತಕ್ಕಂತೆ ನಾನಾ ಬಗೆಯ ಜಾಕೆಟ್‌ಗಳನ್ನು ಧರಿಸುವ ದರ್ಶ್, ಮಳೆಗಾಲದ ಫ್ಯಾಷನ್‌ಗೆ ತಕ್ಕಂತೆ ಬದಲಾಗುತ್ತಾರಂತೆ. ಅಲ್ಲದೇ, ಯುವಕರು ಕೂಡ ಸೀಸನ್‌ಗೆ ತಕ್ಕಂತೆ ಔಟ್‌ಫಿಟ್‌ ಧರಿಸಬೇಕು ಎನ್ನುತ್ತಾರೆ.

Monsoon Jacket Fashion

ದರ್ಶ್ ಚಂದ್ರಪ್ಪ ಮಾನ್ಸೂನ್‌ ಲವ್‌

ಮೂಲತಃ ಮಾಡೆಲ್‌ ಆಗಿರುವ ದರ್ಶ್, ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೆಡ್ಯೂಲ್‌ಗಳ ನಡುವೆಯೂ ಜಾಹೀರಾತುಗಳಲ್ಲೂ ಮಾಡೆಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಮೊದಲಿನಿಂದಲೂ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ದರ್ಶ್, ಸೀಸನ್‌ಗೆ ತಕ್ಕಂತೆ ತಮ್ಮ ಸ್ಟೈಲಿಂಗ್‌ ಕೂಡ ಸ್ಟೈಲಿಶ್‌ ಆಗಿ ಬದಲಿಸುತ್ತಿರುತ್ತಾರೆ. ಸದಾ ಒಂದೇ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಹುಡುಗರಿಗೆ ಈ ಮಾನ್ಸೂನ್‌ ಸೀಸನ್‌ ನಾನಾ ಬಗೆಯ ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಸದಾವಕಾಶ ನೀಡುತ್ತದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎನ್ನುತ್ತಾರೆ ದರ್ಶ್. ಮಾನ್ಸೂನ್‌ನಲ್ಲಿ ಹುಡುಗರು ಜಾಕೆಟ್‌ ಧರಿಸುವುದು ಕಾಮನ್‌. ಕೆಲವರಂತೂ ಈ ಸೀಸನ್‌ನಲ್ಲಿ ಹೊಸತನ್ನು ಖರೀದಿ ಮಾಡುತ್ತಾರೆ ಕೂಡ. ಇನ್ನು , ಕೆಲವರು ತಮ್ಮ ವಾರ್ಡ್ರೋಬ್‌ನಲ್ಲಿರುವ ಹಳೆಯ ಜಾಕೆಟ್‌ಗಳನ್ನು ಮರುಬಳಕೆ ಮಾಡುತ್ತಾರೆ. ಸೋ, ಜಾಕೆಟ್‌ ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ದರ್ಶ್ ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

ವ್ಯಕ್ತಿತ್ವಕ್ಕೆ ತಕ್ಕಂತಿರಲಿ ಜಾಕೆಟ್‌ ಸ್ಟೈಲಿಂಗ್‌

ಆಯಾ ವ್ಯಕ್ತಿಯ ವ್ಯಕ್ತಿತ್ವಕ್ಕೆ ತಕ್ಕಂತೆ ಜಾಕೆಟ್‌ ಧರಿಸುವುದು ಉತ್ತಮ. ಎಲ್ಲದಕ್ಕಿಂತ ಹೆಚ್ಚಾಗಿ ಅವರವರ ಪ್ರೊಫೆಷನ್‌ಗೆ ಹೊಂದುವಂತಿರಬೇಕು.

