Site icon Vistara News

Star Saree Fashion: ಡಿಸೈನರ್‌ ಸೀರೆಯಲ್ಲಿ ನಟಿ ತಾನ್ಯಾ ಹೋಪ್‌ರಂತೆ ಕಾಣಲು ಈ 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ!

Star Saree Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ಹಾಗೂ ಬಹುಭಾಷಾ ನಟಿ ತಾನ್ಯಾ ಹೋಪ್‌ ಸೀರೆಯಲ್ಲಿ (Star Saree Fashion) ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಡಿಸೈನರ್‌ ಪಾರ್ಟಿವೇರ್‌ ಸೀರೆಯುಟ್ಟರೂ ಆಕರ್ಷಕವಾಗಿ ಹಾಗೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದನ್ನು ನಟಿ ತಾನ್ಯಾ ಪ್ರೂವ್‌ ಮಾಡಿದ್ದಾರೆ. ಅವರು ಧರಿಸಿರುವ ಸೀರೆ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. “ಪಾರ್ಟಿವೇರ್‌ ಸೀರೆಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿರುವ ಸೀರೆಗಳು! ಶಿಮ್ಮರ್‌ ಸೀರೆಗಳನ್ನು ಹೊರತುಪಡಿಸಿದಲ್ಲಿ, ಜಾರ್ಜೆಟ್ ಶೈಲಿಯ ಡಿಸೈನರ್‌ ಸೀರೆಗಳು ಇದೀಗ ಪಾರ್ಟಿ ಪ್ರಿಯ ಮಾನಿನಿಯರನ್ನು ಆಕರ್ಷಿಸಿವೆ. ಹಾಗೆಂದು ಇವುಗಳ ಬೆಲೆಯೇನೂ ಕಡಿಮೆಯೇನಿಲ್ಲ! ಎಂಬ್ರಾಯ್ಡರಿ ಹಾಗೂ ಅವುಗಳ ಡಿಸೈನ್‌ ಮತ್ತು ಫ್ಯಾಬ್ರಿಕ್‌ನ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ. ಇನ್ನು ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಇಂತಹ ಸೀರೆಗಳತ್ತ ವಾಲಿದ್ದಾರೆ. ಮಾಮೂಲಿಯಂತೆ ಸ್ಟೈಲಿಂಗ್‌ ಮಾಡುವ ಬದಲು ಗ್ಲಾಮರಸ್‌ ಆಗಿ ಮಾಡುತ್ತಾರೆ. ಹಾಗಾಗಿ ನೋಡಲು ಚೆಂದನಾಗಿ ಕಾಣಿಸುತ್ತಾರೆ” ಎನ್ನುತ್ತಾರೆ ಸೀರೆ ಡ್ರೇಪಿಸ್ಟ್ ಧವನ್‌. ಇನ್ನು, ನಟಿ ತಾನ್ಯಾ ಹೋಪ್‌ರಂತೆ ಡಿಸೈನರ್‌ ಪಾರ್ಟಿವೇರ್‌ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಿಸಲು ಯಾರಿಗೆ ಇಷ್ಟವಿಲ್ಲ ಹೇಳಿ! ಹಾಗಾದಲ್ಲಿ ಒಂದಿಷ್ಟು ಸಿಂಪಲ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ 5 ಟಿಪ್ಸ್ ನೀಡಿದ್ದಾರೆ.

ಪಾರ್ಟಿ ಥೀಮ್‌ಗೆ ತಕ್ಕ ಸೀರೆ ಆಯ್ಕೆ ಮಾಡಿ

ನೀವು ಭಾಗವಹಿಸುವ ಕಾಯರ್ಕ್ರಮಕ್ಕೆ ತಕ್ಕಂತೆ ಮ್ಯಾಚ್‌ ಆಗುವಂತಹ ಡಿಸೈನರ್‌ ಪಾರ್ಟಿವೇರ್ ಸೀರೆಗಳನ್ನು ಆಯ್ಕೆ ಮಾಡಿ. ಅದು ಟ್ರೆಡಿಷನಲ್‌ ಸಮಾರಂಭವೇ ಅಥವಾ ಕ್ಯಾಶುವಲ್‌ ಪಾರ್ಟಿಯಾ ಎಂಬುದು ತಿಳಿದು ಆರಿಸಿ.

