-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಕಂಗನಾ ರನೌತ್ ಇವೆಂಟ್‌ವೊಂದರಲ್ಲಿ ಉಟ್ಟಿದ್ದ ಪ್ರಿಂಟೆಡ್ ಶರ್ಟ್ ಬ್ಲೌಸ್ ಸೀರೆ (Star Saree Fashion), ಇದೀಗ ಪ್ರಯೋಗಾತ್ಮಕ ರೆಟ್ರೋ ಫ್ಯಾಷನ್‌ಗೆ ಸೇರಿದೆ. ದೇಸಿ ಲುಕ್ ಜೊತೆಗೆ ರೆಟ್ರೋ ಸ್ಟೈಲಿಂಗ್ ಬಯಸುವ ಸ್ಟ್ರಾಂಗ್ ಮಹಿಳೆಯರನ್ನು ಸೆಳೆದಿದೆ. ಹೌದು, ನಟಿ ಕಂಗನಾ ತಮ್ಮ ಸಿನಿಮಾ ಎಮರ್ಜನ್ಸಿ ಇವೆಂಟ್‌ವೊಂದರಲ್ಲಿ ಉಟ್ಟಿದ್ದ, ಸಾಫ್ಟ್ ಫ್ಲೋರಲ್ ಪ್ರಿಂಟೆಡ್ ಫ್ಯಾಬ್ರಿಕ್‌ನ ಕಾಟನ್ ಸೀರೆ ಹಾಗೂ ಅದಕ್ಕೆ ಧರಿಸಿದ್ದ ಪ್ರಿಂಟೆಡ್ ರೆಡ್ ಚೆಕ್ಸ್ ಕ್ರಾಪ್ ಶರ್ಟ್ ಬ್ಲೌಸ್‌ನ ವಿಚಿತ್ರ ಕಾಂಬೀನೇಷನ್, ಪ್ರಯೋಗಾತ್ಮಕ ಸೀರೆ ಸ್ಟೈಲಿಂಗ್‌ಗೆ ನಾಂದಿ ಹಾಡಿದೆ.
ಫ್ಯಾಷನ್ ವಿಮರ್ಶಕರ ಅಭಿಪ್ರಾಯ ಏನು?
ಒಂದಕ್ಕೊಂದು ಸಂಬಂಧವಿಲ್ಲದ ಈ ಸೀರೆಯ ಕಾಂಬೀನೇಷನ್, ಸೀರೆ ಪ್ರಿಯರಲ್ಲಿ ಅಚ್ಚರಿ ಮೂಡಿಸಿದರೂ, ಸದ್ಯ ಈ ಸ್ಟೈಲಿಂಗ್ ಮಹಿಳೆಯರನ್ನು ಸೆಳೆದಿದೆ. ಹಾಗಾದಲ್ಲಿ,ಇದ್ಯಾವ ಬಗೆಯ ಸೀರೆಯ ಕಾಂಬಿನೇಷನ್? ಪ್ರಿಂಟೆಡ್ ಬ್ಲೌಸ್ ಜೊತೆ ಪ್ರಿಂಟೆಡ್ ಸೀರೆ ಡ್ರೇಪಿಂಗ್ ಮಾಡುವ ಸ್ಟೈಲಿಂಗ್ ಮೊದಲು ಇತ್ತಾ! ಅಥವಾ ಇದೀಗ ಪ್ರಯೋಗಾತ್ಮಕವಾಗಿ ಬಳಸಲಾಗಿದೆಯಾ! ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.
ಸ್ಟ್ರಾಂಗ್ ವುಮೆನ್ ಚಾಯ್ಸ್ ನಲ್ಲಿ ಶರ್ಟ್ ಬ್ಲೌಸ್ ಸೀರೆ
ಇನ್ನು, ಫ್ಯಾಷನ್ ವಿಮರ್ಶಕರಾದ ವಿ. ವಿವೇಕ್ ಹೇಳುವಂತೆ ಶರ್ಟ್ ಬ್ಲೌಸ್ ಸೀರೆ ರೆಟ್ರೊ ಫ್ಯಾಷನ್‌ನಲ್ಲಿ ಮೊದಲಿನಿಂದಲೂ ಇದೆ. ಆದರೆ, ಕಲರ್ ಕಾಂಬಿನೇಷನ್ ಮಾತ್ರ ಬದಲಾಗುತ್ತಿದೆ. ಮೊದಲು ಶರ್ಟ್ ಬ್ಲೌಸ್‌ಗೆ ಸಾದಾ ಸೀರೆ ಉಡಲಾಗುತ್ತಿತ್ತು. ಇದೀಗ ಈ ಕಾಂಬಿನೇಷನ್ ಬದಲಾಗಿದೆ ಎನ್ನುತ್ತಾರೆ.