Monsoon Jacket Fashion

ಯುವಕರ ಜಾಕೆಟ್‌ ಚಾಯ್ಸ್

ಇನ್ನು, ಕಾಲೇಜು ಹುಡುಗರಾದಲ್ಲಿ ಇದೀಗ ಟ್ರೆಂಡ್‌ನಲ್ಲಿರುವಂತಹ ಬಾಂಬರ್‌ ಜಾಕೆಟ್‌, ಸಾಲಿಡ್‌ ಒಪನ್‌ ಜಾಕೆಟ್‌, ಜರ್ಸಿ ಜಾಕೆಟ್‌ ಸೇರಿದಂತೆ ನಾನಾ ಹೈ ಸ್ಟ್ರೀಟ್ ಫ್ಯಾಷನ್‌ನಲ್ಲಿರುವಂತವನ್ನು ಆಯ್ಕೆ ಮಾಡಿಕೊಂಡು ಧರಿಸಬಹುದು.

Monsoon Jacket Fashion

ಮಳೆಗಾಲಕ್ಕೆ ಯಾವುದು ಬೆಸ್ಟ್

ಮಳೆಗಾಲದಲ್ಲಿ ಒದ್ದೆಯಾದರೇ ಮುದ್ದೆಯಾಗುವ ಲೆದರ್‌ ಜಾಕೆಟ್‌ ಬೇಡ. ಯಾವುದೇ ವಾಟರ್‌ಪ್ರೂಫ್‌ ಜಾಕೆಟ್ಸ್ ಚೂಸ್‌ ಮಾಡಿ. ಬೈಕರ್ಸ್ ಜಾಕೆಟ್‌ಗಳಲ್ಲೂ ನಾನಾ ಡಿಸೈನ್ಸ್ ದೊರೆಯುತ್ತವೆ. ಇವನ್ನು ಧರಿಸಿದಾಗ ಆಕರ್ಷಕವಾಗಿ ಕಾಣಿಸುತ್ತವೆ.

ಇದನ್ನೂ ಓದಿ: Star Saree Styling Tips: ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಕಾಣಿಸಬೇಕೇ? ಈ 5 ಟಿಪ್ಸ್ ಫಾಲೋ ಮಾಡಿ

ಜಾಕೆಟ್‌ ಸ್ಟೈಲಿಶ್‌ ಲುಕ್ಸ್

ಜಾಕೆಟ್‌ನಲ್ಲಿಯೂ ಸ್ಟೈಲಿಶ್‌ ಆಗಿ ಕಾಣಿಸಬೇಕಿದ್ದಲ್ಲಿ, ಶೂ ಧರಿಸಿ, ಜೀನ್ಸ್ ಅಥವಾ ಕಾರ್ಗೋ ಪ್ಯಾಂಟ್‌ ಧರಿಸಿ. ಹುಡುಗರ ಆಕ್ಸೆಸರೀಸ್‌ ಮಿನಿಮಲ್‌ ಆಗಿರಲಿ. ಹೇರ್‌ಸ್ಟೈಲ್‌ ಟ್ರೆಂಡಿಯಾಗಿರಲಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Star Saree Styling Tips: ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಕಾಣಿಸಬೇಕೇ? ಈ 5 ಟಿಪ್ಸ್ ಫಾಲೋ ಮಾಡಿ

Star saree styling tips: ಸಮಾರಂಭವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡ ಡಿಸೈನರ್‌ ಎಂಬ್ರಾಯ್ಡರಿ ಸೀರೆಯ ಸ್ಟೈಲಿಂಗ್‌ ಇದೀಗ ಯುವತಿಯರನ್ನು ಆಕರ್ಷಿಸಿದೆ. ಇದನ್ನು ಅರಿತ ಸ್ಯಾರಿ ಸ್ಟೈಲಿಸ್ಟ್‌ಗಳು ಇಂತಹ ಡಿಸೈನರ್‌ ಸೀರೆಯಲ್ಲಿ ಅವರಂತೆ ಕಾಣಿಸಲು ಬಯಸುವವರಿಗೆ 5 ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Star Saree Styling Tips
ಚಿತ್ರಗಳು: ರಶ್ಮಿಕಾ ಮಂದಣ್ಣ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಆಕರ್ಷಕವಾಗಿ (Star saree styling tips) ಕಾಣಿಸಲು ಯಾರಿಗೆ ಇಷ್ಟವಿಲ್ಲ, ಹೇಳಿ? ನೋಡೋಣಾ! ಸಾಮಾನ್ಯ ಎಂಬ್ರಾಯ್ಡರಿ ಸೀರೆಯಲ್ಲೂ ಆಕರ್ಷಕವಾಗಿ ಕಾಣಿಸಿಕೊಂಡಿರುವ ರಶ್ಮಿಕಾರಂತೆ ಕಾಣಲು ಬಯಸುವವರಿಗೆ ಸ್ಯಾರಿ ಸ್ಟೈಲಿಸ್ಟ್ ರೀನಾ 5 ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ನೀಡಿದ್ದಾರೆ.

