-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀರೆಗೆ (Star Saree Fashion) ಕ್ರೋಚೆಟ್ ಬ್ಲೌಸ್ ! ಇದ್ಯಾವ ಬಗೆಯ ಮ್ಯಾಚಿಂಗ್ ಎಂದು ಯೋಚಿಸುತ್ತಿದ್ದೀರಾ! ಒಂದಕ್ಕೊಂದು ಸಂಬಂಧವಿಲ್ಲದ ಫ್ಯಾಷನ್ ಎಂದುಕೊಳ್ಳುತ್ತಿದ್ದೀರಾ! ಆದರೆ, ಈ ಮಿಕ್ಸ್ – ಮ್ಯಾಚ್ ಕಾನ್ಸೆಪ್ಟನ್ನು ನಟಿ ಸೋನಂ ಕಪೂರ್, ಪ್ರಯೋಗಿಸಿದ್ದಾರೆ. ಸೀರೆ ಪ್ರಿಯರ ಹುಬ್ಬೇರಿಸಿದ್ದಾರೆ.
ಸೋನಂ ಕಪೂರ್ ಪ್ರಯೋಗಾತ್ಮಕ ಸೀರೆ ಬ್ಲೌಸ್ ಸ್ಟೈಲಿಂಗ್
ಹೌದು. ಬಾಲಿವುಡ್ ನಟಿ ಸೋನಂ ಕಪೂರ್ ಆಗಾಗ್ಗೆ ಸೀರೆಗೆ ಬಗೆಬಗೆಯ ಯೂನಿಕ್ ಬ್ಲೌಸ್ ಧರಿಸಿ ಕಾಣಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ! ಆದರೆ, ಇದೀಗ ಸೋನಂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಊಹೆಗೂ ಸಿಗದ ಸ್ಟೈಲಿಂಗ್ ಮಾಡಿದ್ದಾರೆ. ಸೀರೆಯೊಂದಿಗೆ ವುಲ್ಲನ್ ಸ್ಟೆಟ್ಟರ್‌ನಂತೆ ಕಾಣುವ ಕ್ರೋಚೆಟ್ ಲಾಂಗ್ ರವಿಕೆ ಅಥವಾ ಟಾಪ್ ಧರಿಸಿ, ಸೀರೆ ಉಟ್ಟಿದ್ದಾರೆ. ಹೀಗೂ ಸೀರೆ ಫ್ಯಾಷನ್ ಮಾಡಬಹುದು ಎಂಬುದನ್ನು ತಮ್ಮ ಸಹೋದರಿ ರಿಯಾ ಕಪೂರ್ ಸ್ಟೈಲಿಂಗ್‌ನಲ್ಲಿ ತೋರಿಸಿಕೊಟ್ಟಿದ್ದಾರೆ. ಸೆಲೆಬ್ರೆಟಿ ಮಸಬಾ ಡಿಸೈನರ್ ಸೀರೆಯಲ್ಲಿ ಕಾಣಿಸಿಕೊಂಡು ನಯಾ ಫ್ಯಾಷನ್‌ಗೆ ನಾಂದಿ ಹಾಡಿದ್ದಾರೆ.
ಫ್ಯಾಷನ್ ವಿಮರ್ಶಕರ ಅಭಿಪ್ರಾಯ
ನಮ್ಮ ದೇಸಿ ಸೀರೆ ಇದೀಗ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದು ಸೀರೆ ಉಡುವವರ ಸ್ಟೈಲಿಂಗ್ ಹಾಗೂ ಫ್ಯಾಷನ್ ಸೆನ್ಸ್ಗೆ ತಕ್ಕಂತೆ ಬದಲಾಗುತ್ತದೆ. ನೋಡಲು ವಿಚಿತ್ರ ಎಂದೆನಿಸಿದರೂ ಫ್ಯಾಷನ್ ಪ್ರಿಯರು ಇಂತಹ ಪ್ರಯೋಗಾತ್ಮಕ ಸೀರೆ ಸ್ಟೈಲಿಂಗ್‌ಗನ್ನು ಪ್ರಯೋಗಿಸತೊಡಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಾನ್. ಇನ್ನು, ಯುವ ಫ್ಯಾಷನಿಸ್ಟಾ ರಾಜ್ ಹೇಳುವಂತೆ, ಇತ್ತೀಚೆಗೆ ಕಂಡ ಕಂಡ ಟಾಪ್ ಹಾಗೂ ವೆಸ್ಟರ್ನ್ ಕ್ರಾಪ್ ಬ್ಲೌಸ್‌ಗಳನ್ನು ಸೀರೆಗಳೊಂದಿಗೆ ಧರಿಸುವುದು ಹೆಚ್ಚಾಗಿದೆ. ಕೆಲವೊಂದು ಆಕರ್ಷಕವಾಗಿ ಕಾಣುತ್ತವೆ. ಇನ್ನು, ನಟಿಯರು ಧರಿಸಿದ ನಂತರ ಕೆಲವು ಟ್ರೆಂಡಿಯಾಗುತ್ತವೆ ಎನ್ನುತ್ತಾರೆ. ಇದರೊಂದಿಗೆ ಒಂದಿಷ್ಟು ಸಲಹೆ ಕೂಡ ನೀಡಿದ್ದಾರೆ.
ಇದನ್ನೂ ಓದಿ: Wedding Lehenga Tips: ವೆಡ್ಡಿಂಗ್ ಗ್ರ್ಯಾಂಡ್ ಲೆಹೆಂಗಾ ಆಯ್ಕೆಗೆ ಇಲ್ಲಿದೆ 5 ಐಡಿಯಾ
ಸೀರೆಯೊಂದಿಗೆ ಕ್ರೋಚೆಟ್ ರವಿಕೆ ಪ್ರಯೋಗಿಸಲು ಹೀಗೆ ಮಾಡಿ
- ಕಾಂಟ್ರಸ್ಟ್ ಶೇಡ್ದಾದಲ್ಲಿ ಡಿಫರೆಂಟ್ ಲುಕ್ ನೀಡುತ್ತದೆ.
- ಸೀರೆಯೊಂದಿಗೆ ಲೈಟ್ವೈಟ್ ಕ್ರೋಚೆಟ್ ಬ್ಲೌಸ್ ಧರಿಸುವುದು ಉತ್ತಮ.
- ಟ್ರಾನ್ಸಪರೆಂಟ್ ಕ್ರೋಚೆಟ್ ಟಾಪ್ ಆದಲ್ಲಿ, ಅದೇ ಶೇಡ್ನ ಇನ್ನರ್ ಧರಿಸಬಹುದು.
- ಕ್ರೋಚೆಟ್ ಬ್ಲೌಸ್ಗೆ ಆದಷ್ಟೂ ಸಾದಾ ಡಾರ್ಕ್ ಶೇಡ್ನ ಸೀರೆ ಉಡಬೇಕು.
- ಇಂಡೋ-ವೆಸ್ಟರ್ನ್ ಲುಕ್ ನೀಡುವುದರಿಂದ ಟ್ರೆಡಿಷನಲ್ ಮೇಕಪ್ ಬೇಡ.
( ಲೇಖಕಿ ಫ್ಯಾಷನ್ ಪತ್ರಕರ್ತೆ )