ರೆಟ್ರೊ ಲುಕ್‌ಗಾಗಿ ಪ್ರಯೋಗಾತ್ಮಕ ಸೀರೆ ಕಾಂಬಿನೇಷನ್
ಅಂದಹಾಗೆ, ಕಂಗನಾ ರನೌತ್ ಉಟ್ಟಿರುವ ಸೀರೆ ಪ್ರಿಂಟೆಡ್ ಕಾಟನ್‌ದ್ದಾದರೂ ಅದಕ್ಕೆ ಡಿಫರೆಂಟ್ ಲುಕ್ ನೀಡುವ ಪ್ರಿಂಟೆಡ್ ಚೆಕ್ಸ್ ಬ್ಲೌಸ್ ಮ್ಯಾಚ್ ಮಾಡಿರುವುದು ಸೀರೆ ಮ್ಯಾಚಿಂಗ್ ಕಾನ್ಸೆಪ್ಟ್ನಲ್ಲಿ ಇಲ್ಲ. ಉತ್ತರ-ದಕ್ಷಿಣ ದಿಕ್ಕಿನಂತೆ ತದ್ವಿರುದ್ಧದ ಕಾಂಬಿನೇಷನ್ ಆಗಿದೆ. ಕಂಗನಾ ನಟಿಸಿರುವ ಎಮರ್ಜೆನ್ಸಿ ಸಿನಿಮಾ ಹಳೆಯ ಕಥೆಯಾಗಿರುವುದರಿಂದ, ಪ್ರಮೋಷನಲ್ ಇವೆಂಟ್‌ಗಳಲ್ಲಿ, ಅವರು ಆದಷ್ಟೂ ರೆಟ್ರೊ ಲುಕ್ ನೀಡುವ ಸೀರೆಗಳಲ್ಲೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅವರ ಸ್ಟೈಲಿಸ್ಟ್ ಸುಕ್ರುತಿ ಗ್ರೋವರ್. ಅವರ ಪ್ರಕಾರ, ಸಾಮಾನ್ಯ ಸೀರೆಯನ್ನು ಉಟ್ಟಾಗ ಯಾರೂ ಗಮನಿಸುವುದಿಲ್ಲ! ಹಾಗಾಗಿ ವಿಭಿನ್ನವಾಗಿ ಕಾಣಿಸಬೇಕೆಂಬ ದೃಷ್ಠಿಯಿಂದ ಪ್ರಿಂಟೆಡ್ ಸೀರೆಗೆ ಪ್ರಿಂಟೆಡ್ ಶರ್ಟ್ ಬ್ಲೌಸ್ ಕಾಂಬೀನೇಷನ್‌ನ ಸ್ಟೈಲಿಂಗ್ ಮಾಡಿದ್ದೇವೆ ಎನ್ನುತ್ತಾರೆ.
ಇದನ್ನೂ ಓದಿ: Kids Denim Fashion: ಮಾನ್ಸೂನ್ ಸೀಸನ್ ನಲ್ಲಿ ಟ್ರೆಂಡಿಯಾದ ಮಕ್ಕಳ ಡೆನಿಮ್ ಫ್ಯಾಷನ್
ಪ್ರಿಂಟೆಡ್ ಶರ್ಟ್ ಬ್ಲೌಸ್ ಸೀರೆ ಕಮಾಲ್
- ಪ್ರಯೋಗಾತ್ಮಕ ಪ್ರಿಂಟೆಡ್ ಸೀರೆ ಪ್ರಿಂಟೆಡ್ ಶರ್ಟ್ ಬ್ಲೌಸ್ ಕಾನ್ಸೆಪ್ಟ್ ದೇಸಿ ಲುಕ್ ಬಯಸುವ ಮಹಿಳೆಯರನ್ನು ಸೆಳೆದಿದೆ.
- ಫೆಮಿನೈನ್ ಲುಕ್ ಜೊತೆಜೊತೆಗೆ ಸ್ಟ್ರಾಂಗ್ ಅಟಿಟ್ಯೂಡ್ ತೋಪರ್ಡಿಸುತ್ತದೆ.
- ಹೆಚ್ಚು ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ.
( ಲೇಖಕಿ ಫ್ಯಾಷನ್ ಪತ್ರಕರ್ತೆ )