Star Saree Styling Tips

ರಶ್ಮಿಕಾ ಎಂಬ್ರಾಯ್ಡರಿ ಸೀರೆಯ ವಿಶೇಷತೆ ಏನು?

ಅಂದಹಾಗೆ, ತೊರಾನಿ ಕ್ರಿಯೇಷನ್‌ನ ವೈಬ್ರೆಂಟ್‌ ಹಸಿರು ಅರ್ಗಾನ್ಜಾ ಎಂಬ್ರಾಯ್ಡರಿ ಸೀರೆಯನ್ನು ರಶ್ಮಿಕಾ ಉಟ್ಟಿದ್ದರು. ಈ ಸೀರೆಗೆ ಮ್ಯಾಚಿಂಗ್‌ ಸ್ವೀಟ್‌ ಹಾರ್ಟ್ ನೆಕ್‌ಲೈನ್‌ನ ಮ್ಯಾಚಿಂಗ್‌ ಡೋರಿ ಬ್ಲೌಸ್‌ ಧರಿಸಿದ್ದರು. ಬ್ಲೌಸ್‌ನ ಹಿಂಭಾಗದಲ್ಲಿ ವಿನ್ಯಾಸಗೊಳಿಸಲಾಗಿದ್ದ ಅದೇ ಕಲರ್‌ನ ಟಾಸೆಲ್ಸ್ ಇಡೀ ಬ್ಲೌಸ್‌ನ ಸೌಂದರ್ಯ ಹೆಚ್ಚಿಸಿತ್ತು. ಇನ್ನು, ಇಡೀ ಸೀರೆಯ ತುಂಬೆಲ್ಲಾ ಇದ್ದ ಫ್ಲೋರಲ್‌ ಗೋಲ್ಡನ್‌ ಎಂಬ್ರಾಯ್ಡರಿ ಸೀರೆಯ ಬ್ಯೂಟಿ ಇಮ್ಮಡಿಗೊಳಿಸಿತ್ತು. ಅಲ್ಲದೇ, ಸೀರೆಯೊಂದಿಗೆ ಮ್ಯಾಚ್‌ ಮಾಡಲಾಗಿದ್ದ, ಕಸ್ಟಮೈಸ್ಡ್ ಎಥ್ನಿಕ್‌ ಲುಕ್‌ ನೀಡುವ ಹೃದಯಾಕಾರದ RM ಎಂದು ಎಂಬ್ರಾಯ್ಡರಿಯಲ್ಲೆ ಬರೆದಿರುವ ಪೊಟ್ಲಿ ಪರ್ಫೆಕ್ಟ್ ಸೀರೆ ಸ್ಟೈಲಿಂಗ್‌ಗೆ ಸಾಥ್‌ ನೀಡಿತ್ತು.

Star Saree Styling Tips

ಹೀಗಿರಲಿ ಎಂಬ್ರಾಯ್ಡರಿ ಅರ್ಗಾನ್ಜಾ ಸೀರೆಯ ಆಯ್ಕೆ

ಎಂಬ್ರಾಯ್ಡರಿ ಡಿಸೈನ್‌ ಇರುವಂತಹ ಅರ್ಗಾನ್ಜಾ ಸೀರೆ ಆಯ್ಕೆ ಮಾಡಿ. ಆದಷ್ಟೂ ಕಂಟೆಂಪರರಿ ಡಿಸೈನ್‌ನ ಫ್ಲೋರಲ್‌ ಡಿಸೈನ್‌ನವನ್ನು ಸೆಲೆಕ್ಟ್ ಮಾಡಿ.