ಮಿನುಗುವ ಡಿಸೈನ್ಸ್/ ಹ್ಯಾಂಡ್‌ವರ್ಕ್ ಸೀರೆಯ ಆಯ್ಕೆ

ಪಾರ್ಟಿಗೆ ಧರಿಸುವ ಸೀರೆಗಳು ಆದಷ್ಟೂ ಮಿನುಗುವ ಡಿಸೈನ್ಸ್ ಹೊಂದಿರಲಿ. ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್, ಕಟ್‌ವರ್ಕ್ ಡಿಸೈನ್ಸ್ ಇರುವಂತಹ ಡಿಸೈನರ್‌ ಸೀರೆ ಆಯ್ಕೆ ಮಾಡಿ. ಟ್ರೆಡಿಷನಲ್‌ ಲುಕ್‌ ಇರುವಂತವು ಬೇಡ!

ಡಿಸೈನರ್ ಸೀರೆಗೆ ಗ್ಲಾಮರಸ್‌ ಬ್ಲೌಸ್‌

ಡಿಸೈನರ್‌ ಸೀರೆಗೆ ಯಾವುದೇ ಕಾರಣಕ್ಕೂ ಟ್ರೆಡಿಷನಲ್‌ ಲುಕ್‌ ನೀಡುವಂತಹ ಎಥ್ನಿಕ್‌ ಡಿಸೈನ್‌ನ ಬ್ಲೌಸ್‌ ಆಯ್ಕೆ ಮಾಡಬೇಡಿ. ಹಾಲ್ಟರ್‌ ನೆಕ್‌ ಬ್ಲೌಸ್‌, ಸ್ಲಿವ್‌ಲೆಸ್‌ ಬ್ಲೌಸ್‌, ಬ್ಯಾಕ್‌ ಬಟನ್‌ ಬ್ಲೌಸ್‌, ಸ್ಟ್ರಾಪ್‌ ಬ್ಲೌಸ್‌ ಹಾಗೂ ಡಿಸೈನರ್‌ ಸ್ಲೀವ್‌ ಬ್ಲೌಸ್‌ಗಳನ್ನು ಸೆಲೆಕ್ಟ್ ಮಾಡಿ, ಧರಿಸಿ.

ಮಿನಿಮಲ್‌ ಆಭರಣ ಧರಿಸಿ

ಮೊದಲೇ ಪಾರ್ಟಿವೇರ್‌ ಡಿಸೈನರ್‌ ಸೀರೆಗಳು ಜಗಮಗಿಸುತ್ತಿರುತ್ತವೆ. ಇಲ್ಲವೇ ಎಂಬ್ರಾಯ್ಡರಿ ಹೈಲೈಟಾಗುತ್ತಿರುತ್ತವೆ. ಇವುಗಳನ್ನು, ಮಾಸುವಂತೆ ಮಾಡುವ ಹೆವ್ವಿ ಜ್ಯುವೆಲರಿಗಳನ್ನು ಧರಿಸುವುದು ಬೇಡ. ಬದಲಿಗೆ ಮಿನಿಮಲ್‌ ಆಭರಣಗಳನ್ನು ಧರಿಸಿ. ಸೀರೆ ಎದ್ದು ಕಾಣಿಸುವುದು.

ಸೀರೆಯ ಡ್ರೇಪಿಂಗ್‌

ಉಡುವ ಸೀರೆಯ ಡ್ರೇಪಿಂಗ್‌ ಬಾಡಿ ಮಾಸ್‌ ಇಂಡೆಕ್ಸ್ ಹೈ ಲೈಟ್‌ ಮಾಡುವಂತಿರಲಿ. ಆಗಷ್ಟೇ ಬಳುಕುವ ಬಳ್ಳಿಯಂತೆ ಕಾಣಬಹುದು. ಡ್ರೇಪಿಂಗ್‌ ಮಾಡುವ ಶೈಲಿ ಸೀರೆಯ ಇಡೀ ಲುಕ್ಕನ್ನು ಬದಲಿಸಬಲ್ಲದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Holiday Fashion: ಹಾಲಿ ಡೇ ಫ್ಯಾಷನ್‌ಗೆ ಮರಳಿ ಬಂತು ಹಿಪ್ಪಿ ಪ್ಯಾಂಟ್ಸ್!

Exit mobile version