Star Saree Styling Tips

ಸೀರೆ ಬ್ಲೌಸ್‌ ನೆಕ್‌ಲೈನ್‌ಗೆ ಆದ್ಯತೆ

ಇಡೀ ಸೀರೆಯ ಲುಕ್‌ ಬ್ಲೌಸ್‌ನ ಡಿಸೈನ್‌ನ ಮೇಲೆ ನಿರ್ಧರಿತವಾಗಿರುತ್ತದೆ. ಗ್ಲಾಮರಸ್‌ ಲುಕ್‌ ಬಯಸುವವರು ಕ್ವೀನ್‌ ನೆಕ್‌ಲೈನ್‌ ಅಥವಾ ಸ್ವೀಟ್‌ ಹಾರ್ಟ್ ನೆಕ್‌ಲೈನ್‌ನಂತಹ ವೈಡ್‌ ನೆಕ್‌ ಡಿಸೈನ್‌ ಮಾಡಿಸಬಹುದು. ಬ್ಯಾಕ್‌ಸೈಡ್‌ ಟಾಸೆಲ್ಸ್ ಡಿಸೈನ್‌ ಮಾಡಿಸಿದಾಗ ಆಕರ್ಷಕವಾಗಿ ಕಾಣಿಸಬಹುದು.

ಸಿಂಪಲ್‌ ಮೇಕಪ್‌ಗೆ ಸೈ ಎನ್ನಿ

ಎಂಬ್ರಾಯ್ಡರಿ ಸೀರೆ ಉಡುವಾಗ ಆದಷ್ಟೂ ಸಿಂಪಲ್‌ ಮೇಕಪ್‌ಗೆ ಆದ್ಯತೆ ನೀಡುವುದು ಉತ್ತಮ. ಲೈಟ್‌ ಮೇಕಪ್‌ನಲ್ಲಿ ಹಣೆಗೆ ಬಿಂದಿ ಇಡಬಹುದು. ಡಾರ್ಕ್‌ ಲಿಪ್‌ಸ್ಟಿಕ್‌ ಲೇಪಿಸಿ, ಹುಬ್ಬನ್ನು ತೀಡಿ. ಕಾಡಿಗೆ ಹಚ್ಚಿದಲ್ಲಿ ಆಕರ್ಷಕವಾಗಿ ಕಾಣಿಸಬಹುದು.

ಬನ್‌ ಹೇರ್‌ಸ್ಟೈಲ್‌

ಸೀರೆಯ ಬ್ಲೌಸ್‌ ಬ್ಯಾಕ್‌ಲೆಸ್‌ ಹಾಗೂ ಬ್ಯಾಕ್‌ ಡಿಸೈನ್‌ ಇದ್ದಾಗ ಫ್ರೀ ಹೇರ್‌ ಹಾಗೂ ಜಡೆ ಹಾಕುವುದನ್ನು ಆವಾಯ್ಡ್ ಮಾಡುವುದು ಬೆಸ್ಟ್. ಮೆಸ್ಸಿ ಬನ್‌ ಹೇರ್‌ಸ್ಟೈಲ್‌ ಈ ಸೀರೆಗೆ ಮಾಡಿದಲ್ಲಿ ಮ್ಯಾಚ್‌ ಆಗುವುದು.

ಇದನ್ನೂ ಓದಿ: Star Shirt Saree Fashion: ಏನಿದು ಶರ್ಟ್‌ ಸೀರೆ? ಹೊಸ ಟ್ರೆಂಡ್‌ ಬಗ್ಗೆ ನಟಿ ತಾರಾ ಏನಂತಾರೆ?

ಗೋಲ್ಡ್ ಜ್ಯುವೆಲರಿ ಮ್ಯಾಚಿಂಗ್‌

ಗೋಲ್ಡ್ ಎಂಬ್ರಾಯ್ಡರಿ ಸೀರೆಗೆ ಗೋಲ್ಡ್ ಶೇಡ್‌ನ ಜ್ಯುವೆಲರಿಗಳನ್ನು ಧರಿಸುವುದು ಸೂಕ್ತ. ಸಿಂಪಲ್‌ ಲುಕ್‌ಗಾದಲ್ಲಿ ನೆಕ್ಲೇಸ್‌, ಹ್ಯಾಂಗಿಂಗ್ಸ್ ಹಾಗೂ ಕಡ ಧರಿಸಬಹುದು. ಗ್ರ್ಯಾಂಡ್‌ ಬೇಕಿದ್ದಲ್ಲಿ ಹಾರ ಕೂಡ ಧರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Shirt Saree Fashion: ಏನಿದು ಶರ್ಟ್‌ ಸೀರೆ? ಹೊಸ ಟ್ರೆಂಡ್‌ ಬಗ್ಗೆ ನಟಿ ತಾರಾ ಏನಂತಾರೆ?

Star Shirt Saree Fashion: ಮಾನ್ಸೂನ್‌ ಸೀಸನ್‌ ಇಂಡೋ-ವೆಸ್ಟರ್ನ್‌ ಸೀರೆ ಲುಕ್‌ ಟ್ರೆಂಡ್‌ನಲ್ಲಿರುವ ಡಿಸೈನರ್‌ ಶರ್ಟ್ ಸೀರೆಯಲ್ಲಿ ಹಿರಿಯ ನಟಿ ತಾರಾ, ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಏನಿದು ಶರ್ಟ್ ಸೀರೆ? ಇದನ್ನು ಸೃಷ್ಟಿಸಿದ ಡಿಸೈನರ್‌ ಯಾರು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್ .

VISTARANEWS.COM


on

Star Shirt Saree Fashion
ಚಿತ್ರಗಳು: ತಾರಾ ಅನುರಾಧ, ಹಿರಿಯ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಸಿರು ಡಿಸೈನರ್‌ ಶರ್ಟ್ ಸೀರೆಯಲ್ಲಿ (Star Shirt Saree Fashion) ಹಿರಿಯ ನಟಿ ತಾರಾ ಅವರು ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋವೊಂದರಲ್ಲಿ ಸದಾ ಒಂದಲ್ಲ ಒಂದು ಔಟ್‌ಫಿಟ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿರುವ ನಟಿ ತಾರಾ, ಇದೀಗ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಡಿಸೈನರ್‌ ಹಸಿರು ಶಿಫಾನ್‌ ಎಂಬ್ರಾಯ್ಡರಿ ಶರ್ಟ್ ಸೀರೆಯಲ್ಲಿ ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಸೀರೆಯ ಲುಕ್‌ ಫ್ಯಾಷನ್‌ ಪ್ರಿಯರಿಗೆ ಇಷ್ಟವಾಗಿದೆ. ಅಲ್ಲದೇ, ಮಾನ್ಸೂನ್‌ಗೆ ಹೇಳಿಮಾಡಿಸಿದಂತಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Shirt Saree Fashion

ಏನಿದು ಶರ್ಟ್ ಸೀರೆ

ಶರ್ಟ್ ಸೀರೆಗಳು ಅತಿ ಹೆಚ್ಚಾಗಿ ಸಮ್ಮರ್‌ ಸೀಸನ್‌ ಹೊರತುಪಡಿಸಿ ಮಳೆಗಾಲ ಅಥವಾ ಚಳಿಗಾಲದಲ್ಲಿ ಟ್ರೆಂಡ್‌ಗೆ ಎಂಟ್ರಿ ನೀಡುತ್ತವೆ. ಇವು ಸೀರೆಗೆ ಲೇಯರ್‌ ಲುಕ್‌ ನೀಡುತ್ತವೆ. ಕೆಲವು ವರ್ಷಗಳ ಹಿಂದೆ ಜಾಕ್ವೆಲೀನ್‌ ಉಟ್ಟಿದ್ದ ಜಾಕೆಟ್‌ ಸೀರೆ ಯಾವ ಮಟ್ಟಿಗೆ ಫೇಮಸ್‌ ಆಗಿತ್ತು ಎಂದರೇ, ಇಂದಿಗೂ ಆ ಸೀರೆಗಳು ಹೊಸ ಹೊಸ ರೂಪದಲ್ಲಿ ಇಣುಕುತ್ತಲೇ ಇವೆ. ಇದೀಗ ಈ ಲಿಸ್ಟ್‌ಗೆ ಈ ಶರ್ಟ್ ಸೀರೆಗಳು ಸೇರಿವೆ. ನೋಡಲು ಶರ್ಟ್‌ನಂತಹ ಬ್ಲೌಸ್‌ಗಳು, ಈ ಸೀರೆಗೆ ಕಂಪ್ಲೀಟ್‌ ಇಂಡೋ-ವೆಸ್ಟರ್ನ್‌ ಲುಕ್‌ ಕಲ್ಪಿಸುತ್ತವೆ. ಇನ್ನು, ಈ ಕಾಲರ್ ಶರ್ಟ್ ಬ್ಲೌಸ್‌ಗೆ ಮಾಡಿದ ಎಂಬ್ರಾಯ್ಡರಿ ಸಿಂಗಾರ ಎಥ್ನಿಕ್‌ ಟಚ್‌ ನೀಡಿದೆ. ಆಯಾ ಸೀರೆಯ ಫ್ಯಾಬ್ರಿಕ್‌ ಹಾಗೂ ಡಿಸೈನ್‌ಗೆ ತಕ್ಕಂತೆ ಶರ್ಟ್ ಸೀರೆಗಳ ಔಟ್‌ಲುಕ್‌ ಬದಲಾಗುತ್ತವೆ. ಡಿಸೈನ್‌ ಮಾತ್ರ ಹೀಗೆಯೇ ಇರುತ್ತದೆ ಎನ್ನುತ್ತಾರೆ ಸೆಲೆಬ್ರೆಟಿ ಫ್ಯಾಷನ್‌ ಡಿಸೈನರ್‌ ಲಕ್ಷ್ಮಿ ಕೃಷ್ಣ.

ಡಿಸೈನರ್‌ ಲಕ್ಷ್ಮಿ ಕೃಷ್ಣ ಡಿಸೈನರ್‌ ಸೀರೆಯಿದು

ಬಾಲಿವುಡ್‌ನ ಸನ್ನಿ ಲಿಯೋನ್‌ರಿಂದ ಹಿಡಿದು ಸ್ಯಾಂಡಲ್‌ವುಡ್‌ ನಟ-ನಟಿಯರಿಗೂ ಡಿಸೈನ್‌ ಮಾಡಿರುವ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರು ಈ ಶರ್ಟ್ ಸೀರೆ ಡಿಸೈನ್ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ಯೂರ್‌ ಶಿಫಾನ್‌ನ ಈ ಡೈಯ್ಡ್ ಸೀರೆಗೆ ಶರ್ಟ್ ಬ್ಲೌಸ್‌ ಮ್ಯಾಚ್‌ ಮಾಡಿ, ಆಕರ್ಷಕ ಲುಕ್‌ ನೀಡಿದ್ದಾರೆ.

Designer laxmi krishna & actress Tara

ಹಿರಿಯ ನಟಿ ತಾರಾ ಸೀರೆ ಲವ್‌

ಸೀರೆಗಳೆಂದರೆ ನನಗೆ ಮೊದಲಿನಿಂದಲೂ ಇಷ್ಟ ಎನ್ನುವ ತಾರಾ ಅವರಿಗೂ ಈ ಹೊಸ ಶೈಲಿಯ ಈ ಶರ್ಟ್ ಸೀರೆ ಸಖತ್‌ ಇಷ್ಟವಾಗಿದೆ. ಲಕ್ಷ್ಮಿ ಕೃಷ್ಣ ಅವರ ಈ ಸ್ಟೈಲಿಶ್‌ ಸೀರೆಯು ನನ್ನನ್ನು ಮತ್ತಷ್ಟು ಅಂದವಾಗಿಸಿದೆ ಎಂದು ನಟಿ ತಾರಾ ಅನುರಾಧ ಪ್ರತಿಕ್ರಿಯಿಸಿದ್ದಾರೆ.
( ಲೇಖಕಿ ಫ್ಯಾಷನ್‌ ಪತ್ರಕರ್ತೆ )
ಇದನ್ನೂ ಓದಿ: ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!

Continue Reading
Advertisement
Kabini Dam
ಕರ್ನಾಟಕ10 mins ago

ಮೈಸೂರು: ಕಬಿನಿ ಜಲಾಶಯದ ಬಲದಂಡೆ ನಾಲೆ ಬಳಿ ಭಾರಿ ಬಿರುಕು, ನಾಲೆ ಒಡೆಯುವ ಭೀತಿಯಲ್ಲಿ ಜನ

Shiradi Ghat
ಕರ್ನಾಟಕ36 mins ago

Shiradi Ghat: ಗುಡ್ಡ ಕುಸಿತ; ಶಿರಾಡಿ ಘಾಟ್‌ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್‌, ಬದಲಿ ಮಾರ್ಗ ಸೂಚನೆ

Road Rage
ದೇಶ54 mins ago

Road Rage: ಸ್ಕೂಟಿಗೆ ಬೈಕ್‌ ಟಚ್‌ ಆಗಿದ್ದಕ್ಕೆ ಜಗಳ; ಗುಂಡು ಹಾರಿಸಿ 2 ಮಕ್ಕಳ ತಾಯಿಯನ್ನು ಕೊಂದ ವ್ಯಕ್ತಿ

Rashid khan 600 wickets
ಕ್ರೀಡೆ58 mins ago

Rashid khan 600 wickets: ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರ್ತಿಗೊಳಿಸಿದ ರಶೀದ್​ ಖಾನ್​; ಮೊದಲ ಸ್ಪಿನ್ನರ್

Viral video
ವೈರಲ್ ನ್ಯೂಸ್58 mins ago

Viral Video: ಕೇಶ ವಿನ್ಯಾಸಕ್ಕೆ ಸಲಾಕೆ ಬಳಸಿದ ಕ್ಷೌರಿಕ!

Virat Kohli
ಕ್ರೀಡೆ2 hours ago

Virat Kohli: ಗಂಭೀರ್​ ಮಾರ್ಗದರ್ಶನದಂತೆ ಅತ್ಯಂತ ಜೋಶ್​ನಿಂದ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೊಹ್ಲಿ; ಫೋಟೊ ವೈರಲ್​

Infosys
ಕರ್ನಾಟಕ2 hours ago

Infosys: ಇನ್ಫೋಸಿಸ್‌ನಿಂದ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ; ಜಿಎಸ್‌ಟಿ ನೋಟಿಸ್‌ ರವಾನೆ

Paris Olympics
ಕ್ರೀಡೆ3 hours ago

Paris Olympics: ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಮಣಿಕಾ ಬಾತ್ರಾ

Indians spend 15 billion hours waiting for customer service time in 2023 ServiceNow information
ದೇಶ3 hours ago

Servicenow: ಭಾರತೀಯರು ಗ್ರಾಹಕ ಸೇವೆ ಪಡೆಯಲು ವರ್ಷದಲ್ಲಿ 15 ಶತಕೋಟಿ ಗಂಟೆ ಕಳೆಯುತ್ತಾರೆ! ಅಧ್ಯಯನ ವರದಿ

Former MLA Rupali Nayka appeals to DC to resolve various issues under Karwara Ankola Assembly Constituency
ಉತ್ತರ ಕನ್ನಡ3 hours ago

Uttara Kannada News: ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕರಿಂದ ಡಿಸಿಗೆ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